Asianet Suvarna News Asianet Suvarna News

ಈ ಮಹಿಳೆ ಮಕ್ಕಳನ್ನು ಶಾಲೆಗೆ ಕಳಿಸೋದೆ ಇಲ್ಲ!

ಮಕ್ಕಳನ್ನು ಶಾಲೆಗೆ ಕಳಿಸ್ಬೇಕು, ಮಕ್ಕಳಿಗೆ ವಿದ್ಯಾಭ್ಯಾಸ ಹೇಳಿಕೊಡ್ಬೇಕು, ಮಕ್ಕಳನ್ನು ಶಾಲೆಗೆ ಕಳುಹಿಸಲು ಹಣ ಹೊಂದಿಸ್ಬೇಕು ಇದೆಲ್ಲ ಪಾಲಕರ ಸಮಸ್ಯೆ. ಆದ್ರೆ ಮನೆಯೇ ಶಾಲೆಯಾದ್ರೆ? ಎಷ್ಟೆಲ್ಲ ಅನುಕೂಲವಿದೆ ಎಂಬುದನ್ನು ಮಹಿಳೆ ಒಬ್ಬಳು ಹೇಳಿದ್ದಾಳೆ.  
 

Women Shares Benefits Of Unschooling Her Children
Author
First Published Aug 27, 2022, 3:01 PM IST

ಮಕ್ಕಳು ಹುಟ್ಟುತ್ತಿದ್ದಂತೆ ಪಾಲಕರ ಜವಾಬ್ದಾರಿ ಹೆಚ್ಚಾಗ್ತಿದೆ. ಮಕ್ಕಳು ಬೆಳೆಯುತ್ತಿದ್ದಂತೆ ಮಕ್ಕಳನ್ನು ಯಾವ ಶಾಲೆಗೆ ಕಳುಹಿಸಬೇಕೆಂಬ ಗೊಂದಲ ಮನೆ ಮಾಡುತ್ತದೆ. ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡ್ಬೇಕು ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸಬೇಕು ಎಂಬುದು ಪಾಲಕರಿಗೆ ಕಾಡುವ ದೊಡ್ಡ ಪ್ರಶ್ನೆ. ಮಕ್ಕಳ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ಹೊಂದಿಸಬೇಕಾಗುತ್ತದೆ. ಇದು ಸುಲಭದ ಕೆಲಸವಲ್ಲ. ಪಾಲಕರು ದುಡಿದ ಹಣವನ್ನೆಲ್ಲ ಮಕ್ಕಳ ಶಿಕ್ಷಣಕ್ಕೆ ತೆಗೆದಿಡ್ತಾರೆ. ಮಕ್ಕಳ ಉತ್ತಮ ಭವಿಷ್ಯಕ್ಕೆ, ಒಳ್ಳೆಯ ಉದ್ಯೋಗಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅನಿವಾರ್ಯವೆಂದು ಎಲ್ಲ ಪಾಲಕರು ಭಾವಿಸಿದ್ದಾರೆ. ಆದ್ರೆ ಮಹಿಳೆಯೊಬ್ಬಳಿಗೆ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವ ಯಾವುದೇ ಚಿಂತೆಯಿಲ್ಲ. ಆಕೆ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸೋದೇ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ತನ್ನ ಕಥೆಯನ್ನು ಹಂಚಿಕೊಂಡಿದ್ದಾಳೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಮನೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ಹೇಗೆ ಹೇಳಿಕೊಡ್ತೇನೆ ಎಂಬುದನ್ನು ಮಹಿಳೆ ಹೇಳಿದ್ದಾಳೆ. 

