Asianet Suvarna News Asianet Suvarna News

500 ಕೋಟಿ ಬಜೆಟ್ ಚಿತ್ರಕ್ಕೆ 640 ಕೋಟಿ ಸೆಟ್; ಇದು ಕ್ರಿಷ್ಣರಾಜ-4 ಚಿತ್ರದ ಕಮಾಲ್!

‘ಕನ್ನಡದಲ್ಲಿ 500 ಕೋಟಿ ಸಿನಿಮಾ ಸೆಟ್ಟೇರುತ್ತಿದೆ. ಇದಕ್ಕೆ 640 ಕೋಟಿ ವೆಚ್ಚದಲ್ಲಿ ಸೆಟ್ ಹಾಕಲಾಗುತ್ತಿದೆ. 

500 Crore budget film gets 640 crore film set producer Kishnaraj 4 vcs
Author
Bangalore, First Published Aug 16, 2021, 1:09 PM IST

ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ತಂತ್ರಜ್ಞರು ಈ ಚಿತ್ರಕ್ಕೆ ಕೆಲಸ ಮಾಡಲಿದ್ದಾರೆ. ಬಹು ತಾರಾಗಣ ಈ ಚಿತ್ರದಲ್ಲಿದೆ. ಕನ್ನಡ ಸೇರಿ ಆರು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.’

ಇಷ್ಟನ್ನೂ ಒಂದೇ ಉಸಿರಿನಲ್ಲಿ ಹೇಳಿದವರು ಉದ್ಯಮಿ ಹಾಗೂ ಭಗವತಿ ದೇವಿ ಆರಾಧಕ ಗಾನ ಶರವಣ ಸ್ವಾಮಿ. ಇವರು 500 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಹೊರಟಿರುವ ಚಿತ್ರದ ಹೆಸರು ‘ಕ್ರಿಷ್ಣರಾಜ-4’. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಚಿತ್ರ ಬರಲಿದೆ. ಈ ಗಾನ ಶರವಣ ಸ್ವಾಮಿ ದೊಡ್ಡಬಳ್ಳಾಪುರ ಮೂಲದ ಗೋಲ್‌ಡ್ ಉದ್ಯಮಿ. ಕನ್ನಡ ಚಿತ್ರರಂಗದಲ್ಲಿ ಗಾಯಕನಾಗಿ ಗುರುತಿಸಿಕೊಂಡವರು. ಮುಖ್ಯವಾಗಿ ಆರೇಳು ತಿಂಗಳ ಹಿಂದೆ ಕೇರಳದ ಭಗವತಿ ದೇವಿ ದೇವಸ್ಥಾನದ ನವೀಕರಣಕ್ಕೆ ಬರೋಬರಿ 526 ಕೋಟಿ ರೂ.ಗಳನ್ನು ಕೊಟ್ಟು ಸುದ್ದಿ ಆದವರು.

ನಮ್ಮ ಅದ್ದೂರಿ ಟೀಮ್ ಈಸ್ ಬ್ಯಾಕ್: ಧ್ರುವ ಸರ್ಜಾ

ಅವರು ಹೇಳುವ ಪ್ರಕಾರ ಸದ್ಯ ಚಿತ್ರದ ಕತೆ ರೆಡಿಯಾಗಿದೆ. ನಿರ್ದೇಶಕ, ನಾಯಕ, ನಾಯಕಿ ಯಾರು ಅಂತ ಇನ್ನೂ ಫೈನಲ್ ಆಗಿಲ್ಲ. ‘ಐದಾರು ವರ್ಷದಿಂದ ಸಿನಿಮಾ ಮಾಡುವ ಯೋಜನೆ ಇತ್ತು. ಮೂರು ವರ್ಷಗಳ ಹಿಂದೆ ಒಂದು ಕತೆ ಹೊಳೆಯಿತು. ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆ ಇರುವ ಕತೆಯೇ ಕ್ರಿಷ್ಣರಾಜ-4 ಚಿತ್ರದ್ದು. ಇದರ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ನಡೆಯಲಿದೆ. ಸ್ವಾಮೀಜಿ ಫಿಲಂಸಿಟಿಯನ್ನು ನಿರ್ಮಿಸಲು ಮೈಸೂರಿನಲ್ಲಿ ಈಗಾಗಲೇ 640 ಎಕರೆ ಜಾಗವನ್ನೂ ಸಹ ಖರೀದಿಸಿದ್ದೇವೆ. ಅಲ್ಲೊಂದು ಅದ್ದೂರಿ ವೆಚ್ಚದ ಸೆಟ್ ಹಾಕಲಿದ್ದೇವೆ. ಅದು ಅಲ್ಲೇ ಪರ್ಮನೆಂಟಾಗಿ ಉಳಿಯಲಿದೆ, ಇನ್ನು ಲಂಡನ್‌ನಲ್ಲಿ ನಮ್ಮ ಮ್ಯೂಸಿಕ್ ಸ್ಟುಡಿಯೋ ಇದ್ದು, ಅಲ್ಲೇ ಈ ಚಿತ್ರದ ಮ್ಯೂಸಿಕ್ ಕೆಲಸಗಳು ನಡೆಯಲಿದೆ. ಅಲ್ಲದೆ ಭಾರತದಲ್ಲಿ ಹೆಸರು ಮಾಡಿರುವ ನಿರ್ದೇಶಕರೊಬ್ಬರನ್ನು ನಮ್ಮ ಚಿತ್ರಕ್ಕೆ ಕರೆತರುವ ಪ್ಲಾನ್ ಇದೆ, ಅದು ಯಾರಂತ ಸದ್ಯದಲ್ಲೇ ಗೊತ್ತಾಗಲಿದೆ’ ಎನ್ನುತ್ತಾರೆ ಗಾನಶರವಣ ಸ್ವಾಮಿ. ಎಂ.ವಿ. ಅದಿತಿ ಅವರು ಚಿತ್ರದ ಸಹ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದ ನಾಯಕನಿಗೆ ನಾಲ್ಕು ಶೇಡ್ ಇರುತ್ತದೆ. ಹಾಗಾಗಿ ಈ ಟೈಟಲ್‌ನಲ್ಲಿ 4 ಇದೆಯಂತೆ.

Follow Us:
Download App:
  • android
  • ios