Alcohol ಸೇವಿಸದ ಸ್ನೇಹಿತರಿಗೂ ಇರಲಿ ನಿಮ್ಮ ಪಾರ್ಟಿಯಲ್ಲಿ ಜಾಗ
ಡ್ರಿಂಕ್ ಮಾಡಲ್ವಾ? ಪಾರ್ಟಿ ಅಂದ್ರೆ ಬರೀ ಕೋಲ್ಡ್ ಡ್ರಿಂಕ್ಸಾ? ಏನ್ ಗುರು ಇವನು ಇನ್ನೂ ಕುಡಿಯೋದು ಕಲಿತಿಲ್ಲ.. ಹೀಗೆ ಆಲ್ಕೋಹಾಲ್ ನಿಂದ ದೂರ ಇರೋರು ನಾನಾ ಮಾತುಗಳನ್ನು ಕೇಳ್ಬೇಕಾಗುತ್ತೆ. ಅನೇಕ ಬಾರಿ ಸ್ನೇಹಿತರೇ ಅವರನ್ನು ದೂರ ಮಾಡ್ತಾರೆ. ಅದ್ರ ಬದಲು ಅವ್ರಿಗೆ ನಿಮ್ಮ ಪಾರ್ಟಿನಲ್ಲಿ ಒಂದು ಸ್ಪೇಸ್ ನೀಡಿದ್ರೆ ಏನಾಗುತ್ತೆ ಸ್ವಾಮಿ?
ಹಿಂದಿನ ಕಾಲದಲ್ಲಿ ಮನೆ (Home) ಗೆ ಬಂದ ಅತಿಥಿ (Guest) ಗಳಿಗೆ ಪಾನಕ,ಟೀ ಸೇರಿದಂತೆ ಕುಡಿಯಲು ನೀರು ಕೇಳ್ತಿದ್ದರು. ಈಗ ಕಾಲ ಬದಲಾಗಿದೆ. ಬಂದ ಅತಿಥಿಗಳಿಗೆ ಡ್ರಿಂಕ್ಸ್ (Drinks) ಆಫರ್ ಮಾಡ್ತಾರೆ. ಪುರುಷ ಸ್ನೇಹಿತರು ಮನೆಗೆ ಬಂದ್ರೆ ಭೋಜನಕ್ಕಿಂತ ಮೊದಲು ಡ್ರಿಂಕ್ಸ್ ಕೇಳ್ತಾರೆ. ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯ ಎನ್ನುವಂತಾಗಿದೆ. ಕೆಲವರ ಮನೆಯಲ್ಲಿ ಹದಿಹರೆಯದ ಮಕ್ಕಳೂ ಇದಕ್ಕೆ ಹೊಂದಿಕೊಂಡಿದ್ದಾರೆ. ಆದ್ರೆ ಅದು ಎಷ್ಟು ಮಿತಿಯಲ್ಲಿರಬೇಕೆಂಬುದನ್ನು ದೊಡ್ಡವರು ಕಲಿಸುತ್ತಾರೆ. ಡ್ರಿಂಕ್ಸ್ ಎಷ್ಟೇ ಮಾಮೂಲಿ ಎಂದ್ರೂ ಕೆಲವರಿಗೆ ಇದು ಮುಜುಗುರ ತರಿಸುತ್ತದೆ. ಕೆಲವರು ಮದ್ಯಪಾನ ಮಾಡುವುದಿಲ್ಲ ಮತ್ತೆ ಕೆಲವರು ಅಭ್ಯಾಸ ಬಿಟ್ಟಿರುತ್ತಾರೆ. ಡ್ರಿಂಕ್ಸ್ ಮಾಡುವವರ ಜೊತೆಗಿದ್ದಾಗ ಅವರು ಒಂಟಿತನ ಅನುಭವಿಸುತ್ತಾರೆ.
