ಜಾಗಟೆ ಬಡಿದು 'ಕೊರೋನಾ ಯೋಧ'ರ ಗೌರವಿಸಿದ ಪಿಎಂ ಮೋದಿ ತಾಯಿ!

ಜನತಾ ಕರ್ಫ್ಯೂ, ಇಡೀ ದೇಶವೇ ಸ್ತಬ್ಧ| ಪಕ್ಷಾತೀತವಾಗಿ ಜನತಾ ಕರ್ಫ್ಯೂಗೆ ಬೆಂಬಲಿಸಿದ ದೇಶದ ಜನತೆ| ಸಂಜೆ ಐದು ಗಂಟೆಎಗೆ ಮೊಳಗಿದ ಘಂಟಾನಾದ, ಚಪ್ಪಾಳೆಎ| ಕೊರೋನಾ ಯೋಧರಿಗೆ ಗೌರವಿಸಿದ ಭಾರತೀಯರು| ಘಂಟಾನಾದದ ಮೂಲಕ ಕೊರೋನಾ ನಿಯಂತ್ರಿಸಲು ಶ್ರಮಿಸುತ್ತಿರುವ ವೈದ್ಯಕೀಯ ಅಧಿಕಾರಿಗಳಿಗೆ ಮೋದಿ ತಾಯಿ ಗೌರವ

PM Modi acknowledges mother efforts in fight against Coronavirus

ಗುಜರಾತ್(ಮಾ.23): ಭಾನುವಾರ ಮಾರ್ಚ್ 22 ಇಡೀ ದೇಶವೇ ಸ್ತಬ್ಧಗೊಂಡಿತ್ತು. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಮೊಸಲ ಬೃಹತ್ ಹೆಜ್ಜೆ ಇಟ್ಟಿದ್ದ ಭಾರತ ಜನತಾ ಕರ್ಫ್ಯೂಗೆ ಪಕ್ಷಾತೀತ ಬೆಂಬಲ ನೀಡಿತ್ತು. ರಸ್ತೆಗಳೆಲ್ಲಾ ಜನರಿಲ್ಲದೇ ಖಾಲಿ ಖಾಲಿಯಾಗಿತ್ತು. ಪ್ರಧಾನಿ ಮೋದಿಯ ಕರೆ ಹಾಗೂ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಇಡೀ ದೇಶವೇ ಒಂದಾಗಿ ಕೊರೋನಾ ವಿರುದ್ಧ ಸಮರ ಸಾರಿತ್ತು. ಸಂಜೆ ಐದು ಗಂಟೆಗೆ ಸರಿಯಾಗಿ ಪಿಎಂ ಮೋದಿ ಕರೆಯಂತೆ ದೇಶದ ಮೂಲೆ ಮೂಲೆಯಲ್ಲೂ ತಮ್ಮ ಮನೆ ಮಹಡಿ, ಬಾಲ್ಕನಿಗೆ ಬಂದಿದ್ದ ಜನರು ಗಂಟೆ, ಜಾಗಟೆ, ಶಂಖ, ಚಪ್ಪಾಳೆ ತಟ್ಟಿ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ರಕ್ಷಣಾ ಸಿಬ್ಬಂದಿಗೆ ಗೌರವ ಸಲ್ಲಿಸಿತ್ತು.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಸಂಸ್ಥೆ ANI ಪ್ರಧಾನಿ ಮೋದಿ ಚಪ್ಪಾಳೆ ಹಾಗೂ ಗಂಟೆ ಬಾರಿಸಿ ಕೊರೋನಾ ಯೋಧರನ್ನು ಗೌರವಿಸಿದ ವಿಡಿಯೋ ಶೇರ್ ಮಾಡಿದ್ದು, ಇದು ಭಾರೀ ವೈರಲ್ ಆಗಿದೆ.

ಖುದ್ದು ಪ್ರಧಾನಿ ಮೋದಿ ಇದಕ್ಕೆ ಪ್ರತಿಕ್ರಿಯಿಸಿದ್ದು, 'ಅಮ್ಮ, ನಿನ್ನಂತಹ ಕೋಟ್ಯಂತರ ತಾಯಂದಿರ ಆಶೀರ್ವಾದದಿಂದ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಡಾಕ್ಟರ್, ವೈದ್ಯರು, ಮೆಡಿಕಲ್ ಸ್ಟಾಫ್, ಪೊಲೀಸ್ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಮಾಧ್ಯಮ ಮಂದಿ ಸೇರಿದಂತೆ ಅನೇಕರಿಗೆ ಪ್ರೇರಣೆ ಸಿಕ್ಕಿದೆ' ಎಂದು ಬರೆದಿದ್ದಾರೆ.

Latest Videos
Follow Us:
Download App:
  • android
  • ios