Dating Appನಲ್ಲಿ ಮ್ಯಾಚ್ ಆಗ್ತಿದೆ ಭಾವನ ಪ್ರೊಫೈಲ್, ಅಕ್ಕನಿಗೆ ಹೇಳೋದ್ ಹೇಗೆ ಅನ್ನೋದಿವಳ ಪ್ರಾಬ್ಲಂ!
ನಿಮ್ಮ ಪತಿ ದಾರಿ ತಪ್ಪಿದ್ದಾನೆ ಅಂತಾ ಪತ್ನಿ ಮುಂದೆ ಹೇಳೋದು ಸುಲಭದ ಮಾತಲ್ಲ. ಅದ್ರಲ್ಲೂ ನಮ್ಮ ಆಪ್ತರ ಪತಿ ಅಡ್ಡದಾರಿ ಹಿಡಿದಾಗ ಅದು ಬಿಸಿ ತುಪ್ಪವಾಗುತ್ತದೆ. ಹೇಳಿದ್ರೆ ಒಂದು ಕಷ್ಟ, ಹೇಳದೆ ಹೋದ್ರೆ ಇನ್ನೊಂದು ಕಷ್ಟ. ಅಮೆರಿಕಾ ಮಹಿಳೆ ಕೂಡ ಅದೇ ಗೊಂದಲದಲ್ಲಿದ್ದಾಳೆ.
ಸಂಗಾತಿ (Partner)ಯನ್ನು ಹುಡುಕಲು ಈಗ ಮನೆಯಿಂದ ಹೊರಗೆ ಹೋಗ್ಬೇಕಾಗಿಲ್ಲ. ವಿಶ್ವದಲ್ಲಿ ಅನೇಕ ಡೇಟಿಂಗ್ ಅಪ್ಲಿಕೇಶನ್ (Dating App) ಗಳಿವೆ. ಈ ಅಪ್ಲಿಕೇಶನ್ ಮೂಲಕ ನೀವು ಸಂಗಾತಿಯ ಆಯ್ಕೆ ಮಾಡಿಕೊಳ್ಳಬಹುದು. ಅನೇಕರು ಈ ಡೇಟಿಂಗ್ ಅಪ್ಲಿಕೇಶನ್ ಸಹಾಯದಿಂದಲೇ ದಾಂಪತ್ಯ (Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಬರಿ ಒಂಟಿಯಾಗಿರುವವರು ಮಾತ್ರ ಡೇಟಿಂಗ್ ಅಪ್ಲಿಕೇಶನ್ ನಲ್ಲಿ ಸಂಗಾತಿ ಹುಡುಕಾಟ ನಡೆಸುವುದಿಲ್ಲ. ವಿವಾಹಿತರು ಕೂಡ ಡೇಟಿಂಗ್ ಅಪ್ಲಿಕೇಶನ್ ಗಳಲ್ಲಿ ತಮ್ಮ ಪ್ರೊಫೈಲ್ (Profile) ಹಾಕ್ತಾರೆ. ಇದೇ ಕಾರಣಕ್ಕೆ ಅನೇಕ ದಾಂಪತ್ಯ ಮುರಿದು ಬಿದ್ದ ಉದಾಹರಣೆ (Example)ಗಳೂ ಇವೆ. ಡೇಟಿಂಗ್ ಅಪ್ಲಿಕೇಷನ್ ನಲ್ಲಿ ವ್ಯಕ್ತಿಯ ಫೋಟೋ (Photo) ಜೊತೆಗೆ ಆತನ ವೃತ್ತಿ, ಸ್ವಭಾವ, ಹವ್ಯಾಸ ಸೇರಿದಂತೆ ಎಲ್ಲ ಮಾಹಿತಿಯನ್ನು ನೀಡಬೇಕಾಗುತ್ತದೆ. ಅದು ಇನ್ನೊಬ್ಬರಿಗೆ ಹೊಂದಿಕೆಯಾದ್ರೆ ಅಲ್ಲಿಯೇ ನಿಮಗಿವರ ಪ್ರೊಫೈಲ್ ಮ್ಯಾಚ್ (Match) ಆಗ್ತಿದೆ ಎಂಬ ಸಂದೇಶ (Message) ಬರುತ್ತದೆ. ಆಸಕ್ತಿಯಿದ್ದರೆ ಅವರ ಪ್ರೊಫೈಲ್ ಪರಿಶೀಲನೆ ನಡೆಸಿ ನಂತ್ರ ಸಂಬಂಧ (Relation )ಮುಂದುವರೆಸುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಡೇಟಿಂಗ್ ಅಪ್ಲಿಕೇಶನ್ ನಲ್ಲಿ ತನ್ನ ಅಕೌಂಟ್ (Account )ತೆರೆದಿದ್ದ ಮಹಿಳೆಯೊಬ್ಬಳು ಈಗ ಚಿಂತೆಗೊಳಗಾಗಿದ್ದಾಳೆ. ಆಕೆಯ ಆತಂಕ, ಚಿಂತೆಗೆ ಕಾರಣವೇನು ಗೊತ್ತಾ?