ಬಾಲಿವುಡ್ ಸಿನಿಮಾಗಳಲ್ಲೂ ಈಗ ಡ್ರಿಂಕ್ಸ್ ಆಫರ್ ಕಾಮನ್ ಆಗಿದೆ. ಇದು ಫ್ಯಾಷನ್, ಟ್ರೆಂಡ್ ಅಂದ್ರೂ ಕೆಲ ಯುವಕರು ಅದ್ರಿಂದ ದೂರವಿರ್ತಾರೆ. ಅವರಿಗೆ ಅದ್ರ ಅಗತ್ಯವಿರುವುದಿಲ್ಲ. ಅದ್ರಿಂದ ಲಾಭವೂ ಇರುವುದಿಲ್ಲ. ಅಂತವರ ಮುಂದೆ ಹೇಗಿರಬೇಕು ಎಂಬುದನ್ನು ಪ್ರತಿಯೊಬ್ಬರೂ ಅರಿತಿರಬೇಕು.
ಮದ್ಯಪಾನ ಮಾಡದವರನ್ನು ಎಂದೂ ವಿಚಿತ್ರವಾಗಿ ನೋಡ್ಬೇಡಿ : ಮದ್ಯಪಾನ ಮಾಡದಿರುವುದು ಅಪರಾಧವಲ್ಲ. ನೀವು ಮದ್ಯಪಾನದಿಂದ ದೂರವಿರುವವರಾಗಿದ್ದರೆ ಬೇರೆಯವರು ಏನು ಮಾಡ್ತಿದ್ದಾರೆ ಎಂಬುದನ್ನು ನೋಡಲು ಹೋಗ್ಬೇಡಿ. ಅವರು ಏನು ಹೇಳ್ತಾರೆ ಎಂಬುದನ್ನು ಕಿವಿಗೆ ಹಾಕಿಕೊಳ್ಳಬೇಡಿ. ಯಾರಾದರೂ ನಿಮ್ಮನ್ನು ಕುಡಿಯಲು ಒತ್ತಾಯಿಸಿದ್ರೆ ಅದನ್ನು ನಯವಾಗಿ ತಳ್ಳಿಹಾಕಿ. ಅದಕ್ಕೆ ಅತಿಯಾಗಿ ವರ್ತಿಸುವ ಅಗತ್ಯವಿಲ್ಲ. ಇಲ್ಲವೆ ಒತ್ತಾಯಕ್ಕೆ ಮದ್ಯಪಾನ ಮಾಡುವ ಅಗತ್ಯವಿಲ್ಲ.
ಹೋಳಿ ಸೇರಿದಂತೆ ಕೆಲ ಪಾರ್ಟಿಗಳಲ್ಲಿ ಮದ್ಯಪಾನವನ್ನು ಕಡ್ಡಾಯ ಮಾಡಿರ್ತಾರೆ. ಅಂತ ಪಾರ್ಟಿಯಲ್ಲಿ ನೀವು ಮದ್ಯಪಾನ ಮಾಡದೆ ಹೋದಾಗ ಜನರು,ಈ ಪಾರ್ಟಿಯಲ್ಲೂ ಎಂಜಾಯ್ ಮಾಡ್ದೆ ಹೋದ್ರೆ ಹೇಗೆ? ಇಲ್ಲಿಂದಲಾದ್ರೂ ಡ್ರಿಂಕ್ಸ್ ಮಾಡೋದು ಕಲಿ ಎಂದು ಪುಕ್ಕಟ್ಟೆ ಸಲಹೆ ನೀಡ್ತಾರೆ. ಮತ್ತೆ ಕೆಲವೊಮ್ಮೆ ಮನೆಗೆ ಹೋದಾಗ ಮದ್ಯಪಾನ ಮಾಡುವಂತೆ ಒತ್ತಾಯ ಮಾಡ್ತಾರೆ.
