ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ ಯಶ್‌ವಂತ್ ಸಿನ್ಹಾ. ಅವರ ಎದುರು ಎನ್‌ಡಿಎ, ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಯಶ್‌ವಂತ್ ಸಿನ್ಹಾ ಅವರ ಮೊದಲ ಪ್ರೇಮ ಹಾಗೂ ಕೌಟುಂಬಿಕ ಜೀವನದ ಬಗ್ಗೆ ಇಲ್ಲಿದೆ ಮಾಹಿತಿ.
ನವದೆಹಲಿ (ಜುಲೈ 18): ಕಾಲೇಜು ದಿನಗಳಲ್ಲಿ ಎಲ್ಲರ ಜೀವನದಲ್ಲಿ ಇರುವಂತೆ ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾ ಅವರಿಗೂ ಒಂದು ನವಿರಾದ ಪ್ರೇಮಕಥೆಯಿತ್ತು. ಆದರೆ, ಇದು ಸುಖಾಂತ್ಯದ ಬದಲಿಗೆ ದುರಂತವಾಗಿ ಮುಕ್ತಾಯ ಕಂಡಿತು. ಕಾಲೇಜು ಜೀವನದಲ್ಲಿ ತಮ್ಮ ಮೊದಲ ಪ್ರೇಮದ ಕಾರಣಕ್ಕಾಗಿ ಕೆಲವು ವರ್ಷ 'ಮಜ್ನು' ಆಗಿ ಯಶ್‌ವಂತ್ ಸಿನ್ಹಾ ತಿರುಗಾಡಿದ್ದರು. ಪಾಟ್ನಾ ವಿಶ್ವವಿದ್ಯಾಲಯದ್ಲಿ ಓದುವ ವೇಳೆ ಯಶ್‌ವಂತ್ ಸಿನ್ಹಾ ಅವರು ಬಂಗಾಳಿ ಹುಡುಗಿಯೊಬ್ಬಳನ್ನು ಇಷ್ಟಪಟ್ಟಿದ್ದರು. ಆಕೆಯ ಹೆಸರು ಮೀನಾಕ್ಷಿ ಮುಖರ್ಜಿ. ಅದೇ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದ ಮೀನಾಕ್ಷಿ ಮುಖರ್ಜಿ ಹಾಗೂ ಯಶವಂತ್ ಸಿನ್ಹಾ ಇಬ್ಬರೂ ಬಹಳ ಬೇಗ ಸ್ನೇಹಿತರಾಗಿಬಿಟ್ಟಿದ್ದರು. ರಾಜಕೀಯಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಯಶವಂತ್ ಸಿನ್ಹಾ, ಮೀನಾಕ್ಷಿ ಅವರನ್ನು ಭೇಟಿ ಮಾಡಿದ ಕೆಲ ತಿಂಗಳಲ್ಲಿಯೇ ಆಕೆಯನ್ನು ಇಷ್ಟಪಡಲು ಆರಂಭಿಸಿದ್ದರು. ಆಕೆಯನ್ನು ಬರೀ ಸ್ನೇಹಿತೆ ಮಾತ್ರವಲ್ಲ ಜೀವನಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು ಎಂದೂ ಆಸೆ ಪಟ್ಟಿಇದ್ದರು. ಇಂಗ್ಲೀಷ್ ಸಾಹಿತ್ಯದಲ್ಲಿ ಟಾಪರ್ ಆಗಿದ್ದ ಮೀನಾಕ್ಷಿ ಮುಖರ್ಜಿ ಬಹಳ ಸುಂದರವಾಗಿದ್ದರು. ನೋಡಲು ಸ್ಪುರದ್ರೂಪಿಯಾಗಿದ್ದ ಯಶವಂತ್ ಸಿನ್ಹಾಗೆ ಪ್ರೀತಿಯಲ್ಲಿ ಬೀಳಲು ಹೆಚ್ಚು ದಿನ ಬೇಕಾಗಿರಲಿಲ್ಲ. ಒಂದು ದಿನ ಧೈರ್ಯ ಮಾಡಿ, ಕಾಲೇಜಿನ ಲೈಬ್ರೆರಿಯಲ್ಲಿ ಆಕೆಯ ಬಳಿ ಪ್ರೇಮ ನಿವೇದನೆ ಮಾಡಿಬಿಟ್ಟಿದ್ದರು.
