ನಮ್ಮ ಅದ್ದೂರಿ ಟೀಮ್ ಈಸ್ ಬ್ಯಾಕ್: ಧ್ರುವ ಸರ್ಜಾ

ನಟ ಧ್ರುವ ಸರ್ಜಾ ಹಾಗೂ ಎ ಪಿ ಅರ್ಜುನ್ ಕಾಂಬಿನೇಶನ್‌ನ ‘ಮಾರ್ಟಿನ್’ ಸಿನಿಮಾ ಅಂದುಕೊಂಡಂತೆ ಅದ್ದೂರಿಯಾಗಿ ಸೆಟ್ಟೇರಿದೆ. ಚಿತ್ರದ ಹೆಸರು ಏನಿರಬಹುದು, ಕತೆ ಏನು, ಪ್ರೇಕ್ಷಕರ ನಿರೀಕ್ಷೆಗಳು, ಫಸ್‌ಟ್ ಲುಕ್ ಬಗ್ಗೆ ಬರುತ್ತಿರುವ ಅಭಿಪ್ರಾಯಗಳ ಕುರಿತು ಧ್ರುವ ಸರ್ಜಾ ಇಲ್ಲಿ ಮಾತನಾಡಿದ್ದಾರೆ.

Kannada actor Dhruva Sarja Martin exclusive interview vcs

ಅದ್ದೂರಿ ಚಿತ್ರದ ಜೋಡಿ ಮತ್ತೆ ಜತೆಯಾಗಿರುವುದಕ್ಕೆ ಏನು ಹೇಳುತ್ತೀರಿ?

ಒಂದೇ ಸಾಲಿನಲ್ಲಿ ಹೇಳುವುದಾದರೆ ಅದ್ದೂರಿ ಟೀಮ್ ಈಸ್ ಬ್ಯಾಕ್. ಅದೇ ಜೋಶ್, ಅದೇ ಉತ್ಸಾಹ, ಅದೇ ಕನಸು ಮತ್ತೆ ಜತೆಯಾಗುವಂತೆ ಮಾಡಿದೆ.

ಚಿತ್ರದ ಫಸ್‌ಟ್ ಲುಕ್ ಹಾಗೂ ಟೀಸರ್ ಬಗ್ಗೆ ಯಾವ ರೀತಿ ಅಭಿಪ್ರಾಯಗಳು ಬರುತ್ತಿವೆ?

ತುಂಬಾ ಜನ ಮೆಚ್ಚಿಕೊಂಡಿದ್ದಾರೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆತ್ಮೀಯರು, ಸ್ನೇಹಿತರು ಫೋನ್ ಮಾಡಿ ಮೆಚ್ಚಿ ಮಾತನಾಡುತ್ತಿದ್ದಾರೆ. ‘ಮಾರ್ಟಿನ್’ ಅಂದರೆ ಏನು ಅಂತ ಹಲವರು ಕೇಳುತ್ತಿದ್ದಾರೆ. ಒಂದು ದೊಡ್ಡ ಮಟ್ಟದಲ್ಲಿ ಕುತೂಹಲವನ್ನಂತೂ ಹುಟ್ಟು ಹಾಕಿದೆ ಎನ್ನಬಹುದು. ಇದು ನನ್ನ ತಂಡದ ಶ್ರಮ.

Kannada actor Dhruva Sarja Martin exclusive interview vcs

ಹೌದು, ಮಾರ್ಟಿನ್ ಅಂದರೆ ಏನು?

ಅದೊಂದು ದೊಡ್ಡ ಹೆಸರು. ಆದರೆ, ನಮ್ಮ ಚಿತ್ರದಲ್ಲಿರುವ ‘ಮಾರ್ಟಿನ್’ ಬೇರೆ. ಆತ ಗ್ಯಾಂಗ್‌ಸ್ಟರ್, ಕಾಲೇಜು ಹುಡುಗ, ಲವರ್ ಬಾಯ್, ದೇಶ ಪ್ರೇಮಿ ಎಲ್ಲವೂ ಆಗಿರುತ್ತಾನೆ. ಒಂದು ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಹೇಳಬಹುದು. ವಿಭಿನ್ನವಾದ ಕತೆ. ಹಾಗೆ ಇಲ್ಲಿ ಪಕ್ಕಾ ಲೋಕಲ್ ಹುಡುಗನ ಪ್ರೇಮ ಕತೆಯನ್ನೂ ನಿರೀಕ್ಷೆ ಮಾಡಬಹುದು.

ಆ ವಿಭಿನ್ನ ಕತೆಯೇ ಏನು ಅಂತ ಹೇಳಬಹುದಾ?

ಒಬ್ಬ ಗ್ಯಾಂಗ್‌ಸ್ಟರ್ ಹೀಗೂ ಇರಬಹುದಾ ಅಂತ ತೋರಿಸುವ ಸಿನಿಮಾ ಇದು. ಫಸ್‌ಟ್ ಲುಕ್ ಹಾಗೂ ಟೀಸರ್ ನೋಡಿದಾಗ ಚಿತ್ರದ ಫ್ಲೇವರ್ ಏನೂ ಅಂತ ಗೊತ್ತಾಗುತ್ತದೆ.

 

ಈ ಚಿತ್ರ ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ ಏನು?

ಈ ಸಿನಿಮಾ ಒಪ್ಪಲು ಕತೆನೇ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಮೊದಲು ಅವಕಾಶ ಕೊಟ್ಟ ನಿರ್ದೇಶಕ ಎ ಪಿ ಅರ್ಜುನ್ ಚಿತ್ರವಿದು. ಅವರು ಬಂದು ಕತೆ ಹೇಳಿದಾಗ ತುಂಬಾ ಎಕ್ಸೈಟ್ ಆದೆ. ಕ್ಯಾರೆಕ್ಟರ್ ತುಂಬಾ ವಿಶೇಷವಾಗಿತ್ತು. ಹೀಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿದೆ.