FIRST NIGHT ಹಾಳು ಮಾಡುತ್ತೆ ಪುರುಷರ ಈ ಸಣ್ಣ ತಪ್ಪು
ಕೆಲವರ ಮನೆಯಲ್ಲಿ ಮದ್ಯಪಾನ ಸಂಪೂರ್ಣ ನಿಷೇಧವಾಗಿರುತ್ತದೆ. ಅವರು ಮನೆಗೆ ಬಂದ ಅತಿಥಿಗಳಿಗೆ ಡ್ರಿಂಕ್ಸ್ ಆಫರ್ ಮಾಡುವುದಿಲ್ಲ. ಆಗ ಬಂದ ಅತಿಥಿಗಳು ,ಡ್ರಿಂಕ್ಸ್ ಇಲ್ವಾ ಅಂತಾ ಕೇಳಬಹುದು ಇಲ್ಲವೆ ಡ್ರಿಂಕ್ಸ್ ಆಫರ್ ಮಾಡಿಲ್ಲ ಅಂತಾ ನಗಬಹುದು. ಇನ್ನೂ ಕೆಲವರು, ನಾನು ಮನೆಗೆ ಬರಬೇಕೆಂದ್ರೆ ಎಲ್ಲ ಸಿದ್ಧತೆ ಮಾಡಿಡು ಎನ್ನುವವರಿದ್ದಾರೆ. ಅವರಿಗಾಗಿ ನೀವು ನಿಮ್ಮ ತನವನ್ನು ಬಿಡಬೇಕಾಗಿಲ್ಲ. ಹಾಗೆ ಮದ್ಯಪಾನಿಗಳು ಮದ್ಯಪಾನ ಮಾಡದವರ ಮುಂದೆ ಇದೆಲ್ಲವನ್ನೂ ಹೇಳುವ ಅಗತ್ಯವಿಲ್ಲ. ನಾನು ಕುಡಿದ್ರೆ ನಿಮಗೆ ತೊಂದರೆಯಾಗುತ್ತೇನೋ ಎಂಬ ಪದವನ್ನು ಕೂಡ ಪದೇ ಪದೇ ಹೇಳಬೇಡಿ.
ಪಾರ್ಟಿಯಲ್ಲಿ ನಿಮ್ಮ ವ್ಯವಸ್ಥೆ ಹೀಗಿರಲಿ : ಪಾರ್ಟಿ ಅಂದ್ರೆ ಅದರಲ್ಲಿ ಮದ್ಯಪಾನ ಇರಲೇಬೇಕೆಂದೇನು ಇಲ್ಲ. ಆದ್ರೆ ಮದ್ಯಪಾನದ ಪಾರ್ಟಿಗೂ ಕೆಲವು ನಾನ್ ಡ್ರಿಂಕರ್ಸ್ ಬರಬಹುದು. ಹಾಗಾಗಿ ಅವರಿಗೆ ವ್ಯವಸ್ಥೆ ಮಾಡುವುದು ಮುಖ್ಯವಾಗುತ್ತದೆ. ಒಂದು ವೇಳೆ ನೀವೇ ಪಾರ್ಟಿ ಅರೆಂಜ್ ಮಾಡಿದ್ದರೆ ಮದ್ಯಪಾನ ಮಾಡದವರಿಗೆ ಪ್ರತ್ಯೇಕವಾಗಿ ಆಲ್ಕೋಹಾಲ್ ಇಲ್ಲದ ಡ್ರಿಂಕ್ಸ್ ಸಿದ್ಧಪಡಿಸಿರಿ. ಪಾರ್ಟಿ ಬೇರೆಯವರದ್ದಾಗಿದ್ದು, ನೀವು ಸ್ನೇಹಿತರ ಜೊತೆ ಹೋಗ್ತಿದ್ದರೆ ಅವರಿಗೆ ಮುಜುಗರವಾಗದಂತೆ ಆಲ್ಕೋಹಾಲ್ ಇಲ್ಲದ ಡ್ರಿಂಕ್ಸ್ ತೆಗೆದುಕೊಂಡು ಹೋಗಿ.