ರಿಜೆಕ್ಟ್ ಮಾಡಿದ್ದ ಮೀನಾಕ್ಷಿ: ಮುಂದಾಗಬಹುದಾದ ಯಾವುದನ್ನೂ ಯೋಚಿಸದೇ ಲೈಬ್ರೆರಿಯಲ್ಲಿ ನಿಂತು ಮೀನಾಕ್ಷಿಗೆ ಪ್ರೇಮ ನಿವೇದನೆ ಮಾಡುವ ವೇಳೆ ಯಶವಂತ್ ಸಿನ್ಹಾರನ್ನು ಯಾವುದೇ ಅಳುಕಿರಲಿಲ್ಲ. ಎಂದಿನ ಗಟ್ಟಿ ದನಿಯಲ್ಲಿ ನಿನ್ನನ್ನು ಮದುವೆಯಾಗಲು ಬಯಸಿದ್ದೇನೆ ಎಂದಿದ್ದರು. ಆದರೆ, ಇದಕ್ಕೆ ಮೀನಾಕ್ಷಿಯ ಉತ್ತರ ಯೆಸ್ ಎನ್ನುವುದಾಗಿರಲಿಲ್ಲ. ಯಶವಂತ್ ಸಿನ್ಹಾರ ಪ್ರೇಮ ನಿವೇದನೆಗೆ ಅಚ್ಚರಿ ಪಟ್ಟಿದ್ದ ಆಕೆ, ಕೆಲ ಹೊತ್ತು ಯೋಚನೆ ಮಾಡಿದ ಬಳಿಕ ಇದು ಸಾಧ್ಯವಿಲ್ಲ ಎಂದು ಹೇಳಿಬಿಟ್ಟಿದ್ದರು. "ನೀವು ನನ್ನನ್ನು ಪಾತಾಳಕ್ಕೆ ನೂಕಿ ಬಿಟ್ಟಿದ್ದೀರಿ. ಇದು ಹೇಗೆ ಸಾಧ್ಯವಾಗುತ್ತದೆ. ನಾನು ಬಂಗಾಳಿ, ನೀವು ಬಿಹಾರಿ. ನಮ್ಮಿಬ್ಬರ ಸಂಪೂರ್ಣ ಸಂಸ್ಕೃತಿಯೇ ವಿಭಿನ್ನ. ನಮ್ಮ ಕುಟುಂಬಗಳು ಕೂಡ ಒಪ್ಪೋದಿಲ್ಲ. ಇದನ್ನು ಇಲ್ಲಿಯೇ ಮರೆತುಬಿಡಿ' ಎಂದು ಅಷ್ಟೇ ನೇರ ಮಾತಿನಲ್ಲಿ ಹೇಳಿಬಿಟ್ಟರು.
ದೇವದಾಸ್ ಆಗಿದ್ದ ಯಶವಂತ್ ಸಿನ್ಹಾ: ಯಶವಂತ್ ಸಿನ್ಹಾ ಅವರ ಕುರಿತಾಗಿ ಅಜಯ್.ಕೆ.ಸಿಂಗ್ ಬರೆದಿರುವ ಆತ್ಮಚರಿತ್ರೆಯಲ್ಲಿ ಈಎಲ್ಲಾ ಮಾಹಿತಿಗಳಿವೆ. ಮೀನಾಕ್ಷಿ ಮುಖರ್ಜಿ ಅವರು, ಈ ವಿಚಾರದಿಂದ ನಮ್ಮ ಸ್ನೇಹ ಹಾಳಾಗಬಾರದು ಎಂದು ಹೇಳಿದ್ದರು ಎನ್ನುವುದನ್ನೂ ಪುಸ್ತಕದಲ್ಲಿ ಬರೆಯಲಾಗಿದೆ. ಆದರೆ, ಈ ಆಘಾತಕಾರಿ ಸಂಘತಿಯ ಕಾರಣದಿಂದಾಗಿ, ಕಾಲೇಜಿನಲ್ಲಿ ಕೆಲವು ದಿನಗಳ ಕಾಲ ಯಶವಂತ್ ಸಿನ್ಹಾ ದೇವದಾಸ್ ಆಗಿ ತಿರುಗಾಡಿದ್ದರು. ಈ ನಡುವೆ ಮೀನಾಕ್ಷಿ ಅವರೊಂದಿಗೆ ಮಾತನಾಡುವುದನ್ನೂ ಯಶವಂತ್ ಸಿನ್ಹಾ ಸಂಪೂರ್ಣವಾಗಿ ನಿಲ್ಲಿಸಿದ್ದರು.
