Asianet Suvarna News

'ನನ್ನ ಕೆಲಸ ಮಾತಾಡುತ್ತಿದೆ, ದ್ವೇಷ ಸಾಧನೆ ನನಗೆ ಬೇಕಿಲ್ಲ'

 ಮಾಧ್ಯಮಗಳ ಜತೆ ಮಾತನಾಡಿದ ನಿರ್ದೇಶಕ ರಕ್ಷಿತ್ ಶೆಟ್ಟಿ
* ನನ್ನ ಬಗ್ಗೆ ನೆಗೆಟಿವ್ ಸುದ್ದಿ ಮಾಡಲು ವೈಯಕ್ತಿಕ ದ್ವೇಷವೇ ಕಾರಣ
* ನನ್ನ ಫ್ಯಾಮಿಲಿಗೂ ಇಂಥ ವಿಚಾರ ಅಭ್ಯಾಸ ಆಗಿದೆ
* ನೆಗೆಟಿವ್ ಬಿಟ್ಟು ಪಾಸಿಟಿವ್ ವಿಚಾರದ ಬಗ್ಗೆ ಗಮನ ಹರಿಸಿ

Actor and director rakshit shetty reaction on rumours mah
Author
Bengaluru, First Published Jul 11, 2021, 9:18 PM IST
  • Facebook
  • Twitter
  • Whatsapp

ಬೆಂಗಳೂರು( ಜು. 11)  ಸ್ಯಾಂಡಲ್‌ವುಡ್‌ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶಕ ಸ್ಥಾನಕ್ಕೆ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಂಸ್‌ರ 10ನೇ ಸಿನಿಮಾ ರಿಚರ್ಡ್ ಆ್ಯಂಟನಿ ನಿರ್ದೇಶಿಸಿ, ಅಭಿನಯಿಸುತ್ತಿದ್ದಾರೆ.  ಭಾನುವಾರ ಸಂಜೆ  ಮಧ್ಯಮಗಳ ಜತೆಯೂ ಮಾತನಾಡಿದ್ದಾರೆ.

ಕೆಲಸದಿಂದಲೇ ಎಲ್ಲ ಟೀಕೆಗೆ ಉತ್ತರ ಎಂದಿರುವ ಶೆಟ್ಟಿ ವೈಯಕ್ತಿಕ ದ್ವೇಷದ ಕಾಣಕ್ಕೆ ಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ, ನಾನು ಯಾರ ಮೇಲೆಯೂ ದ್ವೇಷ ಸಾಧನೆ ಮಾಡಲು ಹೋಗುವುದಿಲ್ಲ. ಮಾಧ್ಯಮ ಒಂದು ಪ್ರಭಾವಿ ಕ್ಷೇತ್ರ. ಪೆನ್ನು ಯಾರ ಕೈಯಲ್ಲಿರಬೇಕು ಅದನ್ನು ಹೇಗೆ ಬಳಸಬೇಕು ಎನ್ನುವುದು ಗೊತ್ತಿರಬೇಕು ಎಂದರು.

ಮಾಧ್ಯಮಗಳ ಬೆಂಬಲದಿಂದಲೇ ನಾನು ಈ ಸ್ಥಾನಕ್ಕೆ ಬಂದು ನಿಂತಿದ್ದೇನೆ. ನಾನು ಸಾಮಾನ್ಯ ನಟನಾಗಿದ್ದಾಗಲೂ ನನ್ನ ಸಂದರ್ಶನ ಮಾಡಿದ್ದೀರಿ . ನಾನು ಹಿಂದೆ ಹೋಗಲು ಇಷ್ಟ ಪಡುವುದಿಲ್ಲ. ಕೆಲಸ ಮಾಡಿಕೊಂಡು ಮುಂದೆ ಹೋಗುತ್ತೇನೆ..ಹೋಗುತ್ತಿರುತ್ತೇನೆ. 

