Asianet Suvarna News Asianet Suvarna News

ಭಾರತದ ಭ್ರಷ್ಟಾಚಾರದ ಸಂಸ್ಥಾಪಕಿ ಕಾಂಗ್ರೆಸ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ; ಚೇತನ್ ಅಹಿಂಸಾ

ಆಧುನಿಕ ಭಾರತದಲ್ಲಿ ಭ್ರಷ್ಟಾಚಾರ ಸಂಸ್ಥಾಪನೆ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಎಂದು ನಟ ಚೇತನ್ ಅಹಿಂಸಾ ಕಿಡಿಕಾರಿದ್ದಾರೆ.

Congress former prime minister Indira Gandhi was Corruption Founder of India says Chetan Ahimsa sat
Author
First Published Aug 8, 2024, 11:22 AM IST | Last Updated Aug 8, 2024, 12:38 PM IST

ಬೆಂಗಳೂರು (ಆ.08): ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೇ ಭ್ರಷ್ಟಾಚಾರ ಆರಂಭವಾಗಿದ್ದು ಯಾರಿಂದ ಎಂಬುದರ ಬಗ್ಗೆ ನೀವು ತಪ್ಪು ಹೇಳಿಕೆ ನೀಡುತ್ತಿದ್ದೀರಿ. ಆಧುನಿಕ ಭಾರತದಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದೇ, ಕಾಂಗ್ರೆಸ್ ಸರ್ಕಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ‘ಭ್ರಷ್ಟಾಚಾರ ಆರಂಭವಾದದ್ದು ಜೆಡಿಎಸ್-ಬಿಜೆಪಿಯಿಂದ’ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಆದರೆ, ಇಂದಿರಾ ಗಾಂಧಿ 1970ರ ದಶಕದಲ್ಲಿ ಸರ್ಕಾರದ ಕ್ರೂರ ನೀತಿಗಳ ಮೂಲಕ ಕಾಂಗ್ರೆಸ್ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಕಪ್ಪು ಹಣವನ್ನು ತರುವ ಮೂಲಕ ಭ್ರಷ್ಟಾಚಾರವನ್ನು ಸಾಂಸ್ಥಿಕಗೊಳಿಸಿದರು.

ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ನಿಖಿಲ್‌ ಕುಮಾರಸ್ವಾಮಿ

ಆಧುನಿಕ ಭಾರತದಲ್ಲಿ, ಭ್ರಷ್ಟಾಚಾರವು ಕಾಂಗ್ರೆಸ್ ಪಕ್ಷದಿಂದ ಪ್ರಾರಂಭವಾಯಿತು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭ ಗಳಿಸಿದೆ. ಈಶ್ವರ ಖಂಡ್ರೆ ಇತಿಹಾಸವನ್ನು ಅಧ್ಯಯನ ಮಾಡಬೇಕು' ಎಂದು ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರ ಹೇಳಿಕಗೆ ತಿರುಗೇಟು ನೀಡಿದ್ದಾರೆ. 

ಈಶ್ವರ ಖಂಡ್ರೆ ಹೇಳಿಕೆ ಮಾಹಿತಿ ಇಲ್ಲಿದೆ ನೋಡಿ..:  ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮುಡಾದಲ್ಲಿ ಯಾವುದೇ ಹಗರಣ ನಡೆಯದೇ ಇದ್ದರೂ ಸಿದ್ದರಾಮಯ್ಯ ಹೆಸರಿಗೆ ಕಳಂಕ ತರಲು ಪಾದಯಾತ್ರೆ ಮಾಡಲಾಗುತ್ತದೆ. ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರಂಭವಾಗಿದ್ದೇ ಬಿಜೆಪಿ-ಜೆಡಿಎಸ್ ಅವಧಿಯಲ್ಲಿ ಎಂದು ವಾಗ್ದಾಳಿ ನಡೆಸಿದ್ದರು. 

ಸಿಎಂ ಸಿದ್ದರಾಮಯ್ಯರಿಂದ ಫ್ರೀಯಾಗಿ ದುಡ್ಡು ಹೊಡೆಯೋ ಕೆಲಸ: ಆರ್.ಅಶೋಕ್

 ಈ ಹಿಂದೆ ಇವರ ಅವಧಿಯಲ್ಲಿ ಬಳ್ಳಾರಿಯಲ್ಲಿ ನಡೆದಿದ್ದ ಹಗರಣ ದೇಶವ್ಯಾಪಿ ಕುಖ್ಯಾತಿ ಗಳಿಸಿತ್ತು. ರಾಜ್ಯದಲಿ ಆಪರೇಶನ್ ಕಮಲ ಮಾಡಿ ಶಾಸಕರ ಖರೀದಿ ಮಾಡಿ ಸರ್ಕಾರ ರಚಿಸಿ ಭ್ರಷ್ಟಾಚಾರ ಮಾಡಿದರು. ಇವರ ಸರ್ಕಾರ ಇದ್ದಾಗ ಇಡಿ, ಸಿಬಿಐ ಯಾವುದು ಬರಲಿಲ್ಲ. ಕೋವಿಡ್ ಸಮಯದಲ್ಲಿ ಸತ್ತ ಹೆಣಗಳ ಮೇಲೆ ಲೂಟಿ ಹೊಡೆದರು. ಅಂದ್ರೆ ಅದು ಬಿಜೆಪಿ. ಭೋವಿ, ಅಂಬೇಡ್ಕರ್ ಸೇರಿದಂತೆ ಭೂ ಮಾಫಿಯಾ ಮಾಡಿದರು ಎಂದು ಆರೋಪಿಸಿದರು. ತಮ್ಮ ಸರ್ಕಾರವನ್ನ ಬೀಳಿಸಿದ ಬಿಜೆಪಿಯನ್ನು ಕೋಮುವಾದಿಗಳು ಅಂದಿದ್ದ ಜೆಡಿಎಸ್‌ನವರು ಈಗ ಅವಕಾಶವಾದಿಗಳಾಗಿ ಬಿಜೆಪಿ ಜತೆ ಕೈ ಜೋಡಿಸಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿದ ಎಲ್ಲರ ಮೇಲೂ ತನಿಖೆ ಮಾಡಿಸುತ್ತೇವೆ. ತನಿಖೆ ಬಳಿಕ ಇವರ ನಿಜವಾದ ಬಣ್ಣ ಬಯಲಾಗುತ್ತಿದೆ. ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ - ಜೆಡಿಎಸ್ ಬುಡಸಮೇತ ಕಿತ್ತಾಕಿ, ಬಡವರ ಪಕ್ಷ ಕಾಂಗ್ರೆಸ್ ಗೆಲ್ಲಿಸಿ ಎಂದಿದ್ದರು.

Latest Videos
Follow Us:
Download App:
  • android
  • ios