Asianet Suvarna News Asianet Suvarna News

ಜೈಲಿನಲ್ಲಿ ಇರುವಾಗಲೇ ದರ್ಶನ್​ ಮೇಲೆ 3 ಹೊಸ ಎಫ್​ಐಆರ್: ವಿಡಿಯೋ ಕಾಲ್​.. ಕಾಫಿ ವಿತ್ ಸಿಗರೇಟ್​. ದಾಸನಿಗೆ ಫುಲ್ ಟೆನ್ಷನ್

ದರ್ಶನ್ ಬೇಲ್ ಪಡೆದು ಜೈಲಿನಿಂದ ಹೊರ ಬರುತ್ತಾರೆ ಅನ್ನುವಾಗ್ಲೆ, ಆ ಜೈಲಪ್ಪನೇ ದರ್ಶನ್​ರನ್ನ ಮತ್ತೊಂದು ದೊಡ್ಡ ಸಂಕಷ್ಟಕ್ಕೆ ತಂದು ನಿಲ್ಲಿಸಿದೆ. ಹಾಗಾದ್ರೆ ಏನದು ದಾಸನ ಸಂಕಷ್ಟದ ಹೊಸ ಕಥೆ..? ಇಲ್ಲಿದೆ ನೋಡಿ. 

3 new FIRs against Darshan while still in jail Over Murder case gvd
Author
First Published Aug 28, 2024, 10:32 AM IST | Last Updated Aug 28, 2024, 10:32 AM IST

ಎಷ್ಟೇ ಹೋಮ ಹವನ ಮಾಡಿಸಿ, ಯಾವ ದೇವಿಯನ್ನಾದ್ರು ಆರಾಧಿಸಿ, ದೇಶ ವಿದೇಶದಲ್ಲಿರೋ ದೇವಸ್ಥಾನಗಳಿಗೆಲ್ಲಾ ಹೋಗಿ ಹರಕೆ ಕಟ್ಟಿ ಬನ್ನಿ. ಆದ್ರೆ ದರ್ಶನ್​ ಹೆಗಲೇರಿ ಕೂತಿರೋ ಜೈಲು ಶನಿ ಕೆಳಗಿಳಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಅನ್ನಿಸುತ್ತೆ. ಇನ್ನೇನು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ದರ್ಶನ್ ಬೇಲ್ ಪಡೆದು ಜೈಲಿನಿಂದ ಹೊರ ಬರುತ್ತಾರೆ ಅನ್ನುವಾಗ್ಲೆ, ಆ ಜೈಲಪ್ಪನೇ ದರ್ಶನ್​ರನ್ನ ಮತ್ತೊಂದು ದೊಡ್ಡ ಸಂಕಷ್ಟಕ್ಕೆ ತಂದು ನಿಲ್ಲಿಸಿದೆ. ಹಾಗಾದ್ರೆ ಏನದು ದಾಸನ ಸಂಕಷ್ಟದ ಹೊಸ ಕಥೆ..? ಇಲ್ಲಿದೆ ನೋಡಿ. ನಟ ದರ್ಶನ್​​ ಸಿನಿ ಖರಿಯರ್​ನಲ್ಲಿ ಹಲವು ಭಾರಿ ಜೈಲಿಗೆ ಹೋಗಿ ಬಂದಿದ್ದಾರೆ. ಆದ್ರೆ ಅದೆಲ್ಲಾ ಸಿನಿಮಾ ನಟನೆಗಾಗಿ. 

ಈಗ ದರ್ಶನ್ ಜೈಲಲ್ಲಿರೋದು ಕೊಲೆ ಆರೋಪದಲ್ಲಿ ಹಾಗಂತ ದರ್ಶನ್​ ಟೆನ್ಷನ್ ಮಾಡಿಕೊಂಡಿಲ್ಲ. ಆರಾಮಾಗಿ ನಗು ನಗುತ್ತಾ.? ತನ್ನ ಅಕ್ಕ ಪಕ್ಕ ರೌಡಿಗಳನ್ನೇ ಕೂರಿಸಿಕೊಂಡು ಚಿಲ್ ಮಾಡುತ್ತಿದ್ದಾರೆ. ಜೈಲಿನ ಹೊರಗಿರೋ ನಟೋರಿಯಸ್ ರೌಡಿ ಗ್ಯಾಂಗ್​ಗಳ ಜೊತೆ ವಿಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ದರ್ಶನ್​ ಜೈಲು ವಾಸದ ಈ ವೀಡಿಯೋ ಫೋಟೋ ನೋಡಿದ್ರೆ ಸಿನಿಮಾದಲ್ಲಿರೋ ದೃಶ್ಯಗಳನ್ನ ನೋಡಿದ ಹಾಗಾಗ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಯಾವ್ದೋ ಸಿನಿಮಾ ಶೂಟಿಂಗ್ ಗೆ ಹೋಗಿದ್ದಾರೇನೋ ಅನ್ನೋ ಹಾಗಿದೆ. ಯಾಕಂದ್ರೆ ದರ್ಶನ್​ ಮುಖದಲ್ಲಿ ಯಾವ್ದೇ ಪಶ್ಚಾತಾಪ ಕಾಣುತ್ತಿಲ್ಲ. 