ಡೇಟಿಂಗ್ ಅಪ್ಲಿಕೇಶನ್ ನೋಡಿ ದಂಗಾದ ಮಹಿಳೆ : ಸಾಮಾಜಿಕ ಜಾಲತಾಣದಲ್ಲಿ ಅಮೆರಿಕಾದ ಮಹಿಳೆಯೊಬ್ಬಳು ತನ್ನ ಕಥೆ ಹೇಳಿಕೊಂಡಿದ್ದಾಳೆ. ಮುಂದೆ ಏನ್ಮಾಡ್ಬೇಕೆಂದು ತಜ್ಞರ ಸಲಹೆ ಕೇಳಿದ್ದಾಳೆ. ಆಕೆ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಅಕೌಂಟ್ ಓಪನ್ ಮಾಡಿದ್ದಳಂತೆ. ಖಾತೆ ತೆರೆದ ನಂತ್ರ ಪ್ರೊಫೈಲ್ ಮ್ಯಾಚ್ ಆಗ್ತಿದೆ ಎಂಬ ಸಂದೇಶವೊಂದು ಬಂದಿದೆಯಂತೆ. ಅದನ್ನು ಪರಿಶೀಲಿಸಿದ ಮಹಿಳೆ ದಂಗಾಗಿದ್ದಾಳೆ. ಅದಕ್ಕೆ ಕಾರಣ ಮ್ಯಾಚ್ ಆಗ್ತಿದ್ದ ಪ್ರೊಫೈಲ್ ಮತ್ತ್ಯಾರದ್ದೂ ಅಲ್ಲ ಆಕೆಯ ಸೋದರ ಸಂಬಂಧಿ ಪತಿಯದಂತೆ.
ಮಹಿಳೆ ಹೇಳುವ ಪ್ರಕಾರ, ಕಸಿನ್ ಹಾಗೂ ಈಕೆ ಬೇರೆ ಬೇರೆ ದೇಶದಲ್ಲಿ ವಾಸವಾಗಿದ್ದಾರೆ. ಈವರೆಗೂ ಕಸಿನ್ ಪತಿಯನ್ನು ಮಹಿಳೆ ಭೇಟಿಯಾಗಿಲ್ಲವಂತೆ.
RELATIONSHIP TIPS: 40 ವರ್ಷದ ನಂತರ ಮಹಿಳೆ ಪುರುಷನಿಂದ ಬಯಸುವುದು ಇದನ್ನೇ !