ರಕ್ಷಿತ್ ಶೆಟ್ಟಿ ಕಂ ಬ್ಯಾಕ್ ನಿರ್ದೇಶನ

ನನ್ನ ಕಂಪನಿಯನ್ನು ನಾನೇ ನೋಡಿಕೊಳ್ಳಬೇಕು. ಎಲ್ಲರ ವೇತನ ನೋಡಿಕೊಳ್ಳಬೇಕು, ಸಿನಿಮಾ ನಿರ್ಮಾಣ ವಿಚಾರವಿದ್ದರೆ ಅದನ್ನು ತೀರಿಸಬೇಕು ಎಲ್ಲವನ್ನು ಮಾಡಿಕೊಂಡು ಬಂದಿದ್ದೇನೆ. ಆದರೆ ಈ ಬಗ್ಗೆ ಯಾಕೆ ಲೂಸ್ ಟಾಕ್ ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ. ನನ್ನಂತೆ ಇನ್ನೂರು ಜನ ಕೆಲಸ ಮಾಡಿದ್ದಾರೆ ಸಿನಿಮಾಕ್ಕೆ ಎಂದು ಹೇಳಿದರು.

ನನ್ನ ಬ್ರೇಕ್ ಅಪ್ ಸಂದರ್ಭದಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ಮಾಡಿದರು. ಅದರ ಬಗ್ಗೆ  ನಾನು ಮಾತನಾಡುವುದಿಲ್ಲ. ನಾನು ಅವನ್ನು ನೋಡಿಯೂ ಇಲ್ಲ..ತಲೆ ಕೆಡಿಸಿಕೊಂಡಿಯೂ ಇಲ್ಲ..  ಅತಿ ಕೆಟ್ಟದಾಗಿ ಬಂದಾಗ ಸ್ನೇಹಿತರು ಸ್ಕ್ರೀನ್ ಶಾಟ್ ಕಳಿಸಿದ್ದನ್ನು  ನೋಡಿದ್ದೇನೆ. ಮಾಧ್ಯಮಗಳು ಚೌಕಟ್ಟು ಮೀರಿ ವೈಯಕ್ತಿಕ ಟೀಕೆಗೆ ಇಳಿಯಬಾರದಿತ್ತು ಎಂದರು.

ಸಿನಿಮಾ ಮಾಡುವುದು ನನ್ನ ಇಷ್ಟ. ಎಲ್ಲರ ಜತೆಯೂ ಚೆನ್ನಾಗಿಯೇ ಇದ್ದೇನೆ. ವ್ಯವಹಾರ ಕ್ಲೀಯರ್ ಆಗಿದೆ. ಕೆಲವರಿಗೆ ಹಣ ನೀಡಬೇಕಿದೆ ಅದನ್ನು ನೀಡುತ್ತೇನೆ. ಇಂಥ ವಿಚಾರಗಳ ಬೆನ್ನು ಬೀಳುವುದು..ನೆಗೆಟಿವ್ ವಿಚಾರ ಹಂಚುವುದನ್ನು ಬಿಡಿ ಎಂದು ಕೇಳಿಕೊಂಡರು.

ಚಾರ್ಲಿಗೂ ಅಂತ್ಯಂತ ದೊಡ್ಡ ರೆಸ್ಪಾನ್ಸ್ ಸಿಕ್ಕಿದ್ದು ಖುಷಿಯಾಗಿದೆ. ಪೋಸ್ಟ್ ಪ್ರೊಡಕ್ಷನ್ ಹಂತದದಲ್ಲಿ ಇದೆ. 'ರಿಚರ್ಡ್ ಆಂಟನಿಗೆ ಇಂದು ಸಿಕ್ಕ ಪ್ರತಿಕ್ರಿಯೆಯಿಂದ ನನ್ನ ಅಮ್ಮ ಖುಷಿಯಾಗಿದ್ದಾರೆ. ಮಗ ಏನನ್ನೋ ಮಾಡುತ್ತಿದ್ದಾನೆ ಅಂದುಕೊಂಡಿದ್ದಾರೆ ಅಷ್ಟು ಸಾಕು ಎಂದು ಹೇಳಿದರು.

 

Follow Us:
Download App:
  • android
  • ios