ಮಾತೇ ಆಡದ ಪತಿಗಿಂತ ಹ್ಯಾಂಡ್ಸಮ್ ಮೈದುನ ಇಷ್ಟವಾಗ್ತಾನಂತೆ ಇವ್ಳಿಗೆ!

ಪ್ರೀತಿಗೆ ಪ್ರತಿಯಾಗಿ ಪ್ರೀತಿ ಸಿಕ್ಕಿದ್ರೆ ಮಾತ್ರ ದಾಂಪತ್ಯ ಗಟ್ಟಿಯಾಗಿರಲು ಸಾಧ್ಯ. ಇಲ್ಲವೆಂದ್ರೆ ದಾಂಪತ್ಯ ಛಿದ್ರವಾಗುತ್ತದೆ. ಇಬ್ಬರ ಮಧ್ಯೆ ಪ್ರೀತಿ ಇಲ್ಲದೆ ಹೋದ್ರೆ ದಾಂಪತ್ಯಕ್ಕೆ ಅರ್ಥವಿಲ್ಲ. ಈ ಮಹಿಳೆಗೆ ಮೈದುನನ ಮೇಲೆ ಲವ್ ಆಗಲು ಪತಿಯ ನಿರುತ್ಸಾಹವೇ ಕಾರಣವಾಗಿದೆ. 
 

Women Love With Brother In Law

ಪತಿ ಪ್ರೀತಿ ಮಾಡ್ತಿಲ್ಲ, ಕಾಳಜಿ ತೋರುತ್ತಿಲ್ಲ, ಹತ್ತಿರ ಬರ್ತಿಲ್ಲ, ಸುತ್ತಾಡಿಸೋದಿಲ್ಲ, ಪತ್ನಿ ಮೇಲೆ ಸ್ವಲ್ಪವೂ ಆಸಕ್ತಿಯೇ ಇಲ್ಲ ಎಂದಾಗ ದೃಷ್ಟಿ ಬೇರೆ ಕಡೆ ಹೋಗೋದು ಮಾಮೂಲಿ. ಮೈಮೇಲೆ ಬಿದ್ದು ಮಾತನಾಡಿಸಿದ್ರೂ ಪತಿ ತಿರುಗಿ ನೋಡ್ತಿಲ್ಲ ಎಂದಾಗ ಪತ್ನಿಯಾದವಳು ಸಂತೋಷಕ್ಕಾಗಿ ಬೇರೆ ದಾರಿ ನೋಡಿಕೊಳ್ತಾಳೆ. ಈ ಮಹಿಳೆ ಪರಿಸ್ಥಿತಿ ಕೂಡ ಅದೇ ಆಗಿದೆ. ಕರ್ವಾ ಚೌತ್ ದಿನ ಆಕೆ ಪ್ರೀತಿ ಮಾಡದ ಪತಿ ಬದಲು, ಆಕರ್ಷಣೆಗೊಳಗಾದ ಮೈದುನನಿಗಾಗಿ ವೃತ ಮಾಡಿದ್ದಳಂತೆ. ಆದ್ರೆ ಈ ಬಗ್ಗೆ ಸ್ವಲ್ಪವೂ ಬೇಸರವಿಲ್ಲ ಎನ್ನುತ್ತಾಳೆ ಆಕೆ. 

