ಕೊರೋನಾ ವೈರಸ್: ಕಿಚ್ಚನಿಗೇ ಬುದ್ಧಿ ಹೇಳಿದ 'ಅ ದಿನಗಳು' ಚೇತನ್?
ಕೊರೋನಾ ವೈರಸ್ ಎಂಬ ಯುದ್ಧವನ್ನು ಎದುರಿಸುವ ಆರಂಭಿಕ ಹಂತದಲ್ಲಿದೆ ಭಾರತ. ಈ ಬಗ್ಗೆ ಎಚ್ಚರಿಸಲು ಜನತಾ ಕರ್ಫ್ಯೂಗೆ ಕರೆ ನೀಡದ ಪ್ರಧಾನಿ ಮೋದಿ, ಸಂಜೆ 5ಕ್ಕೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ನೈಜ ಯೋಧರಿಗೆ ನಮನ ಸಲ್ಲಿಸಲು ಆಗ್ರಹಿಸಿದ್ದರು. ಆದರೆ, ಇದಕ್ಕೆ ಸಾಥ್ ನೀಡೋಣ ಎಂದ ಕಿಚ್ಚಿನಿಂಗ ಚೇತನ್ ಬುದ್ಧಿ ಮಾತು ಹೇಳಿದ್ದಾರೆ. ಏನದು?
ಕೊರೋನಾ ವೈರಸ್ ಭಾರತದಲ್ಲಿ ಈಗಾಗಲೇ 3ನೇ ಹಂತ ತಲುಪುತ್ತಿದೆ. ಹಗಲು ರಾತ್ರಿ ಎಂದು ಲೆಕ್ಕಿಸದೇ ವೈದ್ಯರು, ಪೊಲೀಸರು ಹಾಗೂ ಇದಕ್ಕೆಂದೇ 24/7 ಕೆಲಸ ಮಾಡುವ ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ಚಪ್ಪಾಳೆ ತಟ್ಟುವ ಮೂಲಕ ನೈತಿಕ ಬೆಂಬಲ ಸೂಚಿಕುವಂತೆ ಭಾರತೀಯರಿಗೆ ಕರೆ ನೀಡಿದ್ದರು. ಇದಕ್ಕೆ ಅತ್ಯುದ್ಭುತ ಯಶಸ್ಸು ಸಿಕ್ಕಿದ್ದು, ದಿನಾ ಪೂರ್ತಿ ಮನೆಯಲ್ಲಿಯೇ, ಅನಿವಾರ್ಯವಾಗಿ ಬಂಧಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ಮಂದಿ, ಸಂಜೆ 5ಕ್ಕೆ 5 ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ನಿರಾಳವಾದರು.
ಜಾಗಟೆ ಬಡಿದು 'ಕೊರೋನಾ ಯೋಧ'ರ ಗೌರವಿಸಿದ ಪಿಎಂ ಮೋದಿ ತಾಯಿ!
ಮೋದಿ ಕರೆ ನೀಡಿದ ಅಭಿಯಾನಕ್ಕೆ ಗಣ್ಯಾತಿ ಗಣ್ಯರಿಂದ ಹಿಡಿದು, ಶ್ರೀ ಸಾಮನ್ಯನವರೆಗೂ ಬೆಂಬಲ ಸೂಚಿಸಿದ್ದು ಮಾತ್ರ ಅಮೋಘ. ಜನತಾ ಕರ್ಫ್ಯೂ ಹಾಗೂ ಮೋದಿ ಮಾತಿನ ಬಗ್ಗೆ ಸುಮಾರು 5 ನಿಮಿಷಗಳ ಕಾಲ ಮಾತನಾಡಿದ ಯುವತಿ ಆದಷ್ಟು ಸೌಂಡ್ ಮಾಡಿ ಎಂದು ಮನವಿ ಮಾಡಿಕೊಂಡಿರುವ ವಿಡಿಯೋವೊಂದನ್ನು ಕಿಚ್ಚ ಸುದೀಪ್ ಟ್ಟಿಟರ್‌ನಲ್ಲಿ ಈ ಅಭಿಯಾನಕ್ಕೂ ಮೊದಲು ಶೇರ್ ಮಾಡಿಕೊಂಡಿದ್ದರು. ಮೋದಿ ಅಭಿಯಾನಕ್ಕೆ ಬೆಂಬಲಿಸುವಂತೆ ಕಿಚ್ಚ ಮಾಡಿದ ಟ್ವೀಟಿಗೆ ಆ ದಿನಗಳು ಖ್ಯಾತಿಯ ಚೇತನ್ ಕಿವಿಮಾತು ಹೇಳಿದ್ದೀಗ ದೊಡ್ಡ ಸುದ್ದಿಯಾಗುತ್ತಿದೆ.
ಈ ವಿಡಿಯೋವನ್ನು ನಟ ಚೇತನ್ ಕುಮಾರ್ ರೀ-ಟ್ಟೀಟ್ ಮಾಡಿಕೊಂಡು, ಕಿಚ್ಚನಿಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 'ಸುದೀಪ್ ಸರ್ ನೀವು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಬಗ್ಗೆ ನನಗೆ ಗೌರವವಿದೆ. ವೈದ್ಯ ಪೋಷಕರ ಮಗನಾದ ನಾನು ವೈದ್ಯರಿಗೆ ಗೌರವಿಸಬೇಕೆಂಬುದನ್ನು ಒಪ್ಪಿ ಕೊಳ್ಳುತ್ತೇನೆ. ಆದರೆ ಈ ರೀತಿಯ ಅವೈಜ್ಞಾನಿಕ ಎನರ್ಜಿ ಮೆಡಿಸಿನ್ ಥಿಯರಿಯಿಂದ ಇಲ್ಲ. ಇವೆಲ್ಲ ನಮ್ಮನ್ನು ತಪ್ಪು ದಾರಿಗೆ ಕರೆದೊಯ್ಯುತ್ತದೆ. ವಿಜ್ಞಾನದ ಮೂಲಕ ಕೊರೋನಾ ವೈರಸ್ ವಿರುದ್ಧ ಹೋರಾಡೋಣ' ಎಂದು ಚೇತನ್ ಸುದೀಪ್‌ಗೆ ಹೇಳಿದ್ದಾರೆ.
ಮೋದಿ ನೀಡಿದ ಕರೆಗೆ ಸಾಕಷ್ಟು ಪರ, ವಿರೋಧ ಚರ್ಚೆಗಳು ನಡೆದಿದ್ದವು. ಅಷ್ಟಕ್ಕೂ ಮೋದಿ ಐದು ನಿಮಿಷ ಚಪ್ಪಾಳೆ ತಟ್ಟಲು ಹೇಳಿರುವ ಗುಟ್ಟನ್ನೂ ವಿಧವಿಧವಾಗಿ ಜನರು ತಮ್ಮಿಷ್ಟಕ್ಕೆ ತಕ್ಕಂತೆ ವಿಮರ್ಶಿಸಿದ್ದರು. ಆದರೆ, ಎಲ್ಲರಿಗೂ ಈ ಸಂದರ್ಭದಲ್ಲಿ ಒಗ್ಗಟ್ಟಾಗಬೇಕೆಂಬ ಸಂದೇಶ ರವಾನಿಸಲು ಮೋದಿ ಇಂಥದ್ದೊಂದು ಅಭಿಯಾನಕ್ಕೆ ಕರೆ ನೀಡಿದ್ದರು ಎಂಬುವುದು ಸ್ಪಷ್ಟ. ಒಟ್ಟಿನಲ್ಲಿ ಎಲ್ಲರೂ ಮನೆಯಲ್ಲಿ ಬಂಧಿಯಾಗಿ ಬೇಜಾರಾಗಿತ್ತು. ಚಪ್ಪಾಳೆ ಹೊಡೆದಾಗ ದೇಹದಲ್ಲಿ ಸುಸೂತ್ರ ರಕ್ತ ಸಂಚಲನವಾಗಿ, ಮನಸ್ಸು ನಿರಾಳವಾಗಿದ್ದಂತೂ ಸುಳ್ಳಲ್ಲ. ನೀವು ಏನು ಹೇಳ್ತಿರಾ?
ಮಾರ್ಚ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