ಕನ್ನಡದಲ್ಲಿ ಅತ್ಯಂತ ಬ್ಯುಸಿ ನಟ ಎಂದರೆ ಸದ್ಯಕ್ಕೆ ನಟ ಧನಂಜಯ್. ಹತ್ತಕ್ಕೂ ಹೆಚ್ಚು ಚಿತ್ರಗಳು ಅವರ ಮುಂದಿವೆ. ಈ ನಡುವೆ ಅವರ ಹುಟ್ಟುಹಬ್ಬದ (ಆ.23) ಅಂಗವಾಗಿ ಒಟ್ಟು ನಾಲ್ಕು ಹೊಸ ಚಿತ್ರಗಳು ಸೆಟ್ಟೇರಿವೆ.
ಧನಂಜಯ್ ಟ್ಟುಹಬ್ಬದ (ಆ.23) ಅಂಗವಾಗಿ ಒಟ್ಟು ನಾಲ್ಕು ಹೊಸ ಚಿತ್ರಗಳು ಸೆಟ್ಟೇರಿವೆ. ಅದರಲ್ಲಿ ಒಂದು ಚಿತ್ರದ ಹೆಸರು ‘ಜೀವ್ನಾನೇ ನಾಟ್ಕ ಸಾಮಿ’.
ಇದರ ಹೊರತಾಗಿ ಧನಂಜಯ್ ಹೀರೋ ಆಗಿ ನಟಿಸುತ್ತಿರುವ ‘ರತ್ನನ್ ಪ್ರಪಂಚ’, ಶೂಟಿಂಗ್ ಮಾಡಿಕೊಳ್ಳುತ್ತಿರುವ ‘ಬಡವ ರಾರಯಸ್ಕಲ್’ ಹಾಗೂ ಶೂಟಿಂಗ್‌ಗೆ ಹೋಗಬೇಕಿರುವ ‘ಹೆಡ್ ಬುಷ್’, ‘ಡಾಲಿ’ ಹಾಗೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯುವರತ್ನ, ಪೊಗರು, ಸಲಗ ಚಿತ್ರಗಳು ಡಾಲಿ ಮುಂದಿವೆ. ಈ ಎಲ್ಲಾ ಚಿತ್ರ ತಂಡಗಳು ಶುಭಾಶಯ ಕೋರಲು ಬಿಡುಗಡೆ ಮಾಡಿದ ಹೊಸ ಪೋಸ್ಟರ್‌ಗಳ ಬಿಡುಗಡೆ ಕಾರಣ ನಟ ಧನಂಜಯ್ ಈ ವರ್ಷದ ಹುಟ್ಟುಹಬ್ಬ ರಂಗೇರಿದೆ.
ಅಗ್ನಿಶ್ರೀಧರ್ 'ದಾದಾಗಿರಿಯ ದಿನಗಳು' ಶೀರ್ಷಿಕೆ ರಿಲೀಸ್‌ಗೆ ಸಾಥ್ ಕೊಟ್ಟ ಪುನೀತ್ ರಾಜ್‌ಕುಮಾರ್!
ಚೇತನ್ ಸಿನಿಮಾ:
ನಟ ಆ ದಿನಗಳು ಚೇತನ್ ನಟನೆಯ ‘ಮಾರ್ಗ’ ಚಿತ್ರಕ್ಕೆ ಪುನೀತ್ ರಾಜ್‌ಕುಮಾರ್ ಕ್ಲಾಪ್ ಮಾಡುವ ಮೂಲಕ ಚಾಲನೆ ಕೊಟ್ಟಿದ್ದಾರೆ. ಮೋಹನ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ದಿಯಾ ಹುಡುಗಿ ಖುಷಿ ಹಾಗೂ ಏಕ್ ಲವ್ ಯಾ ಚಿತ್ರದ ನಾಯಕಿ ರೀಷ್ಮಾ ನಾಣಯ್ಯ ನಾಯಕಿಯರು. ಮೈಸೂರಿನ ಗೌತಮ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ‘ಇದೊಂದು ಕ್ರೈಮ್ ಥ್ರಿಲ್ಲರ್ ಕತೆ. ಪ್ರತಿಯೊಬ್ಬರ ಜೀವನದಲ್ಲೂ ಒಂದು ಮಾರ್ಗ ಇರುತ್ತದೆ. ಅದನ್ನು ತಲುಪುವ ಹಾದಿಯಲ್ಲಿ ಎದುರಿಸುವ ಸಮಸ್ಯೆಗಳ ಸುತ್ತ ಈ ಕತೆ ಸಾಗುತ್ತದೆ’ ಎಂಬುದು ನಿರ್ದೇಶಕರ ವಿವರಣೆ.
ನನಗೆ ರಾಜಕೀಯವೂ ಬೇಡ, ಪ್ರಜಾಕೀಯವೂ ಬೇಡ- ಚೇತನ್
