Asianet Suvarna News Asianet Suvarna News

Madhagaja: ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರದಲ್ಲಿ 3 ವಿಭಿನ್ನ ಪಾತ್ರಗಳು

ನಟ ಶ್ರೀಮುರಳಿ ಅಭಿನಯದ 'ಮದಗಜ' ಚಿತ್ರದಲ್ಲಿನ ಮೂರು ಪ್ರಮುಖ ಪಾತ್ರಧಾರಿಗಳ ಲುಕ್‌ ಬಿಡುಗಡೆ ಮಾಡಲಾಗಿದೆ. ದೇವಯಾನಿ, ರಂಗಾಯಣ ರಘು ಹಾಗೂ ಗರುಡ ರಾಮ್‌ ಪಾತ್ರಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. 

3 different characters in the movie Madhagaja starrer SriiMurali gvd
Author
Bangalore, First Published Dec 1, 2021, 8:52 PM IST
  • Facebook
  • Twitter
  • Whatsapp

ನಟ ಶ್ರೀಮುರಳಿ (SriiMurali) ಅಭಿನಯದ 'ಮದಗಜ' (Madhagaja) ಚಿತ್ರದಲ್ಲಿನ ಮೂರು ಪ್ರಮುಖ ಪಾತ್ರಧಾರಿಗಳ ಲುಕ್‌ ಬಿಡುಗಡೆ ಮಾಡಲಾಗಿದೆ. ದೇವಯಾನಿ (Devayani), ರಂಗಾಯಣ ರಘು (Rangayana Raghu) ಹಾಗೂ ಗರುಡ ರಾಮ್‌ (Garuda Ram) ಪಾತ್ರಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಬರುವ ಬಹಳಷ್ಟು ಪೋಷಕರ ಪಾತ್ರಗಳ ಪೈಕಿ ಈ ಮೂರು ಪಾತ್ರಗಳಿಗೂ ಮಹತ್ವ ಇದೆ. ಈಗಾಗಲೇ ಜಗಪತಿ ಬಾಬು (Jagapati Babu) ಕ್ಯಾರೆಕ್ಟರ್‌ ಲುಕ್‌ ಆಚೆ ಬಂದಿದೆ. ಅದೇ ರೀತಿ ರತ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದೇವಯಾನಿ, ಬಸವನಾಗಿ ನಟಿಸುತ್ತಿರುವ ರಂಗಾಯಣ ರಘು ಹಾಗೂ ತಾಂಡವ ಪಾತ್ರಧಾರಿ ಆಗಿರುವ ಗರುಡ ರಾಮ್‌ ಕೂಡ 'ಮದಗಜ' ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಲಿದ್ದಾರೆ.

'ಕೆಜಿಎಫ್' ನಂತರ ಕಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಲ್ಲಿ ನಾನು ಬ್ಯುಸಿಯಾಗಿದ್ದೆ. ಜೊತೆಗೆ ಕೊರೋನಾ ವೈರಸ್‌ನಿಂದಾಗಿಯೂ (Corona Virus) ನಾನು ಕನ್ನಡ ಸಿನಿಮಾಗಳಿಂದ ದೂರ ಉಳಿಯುವಂತಾಯಿತು. 'ಮದಗಜ'ದಲ್ಲಿ ತಾಂಡವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಚಿನ್ನದ ಹಲ್ಲು ಮತ್ತು ಒಂದು ಕಣ್ಣಿನೊಂದಿಗೆ ಚಿತ್ರದಲ್ಲಿ ನನ್ನನ್ನು ಬದಲಾವಣೆ ಮಾಡಲಾಗಿದೆ. ತಾಂಡವ ಪಾತ್ರ ಉಗ್ರವಾಗಿದ್ದು, ಈ ಪಾತ್ರವನ್ನು ನೋಡುವ ಮಕ್ಕಳು ನನ್ನ ಬಳಿ ಬರಲು ಭಯಪಡಬಹುದು ಎಂದು ಹೇಳಿದ್ದಾರೆ. ಮುಖ್ಯವಾಗಿ ನನಗೆ ಸಾಮಾನ್ಯ ಚಿತ್ರಗಳಿಗಿಂತ ಮಾಸ್ ಎಂಟರ್‌ಟೈನರ್‌ಗಳಲ್ಲಿ ಖಳನಾಯಕನ ಪಾತ್ರ ಹೆಚ್ಚು ಮಹತ್ವದ್ದಾಗಿದೆ ಎಂದು ತಾಂಡವ ಪಾತ್ರಧಾರಿ ಗರುಡ ರಾಮ್‌ ಹೇಳಿದ್ದಾರೆ.

Madhagaja: ರಿಲೀಸ್‌ಗೂ ಮುನ್ನವೇ ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರಕ್ಕೆ ಭಾರೀ ಡಿಮ್ಯಾಂಡ್

'ಚಿತ್ರದಲ್ಲಿ ಸಾಕಷ್ಟು ಪೋಷಕ ಪಾತ್ರಧಾರಿಗಳು ನಟಿಸುತ್ತಿದ್ದಾರೆ. ಇಂಥ ಪಾತ್ರಗಳು ಪ್ರೇಕ್ಷಕರಿಗೆ ಬಹು ಹತ್ತಿರವಾಗುತ್ತವೆ. ಹೀಗಾಗಿ ಅವರ ಪಾತ್ರವನ್ನು ಪರಿಚಯಿಸುವ ಉದ್ದೇಶದಿಂದ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಜಗಪತಿ ಬಾಬು ಅವರ ಪಾತ್ರವನ್ನು ಪರಿಚಯಿಸುವ ಟೀಸರ್‌ ನೋಡಿ ಯಾವ ರೀತಿ ಮೆಚ್ಚಿಕೊಂಡರೋ ಅದೇ ರೀತಿ ಸಿನಿಮಾ ನೋಡಿದರೆ ಈ ಪಾತ್ರಗಳ ಬಗ್ಗೆಯೂ ಮೆಚ್ಚುಗೆ ಸೂಚಿಸುತ್ತಾರೆ ಎನ್ನುವ ಭರವಸೆ ಇದೆ' ಎಂದು ನಿರ್ದೇಶಕ ಮಹೇಶ್‌ ಕುಮಾರ್‌ (Mahesh Kumar) ಹೇಳಿದ್ದಾರೆ. ಉಮಾಪತಿ ಶ್ರೀನಿವಾಸ್‌ಗೌಡ (Umapathy Srinivas Gowda) ನಿರ್ದೇಶನದ ಈ ಸಿನಿಮಾ ಡಿ.3ರಂದು ತೆರೆಗೆ ಬರುತ್ತಿದೆ. 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್‌ ಮಾಡಿಕೊಂಡಿದೆ ಚಿತ್ರತಂಡ. ಅದ್ದೂರಿಯಾಗಿ ಚಿತ್ರವನ್ನು ತೆರೆ ಮೇಲೆ ತರುವ ನಿಟ್ಟಿನಲ್ಲಿ ನಿರ್ಮಾಪಕರು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ನಿನ್ನೆಯಷ್ಟೇ 'ಮದಗಜ' ಚಿತ್ರದ ತಾಯಿ ಬಗೆಗಿನ ಹಾಡು ಬಿಡುಗಡೆಯಾಗಿದೆ. 'ನಗುತಾ ತಾಯಿ (Nagutha Thayi), ಹಡೆದಾ ಕೂಸು, ಬೇರಾಯಿತೆ ಕರುಳ ದಾರಿ. ಲಾಲಿ ಹಾಡಿಗೆ ಜೋಳಿಗೆ ತೂಗೋದು. ಪರರಾ ಪಾಲಾಯ್ತೆ ಕೈ ಜಾರಿ ಎಂಬ ತಾಯಿ ಸೆಂಟಿಮೆಂಟ್ ಸಾಲುಗಳ ಹಾಡು ಸಂತೋಷ್ ವೆಂಕಿ (Santhosh Venky) ಕಂಠದಲ್ಲಿ ಮೂಡಿ ಬಂದಿದೆ. ಕಿನ್ನಾಲ್ ರಾಜ್ (Kinnal Raj) ಸಾಹಿತ್ಯವಿರುವ ಈ ಹಾಡಿಗೆ ರವಿ ಬಸ್ರೂರು (Ravi Basrur) ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಈ ಹಿಂದೆ ಚಿತ್ರದ ಟೈಟಲ್ ಟ್ರ್ಯಾಕ್ 'ಯುದ್ಧ ಸಾರಿದ ಚಂಡಮಾರುತ'  (Title Track) ಹಾಗೂ ಟೈಟಲ್ ಟ್ರ್ಯಾಕ್ ಮೇಕಿಂಗ್ ವಿಡಿಯೋ ಕೂಡಾ ಬಿಡುಗಡೆಯಾಗಿ, ಶ್ರೀಮುರಳಿ ಮಾಸ್‌ ಲುಕ್‌ನಲ್ಲಿ ಅಬ್ಬರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. 

Madhagaja: ಶ್ರೀಮುರಳಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫೀಕೆಟ್‌

ಈಗಾಗಲೇ 'ಮದಗಜ' ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್‌ನ್ನು (Dubbing Rights) ಬಾಲಿವುಡ್ (Bollywood) ಪ್ರತಿಷ್ಠಿತ ಸಂಸ್ಥೆಯೊಂದು 8 ಕೋಟಿಗೆ ಖರೀದಿಸಿದ್ದು, ಟಿವಿ ರೈಟ್ಸ್‌ನ್ನು 'ಕಲರ್ಸ್ ಕನ್ನಡ' (Colors Kannada) ವಾಹಿನಿ ಬರೋಬ್ಬರಿ 6 ಕೋಟಿಗೆ ಖರೀದಿಸಿದೆ. ಭರ್ಜರಿ ಆ್ಯಕ್ಷನ್ ಜೊತೆಗೆ ತಾಯಿ ಸೆಂಟಿಮೆಂಟ್ ಹೊಂದಿರುವ ಈ ಚಿತ್ರವನ್ನು ಸೆನ್ಸಾರ್ ಮಂಡಳಿಯವರು ಇತ್ತೀಚೆಗೆ ವೀಕ್ಷಿಸಿ, ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸಿ 'ಯು/ಎ ಪ್ರಮಾಣ ಪತ್ರ'ವನ್ನು (U/A Certificate) ನೀಡಿದ್ದರು. ಇನ್ನು  ಮೊದಲ ಬಾರಿಗೆ ಶ್ರೀಮುರಳಿ ಎದುರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದಾರೆ. ಹರೀಶ್ ಕೊಮ್ಮೆ ಸಂಕಲನ, ನವೀನ್‌ ಕುಮಾರ್‌ ಸಿನಿಮಾಟೋಗ್ರಫಿ ಚಿತ್ರಕ್ಕಿದೆ.
 

Follow Us:
Download App:
  • android
  • ios