ಸೆಕ್ಸ್ ಯಾಂತ್ರಿಕವಾಗ್ಬಾರದು. ಭಾವನಾತ್ಮಕ ಸಂಬಂಧ ಇಲ್ಲಿ ಮುಖ್ಯವಾಗುತ್ತದೆ. ಸಂಭೋಗದ ವೇಳೆ ಪುರುಷ ಮಾತ್ರವಲ್ಲ ಮಹಿಳೆ ಕೂಡ ಮಹತ್ವ ಪಡೆಯುತ್ತಾಳೆ. ಆಕೆ ಮಾಡುವ ಕೆಲ ತಪ್ಪುಗಳು ಪತಿಯ ಬೇಸರ, ನಿರಾಸೆಗೆ ಕಾರಣವಾಗುತ್ತೆ.
ಸಂಭೋಗ (Intercourse) ದ ಸಮಯದಲ್ಲಿ ತಿಳಿದೋ ಅಥವಾ ತಿಳಿಯದೆಯೋ ಅನೇಕ ತಪ್ಪು (Wrong)ಗಳನ್ನು ಮಾಡಬಹುದು. ಇದರಿಂದಾಗಿ ನಿಮ್ಮ ಸಂಗಾತಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು. ನಿಮ್ಮ ಒಂದು ತಪ್ಪು ನಿಮ್ಮ ಆ ಕ್ಷಣದ ಸಂತೋಷ (Happiness)ನ್ನು ಹಾಳು ಮಾಡ್ಬಹುದು. ಸಂಗಾತಿಗೆ ಲೈಂಗಿಕ ಸುಖ ನಿಮ್ಮ ತಪ್ಪಿನಿಂದಾಗಿ ಸಿಗದೆ ಹೋಗಬಹುದು. ಹಾಗಾಗಿ ಮಹಿಳೆಯರು ಸಂಭೋಗಕ್ಕೆ ಸಂಬಂಧಿಸಿದಂತೆ ಕೆಲ ವಿಷ್ಯವನ್ನು ತಿಳಿದಿರಬೇಕು. ಅನೇಕ ಮಹಿಳೆಯರು ಹಾಸಿಗೆಯಲ್ಲಿ ತಪ್ಪು ಮಾಡ್ತಾರೆ. ಆದ್ರೆ ತಾವು ತಪ್ಪು ಮಾಡಿದ್ದೇವೆ ಎಂಬ ಸಂಗತಿಯೇ ಅವರಿಗೆ ತಿಳಿದಿರೋದಿಲ್ಲ. ಇಂದು ನಾವು ಮಹಿಳೆಯರು ಹಾಸಿಗೆಯಲ್ಲಿ ಮಾಡುವ ತಪ್ಪೇನು ಎಂಬುದನ್ನು ಹೇಳ್ತೇವೆ.
ಹಾಸಿಗೆ ಮೇಲೆ ಶವ: ಯಸ್, ಶಾರೀರಿಕ ಸಂಬಂಧ ಇಬ್ಬರ ಇಚ್ಛೆ. ಇಬ್ಬರೂ ಪ್ರೀತಿ ವ್ಯಕ್ತಪಡಿಸುವ ಸಮಯವಿದು. ಆದ್ರೆ ಅನೇಕ ಮಹಿಳೆಯರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಂಭೋಗದ ವೇಳೆ ಕಿಸ್ ಮಾಡುವ ಅಗತ್ಯವಿಲ್ಲ ಎಂದು ಭಾವಿಸ್ತಾರೆ. ಹಾಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರೋದಿಲ್ಲ. ಶವದ ಜೊತೆ ಶಾರೀರಿಕ ಸಂಬಂಧ ಬೆಳೆಸಿದ ಅನುಭವ ಸಂಗಾತಿಗಾಗುತ್ತದೆ. ಅದು ಅವರ ಉತ್ತೇಜನವನ್ನು ಕಡಿಮೆ ಮಾಡಬಹುದು. ಇಲ್ಲವೆ ಅವರು ಸಂಗಾತಿ ಬಗ್ಗೆ ತಪ್ಪು ತಿಳಿಯಬಹುದು. ಹಾಗಾಗಿ ಹಾಸಿಗೆಯಲ್ಲಿ ಸುಮ್ಮನೆ ಇರುವ ಬದಲು ಪತಿಗೆ ಮುತ್ತಿಟ್ಟು ಅಥವಾ ಸೆಕ್ಸ್ ಟಾಕ್ ಮೂಲಕ ಅವರನ್ನು ಉತ್ತೇಜಿಸಬೇಕು.