ಬೋಳು ತಲೆ ಮಾಡಿಕೊಂಡು ನಗು ನಗುತ್ತಾ ಖುಷ್ ಖುಷಿಯಾಗಿದ್ದಾರೆ. ಸೆರೆ ವಾಸ ಅಂದ್ರೆ ಅತ್ತೆ ಮನೆಗೆ ಹೋಗಿ ಬಂದಂಗಲ್ಲ. ಆದ್ರೆ ದರ್ಶನ್ ವಿಷಯದಲ್ಲಿ ಹಾಗೇ ಆದಂತಿದೆ. ಜೈಲ್ ಒಳಗೆ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ, ರೌಡಿ ಧರ್ಮ ದರ್ಶನ್​ಗೆ ಬೆಸ್ಟ್​ ಫ್ರೆಂಡ್ಸ್​.. ಜೈಲಲ್ಲಿ ಧರ್ಮ ಸತ್ಯನ ದೋಸ್ತಿ ಈಗ ದರ್ಶನ್​ಗೆ ದೊಡ್ಡ ಕಂಟಕ ತಂದಿದೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಅನುಭವಿಸುತ್ತಿರೋ ನಟ ದರ್ಶನ್​​ ಕೊಲೆ ಆರೋಪದ ಸಂಕಷ್ಟವೇ ದೊಡ್ಡ ಸಮಸ್ಯೆ ಆಗಿದೆ. ಈ ಮಧ್ಯೆ ದಾಸನ ಕೊರಳನ್ನ ಮತ್ತೆ ಮೂರು ಕೇಸ್​ಗಳು ಸುತ್ತಿಕೊಂಡಿವೆ. ಜೈಲಿನಲ್ಲಿ ರಾಜಾತಿತ್ಯ ಅನುಭವಿಸಿದ್ದಕ್ಕಾಗಿ, ಸಿಗರೇಟ್​ ಸೇದಿದ್ದಕ್ಕೆ,  ವಿಡಿಯೋ ಕಾಲ್​ನಲ್ಲಿ ಮಾತನಾಡಿದ್ದಕ್ಕೆ ದರ್ಶನ್ ವಿರುದ್ಧ ಮೂರು ಎಫ್​​ಐಆರ್ ದಾಖಲಾಗಿದೆ. ಸಿನಿಮಾ ಸಿನಿಮಾ ಸಿನಿಮಾ. 

ಜೈಲಲ್ಲಿ ದರ್ಶನ್‌ ಫೋಟೋ ಕ್ಲಿಕಿಸಿದ್ದು ರೌಡಿ ಶೀಟರ್‌ ವೇಲು: ಆತನ ಮೇಲೆ ಹಲ್ಲೆ

ದರ್ಶನ್ ಜೀನವೇ ಸಿನಿಮಾ ಆಗಿತ್ತು. ಒಬ್ಬ ಲೈಟ್​ ಬಾಯ್​ ಸೂಪರ್ ಸ್ಟಾರ್ ಆಗೋದು ಅಂದ್ರೆ ಸುಮ್ಮನೆ ಅಲ್ಲ. ಆದ್ರೆ ಈ ಶಾಸ್ತ್ರಿಯಿಂದ ಅದನ್ನ ಉಳಿಸಿಕೊಳ್ಳೋಕೆ ಆಗ್ಲೇ ಇಲ್ಲ. ಹೆಂಡತಿ ಜೊತೆ ಬಡಿದಾಟ. ಪರ ಸ್ತ್ರೀಗಾಗಿ ರೇಣುಕಾ ಸ್ವಾಮಿ ಕೊಲೆ ಆರೋಪ ದರ್ಶನ್​​ರನ್ನ ಜೈಲು ಸೆಲೆಬ್ರಿಟಿಯನ್ನಾಗಿ ಮಾಡಿದೆ. ಇನ್ನೇನು ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತೆ. ಆ ನಂತರ ಬೇಲ್ ಪಡೆದು ದರ್ಶನ್ ಜೈಲಿನಿಂದ ಹೊರ ಬರುತ್ತಾರೆ ಅನ್ನೋ ದೊಡ್ಡ ಆಸೆ ಅಭಿಮಾನಿಗಳಲ್ಲಿತ್ತು. ಆದ್ರೆ ಆ ಆಸೆಗೆ ಈಗ ತಣ್ಣೀರೆರಚಿದಂತಿದೆ. ಯಾಕಂದ್ರೆ ಜೈಲು ನಿಯಮ ಪಾಲಿಸದ ದರ್ಶನ್​ಗೆ ಬೇಲ್​​ ಸಿಗೋದೇ ಡೌಟ್​​ ಅನ್ನೋ ಮಾತುಗಳು ಶುರುವಾಗಿವೆ. 

