ದುನಿಯಾ ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾ..!

ಮಾಸ್ ಸಿನಿಮಾಗಳಿಗೆ ಸೈ ಎನಿಸಿಕೊಂಡಿರುವ ನಿರ್ದೆಶಕ ದುನಿಯಾ ಸೂರಿ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ನಟಿಸುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. 

Abhishek Ambareesh likely to act in dunia Suri Upcoming movie

ನಿರ್ದೇಶಕ ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಶನ್‌ನಲ್ಲಿ ಸಿನಿಮಾ ಬರಲಿದೆಯಾ ಹೀಗೊಂದು ಕುತೂಹಲಕಾರಿ ಸುದ್ದಿ ಸದ್ದು ಮಾಡುತ್ತಿದೆ. ಧನಂಜಯ್ ನಟನೆಯಲ್ಲಿ 'ಪಾಪ್‌ಕಾರ್ನ್ ಮಂಕಿ ಟೈಗರ್' ಚಿತ್ರದ ನಂತರ ಯಾವ ಚಿತ್ರವನ್ನು ಸೂರಿ ಒಪ್ಪಿಲ್ಲ. ಅಲ್ಲದೇ ಅವರದ್ದೇ ಆದ ಹೋಮ್ ಪ್ರೊಡಕ್ಷನ್‌ನ 'ಕಾಗೆ ಬಂಗಾರ' ಚಿತ್ರ ಇದೆ ಅಷ್ಟೆ. ಹೀಗಾಗಿ ಅಭಿಷೇಕ್‌ಗೆ ಸಿನಿಮಾ ಪ್ಲಾನ್‌ನಲ್ಲಿದ್ದಾರೆ ಸೂರಿ ಎನ್ನಲಾಗುತ್ತಿದೆ. 

ಅರ್ಜುನ್‌ ಮಲೈಕಾ ಸಂಬಂಧಕ್ಕೆ ಜೈ ಎಂದ್ರಾ ಚಿಕ್ಕಪ್ಪ ಅನಿಲ್‌ ಕಪೂರ್‌?

ಅಮರ್ ಚಿತ್ರದ ನಂತರ ಅಭಿಷೇಕ್ ಅವರಿಗೂ ಒಂದು ಒಳ್ಳೆಯ ಗೆಲುವಿನ ಸಿನಿಮಾ ಬೇಕಾಗಿದೆ. ಈ ಕಾರಣಕ್ಕೆ ಮಾಸ್ ಕತೆಗಳನ್ನು ಮಸ್ತಾಗಿ ತೆರೆ ಮೇಲೆ ಜೋಡಿಸುವ ನಿರ್ದೆಶಕ ಸೂರಿ ಮೇಲೆ ಅಭಿಷೆಕ್‌ಗೆ ಮನಸ್ಸಾಗಿದೆ ಎಂಬುದು ಗಾಂಧಿಬಗರದ ಸುದ್ದಿ. ಈಗಾಗಲೇ ಸೂರಿ, ಅಭಿಷೇಕ್ ಭೇಟಿಯಾಗಿ ಕತೆ ಹೇಳಿದ್ದಾರಂತೆ.

ಅಭಿಷೇಕ್‌ಗೂ ಸೂರಿ ಜೊತೆ ಸಿನಿಮಾ ಮಾಡಲು ಆಸಕ್ತಿ ಉಂಟಾಗಿದ್ದು ಒಂದು ವಿಶೇಷವಾದ ಚಿತ್ರದ ಮೂಲಕ ಇಬ್ಬರೂ ಒಂದಾಗುತ್ತಿದ್ದಾರೆ. ಎಲ್ಲವೂ ಅಂದುಕೊಂಡಂಗೆ ಆದರೆ ಲಾಕ್‌ಡೌನ್ ಮುಗಿದ ಮೇಲೆ ಅಥವಾ ಮುಂದಿನ ತಿಂಗಳು ಅಭಿಷೇಕ್ ಹಾಗೂ ಸೂರು ಕಾಂಬಿನೇ‍ನ್ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ. 

 

Latest Videos
Follow Us:
Download App:
  • android
  • ios