ಹೆಣ್ಣು ಮಕ್ಕಳ ಶೋಷಣೆಯ ಕತೆ ಅಥವಾ ಹೆಣ್ಣು ಮಕ್ಕಳ ಸ್ವಾತಂತ್ರ್ಯದ ಕತೆ ಹೀಗೆ ಏನು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಟ್ರೇಲರ್‌ನಲ್ಲಿ ರಕ್ತ ಇದೆ. ಆದರೆ ಸಿನಿಮಾ ಆ ರಕ್ತ ಆಪ್ತವಾಗುತ್ತದೆ. ರಕ್ತ ಇಲ್ಲಿ ರೂಪಕ.

‘ಹೆಣ್ಣು ಮಕ್ಕಳಿಗಾಗಿ ಮಾಡಿರುವ ಸಿನಿಮಾ ಇದು. ಹೆಣ್ಣು ಮಕ್ಕಳು ನೋಡಿದರೆ ನನಗೆ ಸಂತೋಷವಾಗುತ್ತದೆ. ಹೆಣ್ಣು ಮಕ್ಕಳ ಶೋಷಣೆಯ ಕತೆ ಅಥವಾ ಹೆಣ್ಣು ಮಕ್ಕಳ ಸ್ವಾತಂತ್ರ್ಯದ ಕತೆ ಹೀಗೆ ಏನು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಟ್ರೇಲರ್‌ನಲ್ಲಿ ರಕ್ತ ಇದೆ. ಆದರೆ ಸಿನಿಮಾ ಆ ರಕ್ತ ಆಪ್ತವಾಗುತ್ತದೆ. ರಕ್ತ ಇಲ್ಲಿ ರೂಪಕ. ನಾನು ರೂಪಕಗಳಲ್ಲಿ ಕತೆ ಹೇಳಿದ್ದೇನೆ’ ಎಂದು ನಿರ್ದೇಶಕ ಶ್ರೀಲೇಶ್‌ ನಾಯರ್‌ ಹೇಳುತ್ತಾರೆ. ಅವರು ನಿರ್ದೇಶಿಸಿರುವ, ವಿನಯ್‌ ರಾಜ್‌ಕುಮಾರ್‌ ನಟನೆಯ, ಉದಯ್‌ ಶಂಕರ್‌ ಎಸ್‌ ಮತ್ತು ಬಿಎಮ್ ಶ್ರೀರಾಮ್ ನಿರ್ಮಾಣ ಮಾಡಿರುವ ‘ಪೆಪೆ’ ಸಿನಿಮಾ ಆ.30ರಂದು ಬಿಡುಗಡೆ ಆಗುತ್ತಿದೆ.

ಈ ಸಿನಿಮಾ ಕುರಿತು ಶ್ರೀಲೇಶ್, ‘ಈ ಸಿನಿಮಾದಲ್ಲಿ ಒಂದು ಇರುವೆ ಕೂಡ ಕತೆ ಹೇಳುತ್ತದೆ. ಇದು ಸಂಪೂರ್ಣ ಕಮರ್ಷಿಯಲ್ ಸಿನಿಮಾ ಅನ್ನುವುದಕ್ಕಿಂತ ಬ್ರಿಡ್ಜ್‌ ಸಿನಿಮಾ ಅನ್ನುವುದು ಒಳಿತು. ತುಂಬಾ ನೇರವಾಗಿ ಕತೆ ಹೇಳಿದ್ದೇನೆ. ಈ ಕತೆ ಸಿದ್ಧಮಾಡಿದಾಗ ಇದಕ್ಕೆ ಹೀರೋ ಆಗಿ ಒಬ್ಬ ಪಕ್ಕದ್ಮನೆ ಹುಡುಗನಂತೆ ಕಾಣಿಸುವ ನಟ ಬೇಕು ಅನ್ನಿಸಿತು. ಆಗ ಫೈಟ್ ಮಾಸ್ಟರ್‌ ಚೇತನ್‌ ಡಿಸೋಜ ನನಗೆ ವಿನಯ್‌ ಸರ್‌ನ ಪರಿಚಯ ಮಾಡಿಕೊಟ್ಟರು. ಅವರು ಕತೆ ಒಪ್ಪಿಕೊಂಡರು. ಪೆಪೆ ಎಂಬ ಪಾತ್ರವಾಗಿ ಬದಲಾದರು. ಸಂಕೀರ್ಣವಾದ ಮತ್ತು ಸೂಕ್ಷ್ಮ ವಿಚಾರಗಳಿವೆ ಸಿನಿಮಾದಲ್ಲಿ. ಚರ್ಚೆ ಆದರೆ ಖುಷಿ ಆಗುತ್ತದೆ’ ಎನ್ನುತ್ತಾರೆ.

ವಿನಯ್‌ ರಾಜ್‌ಕುಮಾರ್‌ನ ಪವರ್‌ಫುಲ್‌ ಗಂಡಸಾಗಿ ತೋರಿಸಿದ ಸಿನಿಮಾ ಪೆಪೆ: ಕಿಚ್ಚ ಸುದೀಪ್

ಚಿತ್ರಕ್ಕೆ ಕಾಜಲ್‌ ನಾಯಕಿ: ವಿನಯ್‌ ರಾಜ್‌ಕುಮಾರ್‌ ಅಭಿನಯದ ಹೊಸ ಚಿತ್ರ ‘ಪೆಪೆ’ಗೆ ಕಾಜಲ್‌ ಕುಂದ್ರಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಪೋಸ್ಟರ್‌ನಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಶ್ರೀಲೇಶ್‌ ನಾಯರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ‘ದಿಯಾ’ ನಟ ದೀಪಕ್‌ ಶೆಟ್ಟಿಅಭಿನಯದ ‘ಕೆಟಿಎಂ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕಾಜಲ್‌, ಈಗಾಗಲೇ ತುಳು ಹಾಗೂ ಮರಾಠಿ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭೆ. ಈಗ ‘ಪೆಪೆ’ ಮೂಲಕ ಸ್ಟಾರ್‌ ನಟರ ಕುಟುಂಬದ ಹೀರೋ ಜತೆ ಹೆಜ್ಜೆ ಹಾಕುವ ಅವಕಾಶಕ್ಕೆ ಪಾತ್ರರಾಗಿದ್ದಾರೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿರುವ ಈ ಚಿತ್ರವನ್ನು ಉದಯ ಶಂಕರ ಎಸ್‌ ಹಾಗೂ ನಿಜಗುಣ ಗುರುಸ್ವಾಮಿ ನಿರ್ಮಿಸುತ್ತಿದ್ದಾರೆ.