ದರ್ಶನ್‌ಗೆ ಬೇಲ್‌ ನೀಡದಿದ್ರೆ 500 ಕುಟುಂಬಕ್ಕೆ ತೊಂದರೆ: ವಕೀಲ ನಾಗೇಶ್ ವಾದವೇನು?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ತಾಂತ್ರಿಕ ಸಾಕ್ಷಗಳನ್ನು ಸೃಷ್ಟಿಸಿದೆ ಹಾಗೂ ತಿರುಚಿದೆ ಎಂದು ಬಲವಾಗಿ ವಾದಿಸಿದ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್.

500 families will suffer if Darshan is not granted bail Says Advocate CV Nagesh gvd

ಬೆಂಗಳೂರು (ಅ.11): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ತಾಂತ್ರಿಕ ಸಾಕ್ಷಗಳನ್ನು ಸೃಷ್ಟಿಸಿದೆ ಹಾಗೂ ತಿರುಚಿದೆ ಎಂದು ಬಲವಾಗಿ ವಾದಿಸಿದ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್, ದರ್ಶನ್ ಸಿನಿಮಾಗಳ ಮೇಲೆ 500 ಕುಟುಂಬಗಳ ಊಟ ಮಾಡುತ್ತಿದ್ದು, ಅವರನ್ನು ಜೈಲಿನ ಮುಂದುವರೆದರೆ ಕುಟುಂಬಗಳಿಗೆ ತೊಂದರೆ ಉಂಟಾಗುವುದರಿಂದ ಜಾಮೀನು ಮಂಜೂ ರು ಮಾಡಬೇಕು ಎಂದು ಕೋರಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿ ಸಂಬಂಧ ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಡೆಸಿದ ವಿಚಾರಣೆ ವೇಳೆ ದರ್ಶನ್ ಪಾತ್ರ ಇರುವುದಕ್ಕೆ ತಾಂತ್ರಿಕ, ವೈದ್ಯಕೀಯ ಮತ್ತು ಪ್ರತ್ಯದರ್ಶಿಗಳ ಸಾಕ್ಷ್ಯವಿದೆ ಎಂದು ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್‌ ಪ್ರತಿವಾದಕ್ಕೆ ಸಿ.ವಿ.ನಾಗೇಶ್ ಸುದೀರ್ಘವಾಗಿ ಉತ್ತರಿಸಿದರು. 

ದರ್ಶನ್ ಹಾಗೂ ಇತರೆ ಆರೋಪಿಗಳ ಬಟ್ಟೆಶೂನಲ್ಲಿ ದೊರೆತ ಮಣ್ಣಿನಲ್ಲಿ ಮೃತ ರೇಣುಕಾಸ್ವಾಮಿಯ ರಕ್ತದ ಕಲೆ ದೊರೆತಿವೆ ಎಂದು ತನಿಖಾ ಧಿಕಾರಿ ಗಳು ಹೇಳುತ್ತಿದ್ದಾರೆ. ಆದರೆ, ದರ್ಶನ್ ಶೂ ಮೇಲೆ ಯಾವ ದಿನ ರಕ್ತ ಅಂಟಿಕೊಂಡಿತ್ತು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಮೇಲಾಗಿ ದರ್ಶನ್ ಮನೆಗೆ ತನಿಖಾಧಿಕಾರಿ ಹೋಗಿ ಶೂ ಸಂಗ್ರಹಿಸಿಕೊಂಡು ಬಂದಿದ್ದಾರೆ. ಜೂ.11ರಂದು ಪಟ್ಟಣಗೆರೆಗೆ ಶೆಡ್‌ ಗೆ ಹೋಗಿದರು. ಶೆಡ್ ಬಾಗಿಲು ಯಾರು ಓಪನ್ ಮಾಡಿದರು ಎಂಬುದು ಮುಖ್ಯ. ಮೃತನ ಮೇಲೆ ಹಲ್ಲೆಗೆ ಬಳಸಿದ ಮರದ ಕೊಂಬೆಯಲ್ಲೂ ರಕ್ತದ ಮಾದರಿ ಸಿಕ್ಕಿಲ್ಲ. ತನಿಖಾಧಿಕಾರಿಗಳು ಸಿದ್ಧಪಡಿಸಿರುವ ಪಂಚ ನಾಮೆಯಲ್ಲಿ ಮಾತ್ರ ರಕ್ತದ ಮಾದರಿ ದೊರೆತಿದೆ. ಇದು ತನಿಖೆ ನಡೆಸುವ ರೀತಿಯೇ? ಕ್ರಾಂತಿ ಸಿನಿಮಾ ಚಿತ್ರೀಕರಣವನ್ನು ಪಟ್ಟಣಗೆರೆ ಶೆಡ್‌ನಲ್ಲಿಯೇ ನಡೆಸಲಾಗಿದೆ. ಆಗ ಶೆಡ್ ಹಲವು ಭಾಗಗಳಲ್ಲಿ ದರ್ಶನ್ ತಿರುಗಾಡಿದ್ದಾರೆ. ಅದಕ್ಕೆ ಸಾಕ್ಷ್ಯಗಳೂ ಇವೆ ಎಂದರು. 