ಇದನ್ನೂ ಓದಿ: ಗಂಡ ಮತ್ತೊಬ್ಬಳ ಸೆರಗು ಹಿಡಿದು ಹೋಗ್ಬಾರ್ದು ಅಂದ್ರೆ ಹೀಗೆ ಮಾಡಿ
ದೇಹದ ಬೇರೆ ಅಂಗಗಳ ಮೇಲೆ ನಿರ್ಲಕ್ಷ್ಯ: ಮಹಿಳೆ ಅಥವಾ ಪುರುಷನ ದೇಹದ ಅನೇಕ ಭಾಗಗಳು ಪ್ರಚೋದನೆ ಹೆಚ್ಚಿಸುತ್ತವೆ. ಆದ್ದರಿಂದ ಮಹಿಳೆಯರು ಲೈಂಗಿಕ ಸಮಯದಲ್ಲಿ ಸಂತೋಷವನ್ನು ದ್ವಿಗುಣಗೊಳಿಸಲು ಈ ಭಾಗಗಳ ಮೇಲೆ ಕೇಂದ್ರೀಕರಿಸಬೇಕು. ಸಂಭೋಗದ ಸಮಯದಲ್ಲಿ ಈ ಭಾಗಗಳನ್ನು ನಿರ್ಲಕ್ಷಿಸಬಾರದು. ನಿಮ್ಮ ಸಂಗಾತಿಯ ಮೊಣಕಾಲುಗಳು, ಮಣಿಕಟ್ಟುಗಳು, ಬೆನ್ನು ಮತ್ತು ಹೊಟ್ಟೆಯಂತಹ ದೇಹದ ಇತರ ಪ್ರಚೋದಕ ಭಾಗಗಳನ್ನು ಸ್ಪರ್ಶಿಸಬೇಕು. ಇದ್ರಿಂದ ಸಂಗಾತಿ ಹೆಚ್ಚು ಖುಷಿಯಾಗ್ತಾರೆ. ನೀರಸ ಸೆಕ್ಸ್ ಗಿಂತ ಇದು ಹೆಚ್ಚು ಸುಖವನ್ನು ಅವರಿಗೆ ನೀಡುತ್ತದೆ.
ತನ್ನ ಬಗ್ಗೆ ಆಲೋಚನೆ: ಕೆಲ ಮಹಿಳೆಯರು ಲೈಂಗಿಕ ಸಂಬಂಧ ಬೆಳೆಸುವ ವೇಳೆ ತಮ್ಮ ಬಗ್ಗೆ ಮಾತ್ರ ಆಲೋಚನೆ ಮಾಡ್ತಾರೆ. ತಮ್ಮ ಲೈಂಗಿಕ ಸುಖಕ್ಕೆ ಮಾತ್ರ ಪ್ರಾಮುಖ್ಯತೆ ನೀಡ್ತಾರೆ. ಸಂಗಾತಿಗೆ ಏನು ಬೇಕು ಎಂಬುದನ್ನು ಗಮನಿಸುವುದಿಲ್ಲ.
