ಡಿಟ್ಟೋ ಯಶ್ ರಾಧಿಕಾರಂತೆ ಎಂಗೇಜ್‌ ಆದ ಫ್ಯಾನ್ ಜೋಡಿ, ಬ್ಯೂಟಿಫುಲ್‌ ಅಂದ್ರು ಸಿಂಡ್ರೆಲಾ

ಕೆಲವು ವರ್ಷಗಳ ಕೆಳಗೆ ನೆನಪಿಟ್ಟುಕೊಳ್ಳೋ ಹಾಗೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್. ಈ ಜೋಡಿಯನ್ನು ಆರಾಧಿಸೋ ಫ್ಯಾನ್ ಒಬ್ರು ಡಿಟ್ಟೋ ಇವರಿಬ್ಬರ ಹಾಗೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

A Fan of Radhika pandit recreated sandalwood couple Yash Radhika pandith engagement bni

2016ನೇ ಇಸವಿ. ಇಡೀ ಗೋವಾಕ್ಕೆ ವಿಶೇಷ ಕಳೆ ಬಂದಿತ್ತು. ಕಾರಣ ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿಯೊಂದು ತಮ್ಮ ಲೈಫಿನ ಮಹತ್ವದ ಗಳಿಗೆಗೆ ಕಾಲಿಡಲಿದ್ದರು. ಬಹಳ ಬ್ಯೂಟಿಫುಲ್ ಆಗಿ ಲೈಫ್‌ ಇಡೀ ನೆನಪಿಟ್ಟುಕೊಳ್ಳೋ ಹಾಗೆ ಆ ಕಾರ್ಯಕ್ರಮ ನಡೆಯಿತು. ಅಫ್‌ಕೋರ್ಸ್ ಎಲ್ಲರೂ ಗೆಸ್ ಮಾಡಿರೋ ಹಾಗೆ ಇಲ್ಲಿ ಪ್ರಸ್ತಾಪಿಸುತ್ತಿರೋದು ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಬಗ್ಗೆ. ಇವರಿಬ್ಬರ ಎಂಗೇಜ್‌ಮೆಂಟ್ ಕಳೆದು ಆರೇಳು ವರ್ಷಗಳೇ ಕಳೆದಿವೆ. ಆದರೂ ಈ ಜೋಡಿಯ ಎಂಗೇಜ್‌ಮೆಂಟ್‌ಅನ್ನು ಕನ್ನಡಿಗರು ಮರೆತಿಲ್ಲ. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ನಿಶ್ಚಿತಾರ್ಥ ಕಣ್ತುಂಬಿಕೊಂಡ ಅದೆಷ್ಟೋ ಮಂದಿ ಏನ್ ಸಖತ್ತಾಗಿ ಎಂಗೇಜ್‌ಮೆಂಟ್ ಮಾಡ್ಕೊಂಡ್ರಲ್ಲ, ನಾವೂ ಹೀಗೇ ನಿಶ್ಚಿತಾರ್ಥ ಮಾಡ್ಕೊಂಡಿದ್ರೆ ಚೆನ್ನಾಗಿರೋದು ಅಂದುಕೊಂಡಿದ್ದರು. ನಿಶ್ಚಿತಾರ್ಥದಲ್ಲಿ ಕಡು ನೀಲಿ ಬಣ್ಣದ ಲೆಹೆಂಗದಲ್ಲಿ ರಾಧಿಕಾ ಪಂಡಿತ್ ಮಿಂಚಿದ್ದರು. ಡಿಸೈನರ್ ಶೇರ್ವಾನಿ ತೊಟ್ಟು ರಾಕಿ ಭಾಯ್ ಮಿಂಚಿದ್ದರು. ಈಗ ರಾಧಿಕಾ ಪಂಡಿತ್ ಅವರ ವಿಶೇಷ ಅಭಿಮಾನಿಯೊಬ್ಬರು ಅವರಂತೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹೌದು, ಹೀಗೆ ತನ್ನ ಆರಾಧ್ಯ ತಾರೆಯಂತೆಯೇ ಎಂಗೇಜ್‌ಮೆಂಟ್ ಮಾಡಿಕೊಂಡವರು ಶೋಭಿತಾ ಅನ್ನೋ ರಾಧಿಕಾ ಫ್ಯಾನ್. ಈಕೆ ಯಶ್-ರಾಧಿಕಾ ಪಂಡಿತ್‌ರಂತೆಯೇ ನಿಶ್ಚಿತಾರ್ಥ ಸಮಾರಂಭವನ್ನು ರೀ-ಕ್ರಿಯೇಟ್ ಮಾಡಿದ್ದರು. ಅದೇ ವಿಡಿಯೋ ಈಗ ವೈರಲ್ ಆಗಿದೆ. ಅಲ್ಲದೆ ಅಭಿಮಾನಿಯನ್ನು ನಿಶ್ಚಿತಾರ್ಥದ ವಿಡಿಯೋ ನೋಡಿ ಸ್ವತ: ರಾಧಿಕಾ ಪಂಡಿತ್ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನ ರಾಕಿಂಗ್ ಜೋಡಿ ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2016ರಲ್ಲಿ ನಡೆದ ಸಮಾರಂಭದಲ್ಲಿ ರಾಧಿಕಾ ಹಾಗೂ ಯಶ್ ಎಂಗೇಜ್ ಆಗಿದ್ದರು. ಆ ವೇಳೆ ರಾಧಿಕಾ ಪಂಡಿತ್ ಕಟು ನೀಲಿ ಬಣ್ಣದ ಲೆಹೆಂಗ ತೊಟ್ಟು ಅಭಿಮಾನಿಗಳ ಗಮನ ಸೆಳೆದಿದ್ದರು. ರಾಧಿಕಾ ಪಂಡಿತ್ ಡಿಸೈನರ್ ಕಾಸ್ಟ್ಯೂಮ್‌ ಅಭಿಮಾನಿಗಳಿಗೆ ಇಷ್ಟ ಆಗಿತ್ತು. ಈಗ ಶೋಭಿತಾ ಅನ್ನೋ ಅಭಿಮಾನಿಯೊಬ್ಬರು ಅವರಂತೆಯೇ ಕಾಸ್ಟ್ಯೂಮ್ ಧರಿಸಿದ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದನ್ನ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ನೋಡಿ ರಾಧಿಕಾ ಪಂಡಿತ್ ಥ್ರಿಲ್ ಆಗಿದ್ದಾರೆ. ತನ್ನ ಅಭಿಮಾನಿಗೆ ಶುಭ ಹಾರೈಸಿದ್ದಾರೆ.