ನಿಮ್ಮ ಹಿಂದಿನ ಚಿತ್ರಗಳಿಗೂ ಈ ಚಿತ್ರಕ್ಕೂ ಏನೂ ವ್ಯತ್ಯಾಸ?

ನನ್ನ ಜಾನರ್ ಬದಲಾಯಿಸಬೇಕು ಅಂತ ನಮ್ಮ ನಿರ್ದೇಶಕರು ಹೇಳಿದ್ದರ ಫಲವಿದು. ತುಂಬಾ ಕಿರುಚಾಡಿಕೊಂಡು ಡೈಲಾಗ್ ಹೇಳುವ ಧ್ರುವ ಇಲ್ಲಿ ಕಾಣಲ್ಲ. ತುಂಬಾ ಸೆಟಲ್ ಆಗಿ ಮಾತನಾಡುವ ಧ್ರುವ ಇಲ್ಲಿದ್ದಾರೆ. ಎಷ್ಟು ಬೇಕೋ ಅಷ್ಟನ್ನು ಮಾತ್ರ ತುಂಬಾ ತೂಕವಾಗಿ ಮಾತನಾಡುವ ಪಾತ್ರ ನನ್ನದು. ಸೈಲೆಂಟ್ ಮತ್ತು ವೈಲೆಂಟ್ ಜತೆಯಾದರೆ ಕ್ಯಾರೆಕ್ಟರ್ ಹೇಗಿರುತ್ತದೆ ಎಂಬುದನ್ನು ಇಲ್ಲಿ ನೋಡಬಹುದು.

'ಮರ್ಟಿನ್' ಆದ ಧ್ರುವ ಸರ್ಜಾ; ಬಾಡಿ ನೋಡಿ ಗಾಬರಿ ಆದ ನೆಟ್ಟಿಗರು!

ಹಾಗಾದರೆ ಇಲ್ಲಿ ಫುಲ್ ಸೈಲೆಂಟ್ ಧ್ರುವ ಸರ್ಜಾರನ್ನು ಮಾತ್ರ ನೋಡಬೇಕಾ?

ಕಮರ್ಷಿಯಲ್ ಸಿನಿಮಾ ಎಂದ ಮೇಲೆ ಡ್ಯಾನ್‌ಸ್, ಫೈಟ್ ಇದ್ದೇ ಇರುತ್ತದೆ. ಅಭಿಮಾನಿಗಳಿಗೆ ಬೇಸರ ಮೂಡಿಸಲ್ಲ. ಆದರೆ, ಪ್ರತಿಯೊಂದೂ ಕತೆಗೆ ಪೂರಕವಾಗಿರುತ್ತವೆ. ರಾಮ್- ಲಕ್ಷ್ಮಣ್ ಹಾಗೂ ರವಿವರ್ಮ ಅವರು ಆ್ಯಕ್ಷನ್ ದೃಶ್ಯಗಳನ್ನು ತುಂಬಾ ಚೆನ್ನಾಗಿ ರೂಪಿಸುತ್ತಿದ್ದಾರೆ. ಕ್ಯಾಮೆರಾ ಸಾರಥಿಯಾಗಿ ಸತ್ಯ ಹೆಗಡೆ ಇದ್ದಾರೆ. ಅದ್ದೂರಿಯಾಗಿ ನಿರ್ಮಾಣ ಮಾಡಲು ಉದಯ್ ಮೆಹ್ತಾ ಇದ್ದಾರೆ. ಒಂದು ಫೋರ್ಸ್ ಇರುವ ತಂಡದಿಂದ ‘ಮಾರ್ಟಿನ್’ ಮೂಡಿ ಬರುತ್ತಿದೆ.

ಈ ಚಿತ್ರದ ಮೂಲಕ ಅಧಿಕೃತವಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದೀರಲ್ಲ?

ಹೌದು. ನಮ್ಮ ನಿರ್ದೇಶಕ ಹಾಗೂ ನಿರ್ಮಾಪಕರ ಐಡಿಯಾ ಇದು. ಯೂನಿವರ್ಸೆಲ್ ಕತೆ ಇಲ್ಲಿದೆ. ಹೀಗಾಗಿ ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೂ ಹೋಗುವ ಪ್ಲಾನ್ ಮಾಡಿಕೊಂಡಿದ್ದೇವೆ. ಐದೂ ಭಾಷೆಯಲ್ಲಿ ಫಸ್‌ಟ್ ಲುಕ್ ರಿವೀಲ್ ಆಗಿದೆ. ‘ಪೊಗರು’ ಚಿತ್ರ ಶೂಟಿಂಗ್ ಆದ ಮೇಲೆ ಬೇರೆ ಭಾಷೆಗೆ ಹೋಗುವ ಯೋಚನೆ ಬಂತು. ‘ಮಾರ್ಟಿನ್’ಅನ್ನು ಮೊದಲನೇ ಪ್ಯಾನ್ ಇಂಡಿಯಾ ಚಿತ್ರವಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ.

ಬಹುಭಾಷೆಗೆ ಹೋಗುತ್ತಿರುವ ಸಂಭ್ರಮವನ್ನು ಹೇಗೆ ನೋಡುತ್ತೀರಿ?

ಇದು ನನಗೆ ಸಿಕ್ಕಿರುವ ಮತ್ತೊಂದು ದೊಡ್ಡ ಅವಕಾಶ ಎಂದುಕೊಳ್ಳುತ್ತೇನೆ.

Latest Videos
Follow Us:
Download App:
  • android
  • ios