ಜೂ.9 ರಂದು ಮೃತದೇಹ ಸಿಕ್ಕಿದ್ದರೂ ಜೂ.11ರಂದು ಶವಪರೀಕ್ಷೆ ನಡೆಸಲಾಗಿದೆ. ಪರಿಶೀಲನೆಗೆ ದೇಹ ಮೇಲಿದ್ದ ಬಟ್ಟೆಗಳನ್ನು ಸಂಪೂರ್ಣವಾಗಿ ತೆಗೆಯಲಾಗಿದೆ. ಇಡೀ ದೇಹದಲ್ಲಿ ಊತ ಬಂದಿತ್ತು ಎನ್ನಲಾಗಿದೆ. ಶವಪರೀಕ್ಷೆಯ ಸಮಯದಲ್ಲಿ ತೆಗೆದಪೋಟೋ ನೋಡಿದರೆ ಮರ್ಮಾಂಗ, ವೃಷಣ ಊದಿಕೊಂಡಿದ್ದಾಗಿ ಕಂಡು ಬಂದಿದೆ ಹೊರತು ಯಾವುದೇ ಗಾಯಗಳು ಕಂಡು ಬಂದಿಲ್ಲ. ಪೊಲೀಸರು ಹೇಳುತ್ತಿರುವುದಕ್ಕೂ ಶವ ಪರೀಕ್ಷೆಯ ವರದಿಗೂ ವ್ಯತ್ಯಾಸವಿದೆ. ಒಂದೇ ಒಂದು 2.5 ಸೆಂಟಿ ಮೀಟ‌ ಗಾಯವಿದೆ. ಆ ಗಾಯದ ಅವಧಿಯನ್ನು ವೈದ್ಯರು ಹೇಳ ಬಹುದೇ ವಿನಃ ಮಣ್ಣು ಯಾವಾಗ ಶೂಗೆ ಅಂಟಿಕೊಂಡಿದೆ ಎಂದು ಹೇಳಲು ಸಾಧ್ಯವೆ ಎಂದು ನಾಗೇಶ್ ಪ್ರಶ್ನಿಸಿದರು.

ನಾಗ ಚೈತನ್ಯ ರಹಸ್ಯ ಪ್ರೇಯಸಿಗಾಗಿ 6 ತಿಂಗಳು ನಿಗಾವಹಿಸಿದ್ದ ನಾಗಾರ್ಜುನ: ಆದರೆ ವಾಚ್‌ಮ್ಯಾನ್‌ ಹೇಳಿದ ಸತ್ಯವೇನು?

ಹೌದು ದರ್ಶನ್‌ಗೆ ಸೇನೆ ಇದೆ: ದರ್ಶನ್ ಪತ್ಯೇಕ ಸರ್ಕಾರ ಹಾಗೂ ಸೇನೆ ಹೊಂದಿದ್ದಾರೆ ಎಂದು ಎಸ್‌ಪಿಪಿ ಹೇಳಿದ್ದಾರೆ. ಹೌದು. ದರ್ಶನ್ ದೇಶಾದ್ಯಂತ ಅಭಿಮಾನಿಗಳನ್ನ ಹೊಂದಿದ್ದು, ಅಭಿಮಾನಿಗಳ ಸೇನೆಯೂ ಇದೆ. ಅವರ ಸಿನಿಮಾಗೆ ಹಲವು ನಿರ್ಮಾಪಕರು ಕೋಟಿ ಕೋಟಿ ಹಣ ಹೂಡಿಕೆ ಮಾಡಿದ್ದಾರೆ. ಹಲವು ಚಿತ್ರಗಳು ಚಿತ್ರೀಕರಣ ಅರ್ಧಕ್ಕೆ ನಿಂತಿವೆ. ಕೆಲವು ಚಿತ್ರಗಳು ಆರಂಭ ಆಗಬೇ ಕಿದೆ. ದರ್ಶನ್ ಸಿನಿಮಾಗಳ ಮೇಲೆ 500 ಕುಟುಂಬಗಳ ಊಟ ಮಾಡುತ್ತಿವೆ. ದರ್ಶನ್ ಜೈಲಿನಲ್ಲೇ ಮುಂದುವರೆದರೆ ಆ ಕುಟುಂಬಗಳಿಗೆ ತೊಂದರೆಯಾಲಿದೆ. ಅದಕ್ಕಾಗಿ ಜಾಮೀನು ನೀಡಬೇಕು ಎಂದು ಕೋರಿದರು.

Latest Videos
Follow Us:
Download App:
  • android
  • ios