Asianet Suvarna News Asianet Suvarna News

ಅಪ್ಪನಾಗುತ್ತಿದ್ದಾರೆ ಅಭಿಷೇಕ್ ಅಂಬರೀಶ್; ಮತ್ತೆ ಹುಟ್ಟಿಬರಲಿದ್ದಾರಾ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬಿ

ಕನ್ನಡ ಚಿತ್ರರಂಗದ ಜ್ಯೂನಿಯರ್ ರೆಬೆಲ್‌ ಸ್ಟಾರ್ ಅಭಿಷೇಕ್ ಅಂಬರೀಶ್ ಅಪ್ಪನಾಗುವ ಖುಷಿಯಲ್ಲಿದ್ದಾರೆ. ಅಂಬಿ ಸೊಸೆ ಗರ್ಭಿಣಿಯಾಗಿದ್ದು, ನಮ್ಮ ರೆಬೆಲ್‌ಸ್ಟಾರ್ ಅಂಬರೀಶ್ ಮತ್ತೆ ಹುಟ್ಟಿಬರಲಿದ್ದಾರೆ ಎಂದು ಅಭಿಮಾನಿಗಳು ಸಂಸತ ವ್ಯಕ್ತಪಡಿಸಿದ್ದಾರೆ.

Actor Abhishek Ambarish wife Aviva is pregnant Actress Samalatha will become grandmother sat
Author
First Published Aug 8, 2024, 12:28 PM IST | Last Updated Aug 9, 2024, 7:09 PM IST

ಬೆಂಗಳೂರು (ಆ.08): ಕನ್ನಡ ಚಿತ್ರರಂಗದ ಜ್ಯೂನಿಯರ್‌ ರೆಬೆಲ್‌ಸ್ಟಾರ್ ಖ್ಯಾತಿಯ ಅಭಿಷೇಕ್ ಅಂಬರೀಶ್ ಅವರು ಅಪ್ಪನಾಗುವ ಖುಷಿಯಲ್ಲಿದ್ದಾರೆ. ಮದುವೆಯಾಗಿ ಒಂದು ವರ್ಷದಲ್ಲಿಯೇ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಲು ಸಿದ್ಧತಾಗಿದ್ದಾರೆ. ಇನ್ನು ಅವರ ಅಭಿಮಾನಿಗಳು ಮತ್ತೆ ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟಿಬರಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು, ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಪ್ಪ ಆಗ್ತಿರುವ ಖುಷಿಯಲ್ಲಿದ್ದಾರೆ. ರೆಬೆಲ್‌ಸ್ಟಾರ್ ಅಂಬರೀಶ್ ಕುಟುಂಬವು ಹೊಸ ಅತಿಥಿಯನ್ನು ಸ್ವಾಗತಿಸಲು ಸಜ್ಜಾಗಿದೆ. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ 2023ರ ಜೂನ್ 5ರಂದು ಅದ್ದೂರಿಯಾಗಿ ಮದುವೆಯಾಗಿದ್ದರು. ಇನ್ನು ವರ್ಷತುಂಬುವಷ್ಟರಲ್ಲಿ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಗರ್ಭಿಣಿಯಾಗಿದ್ದಾರೆ ಎಂದು ತಿಳಿದುಬಂದಿದೆ.

 

ಇನ್ನು ಅಂಬಿ ಕುಟುಂಬದಲ್ಲಿ ಇದೇ ವಾರ ಅವಿವಾ ಅವರಿಗೆ ಅದ್ದೂರಿಯಾಗಿ ಸೀಮಂತ ಮಾಡಲು ಪ್ಲಾನ್ ಮಾಡಲು ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಅಭಿಷೇಕ್ ಅಂಬರೀಶ್ ಅವರು ಮುಂದಿನ ಸಿನಿಮಾದಲ್ಲಿ ನಟಿಸುವುದಕ್ಕಾಗಿ ಕಿಕ್ ಬಾಕ್ಸಿಂಗ್ ಕಲಿಯೋಕೆ ವಿದೇಶಕ್ಕೆ ಹೋಗಿದ್ದರು. ಆದರೆ, ಈಗ ಪತ್ನಿ ಗರ್ಭಿಣಿಯಾಗಿದ್ದು, ಸೀಮಂತ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿಯೇ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇದೇ ವಾರ ಅದ್ದೂರಿಯಾಗಿ  ಅಂಬಿ ನಿವಾಸದಲ್ಲಿ ಸೀಮಂತ ಕಾರ್ಯ ನೇರವೇರಲಿದೆ.

ಭಾರತದ ಭ್ರಷ್ಟಾಚಾರದ ಸಂಸ್ಥಾಪಕಿ ಕಾಂಗ್ರೆಸ್ ಮಾಜಿ ಪ್ರಧಾನಿ ಇಂಧಿರಾಗಾಂಧಿ; ಚೇತನ್ ಅಹಿಂಸಾ

ರೆಬೆಲ್‌ಸ್ಟಾರ್ ಅಂಬಿ ಮತ್ತೆ ಹುಟ್ಟಿಬರಲಿ: ಮಂಡ್ಯದ ಗಂಡು ಖ್ಯಾತಿಯ ನಟ ರೆಬೆಲ್‌ಸ್ಟಾರ್ ಅಂಬರೀಶ್ ಅವರು 2018ರ ನವೆಂಬರ್‌ನಲ್ಲಿ ನಿಧನರಾಗಿದ್ದರು. ಅಂಬರೀಶ್ ನಿಧನದ 5 ವರ್ಷದ ನಂತರ ಕಳೆದ ವರ್ಷ ಅಭಿಷೇಕ್ ಅಂಬರೀಶ್ ಪ್ರೀತಿಸಿದ ಹುಡುಗಿಯನ್ನು ವರಿಸಿದ್ದರು. ಈಗ ಅಂಬರೀಶ್ ಅವರ ಸೊಸೆ ಗರ್ಭಿಣಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಂಬಿ ಅಭಿಮಾನಿಗಳು ಮತ್ತೆ ರೆಬೆಲ್‌ಸ್ಟಾರ್ ಹುಟ್ಟಿಬರಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  ಇನ್ನು ಬೆಂಗಳೂರಿನಲ್ಲಿ ಅಂಬಿ ಮನೆಯಲ್ಲಿ ಸೀಮಂತ ಕಾರ್ಯ ನೆರವೇರಿದ ನಂತರ ಮಂಡ್ಯದಲ್ಲಿಯೂ ಅಂಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios