Asianet Suvarna News Asianet Suvarna News

ಸಿನಿಮಾ ಪ್ರದರ್ಶನಕ್ಕೂ ಮುನ್ನ ಜಾರಿಯಾಗಲಿರುವ 10 ಹೊಸ ಸೂತ್ರಗಳು

ಅಕ್ಟೋಬರ್‌ 15ಕ್ಕೆ ಚಿತ್ರಮಂದಿರಗಳ ಆರಂಭಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಶೆ.50 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸರ್ಕಾರದ ಅನುಮತಿ ಕೊಟ್ಟಕೂಡಲೇ ಇತ್ತ ಚಿತ್ರಮಂದಿರಗಳು ಚಿತ್ರಪ್ರದರ್ಶನಕ್ಕೆ ಸಜ್ಜಾಗುತ್ತಿವೆ. ಥಿಯೇಟರ್‌ಗಳು ಪುನರಾರಂಭಗೊಳ್ಳುವುದಕ್ಕೆ ಚಿತ್ರಮಂದಿರಗಳೇ ಜಾರಿ ಮಾಡುತ್ತಿರುವ 10 ಸೂತ್ರಗಳು ಇಲ್ಲಿವೆ.

10 new rule for film theatre October 15th vcs
Author
Bangalore, First Published Oct 5, 2020, 8:52 AM IST
  • Facebook
  • Twitter
  • Whatsapp

1. ಸಂಪೂರ್ಣ ಸ್ವಚ್ಛತೆ: ಚಿತ್ರಮಂದಿರವನ್ನು ಕಸಮುಕ್ತ ಪ್ರದೇಶವನ್ನಾಗಿ ಮಾಡುವ ಸಂಪೂರ್ಣ ಸ್ವಚ್ಛತಾ ಕೆಲಸ ನಡೆಯುತ್ತಿದೆ.

2. ಕಟ್ಟಡಕ್ಕೆ ಹೊಸ ಬಣ್ಣ: ಚಿತ್ರಮಂದಿರಕ್ಕೆ ಹೊಸ ಬಣ್ಣ ಬಳಿಯಲಾಗುತ್ತಿದೆ.

ಪ್ರೇಕ್ಷಕನನ್ನು ಥೇಟರಿಗೆ ಕರೆಸುವುದು ಪ್ರದರ್ಶಕರ ಕೈಯಲ್ಲಿದೆ 

3. ಹೊಸ ತಂತ್ರಜ್ಞಾನ: ಕನಿಷ್ಠ ಒಂದು ಚಿತ್ರಮಂದಿರದಲ್ಲಿ ಕನಿಷ್ಠ 20 ಸೌಂಡ್‌ ಸಿಸ್ಟಮ್‌ಗಳನ್ನು ಅಳವಡಿಸಲಾಗಿರುತ್ತದೆ. ಆದರೆ, ಕಳೆದ ಏಳು ತಿಂಗಳುಗಳಿಂದ ಸೌಂಡು ಮಾಡದೆ ಕೂತಿದ್ದವು. ಈಗ ಅವುಗಳನ್ನು ಕಿತ್ತು ಹಾಕಿ ಹೊಸ ಸೌಂಡ್‌ ಸಿಸ್ಟಮ್‌ಗಳನ್ನು ಅಳವಡಿಸುತ್ತಿದ್ದಾರೆ. ಅಲ್ಲದೆ ಗಾಳಿಗಿಂತ ಶಬ್ದವನ್ನೇ ಉಂಟು ಮಾಡುತ್ತಿದ್ದ ಹಳೆಯ ಫ್ಯಾನುಗಳು ಮೂಲೆ ಸೇರುತ್ತಿವೆ. ಆ ಜಾಗದಲ್ಲಿ ಹೊಸ ಫ್ಯಾನುಗಳು ಬರುತ್ತಿವೆ.

