Asianet Suvarna News Asianet Suvarna News

ವಿಜಯ್ ಪ್ರಕಾಶ್ ಹಾಡಿದ ಆರಾಮ್ಸೆ ಹಾಡಿನಲ್ಲಿ ಮಿಂಚಿದ ಅಭಿಷೇಕ್‌ ಮಠದ್‌

  • ಸೌಂಡ್ ಮಾಡೋಕೆ ರೆಡಿಯಾಗಿ ಆರಾಮ್ಸೆ ಹಾಡು
  • ವಿಜಯ್ ಪ್ರಕಾಶ್ ಗಾಯನದಲ್ಲಿ ಅಭಿಷೇಕ ಮಠದ್ ಅಭಿನಯ

 

Abhishek matad in new Album Song Aramse dpl
Author
Bangalore, First Published Sep 29, 2021, 4:50 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ ಸೇರಿದಂತೆ ಬಹುಭಾಷೆಯಲ್ಲಿ ಗಾಯಕರಾಗಿ ಗುರುತಿಸಿಕೊಂಡಿರುವ ವಿಜಯ ಪ್ರಕಾಶ್(Vijay Prakash) ಸಾಮಾನ್ಯವಾಗಿ ಆಲ್ಬಂ ಹಾಡುಗಳಲ್ಲಿ ಹಾಡುವುದು ಕಡಿಮೆ. ಆದರೆ ಈಗ ಅವರೊಂದು ವಿಡಿಯೋ ಆಲ್ಬಂಗೆ(Video Album) ಧ್ವನಿ ನೀಡಿದ್ದಾರೆ. ಆ ಹಾಡಿನ ಹೆಸರೇ 'ಆರಾಮ್ಸೆ'. ಅವಸರ ಮಾಡದೇ, ತಾಳ್ಮೆಯಿಂದ ಪ್ರಯತ್ನಿಸು ಎಂಬುದಕ್ಕೆ ನಾವು ಆರಾಮ್ಸೆ ಕೆಲಸ ಮಾಡು, ಆರಾಮ್ಸೆ ಇರು ಎಂದೆಲ್ಲ ಹೇಳುತ್ತೇವೆ. ಹಾಗಾಗಿ ಇದನ್ನೇ ಶೀರ್ಷಿಕೆಯಾಗಿಸಿ ಈ ಹಾಡನ್ನು ಮಾಡಿದ್ದಾರೆ ಅಭಿಷೇಕ ಮಠದ್. 

'ಜೀವನದಲ್ಲಿ ಎಷ್ಟೋ ತಿರಸ್ಕಾರಗಳು ಬರುತ್ತವೆ. ಅಷ್ಟಕ್ಕೇ ಬದುಕನ್ನು ಕೈಬಿಡಬಾರದು. ಇಲ್ಲಿಯೇ ಮುಂದುವರಿಯಬೇಕು. ಈ ಅಂಶ ವಿಜಯ್ ಪ್ರಕಾಶ್ ಅವರಿಗೆ ಇಷ್ಟವಾಯ್ತು. ಅವರು ಖುಷಿಯಿಂದ ಹಾಡಿದರು. ನಂತರ ಈ ಹಾಡನ್ನು ಚಿತ್ರೀಕರಣ ಮಾಡಿದ ರೀತಿಗೆ ಅವರು ಖುಷಿ ವ್ಯಕ್ತಪಡಿಸಿದರು. ನಮಗೆ ತುಂಬ ಬೆಂಬಲ ನೀಡಿದರು' ಎನ್ನುತ್ತಾರೆ ಅಭಿಷೇಕ ಮಠದ್.

ಕೋಟಿಗೊಬ್ಬ ನಾಯಕಿ ಮಡೊನ್ನಾ ನಟನೆ ಮಾತ್ರವಲ್ಲ, ಹಾಡೋದ್ರಲ್ಲೂ ಸೂಪರ್

'ಇದು ಒಬ್ಬ ಕಲಾವಿದನ ಸ್ಫೂರ್ತಿದಾಯಕ ಪ್ರಯಾಣದ ಬಗ್ಗೆ ಇರುವಂತಹ ಹಾಡಾಗಿದೆ. ಇದಕ್ಕೆ ನಾವು 'ಆರಾಮ್ಸೆ' ಎಂದು ಟೈಟಲ್ ನೀಡಿದ್ದೇವೆ. ಕಲಾವಿದನೊಬ್ಬನ ವೃತ್ತಿ ಜೀವನದ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳನ್ನು ಈ ಹಾಡು ವಿವರಿಸುತ್ತದೆ. ನಟನೆಯ ವೃತ್ತಿ ಜೀವನದಲ್ಲಿ ಹಲವಾರು ನಿರಾಕರಣೆಗಳು ಮತ್ತು ನಿರಾಶೆಗಳ ನಂತರ ಅವರು ಹತಾಶೆಯಿಂದ ತಮ್ಮ ಜೀವನವನ್ನು ತ್ಯಜಿಸಲು ನಿರ್ಧರಿಸುತ್ತಾರೆ. ಆದರೆ, ಮತ್ತೆ ಆತ ತನ್ನ ಜೀವನದಲ್ಲಿ ಗೆಲ್ಲುವುದಕ್ಕೆ ಮುಂದುವರಿಯುತ್ತಾನೆ. ಅಂದುಕೊಂಡಿದ್ದನ್ನು ಸಾಧಿಸುತ್ತಾನೆ. ಆ ಹೋರಾಟ ಮತ್ತು ನೋವುಗಳನ್ನು ವೀಡಿಯೊದಲ್ಲಿ ತೋರಿಸಲಾಗಿದೆ' ಎನ್ನುತ್ತಾರೆ ಅವರು.

ಈ ಹಾಡಿಗೆ ರಿಷಿಕೇಶ್ ಛಾಯಾಗ್ರಹಣ ಮಾಡಿದ್ದಾರೆ. ಹಾಡಿನ ಕಾನ್ಸೆಪ್ಟ್, ನೃತ್ಯ ನಿರ್ದೇಶನ, ನಿರ್ದೇಶನ, ನಿರ್ಮಾಣವನ್ನು ಮಾಡಿರುವ ಅಭಿಷೇಕ್ ಮಠದ್ ಅವರೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಈ ಹಿಂದೆ ದಿಗಂತ್ ಜೊತೆಗೆ ಒಂದು ಮ್ಯೂಸಿಕ್ ವಿಡಿಯೋ ಮಾಡಿದ್ದರು. ಅದಕ್ಕೆ ಅವರೇ ನೃತ್ಯ ನಿರ್ದೇಶನ ಮಾಡಿದ್ದರು. ನಂತರ ಚಂದನ್ ಶೆಟ್ಟಿ ಜೊತೆಗೆ ಟಿಕಿಲಾ, ಬಡಪಾಯಿ ಕುಡುಕ ಸಾಂಗ್‌ಗಳನ್ನು ಮಾಡಿದ್ದಾರೆ. ಈಚೆಗೆ ಅದಿತಿ ಪ್ರಭುದೇವ ಅವರೊಂದಿಗೆ ಪರ್ಫೆಕ್ಟ್ ಗರ್ಲ್ ಎಂಬ ಸಾಂಗ್ ಮಾಡಿದ್ದರು ಅಭಿಷೇಕ್‌. ಸದ್ಯ ಬಳೆಪೇಟೆ ಮತ್ತು ಸಮುದ್ರಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

Follow Us:
Download App:
  • android
  • ios