ಭಾಘಿ-4 ಚಿತ್ರದ ಫಸ್ಟ್‌ ಲುಕ್‌ ವೈರಲ್, ಡಿಸ್ಕೋ-ಕಂಗ್ರಾಜುಲೇಷನ್ಸ್‌ ಬ್ರದರ್ ಚಿತ್ರದ ಅದ್ಧೂರಿ ಮುಹೂರ್ತ, ಕನ್ನಡಿಗರಿಗೆ ಹೊಸ ವಿಎಫ್‌ಎಸ್‌ ಸ್ಟುಡಿಯೋ..... 

ಭಾಘಿ-4ಗೆ ಸ್ಯಾಂಡಲ್​ವುಡ್​​ ಡೈರೆಕ್ಟರ್!

ಭಜರಂಗಿ, ವಜ್ರಕಾಯ ಖ್ಯಾತಿಯ ನಿರ್ದೇಶಕ ಎ.ಹರ್ಷ ಇದೀಗ ಬಾಲಿವುಡ್​ಗೆ ಹಾರಿದ್ದಾರೆ. ಸಾಜಿದ್ ನಾಡಿಯಾವಾಲಾ ನಿರ್ಮಾಣದ ಬಾಘಿ ಸರಣಿಯ ಹೊಸ ಚಿತ್ರವನ್ನು ನಿರ್ದೇಶಿಸೋ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಟೈಗರ್ ಶ್ರಾಫ್ ನಟನೆಯ ಬಾಘಿ ಸರಣಿಯ 4ನೇ ಸಿನಿಮಾ ಇದಾಗಿತ್ತು, ಸದ್ಯ ಬಾಘಿ-4 ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಟೈಗರ್ ರಕ್ತ ಸಿಕ್ತ ಲುಕ್​ನಲ್ಲಿರೋ ಈ ಪೋಸ್ಟರ್ ಎಲ್ಲರ ಹುಬ್ಬೆರುವಂತೆ ಮಾಡಿದೆ. ಅದ್ರಲ್ಲೂ ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ಗೆ ಕಾಲಿಟ್ಟಿರೋ ಹರ್ಷಗೆ ಎಲ್ಲರೂ ಅಭಿನಂದನೆ ಹೇಳ್ತಾ ಇದ್ದಾರೆ. 

'ಮ್ಯಾಕ್ಸ್‌' ಸಿನಿಮಾ ರಿಲೀಸ್‌ಗೆ ಅಡತಡೆ; ಕೊನೆಗೂ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್

ಡಿಸ್ಕೋ, ಕಂಗ್ರಾಜುಲೇಷನ್ಸ್ ಬ್ರದರ್​​ ಸಿನಿಮಾಗಳ ಮುಹೂರ್ತ..!

ಕಾಲೇಜ್ ಕುಮಾರ್ ಸಿನಿಮಾ ಮೂಲಕ ಸಖತ್​ ಫೇಮಸ್ ಆಗಿದ್ದ ನಟ ವಿಕ್ಕಿ ವರುಣ್ ನಿರ್ದೇಶಕ ಹರಿ ಸಂತೋಷ್ ಮತ್ತೆ ಜೊತೆಯಾಗಿದ್ದಾರೆ. ಈ ಚಿತ್ರಕ್ಕೆ ಡಿಸ್ಕೋ ಎಂದು ಟೈಟಲ್​ ಇಡಲಾಗಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಸಿನಿಮಾದ ಮಹೂರ್ಥ ಮಾಡಲಾಗಿದೆ. ಇದೇ ವೇಧಿಕೆಯಲ್ಲೆ ಪ್ರತಾಪ್ ಗಂಧರ್ವ ನಿರ್ದೇಶನದ ಕಂಗ್ರಾಜುಲೇಷನ್ಸ್ ಬ್ರದರ್ ಸಿನಿಮಾ ಮಹೂರ್ಥ ಕೂಡ ನಡೆದಿದೆ. ಈ ಸಿನಿಮಾಗೆ ಹರಿ ಸಂತೋಷ್ ಕಥೆ ಬರೆದಿದ್ದಾರೆ. ರಕ್ಷಿತ್ ನಾಯಕನಟನಾಗಿ ನಟಿಸ್ತಿದ್ದು, ಅನುಷಾ ಹಾಗೂ ಸಂಜನಾ ದಾಸ್ ನಾಯಕಿಯಾಗಿ ನಟಿಸ್ತಿದ್ದಾರೆ.

'ಭೈರತಿ ರಣಗಲ್' ಬಡ ಕುಟುಂಬ ಹುಡುಗಿ ಪಾತ್ರದಲ್ಲಿ 'ಚುಕ್ಕಿತಾರೆ' ಪುಟ್ಟಿ

ನಟ ಕಮಲ್ ಸಾರಥ್ಯದ "MYTH FX" ಸ್ಟುಡಿಯೋ ಅನಾವರಣ..!

ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗುವಂತಹ "MYTH FX" ಸ್ಟುಡಿಯೋ ಬನ್ನೇರು ಘಟ್ಟ ರಸ್ತೆಯ ಅರಕೆರೆಯಲ್ಲಿ ಆರಂಭವಾಗಿದೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಈ ಸುಸಜ್ಜಿತ ವಿ ಎಫ್ ಎಕ್ಸ್ ಸ್ಟುಡಿಯೋವನ್ನು ಉದ್ಘಾಟಿಸಿದ್ದಾರೆ. ನಿರ್ಮಾಪಕರಿಗೆ ಅನುಕೂಲವಾಗುವಂತಹ ಸ್ಟುಡಿಯೋ ಮಾಡಿರುವ ಖುಷಿಯಿದೆ ಅಂತ ನಟ ಹಾಗೂ "MYTH FX" ಮುಖ್ಯಸ್ಥ ಕಮಲ್ ಸಂತಸ ಹಂಚಿಕೊಂಡಿದ್ದಾರೆ.