ಮೀನಾಕ್ಷಿ ಮದುವೆಗೆ ತೆರಳಿದ್ದ ಸಿನ್ಹಾ: ಅದಾದ ಕೆಲ ವರ್ಷದ ಬಳಿಕ ಮೀನಾಕ್ಷಿ ಮುಖರ್ಜಿ ಅವರು ಮದುವೆ ಸೂಜಿತ್ ಬ್ಯಾನರ್ಜಿ (Sujit Banerjee) ವ್ಯಕ್ತಿಯ ಜೊತೆ ನಿಶ್ಚಯವಾಯಿತು. ಸೂಜಿತ್, ಪಾಟ್ನಾ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಷ್ಟು ಮಾತ್ರವಲ್ಲದೆ, ಯಶವಂತ್ ಸಿನ್ಹಾ ಕಲಿತ ಕಾಲೇಜಿನಲ್ಲಿ ಅವರ ಸೀನಿಯರ್ ಆಗಿದ್ದವವರು ಸೂಜಿತ್. ಯಶವಂತ್ ಸಿನ್ಹಾ ಅವರ ಸೋದರಿಯ ಮೂಲಕಸ ಸಿನ್ಹಾಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಮೀನಾಕ್ಷಿ ಕಳಿಸಿದ್ದರು. ಯಶವಂತ್ ಸಿನ್ಹಾ ಮದುವೆಗೆ ತೆರಳಿ ವಧು-ವರರಿಗೆ ಶುಭ ಹಾರೈಸಿ ಬಂದಿದ್ದರು.
ಇದನ್ನೂ ಓದಿ: President Election ರಾಷ್ಟ್ರಪತಿ ಚುನಾವಣೆಯಲ್ಲಿ ಭರ್ಜರಿ ಕ್ರಾಸ್ ವೋಟಿಂಗ್..!
ಬೇರೆ-ಬೇರೆಯಾದ ದಾರಿ: ಅದಾದ ಬಳಿಕ ಮೀನಾಕ್ಷಿ ಹಾಗೂ ಯಶವಂತ್ ಸಿನ್ಹಾ ಅವರ ದಾರಿ ಬೇರೆ ಬೇರೆ ಆದವು. ಯಶವಂತ್ ಸಿನ್ಹಾ ರಾಜಕೀಯ ರಂಗಕ್ಕೆ ಇಳಿದರೆ, ಮೀನಾಕ್ಷಿ ಮುಖರ್ಜಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದರು. ಇವರಿಬ್ಬರ ನಡುವೆ ಮಾತುಕತೆ ಸಂಪೂರ್ಣವಾಗಿ ನಿಂತುಹೋಗಿತ್ತು. ಹಲವು ವರ್ಷಗಳ ಬಳಿಕ, ಇಬ್ಬರಿಗೂ ಸ್ನೇಹಿತರಾಗಿದ್ದ ಒಬ್ಬ ವ್ಯಕ್ತಿ, ಮೀನಾಕ್ಷಿ ಅವರ ಪತಿ ಸೂಜಿತ್ ನಿಧನರಾಗಿದ್ದನ್ನು ಯಶವಂತ್ ಸಿನ್ಹಾಗೆ ತಿಳಿಸಿದ್ದರು. ಅದಾದ ಬಳಿಕ ಮೀನಾಕ್ಷಿ ಅವರನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿದ್ದರು. ಪತಿಯ ನಿಧನದ ಬಳಿಕ ಒಂಟಿತನ ಕಾಡಿದ್ದರಿಂದ ಮೀನಾಕ್ಷಿ ಕೂಡ ಆ ಬಳಿಕ ಹೆಚ್ಚು ವರ್ಷ ಬದುಕಲಿಲ್ಲ.
ಇದನ್ನೂ ಓದಿ: ಮೋದಿ ಮಾಸ್ಟರ್ ಸ್ಟ್ರೋಕ್‌ಗೆ ವಿಪಕ್ಷ ಕಂಗಾಲು, ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮುಗೆ ಹೆಚ್ಚುವರಿ ಮತ!
ನಿಲೀಮಾರನ್ನು ಮದುವೆಯಾದ ಯಶವಂತ್ ಸಿನ್ಹಾ: ಈ ನಡುವೆ ಯಶವಂತ್ ಸಿನ್ಹಾ, ಲೇಖಕಿ ನೀಲಿಮಾರನ್ನು ವಿವಾಹವಾಗಿದ್ದರು. ಹಿಂದಿ ಸಾಹಿತ್ಯದಲ್ಲಿ ಸಾಕಷ್ಟು ಹೆಸರು ಮಾಡಿದ ಲೇಖಕಿ ಇವರಾಗಿದ್ದರು. ದಂಪತಿಗೆ ಇಬ್ಬರು ಗಂಡು ಹಾಗೂ ಒಂದು ಹೆಣ್ಣುಮಗಳು. ಪುತ್ರ ಜಯಂತ್ ಸಿನ್ಹಾ, ಬಿಜೆಪಿಯ ಸಂಸದರಾಗಿದ್ದರೆ, ಮತ್ತೊಬ್ಬ ಪುತ್ರ ಸುಮಂತ್ ಸಿನ್ಹಾ ಉದ್ಯಮಿಯಾಗಿದ್ದಾರೆ. ಮಗಳ ಶರ್ಮಿಳಾ ತಾಯಿಯಂತೆ ಲೇಖಖಿಯಾಗಿದ್ದಾರೆ.