ರಿಷಬ್ ಶೆಟ್ಟಿ 'ಕಾಂತಾರ 2' ಮುಹೂರ್ತಕ್ಕೆ ದಿನಾಂಕ ಫಿಕ್ಸ್: ಎಲ್ಲಿ, ಯಾವಾಗ? ಇಲ್ಲಿದೆ ಸಂಪೂರ್ಣ ವಿವರ

ಅಂದಹಾಗೆ ಈ ಶೋಭಿತಾ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಅಪ್ಪಟ ಅಭಿಮಾನಿ. ಹೀಗಾಗಿ ಅವರಂತೆಯೇ ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿದ್ದರು. ನಿಶ್ಚಿತಾರ್ಥದಲ್ಲಿ ರಾಧಿಕಾ ಧರಿಸಿದಂತೆಯೇ ಲೆಹೆಂಗಾ ಡಿಸೈನ್ ಮಾಡಿಸಿದ್ದರು. ಅಲ್ಲದೆ ಬ್ಯಾಕ್‌ಗ್ರೌಂಡ್ ಕೂಡ ಸೇಮ್ ಟು ಸೇಮ್ ರೀ-ಕ್ರಿಯೇಟ್(Re creat) ಮಾಡಿದ್ದಾರೆ. ರಾಧಿಕಾ ಪಂಡಿತ್ ಅಭಿಮಾನಿ ಶೋಭಿತಾ ಮೈಸೂರಿನಲ್ಲಿ ಕಿರಣ್ ಬಾಬು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಧಿಕಾ-ಯಶ್ ನಿಶ್ಚಿತಾರ್ಥದಂತೆ ಸೇಮ್ ಟು ಸೇಮ್ ಮರುಸೃಷ್ಟಿ ಮಾಡಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಧಿಕಾ ಕಾಸ್ಟ್ಯೂಮ್(Costume) ಜೊತೆಗೆ ಹೇರ್​ಸ್ಟೈಲ್, ಮೇಕಪ್​, ಮೂಗುತಿ ಎಲ್ಲವನ್ನೂ ನಕಲಿ ಮಾಡಿದ್ದಾರೆ. ಜೊತೆಗೆ ಈ ವಿಡಿಯೋವನ್ನು ರಾಧಿಕಾ ಪಂಡಿತ್ ಅವರಿಗೆ ಟ್ಯಾಗ್(Tag) ಕೂಡ ಮಾಡಿದ್ದರು. ಈ ವಿಡಿಯೋಗೆ ರಾಧಿಕಾ ಪಂಡಿತ್ ಪ್ರತಿಕ್ರಿಯೆ ನೀಡಿದ್ದಾರೆ. ರಾಧಿಕಾ ಪಂಡಿತ್ ತನ್ನ ಅಭಿಮಾನಿಯ ವಿಡಿಯೋ ನೋಡಿ 'ಇದೊಂದು ಬ್ಯೂಟಿಫುಲ್ ರೀ-ಕ್ರಿಯೇಷನ್. ಡಿಯರ್ ​ಶೋಭಿತಾ, ನೀವು ಚೆಂದ ಕಾಣುತ್ತಿದ್ದೀರಿ. ನೀವು ಸಹಜ ಸುಂದರಿ' ಎಂದು ರಾಧಿಕಾ ಪಂಡಿತ್ ಪ್ರತಿಕ್ರಿಯೆ(Comment) ನೀಡಿದ್ದಾರೆ.

ಇದರಿಂದ ಸಖತ್ ಖುಷಿ ಆಗಿರೋ ಶೋಭಿತಾ, 'ನಿಮ್ಮ ಈ ಪ್ರತಿಕ್ರಿಯೆಯಿಂದ ನನ್ನ ಪ್ರಯತ್ನಕ್ಕೆ ಕಂಪ್ಲೀಟ್‌ನೆಸ್ ಬಂತು. ನಿಮ್ಮ ಎಂಗೇಜ್‌ಮೆಂಟ್‌(engagement) ಫೋಟೋಸ್, ವೀಡಿಯೋ ನೋಡಿ ನಾನು ನಿಮ್ಮ ಹಾಗೆ ಕಾಣಬೇಕು ಅಂತ ಹಂಬಲಿಸಿದ್ದೆ. ಈಗ ಖುಷಿಯಲ್ಲಿ ನನ್ನ ಕಾಲೇ ನೆಲದ ಮೇಲೆ ನಿಲ್ತಿಲ್ಲ' ಅನ್ನೋ ರೀತಿಯಲ್ಲಿ ಶೋಭಿತಾ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

Yash: ರಾವಣ ಪಾತ್ರ ಮಾಡಲ್ಲ ಎಂದಿದ್ದೇಕೆ ರಾಕಿಂಗ್ ಸ್ಟಾರ್? ಉತ್ತಮ ನಿರ್ಧಾರ ಎಂದ ಪ್ಯಾನ್ಸ್

Latest Videos
Follow Us:
Download App:
  • android
  • ios