ಫಿಟ್ನೆಸ್ ಬಗ್ಗೆ ಹೆಚ್ಚು ಗಮನ: ಸದಾ ಸುಂದರ ನೋಟಕ್ಕೆ ಆದ್ಯತೆ ನೀಡುವ ಮಹಿಳೆ ಸೆಕ್ಸ್ ವೇಳೆಯೂ ಮನಸ್ಸು ಬದಲಿಸುವುದಿಲ್ಲ. ಆ ಸಮಯದಲ್ಲೂ ತನ್ನ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡ್ತಾಳೆ. ಈ ಸಂದರ್ಭದಲ್ಲಿ ತಾನು ಹೇಗೆ ಕಾಣ್ತಿದ್ದೀನಿ ಎಂಬುದನ್ನು ಆಕೆ ನೋಡ್ತಾಳೆ.
ಇದನ್ನೂ ಓದಿ: ಈ ವಿಷ್ಯವನ್ನು ಗರ್ಲ್‌ಫ್ರೆಂಡ್ ಹೇಳಿದರೂ ಪುರುಷರು ಒಪ್ಪೋಲ್ಲ ಬಿಡಿ!
ನಾಚಿಕೆ: ಅನೇಕ ಮಹಿಳೆಯರು ನಾಚಿಕೆಯಿಂದ ಸಂಭೋಗ ಸುಖ ಪಡೆಯುವುದಿಲ್ಲ. ಹಾಗೆ ಸಂಗಾತಿಗೂ ಸಂತೋಷ ನೀಡುವುದಿಲ್ಲ. ಸಂಗಾತಿ ಮುಂದೆ ಬೆತ್ತಲಾಗಲು ನಾಚಿಕೊಳ್ಳುವ ಮಹಿಳೆ ಬೆಡ್ ಶೀಟ್ ಸಹಾಯ ಪಡೆಯುತ್ತಾಳೆ. ಇದು ತಪ್ಪು.
ಮಧ್ಯದಲ್ಲೇ ಸೆಕ್ಸ್ ಗೆ ನಕಾರ: ಫೋರ್ಪ್ಲೇಗೆ ಸಹಕರಿಸುವ ಮಹಿಳೆ ಮಧ್ಯದಲ್ಲಿ ಸೆಕ್ಸ್ ನಿರಾಕರಿಸುತ್ತಾಳೆ. ಅವಳ ಮೂಡ್ ಅರೆ ಕ್ಷಣ ಸ್ವಿಂಗ್ ಆಗಿರುತ್ತದೆ. ಆದ್ರೆ ಇದು ಸಂಗಾತಿಗೆ ನೋವು ನೀಡುತ್ತದೆ. ಅವರ ಆಸೆಗೆ ತಣ್ಣೀರೆರಚಿದಂತಾಗುತ್ತದೆ.
ಸಂಗಾತಿ ನೋಡಿ ನಗು: ಮಹಿಳಾ ಸಂಗಾತಿ ಸಂತುಷ್ಟಗೊಳ್ಬೇಕೆಂಬ ಆಸೆ ಪತಿಗಿರುತ್ತದೆ. ಆದ್ರೆ ಬೇಗ ಸ್ಖಲನವಾದ್ರೆ ಅವರು ಅವಮಾನಕ್ಕೊಳಗಾಗ್ತಾರೆ. ಈ ವೇಳೆ ಪತ್ನಿ ನಕ್ಕಾಗ ಅವರಿಗೆ ಮತ್ತಷ್ಟು ಬೇಸರವಾಗುತ್ತದೆ.
ನಕಲಿ ಪರಾಕಾಷ್ಠೆ: ಅನೇಕ ಮಹಿಳೆಯರು ಪತಿಯ ಸಂತೋಷಕ್ಕಾಗಿ ನಕಲಿ ಪರಾಕಾಷ್ಠೆ ನಾಟಕವಾಡ್ತಾರೆ. ಇದು ತಪ್ಪು. ನೀವು ನಾಟಕವಾಡ್ತಿದ್ದರೆ ಪತಿ ಸುಧಾರಣೆ ಕಾಣುವುದು ಕಷ್ಟವಾಗುತ್ತದೆ.
