ಅತಿಯಾದ ಬಿಲ್ಡಪ್, ಅವರ ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ; ಸುಧಾ ಮೂರ್ತಿ ವಿರುದ್ಧ ನಟ ಚೇತನ್ ಆಕ್ರೋಶ

ಅತಿಯಾದ ಬಿಲ್ಡಪ್‌ನಿಂದ ಗುರುತಿಸಲ್ಪಟ್ಟ ವ್ಯಕ್ತಿ, ಅವರ ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ ಎಂದು ಸುಧಾ ಮೂರ್ತಿ ವಿರುದ್ಧ ನಟ ಚೇತನ್ ಅಹಿಂಸ ಕಿಡಿ ಕಾರಿದ್ದಾರೆ. 

actor chetan ahimsa outrage against Sudha Murthy's  Veg-Non Veg Remark sgk

ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌.ಆರ್ ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ವೆಜ್ ಆಂಡ್ ನಾನ್ ವೆಜ್ ಬಗ್ಗೆ ನೀಡಿದ್ದ ಹೇಳಿಕೆ ಸದ್ಯ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ  ಪರ-ವಿರೋಧ ಚರ್ಚೆ ಶುರುವಾಗಿದೆ. ಈ ಬಗ್ಗೆ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ ಇನ್ನು ಕೆಲವರು ಬೆಂಬಲಕ್ಕೆ ನಿಂತಿದ್ದಾರೆ. ಈ ಬಗ್ಗೆ ಸ್ಯಾಂಡಲ್‌ವುಡ್ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಲ್ಲಿ ಈ ಬಗ್ಗೆಪ್ರತಿಕ್ರಿಯೆ ನೀಡಿರುವ ಚೇತನ್, ಸುಧಾ ಮೂರ್ತಿ ಅವರಿಗೆ ಬಿಲ್ಡಪ್‌ನಿಂದ ಗುರುತಿಸಲ್ಪಟ್ಟ ವ್ಯಕ್ತಿ, ಅವರ ಆಲೋಚನೆ ಚಮಚದಷ್ಟು ಎಂದು ಕಿಡಿ ಕಾರಿದ್ದಾರೆ.

ಚೇತನ್ ಹೇಳಿಕೆ

'ಸುಧಾ ಮೂರ್ತಿಯವರು ನಮ್ಮ ಬ್ರಾಹ್ಮಣ್ಯ-ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್‌ನಿಂದ ಗುರುತಿಸಲ್ಪಟ್ಟ ಮತ್ತು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ. ಅವರು ತನ್ನ ಸೀಮಿತ, ಮಡಿವಂತಿಕೆಯ ಚಿಂತನೆಯನ್ನು ಬಹಿರಂಗಪಡಿಸುವ ಹೇಳಿಕೆಗಳನ್ನು ನಿರಂತರವಾಗಿ ಮಾಡುತ್ತಾರೆ. ಸುಧಾ ಮೂರ್ತಿಯವರು ಹೆಚ್ಚು ಮಾತನಾಡಬೇಕು. ಅವರ ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ' ಎಂದು ಹೇಳಿದ್ದಾರೆ. 

ನಟ ಚೇತನ್ ಹೇಳಿಕೆಗೆ ಅನೇಕರು ಕಾಮೆಂಟ್ ಮಾಡಿದ್ದು ಸುಧಾ ಮೂರ್ತಿ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಅವರೊಬ್ಬರು ಬ್ರಾಹ್ಮಣ ಮಹಿಳೆ ಅಷ್ಟೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಚೇತನ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೆಲ್ಲ ಯಾಕೆ ಬೇಕು, ಅವರವರ ಆಹಾರ ಕ್ರಮ ಅದು ಕೇಳೊಕೆ ನೀವ್ಯಾರು ಎಂದು ಹೇಳುತ್ತಿದ್ದಾರೆ. 

ಸಲ್ಮಾನ್ ಖಾನ್‌ನನ್ನು ಹಾಡಿ ಹೊಗಳಿದ ಸುಧಾ ಮೂರ್ತಿ; 'ವಾವ್' ಎಂದ ಕಪಿಲ್ ಶರ್ಮಾ

ಸುಧಾ ಮೂರ್ತಿ ಹೇಳಿದ್ದೇನು?

 ಸುಧಾ ಮೂರ್ತಿ ಇತ್ತೀಚೆಗಷ್ಟೆ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ ಸಸ್ಯಹಾರಿ ಮತ್ತು ಮಾಂಸಹಾರಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಸುಧಾ ಮೂರ್ತಿ ಶುದ್ಧ ಸಸ್ಯಹಾರಿ. ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರಗಳಿಗೆ ಒಂದೇ ಚಮಚವನ್ನು ಬಳಸುತ್ತಾರೆ. ಹಾಗಾಗಿ ಎಲ್ಲಿಯೇ ಹೋದರು ಚಮಚತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು.

ಇನ್ಪೋಸಿಸ್‌ ಆರಂಭಿಸಲು ಪತಿಗೆ 10,000 ರೂ. ಸಾಲ ಕೊಟ್ಟಿದ್ದರಂತೆ ಸುಧಾ ಮೂರ್ತಿ! 

'ನಾನು ಶುದ್ಧ ಸಸ್ಯಾಹಾರಿ, ನಾನು ಮೊಟ್ಟೆ ಅಥವಾ ಬೆಳ್ಳುಳ್ಳಿಯನ್ನು ಸಹ ತಿನ್ನುವುದಿಲ್ಲ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡಕ್ಕೂ ಒಂದೇ ಚಮಚವನ್ನು ಬಳಸುತ್ತಾರೆ ಎನ್ನುವ  ಭಯವಾಗುತ್ತೆ. ಅದು ನನ್ನ ಮನಸ್ಸನ್ನು ತುಂಬಾ ಭಾರವಾಗಿಸುತ್ತದೆ. ಹಾಗಾಗಿ ವಿದೇಶಿ ಪ್ರವಾಸಕ್ಕೆ ಹೋದಾಗ ಸಸ್ಯಾಹಾರಿ ರೆಸ್ಟೊರೆಂಟ್‌ಗಳನ್ನು ಹುಡುಕುತ್ತೇನೆ ಅಥವಾ ತನ್ನದೇ ಆದ ಊಟವನ್ನು ತಯಾರಿಸುತ್ತೇನೆ. ನನ್ನ ಬ್ಯಾಗ್‌ನಲ್ಲಿ ಆಹಾರ ಮತ್ತು ಅಡುಗೆ ವಸ್ತುಗಳನ್ನು ನೀರಿನಲ್ಲಿ ಸುಲಭವಾಗಿ ಬಿಸಿಮಾಡಬಹುದನ್ನು ಇಚ್ಚುಕೊಂಡಿರುತ್ತೇನೆ' ಎಂದು ಹೇಳಿದರು. ಸುಧಾ ಮೂರ್ತಿ ಅವರ ಈ ಹೇಳಿಕೆ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. 
 

Latest Videos
Follow Us:
Download App:
  • android
  • ios