ಇದಕ್ಕೆಲ್ಲಾ ಜೈಲಿನ ಕಿರಾತಕರ ಸಹವಾಸ ಅಂತ ಬಿಡಿಸಿ ಹೇಳಬೇಕಿಲ್ಲ. ದರ್ಶನ್ ಜೈಲಿನ ಐಶಾರಾಮಿ ಟ್ರೀಟ್ಮೆಂಟ್​ನ ಅನುಭವಿದ್ದ ಫೋಟೋ ವೀಡಿಯೋಗಳು ಲೀಕ್ ಆಗಿವೆ. ಇದನ್ನ ನೋಡಿ ಸರ್ಕಾರ ಕೂಡ ಸ್ಟನ್ ಆಗಿದ್ದು, ನಮ್ಮ ಕಾನೂನು ವ್ಯಸಸ್ಥೆ ಬಗ್ಗೆ ಪ್ರತಿಯೊಬ್ಬರು ಪ್ರಶ್ನೆ ಮಾಡುತ್ತಿದ್ದಾರೆ. ಆದ್ರೆ ನಮ್ಮ ಸ್ಯಾಂಡಲ್​ವುಡ್​ನ ಕೆಲವ್ರು ಇದನ್ನೂ ಸಮರ್ಥನೆ ಮಾಡಲು ಶುರುಮಾಡಿದ್ದಾರೆ. ನಟ ನಿರ್ದೇಶಕ ನಂದಕಿಶೋರ್​, ಈ ಫೋಟೋ ನಕಲಿ. ಇದು ತಂತ್ರಜ್ಞಾನದ ಕಾಲ. ನಿಜಾ.. ಸುಳ್ಳು ಯಾವುದು ಎಂದು ಹೇಳಲು ಸಾಧ್ಯವಿಲ್ಲ. ದರ್ಶನ್ ನಗುತ್ತಿರೋ ಫೋಟೋ ತೆಗೆದವನಿಗೆ ಅಳುತ್ತಿರೋ ಫೋಟೋ ಕ್ಲಿಕ್ಕಿಸಲು ಆಗಿಲ್ವಾ ಅಂತ ಸಮರ್ಥಿಸಿಕೊಂಡಿದ್ದಾರೆ. 

ಪರಪ್ಪನ ಅಗ್ರಹಾರ ಜೈಲಲ್ಲಿ ಆತಿಥ್ಯ: ದರ್ಶನ್ ವಿಚಾರಣೆಗೆ ಕೋರ್ಟ್‌ ಅನುಮತಿ

ಜೈಲಿನ ಊಟ ನನಗೆ ಬೇಡ ಮನೆ ಊಟ ಬೇಕು ಅಂತ ದಾಸ ಪರಿ ಪರಿಯಾಗಿ ಬೇಡಿ ಅರ್ಜಿ ಮೇಲೆ ಅರ್ಜಿ ಹಾಕುತ್ತಿದ್ದಾರೆ. ಆದ್ರೆ ಮನೆ ಊಟವನ್ನೂ ಮೀರಿದ ವ್ಯವಸ್ಥೆ ದರ್ಶನ್​ಗೆ ಸಿಗುತ್ತಿದೆ. ದಚ್ಚು ಮಾಂಸ ಪ್ರಿಯ. ಹೀಗಾಗಿ, ಬನಶಂಕರಿಯ ಶಿವಾಜಿ ಮಿಲ್ಟ್ರಿ ಹೋಟೆಲ್​ನಿಂದ ದರ್ಶನ್​ಗೆ ಬಿರಿಯಾನಿ ಪೂರೈಕೆ ಆಗುತ್ತಿದೆ ಎನ್ನಲಾಗಿದೆ. ಊಟದ ಜೊತೆ ಬೇಕಾದಾಗ ಕಿಕ್ಕೇರಿಸಿಕೊಳ್ಳಲು ಎಣ್ಣೆ ಕೂಡ ಸಪ್ಲೈ ಆಗಿದೆ ಅನ್ನೋ ಬಗ್ಗೆ ಭಾರಿ ಸುದ್ದಿ ಹರಿದಾಡ್ತಿದೆ.  ಜೈಲಿನಲ್ಲಿ ದರ್ಶನ್ ಫೋಟೋ ವೀಡಿಯೋ ವೈರಲ್​​ ಆಗುತ್ತಿದ್ದಂತೆ, ಪರಪ್ಪನ ಅಗ್ರಹಾರದ ಏಳು ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಆ ಕಡೆ ಸಿಎಂ ಸಿದ್ಧರಾಮಯ್ಯ ದರ್ಶನ್​​ರನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಿ ಅಂತ ಖಡಕ್ ಆದೇಶ ಕೊಟ್ಟಿದ್ದಾರೆ. 

Latest Videos
Follow Us:
Download App:
  • android
  • ios