ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡ ಗಾಯಕಿ ಇಂಪನಾ ಮತ್ತು ಅಜಿತ್ ಜಯರಾಜ್. ಸೆಪ್ಟೆಂಬರ್‌ನಲ್ಲಿ ಮದುವೆ..... 

ಜೀ ಕನ್ನಡಯ ಜನಪ್ರಿಯ 'ಸರಿಗಮಪ ಸೀಸನ್13' ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಪರಿಚಯವಾದ ಗಾಯಕಿ ಇಂಪನಾ ಮತ್ತು ಸ್ಯಾಂಡಲ್‌ವುಡ್‌ ಯುವ ನಟ ಅಜಿತ್ ಜಯರಾಜ್‌ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪ್ರೀ-ಎಂಗೇಜ್‌ಮೆಂಟ್ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿವೆ. 

'Engaged. ನೀವು ಜೀವನ ಪೂರ್ತಿ ಒಬ್ಬರನ್ನು ಪ್ರೀತಿಸಿ ಜೀವನ ಪೂರ್ತಿ ಅವರ ಜೊತೆ ಕಳೆಯಬೇಕು ಎನ್ನುವಂಥ ಸಮಯ. ಶೀಘ್ರದಲ್ಲಿಯೇ ಹೊಸ ಜೀವನ ಶುರು,' ಎಂದು ಇಂಪನಾ ಬರೆದುಕೊಂಡಿದ್ದಾರೆ. ಇಬ್ಬರು ಸೆಪ್ಟೆಂಬರ್ 1ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇಬ್ಬರೂ ಕಾರ್ಡ್‌ ಬೋರ್ಡ್‌ ಮೂಲಕ ಮದುವೆ ಡೇಟ್ ಅನೌನ್ಸ್ ಮಾಡಿದ್ದಾರೆ. 

ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಅಜಿತ್‌ ಜಯರಾಜ್‌; ಸರಣಿ ಕೊಲೆಗಳ ನಿಗೂಢ ಕತೆಯ ಸಿನಿಮಾ ರೈಮ್ಸ್‌!

'ಹೇಗೋ ಒಬ್ಬ ವ್ಯಕ್ತಿ ನಮ್ಮ ಜೀವನಕ್ಕೆ ಪ್ರವೇಶಿಸಿ, ಈಗ ಅವರೇ ನಮ್ಮ ಜೀವ ಆಗಿ ಬಿಟ್ಟಿದ್ದಾರೆ. ನಿಮ್ಮೆಲ್ಲರಿಗೂ ನನ್ನ ಲವ್‌ನ ಪರಿಚಯಿಸಿ ಕೊಡುತ್ತಿರುವೆ. ಅಜಿತ್ ಜಯರಾಜ್. ಯಾಲ್ಲ ಹುಡುಗಿಯರೂ ನ್ನ ಗಂಡನಾಗುವವನು ಮತ್ತು ಅವಳನ್ನು ಪೋಷಕರಂತೆ ನೋಡಿಕೊಳ್ಳಬೇಕು ಮತ್ತು ಬೆಸ್ಟ್ ಸಪೋರ್ಟರ್‌ ಆಗಿ ಕಾರ್ಯ ನಿರ್ವಹಿಸುವ ಗಂಡನಾಗಬೇಕೆಂಬ ಕನಸನ್ನು ಹೊಂದಿರುತ್ತಾಳೆ ಮತ್ತು ನಾನು ಇಲ್ಲಿ ನನ್ನದನ್ನು ಕಂಡುಕೊಂಡೆ. ಮತ್ತು ನೀನು ನನ್ನನ್ನು ಪೂರ್ಣಗೊಳಿಸು ಅಜಿತ್,' ಎಂದಿದ್ದಾರೆ ಇಂಪನಾ. 

ಅನೇಕ ಖಾಸಗಿ ಕಾರ್ಯಕ್ರಮದಲ್ಲಿ ಇಂಪನಾ ಹಾಡಿದ್ದಾರೆ. ಅಜಿತ್ ಜಯರಾಜ್ 'ರೈಮ್ಸ್ ಮತ್ತು ಕ್ರಾಂತಿವೀರ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

View post on Instagram