ಸಾಮಾಜಿಕ ಜಾಲತಾಣ (Social Media) ದಲ್ಲಿ ನಾನು ಅನೇಕ ಮಹಿಳೆ (Woman) ಯರನ್ನು ನೋಡಿದ್ದೇನೆ, ಮಹಿಳೆಯರು ಮಕ್ಕಳಿಗೆ ಬೇಕಾದ ಸಮವಸ್ತ್ರ (Uniform) ಹಾಗೂ ಶಾಲೆಗೆ ಬೇಕಾದ ವಸ್ತುಗಳನ್ನು ಖರೀದಿಸ್ತಾರೆ. ಪ್ರತಿ ವರ್ಷ ಪಾಲಕರು, ಮಕ್ಕಳಿಗಾಗಿ ಈ ವಸ್ತುಗಳನ್ನು ಖರೀದಿ ಮಾಡೋದನ್ನು ನಾನು ನೋಡಿದ್ರೆ ನನಗೆ ಖುಷಿಯಾಗುತ್ತದೆ. ಆದ್ರೆ ನಾನೆಂದೂ ಈ ಕೆಲಸ ಮಾಡಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ನನಗೆ ಮಕ್ಕಳನ್ನು ಶಾಲೆಗೆ ಬಿಡುವ ಕೆಲಸವಿಲ್ಲ. ಮಕ್ಕಳನ್ನು ಶಾಲೆ ಬಸ್ ಗೆ ಹತ್ತಿಸೋದಿಲ್ಲ. ಈ ಮಹಿಳೆಗೆ 9 ವರ್ಷ ಹಾಗೂ 6 ವರ್ಷವಾಗಿದೆ. ಆದ್ರೆ ಮಕ್ಕಳನ್ನು ಸ್ಕೂಲಿಗೆ ಕಳುಹಿಸುವುದಿಲ್ಲವೆಂದು ಮಹಿಳೆ ಹೇಳಿದ್ದಾಳೆ. 

Parenting Tips: ಸಮಯಕ್ಕೆ ಮೊದಲೇ ಯೌವನಕ್ಕೆ ಮಗ ಕಾಲಿಟ್ಟಿದ್ದಾನೆ ಎಂಬುದನ್ನು ಹೀಗೆ ಪತ್ತೆ ಹಚ್ಚಿ

ಬೇರೆ ಪಾಲಕರಿಗೆ ಹೋಲಿಕೆ ಮಾಡಿದ್ರೆ ನಮ್ಮ ಟೆನ್ಷನ್ ಕಡಿಮೆ ಎನ್ನುತ್ತಾಳೆ ಮಹಿಳೆ. ಶಾಲೆಗೆ ಹೋಗುವ ಬದಲು ಮಕ್ಕಳ ಜೊತೆ ನಾವು ಸುತ್ತಾಡ್ತೇವೆ. ಐಸ್ ಕ್ರೀಂ ತಿನ್ನುತ್ತೇವೆ. ಪಾರ್ಕ್ ನಲ್ಲಿ ಸುತ್ತಾಡ್ತೇವೆ. ಗ್ರಂಥಾಲಯಕ್ಕೆ ಹೋಗ್ತೇವೆ. ಅಲ್ಲದೆ ಮುಂದೆ ಬರುವ ತಿಂಗಳ ಬಗ್ಗೆ ಚರ್ಚೆ ನಡೆಸ್ತೇವೆ ಎಂದು ಮಹಿಳೆ ಹೇಳಿದ್ದಾಳೆ. 

