ಸಂದ​ರ್ಭ: ಮುನಿ​ರತ್ನ ಕುರು​ಕ್ಷೇತ್ರ ಚಿತ್ರದ ಶತದಿನೋ​ತ್ಸವ ಸಂಭ್ರಮ. ಬೆಂಗ​ಳೂ​ರಿನ ಮತ್ತಿ​ಕೆ​ರೆ​ಯ​ಲ್ಲಿ​ರುವ ಜೆಪಿ ಪಾರ್ಕ್ ಮೈದಾ​ನ​ದಲ್ಲಿ ನಡೆದ ಕಾರ್ಯ​ಕ್ರಮ ಇದು.

‘ನನಗೆ ಒಂದು ಆಸೆ ಇದೆ. ಅದು ಡಿ ಬಾಸ್‌ ಚಿತ್ರ​ದಲ್ಲಿ ಖಳ​ನಾ​ಯ​ಕ​ನಾಗಿ ನಟಿ​ಸ​ಬೇಕು. ದರ್ಶನ್‌ ಅವ​ರಿಗೇ ನಾನೇ ವಿಲನ್‌ ಆಗ​ಬೇಕು. ಈ ಆಸೆ​ಯನ್ನು ದಯ​ವಿಟ್ಟು ನಿರ್ಮಾ​ಪಕ ಮುನಿ​ರತ್ನ ಅವರೇ ಈಡೇ​ರಿ​ಸ​ಬೇ​ಕು’ ಎಂದು ವೇದಿಕೆ ಮೇಲೆ ಹೇಳಿ​ದರು.

ದರ್ಶನ್ ಹೀರೋ ಆದ್ರೆ ನಾನು ವಿಲನ್‌ ಆಗ್ಲೇಬೇಕು; ಅಭಿಷೇಕ್ ಅಂಬರೀಶ್‌ ಹೊಸ ಡಿಮ್ಯಾಂಡ್!

ಇಷ್ಟಕ್ಕೂ ಅಭಿ​ಷೇಕ್‌ ಯಾಕೆ ವಿಲನ್‌ ಆಗ​ಬೇಕು ಅನಿ​ಸಿದ್ದು. ಅದಕ್ಕೆ ಅವರೇ ವಿವ​ರಣೆ ಕೊಟ್ಟರು. ‘ನನ್ನ ತಂದೆ ಬಿಟ್ಟರೆ ನನಗೆ ಅವ​ರಷ್ಟೇ ಹೆಚ್ಚು ಬೈಯ್ದು ಬುದ್ಧಿ ಹೇಳು​ವುದು ದರ್ಶನ್‌ ಅವರು. ಒಮ್ಮೆ ನಮ್ಮ ತಂದೆ​ಯ​ವರೇ ನೀನು ನನ್ನ ಮಾತು ಕೇಳಲ್ಲ, ನಿನಗೆ ಆ ದರ್ಶನ್‌ ಸರಿ ಎನ್ನು​ತ್ತಿ​ದ್ದರು. ಹೀಗಾಗಿ ನನ್ನ ಗದರು​ವುದು, ಬುದ್ಧಿ ಹೇಳು​ವುದು ದರ್ಶನ್‌ ಮಾತ್ರ. ಇದನ್ನೇ ಅವರು ತೆರೆ ಮೇಲೆ ಮಾಡಲಿ. ಅವ​ರಿಂದ ಬೈಯಿ​ಸಿ​ಕೊ​ಳ್ಳುವ, ಬುದ್ಧಿ ಹೇಳಿ​ಕೊಂಡು ಸರಿ ಹೋಗುವ ವಿಲನ್‌ ಪಾತ್ರ ಮಾಡು​ತ್ತೇನೆ’ ಎಂದರು ಅಭಿ​ಷೇಕ್‌.

ಎಕ್ಸಾಂ ಟೆನ್ಷನ್‌ಗೆ ನೋ ಹೇಳಿ; ಡಿ-ಬಾಸ್‌ ಕೊಟ್ಟ ಟಿಪ್ಸ್ ನೋಡಿ!

ಅಂದ​ಹಾಗೆ ಹೀಗೆ ಅಭಿ​ಷೇಕ್‌ ಮತ್ತು ದರ್ಶನ್‌ ಅವರ ಕಾಂಬಿ​ನೇ​ಷನ್‌ ಚಿತ್ರ​ವನ್ನು ನಿರ್ಮಾ​ಪಕ ಮುನಿ​ರತ್ನ ಅವರೇ ಮಾಡ​ಬೇಕು ಎಂದು ಅಭಿ​ಷೇಕ್‌ ಹೇಳಿ​ದ್ದಕೂ ಒಂದು ಕಾರಣ ಇದೆ. ‘ನಿಮ್ಮ ಬ್ಯಾನ​ರ್‌​ನಲ್ಲಿ ನಮ್ಮ ತಂದೆ ನಟಿ​ಸಿ​ದ್ದಾರೆ. ನಮ್ಮ ತಾಯಿ ನಟಿ​ಸಿ​ದ್ದಾರೆ. ಈಗ ನನಗೂ ಒಂದು ಅವ​ಕಾಶ ಕೊಡಿ’ ಎಂದು ಅಭಿ​ಷೇಕ್‌ ಹೇಳಿ​ದಾ​ಗ ‘ನಿಮ್ಮ ಆಸೆ​ಯನ್ನು ಈ ವರ್ಷವೇ ಈಡೇ​ರಿ​ಸು​ತ್ತೇ​ನೆ’ ಎಂದು ಮುನಿ​ರತ್ನ ಭರ​ವಸೆ ಕೊಟ್ಟರು.