10 new rule for film theatre October 15th vcs

4. ಹಳೆಯ ಕುರ್ಚಿಗಳಿಗೆ ಗುಡ್‌ಬೈ: ಹಳೆಯ ಕುರ್ಚಿಗಳ ಕಾರಣಕ್ಕೆ ಬಹುತೇಕ ಚಿತ್ರಮಂದಿರಗಳು ಗ್ಯಾರೆಂಜ್‌ ಅಥವಾ ಕಸದ ತೊಟ್ಟಿಗಳಂತೆ ಕಾಣುತ್ತಿದ್ದವು. ಈಗ ಆ ಕುರ್ಚಿಗಳಿಗೆ ಮೋಕ್ಷ ಕಲ್ಪಿಸಲಾಗುತ್ತಿದೆ. ಕೆಲವು ಚಿತ್ರಮಂದಿರಗಳಲ್ಲಿ ಎಲ್ಲಾ ಕುರ್ಚಿಗಳನ್ನು ಕಿತ್ತು ಹೊಸ ಕುಚಿಗಳನ್ನು ಹಾಕುತ್ತಿದ್ದರೆ, ಇನ್ನೂ ಕೆಲವಡೆ ಹಳೆಯ ಕುರ್ಚಿಗಳನ್ನೇ ರಿಪೇರಿ ಮಾಡುತ್ತಿದ್ದಾರೆ.

ನೀವು ರೆಡೀನಾ? ನಾವ್ ರೆಡಿ; ಕಾಯುತ್ತಿದೆ 10 ಪ್ರಮುಖ ಚಿತ್ರಗಳು!

5. ನವೀಕರಣಗೊಳ್ಳುತ್ತಿರುವ ಶೌಚಾಲಯ, ಕ್ಯಾಂಟೀನ್‌ಗಳು: ಬಾಗಿಲು ಮುಚ್ಚಿದ್ದರಿಂದ ಹೆಗ್ಗಣಗಳ ಅರಮನೆಯಂತಾಗಿದ್ದ ಶೌಚಾಲಯ ಹಾಗೂ ಕ್ಯಾಂಟಿನ್‌ಗಳನ್ನು ಹೊಸದಾಗಿ ಕಟ್ಟುತ್ತಿದ್ದಾರೆ.

6. ಬದಲಾಗುತ್ತಿವೆ ಪರದೆಗಳು: ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಪರದೆಗಳನ್ನು ಬದಲಾಯಿಸುತ್ತಿದ್ದಾರೆ. ಹೊಸ ಸ್ಕ್ರೀನ್‌ಗಳನ್ನು ಅಳವಡಿಸುತ್ತಿದ್ದಾರೆ. ದೃಶ್ಯಗಳ ಕ್ವಾಲಿಟಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.

"

8. ಸಾಧ್ಯವಾದಷ್ಟುಆನ್‌ಲೈನ್‌ ಸೇವೆ: ಹೆಚ್ಚು ಜನ ಸೇರದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾಧ್ಯವಾದಷ್ಟುಆನ್‌ಲೈನ್‌ನಲ್ಲಿ ಟಿಕೆಟ್‌ಗಳ ಬುಕ್ಕಿಂಗ್‌ ಒತ್ತು ನೀಡಲಾಗುತ್ತಿದೆ.

9. ಬಣ್ಣಬಣ್ಣದ ವಿದ್ಯುತ್‌ ದೀಪಗಳು: ಸಿನಿಮಾ ಆರಂಭಗೊಂಡು ತಡವಾಗಿ ಚಿತ್ರಮಂದಿರಗಳ ಒಳಗೆ ಬರುವವರಿಗೆ ಅನುಕೂಲ ಆಗುವಂತೆ ನೆಲಕ್ಕೆ ಬಣ್ಣ ಬಣ್ಣದ ಪಿಓಪಿ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುತ್ತಿದೆ.

10. ಧೂಮಪಾನಕ್ಕೆ ಕಡಿವಾಣ: ಚಿತ್ರಮಂದಿರದ ಒಳಗೆ ಮಾತ್ರವಲ್ಲ, ಹೊರಗೂ ಧೂಮಪಾನ ಸೇವನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

Follow Us:
Download App:
  • android
  • ios