ಕಂಟೇಜಿಯನ್ (ಇಂಗ್ಲಿಷ್)

ಇದು 2011ರಲ್ಲಿ ತೆರೆ ಕಂಡ ಸಿನಿಮಾ. ಮನುಷ್ಯನಿಗೆ ಮಾರಕವಾಗುವ ಒಂದು ವೈರಸ್ ಕುರಿತ ಸಿನಿಮಾ. ಆಸ್ಟ್ರೇಲಿಯಾದಿಂದ ಒಬ್ಬ ವ್ಯಕ್ತಿ ಕ್ಯಾಲಿಪೋರ್ನಿಯಾಗೆ ಬರುತ್ತಾನೆ. ಆತನಿಗೆ ಮಾರಕವಾದ ನಿಗೂಢ ವೈರಸ್ ಅಟ್ಯಾಕ್ ಆಗಿರುತ್ತದೆ. ಅದರ ಬಗ್ಗೆ ಆತ ಹಾಗೂ ಹೆಚ್ಚು ಗಮನ ನೋಡದ ಪರಿಣಾಮ ಅದು ಬೇರಯವರಿಗೂ ಹರಡುತ್ತಾ ಹೋಗುತ್ತದೆ. ಕೊನೆಗೆ ಅದು ಹೇಗೆ ಇಡೀ ಕ್ಯಾಲಿಫೋರ್ನಿಯಾಗೆ ಹರಡಿ ಮಾರಣಹೋಮ ಮಾಡುತ್ತದೆ ಎನ್ನುವುದನ್ನು ಈ ಸಿನಿಮಾ ತೋರಿಸುತ್ತದೆ.
ಚೇತನ್ ಕುಮಾರ್, ನಿರ್ದೇಶಕ

#Indialockdown - ಮನೆಯಲ್ಲಿರಿ ಸಿನಿಮಾ ನೋಡಿ ಎಂಜಾಯ್‌ ಮಾಡಿ

ರಾಜ್‌ಕುಮಾರ್ ಸಿನಿಮಾಗಳು

ಮನೆಯಲ್ಲಿ ಮಕ್ಕಳೂ ಇರೋದ್ರಿಂದ ಅವರೆಲ್ಲ ಒಂದು ತಲೆಮಾರು ಮಿಸ್ ಮಾಡಿಕೊಂಡಿರುತ್ತಾರೆ. ಹಾಗಾಗಿ ಅವರಿಗೆ ಡಾ. ರಾಜ್‌ಕುಮಾರ್ ಅಭಿನಯದ ಅಷ್ಟು ಸಿನಿಮಾ ತೋರಿಸುವುದಕ್ಕೆ ಇದೊಂದು ಸದಾವಕಾಶ. ಯಾಕಂದ್ರೆ ಕನ್ನಡ ತನದ ದೊಡ್ಡ ಸಂಸ್ಕಾರವನ್ನು ಮಕ್ಕಳ ಮನಸ್ಸಿನಲ್ಲಿ ಕೂರಿದಂತಾಗುತ್ತದೆ. ಜತೆಗೆ ನಮಗೂ ಒಂದು ಅವಲೋಕನ ಎನಿಸುತ್ತದೆ. ಹಾಗೆಯೇ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾ ನೋಡಿದರೂ ಸಾಕು.
ಜಯತೀರ್ಥ, ನಿರ್ದೇಶಕ

ದಿ ಹೆಲೆನ್ (ಮಲಯಾಳಂ)