ಆತಂಕದಲ್ಲಿದ್ದಾಳೆ ಮಹಿಳೆ : ಕಸಿನ್ ಗೆ ಒಂದು ಮಗುವಿದೆಯಂತೆ. ಕಸಿನ್ ಪತಿ ಡೇಟಿಂಗ್ ಅಪ್ಲಿಕೇಶನ್ ನಲ್ಲಿ ಪ್ರೊಫೈಲ್ ಹಾಕಿದ್ದಾನೆ ಎಂಬ ವಿಷ್ಯವನ್ನು ಕಸಿನ್ ಗೆ ಹೇಳುವುದು ಸುಲಭವಲ್ಲ. ಹೇಗೆ ಮಾತು ಆರಂಭಿಸುವುದು ಎಂಬ ಪ್ರಶ್ನೆ ಈಕೆಗೆ ಕಾಡ್ತಿದೆ. ಕಸಿನ್ ನನ್ನನ್ನು ನಮ್ಮದೆ ಇರಬಹುದು. ನನ್ನ ಮೇಲೆ ಕೋಪಗೊಳ್ಳಬಹುದು. ಆದ್ರೆ ನಾನು ಈ ವಿಷ್ಯವನ್ನು ಆಕೆಗೆ ಹೇಳುವ ಅನಿವಾರ್ಯತೆಯಿದೆ. ಆದ್ರೆ ಹೇಗೆ ಹೇಳುವುದು ಎಂಬುದು ತಿಳಿಯುತ್ತಿಲ್ಲ ಎನ್ನುತ್ತಾಳೆ. ಒಂದು ವೇಳೆ ನಾನು ಹೇಳಿದ್ರೆ ಅದನ್ನು ಆಕೆ ಹೇಗೆ ಸ್ವೀಕರಿಸುತ್ತಾಳೆ ಎಂಬುದು ಮುಖ್ಯವಾಗುತ್ತದೆ. ಅವರಿಬ್ಬರ ಸಂಬಂಧ ಹಾಳಾದ್ರೆ ನಾನು ಹೊಣೆಯಾಗ್ತೇನೆ ಎಂಬೆಲ್ಲ ಆತಂಕ ಆಕೆಯನ್ನು ಕಾಡ್ತಿದೆ. ಆತನ ಪ್ರೊಫೈಲ್ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದೇನೆ. ನನಗೆ ಗೊತ್ತಿಲ್ಲದ ಕಾರಣ ಆತನ ಭೇಟಿಗಾಗಿ ನನ್ನ ಟ್ರಿಪ್ ಕೂಡ ಕ್ಯಾನ್ಸಲ್ ಮಾಡಿದ್ದಾರೆ. ಆದ್ರೆ ನಂತ್ರ ಆತನ ಭೇಟಿಗೆ ಮುಂದಾಗಿಲ್ಲವೆನ್ನುತ್ತಾಳೆ ಮಹಿಳೆ.
Love Story: ರಷ್ಯಾ ಸುಂದರಿ-ಇಂದೋರ್ ಬಾಣಸಿಗ.. ಅದ್ಭುತ ಪ್ರೇಮ್ ಕಹಾನಿ
ತಜ್ಞರ ಸಲಹೆ : ಅನೇಕರು ಮಹಿಳೆಗೆ ಸಲಹೆ ನೀಡಿದ್ದಾರೆ. ಕಸಿನ್ ಗೆ ನೇರವಾಗಿ ಹೇಳುವ ಬದಲು ಇನ್ನೊಬ್ಬ ವ್ಯಕ್ತಿಯ ಮೂಲಕ ಹೇಳುವುದು ಒಳ್ಳೆಯದು ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಕರೆ ಮಾಡಿ ವಿಷ್ಯ ತಿಳಿಸುವ ಜೊತೆಗೆ ಸ್ಕ್ರೀನ್ ಶಾಟ್ ಕಳುಹಿಸುವಂತೆ ಹೇಳಿದ್ದಾರೆ. ಇನ್ನು ಕೆಲವರು ಆಕೆಯನ್ನು ಭೇಟಿಯಾಗಿ ಮಾತನಾಡುವ ಜೊತೆಗೆ ಫೋಟೋಗಳನ್ನು ತೋರಿಸಿದ್ರೆ ಆಕೆ ನಿಮ್ಮನ್ನು ನಂಬುತ್ತಾಳೆ. ಜೊತೆಗೆ ಅವರಿಬ್ಬರ ಮಧ್ಯೆ ದೊಡ್ಡ ಗಲಾಟೆಯಾಗದಂತೆ, ಆಕೆ ಶಾಕ್ ಗೆ ಒಳಗಾಗದಂತೆ ಸಂಭಾಳಿಸಬಹುದು ಎನ್ನುತ್ತಾರೆ.