ಬೇರೆ ಚಟುವಟಿಕೆಗಳನ್ನು ಏರ್ಪಡಿಸಿ : ಮದ್ಯಪಾನ ಒಮ್ಮೆ ಶುರುವಾದ್ರೆ ಬಿಡುವುದು ಕಷ್ಟ. ಹಾಗಾಗಿ ಶುರುವಿನಲ್ಲಿಯೇ ಎಚ್ಚರಿಕೆ ಅಗತ್ಯ. ಕೆಲವೊಮ್ಮೆ ಸ್ನೇಹಿತರು,ಸಂಬಂಧಿಕರಿಗಾಗಿ ಕುಡಿತ ಕಲಿತಿರುತ್ತೇವೆ. ಅದನ್ನು ಬಿಡಲು ನಂತ್ರ ಒದ್ದಾಡುತ್ತೇವೆ. ಅನೇಕ ಬಾರಿ ಈ ಪಾರ್ಟಿಗಳೇ ಕುಡಿತದ ಚಟ ಶುರು ಮಾಡಿರುತ್ತದೆ. ಎಲ್ಲ ಪಾರ್ಟಿಯಲ್ಲೂ ಮದ್ಯಪಾನ ಮಿತಿಯಲ್ಲಿರಬೇಕು. ಹಾಗಾಗಿ ಮದ್ಯಪಾನ ಮಿತಿ ಮೀರದಂತೆ ನೋಡಿಕೊಳ್ಳಲು ನೀವು ಪಾರ್ಟಿಯಲ್ಲಿ ಬೇರೆ ಆಟ,ಹಾಡು,ಸ್ಪರ್ಧೆಗಳನ್ನು ಏರ್ಪಡಿಸಬೇಕು. ನಿಮ್ಮ ಪಾರ್ಟಿ ಇನ್ನೊಬ್ಬರ ಜೀವನ ಹಾಳು ಮಾಡ್ಬಾರದು.
ವಿಚ್ಛೇದನ ಬಯಸೋದ್ರಲ್ಲಿ ಮಹಿಳೆಯರೇ ಮುಂದು!
ಡ್ರಿಂಕ್ ಸ್ನೇಹಕ್ಕೆ ಅಡ್ಡಿಯಾಗದಿರಲಿ : ಕೆಲವರು ಡ್ರಿಂಕ್ ಮಾಡದ ಸ್ನೇಹಿತರನ್ನು ದೂರವಿಡ್ತಾರೆ. ಮತ್ತೆ ಕೆಲವರಿಗೆ ಸ್ನೇಹಿತರ ಜೊತೆ ಸುತ್ತಾಡಲು ಇಷ್ಟವಾಗುತ್ತದೆ. ಅವರು ಬಾರ್ ಗೆ ಕೂಡ ಹೋಗ್ತಾರೆ. ಆದ್ರೆ ಅಲ್ಲಿ ಆಲ್ಕೋಹಾಲ್ ಬದಲು ಬೇರೆ ಡ್ರಿಂಕ್ ಸೇವನೆ ಮಾಡ್ತಾರೆ. ಅನೇಕ ಬಾರಿ ಬಾರ್ ಗಳಲ್ಲಿ ಒಳ್ಳೆ ಡ್ರಿಂಕ್ಸ್ ಸಿಗೋದಿಲ್ಲ. ಅಂಥ ಸಂದರ್ಭದಲ್ಲಿ ನೀರು ಕುಡಿಯುವುದು ಒಳ್ಳೆಯದು. ನಾನ್ ಆಲ್ಕೋಹಾಲ್ ಡ್ರಿಂಕ್ ಇಲ್ಲ ಎಂಬ ಕಾರಣಕ್ಕೆ ಆಲ್ಕೋಹಾಲ್ ಆಫರ್ ಮಾಡುವುದು ತಪ್ಪು.
ಅತಿಯಾದ ಒತ್ತಾಯ ಬೇಡ : ಮದ್ಯಪಾನ ಮಾಡುವುದು ಬಿಡುವುದು ಅವರಿಗೆ ಬಿಟ್ಟ ವಿಷ್ಯ. ಅದ್ರ ಬಗ್ಗೆ ಒತ್ತಾಯ ಮಾಡುವ ಅವಶ್ಯಕತೆಯಿಲ್ಲ. ಮಾಡಲ್ಲ ಎಂಬ ಕಾರಣಕ್ಕೆ ಅವರನ್ನು ಪ್ರತ್ಯೇಕವಾಗಿ ನೋಡುವ ಅಗತ್ಯವಿಲ್ಲ. ಡ್ರಿಂಕ್ಸ್ ಮಾಡುವ ವ್ಯಕ್ತಿ ಡ್ರಿಂಕ್ಸ್ ಮಾಡದ ವ್ಯಕ್ತಿಯನ್ನು ಅರ್ಥ ಮಾಡಿಕೊಂಡು ಆತನ ಜೊತೆಯೂ ಎಂಜಾಯ್ ಮಾಡಿದ್ರೆ ಇಬ್ಬರ ಸ್ನೇಹ ಗಟ್ಟಿಯಾಗಿರುತ್ತದೆ.