ಇದೊಂದು ಮಹಿಳಾ  ಪ್ರಧಾನ ಚಿತ್ರ. ಒಬ್ಬ ಹುಡುಗಿ ಸುತ್ತ ನಡೆಯುವ ಕತೆ. ಆಕೆಯ ಬದುಕಿನಲ್ಲಿ ಒಂದು ದುರ್ಘಟನೆ ನಡೆಯುತ್ತದೆ. ಅದು ಆಕೆಗೆ ಅನಿರೀಕ್ಷಿತ ವಾಗಿ ಎದುರಾದ ಘಟನೆ. ಆಕೆ ಅದರಿಂದ ಪಾರಾಗಲು ಹೋರಾಡಲೇಬೇಕು.ಅದು ಅಷ್ಟು ಸುಲಭವೂ ಅಲ್ಲ. ಅದನ್ನ ಆಕೆ ಹೇಗೆ ಎದುರಿಸಿ, ಗೆಲ್ಲುತ್ತಾಳೆ ಎನ್ನುವುದು ಈ ಚಿತ್ರದ ಕತೆ. ಇದು ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಕತೆ.
- ಹೇಮಂತ್ ರಾವ್, ನಿರ್ದೇಶಕ

ದಿ ಲಾಸ್ಟ್ ಝಾರ್ಸ್ (ರಷಿಯನ್ ವೆಬ್ ಸೀರಿಸ್)

ಇದೊಂದು ರಾಜಮನೆತನದ ಕತೆ. ೨೦೧೯ರಲ್ಲಿ ಬಂದಿದೆ. ಈಗ ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ರಷ್ಯಾದ ಕೊನೆಯ ರಾಯಲ್ ಫ್ಯಾಮಿಲಿ ರಮ್ ನೋವ್ ಮನೆತನದ ಕತೆ. ರಷ್ಯಾಕ್ರಾಂತಿಯ ಹೊತ್ತಿಗೆ ಈ ರಾಜಮನೆತನ ದಿವಾಳಿಯಾದ ಕತೆಯೇ ಚಿತ್ರಣವೇ ಈ ವೆಬ್ ಸಿರೀಸ್. ನಿಕೊಲಾಸ್ ಕೊಲೆ ಆಗುತ್ತಾನೆ. ಅದೊಂದು ನಿಗೂಢವಾದ ಕೊಲೆ. ಅದು ರಾಜಮನೆತನವನ್ನೇ ಮುಗಿಸುವ ಸಂಚು. ನಿಕೊಲಾಸ್ ಕೊಲೆ ಮೂಲಕ ರಮ್‌ನೋವ್ ರಾಜಮನೆತನ ದಿವಾಳಿ ಅಂಚಿಗೆ ತಲುಪುತ್ತದೆ. ಅದೆಲ್ಲ ಒಂದು ಸಂಚಿನ ಮೂಲಕ ನಡೆದಿದ್ದು. ಇಡೀ  ವೆಬ್ ಸೀರೀಸ್  ಕುತೂಹಲ ದಿಂದ ನೋಡಿಸಿಕೊಂಡು ಹೋಗುತ್ತದೆ.
- ಸಂಚಾರಿ ವಿಜಯ್, ನಟ

ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ನೋಡಬಹುದಾದ 10 ಸಿನಿಮಾಗಳು!
ಸ್ಪೆಷಲ್ ಓಪ್ಸ್

ನಾನೀಗ ಹಾಟ್‌ಸ್ಟಾರ್‌ನಲ್ಲಿ ‘ಸ್ಪೆಷಲ್ ಒಪ್ಸ್ ’ಅಂತ ಹಿಂದಿ ವೆಬ್ ಸೀರಿಸ್ ನೋಡಿದೆ. ಐದು ಮಂದಿ ಉಗ್ರಗಾಮಿಗಳು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಲು ಯತ್ನಿಸುತ್ತಾರೆ. ಅವರೆಲ್ಲ ಒಬ್ಬನ ಸೂಚನೆ ಪಾಲಿಸಲು ಹೋಗಿ ತಾವೇ ಬಲಿಯಾಗುತ್ತಾರೆ. ಪಾರ್ಲಿಮೆಂಟ್ ದಾಳಿಯನ್ನು ಆಧರಿಸಿದ  ಕತೆ ಇದು. ಮೊದಲು ಜಾನರ್ ಯಾವುದು ಅಂತ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.
- ಮದರಂಗಿ ಕೃಷ್ಣ, ನಟ