ವರ್ಷಪೂರ್ತಿ ಓದುತ್ತಾರೆ ಈ ಮಕ್ಕಳು : ಮಹಿಳೆ ಹೇಳುವಂತೆ ಆಕೆ ಮಕ್ಕಳು ವರ್ಷಪೂರ್ತಿ ಕಲಿಯುತ್ತಾರಂತೆ. ಮನೆಯೇ ಶಾಲೆಯಾಗಿರುವ ಈ ಮಕ್ಕಳು ಪ್ರತಿ ದಿನ ಹಾಗೂ ವರ್ಷಪೂರ್ತಿ ಓದುತ್ತಾರೆ ಎನ್ನುತ್ತಾಳೆ ಮಹಿಳೆ. ಇದಲ್ಲದೆ ಮಕ್ಕಳನ್ನು ತೋಟಕ್ಕೆ ಕರೆದುಕೊಂಡು ಹೋಗ್ತಾಳಂತೆ. ಮಕ್ಕಳಿಗೆ ಬೆಳೆ ಬೆಳೆಯುವುದು ಹೇಗೆ ಎಂಬುದು ಗೊತ್ತಾಗ್ಲಿ ಎನ್ನುವ ಕಾರಣಕ್ಕೆ ಮಕ್ಕಳನ್ನು ತೋಟಕ್ಕೆ ಕರೆದುಕೊಂಡು ಹೋಗ್ತೇನೆ ಎನ್ನುತ್ತಾಳೆ ಮಹಿಳೆ. ಆರು ವರ್ಷದ ಮಗುವಿಗೆ ಪ್ರಕೃತಿ ಜೊತೆ ಆಟವಾಡುವುದು ಇಷ್ಟವಂತೆ. 9 ವರ್ಷದ ಮಗನಿಗೆ ವಿಡಿಯೋ ಗೇಮ್ ಇಷ್ಟವಂತೆ. ಆಟವಾಡ್ತಾ ಬೆಳೆ ಬೆಳೆಯುವ ಮಹಿಳೆ ಕುಟುಂಬ ನಂತ್ರ ಅದನ್ನು ಮಾರಾಟ ಮಾಡಿ ಜೀವನ ನಡೆಸುತ್ತದೆಯಂತೆ. ನಾವು ಅರ್ಥಶಾಸ್ತ್ರ, ರಾಜಕೀಯ ಮತ್ತು ಪರಿಸರ ವಿಜ್ಞಾನದ ಬಗ್ಗೆಯೂ ಮಾತನಾಡುತ್ತೇವೆ ಎನ್ನುತ್ತಾಳೆ ಮಹಿಳೆ. ಬೇಸಿಗೆ ದಿನವನ್ನು ನಾವು ತುಂಬಾ ಆರಾಮವಾಗಿ ಕಳೆಯುತ್ತೇವೆ ಎಂದ ಮಹಿಳೆ, ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂಬ ಆತುರವಿರೋದಿಲ್ಲ ಎನ್ನುತ್ತಾಳೆ. 

ನಿಮ್ಮದು ಹೆಲಿಕಾಪ್ಟರ್ ಪೇರೆಂಟಿಂಗಾ? ಚೆಕ್ ಮಾಡಿ!

ಹೋಮ್ ಸ್ಕೂಲಿಂಗ್ ಲಾಭವೇನು ?
ಮಕ್ಕಳ ಓದಿನಲ್ಲಿ ತಂದೆ – ತಾಯಿಯ ಕಂಟ್ರೋಲ್ ಇರುತ್ತದೆ. 
ಪಾಲಕರು ಹಾಗೂ ಮಕ್ಕಳ ಮಧ್ಯೆ ಸಂಬಂಧ ಗಟ್ಟಿಯಾಗಿರುತ್ತದೆ. ಒಂದು ನಿಯಮಿತ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾಗಿಲ್ಲ, ಓದಿಸಬೇಕಾಗಿಲ್ಲ. ಇಡೀ ದಿನ ಯಾವುದೇ ಸಮಯದಲ್ಲಿ ಬೇಕಾದ್ರೂ ಮಕ್ಕಳನ್ನು ಓದಿಸಬಹುದು. ಹೋಮ್ ಸ್ಕೂಲಿಂಗ್ ನಲ್ಲಿ ಮಕ್ಕಳ ಮೇಲೆ ಪಾಲಕರಿಗೆ ಹೆಚ್ಚಿನ ಗಮನವಿರುತ್ತದೆ. ಮಕ್ಕಳ ಪ್ರತಿಭೆ ಬಗ್ಗೆ ಪಾಲಕರಿಗೆ ತಿಳಿಯುತ್ತದೆ. ಮಕ್ಕಳು ತುಂಬಾ ದುರ್ಬಲರಾಗಿರುವ ವಿಷಯಗಳಲ್ಲಿ ಪೋಷಕರು ಹೆಚ್ಚು ಸಹಾಯ ಮಾಡಬಹುದು. ಮಕ್ಕಳಿಂದ ಪಾಲಕರು ಕಲಿತುಕೊಳ್ಳುವ ಅವಕಾಶ ಸಿಗುತ್ತದೆ. 
 

Follow Us:
Download App:
  • android
  • ios