ಪ್ರೀತಿ (Love) ಇಲ್ಲದೆ ಮೇಲೆ.. : ಆಕೆಗೆ ಮದುವೆ (Marriage) ಯಾಗಿದೆ ಅಷ್ಟೆ. ಆದ್ರೆ ಪತಿ ಮೇಲೆ ಸ್ವಲ್ಪವೂ ಪ್ರೀತಿ ಇಲ್ಲ. ಆಕೆ ಪತಿ ಆಕೆಯನ್ನು ಎಂದೂ ಪ್ರೀತಿಸಿಲ್ಲ. ತನ್ನದೇ ಪ್ರಪಂಚದಲ್ಲಿ ಮುಳುಗಿರುವ ಪತಿ ಮೇಲೆ ಈಕೆಗೆ ಆಕರ್ಷಣೆ ಕಡಿಮೆಯಾಗಿದೆ. ಪತಿಗೆ ಈ ಮದುವೆ ಇಷ್ಟವಿರಲಿಲ್ಲವಂತೆ. ನನಗೂ ಇಷ್ಟವಿರಲಿಲ್ಲ. ಆದ್ರೆ ತಂದೆ – ತಾಯಿ ಹೇಳಿಕೆ ಮೇರೆಗೆ ಅರೇಂಜ್ ಮ್ಯಾರೇಜ್ ಆಗಿದ್ದೆ ಎನ್ನುತ್ತಾಳೆ ಮಹಿಳೆ. ಮದುವೆಯಾದ್ಮೇಲೆ ನನ್ನಲ್ಲಿ ಬದಲಾವಣೆ ತರಲು ಪ್ರಯತ್ನಿಸಿದೆ. ಆದ್ರೆ ಪತಿ ವರ್ತನೆ ನನ್ನನ್ನು ಸಂಪೂರ್ಣ ಬದಲಿಸಿತು ಎನ್ನುತ್ತಾಳೆ. 

ಮದ್ವೆಯಾಗಿದೆ ಓಕೆ, ಲೈಂಗಿಕ ಜೀವನದಲ್ಲಿ ಎಷ್ಟು ಆಕ್ಟಿವ್‌ ಆಗಿದ್ದೀರಾ?

ಕೇವಲ ಹೆಸರಿಗೆ ಮಾತ್ರ ದಂಪತಿ. ಇಬ್ಬರ ಮಧ್ಯೆ ಶಾರೀರಿಕ ಸಂಬಂಧ (Physical Relationship ) ಬೆಳೆಯೋದು ಕೂಡ ಅಪರೂಪ. ಪತಿ ತುಂಬಾ ಆಲಸಿ. ಕೆಲಸಕ್ಕಾಗಿ ಕಚೇರಿಗೆ ಹೋಗುವ ಅಗತ್ಯ ಆತನಿಗಿಲ್ಲ. ಹೊರಗೆ ಸುತ್ತಾಡಲು ಹೋಗುವ ಜಾಯಮಾನ ಆತನದಲ್ಲ. ಹಾಗಾಗಿ ಇಡೀ ದಿನ ರೂಮ್ ನಲ್ಲಿ ಕಂಪ್ಯೂಟರ್ ಗೆ ಅಂಟಿಕೊಂಡಿರುತ್ತಾನೆ ಪತಿ. ಇದ್ರಿಂದ ಮತ್ತಷ್ಟು ಬೇಸರವಾಗುತ್ತೆ ಎನ್ನುತ್ತಾಳೆ ಮಹಿಳೆ. ಹನಿಮೂನ್ ಬಿಟ್ಟರೆ ಇಬ್ಬರು ಒಟ್ಟಿಗೆ ಎಲ್ಲಿಗೂ ಹೋಗಿಲ್ಲವಂತೆ. ಎಲ್ಲರ ಜೊತೆ ಊಟಕ್ಕೂ ಬರದ ಪತಿ, ಸದಾ ಆರಾಮವಾಗಿರ್ತಾನಂತೆ. ಈ ಬಗ್ಗೆ ಪತಿ ಜೊತೆ ಅನೇಕ ಬಾರಿ ಮಾತನಾಡಿದ್ದಾಳಂತೆ. ಹೊರಗೆ ಸುತ್ತಾಡಲು ಹೋಗೋಣ ಎಂದು ಬೇಡಿಕೊಂಡಿದ್ದಾಳಂತೆ. ಆದ್ರೆ ಪತಿ ಯಾವುದಕ್ಕೂ ರಾಜಿಯಾಗಿಲ್ಲ ಎನ್ನುತ್ತಾಳೆ ಮಹಿಳೆ.

ಮೈದುನನ ಮೇಲೆ ಆಕರ್ಷಣೆ : ನನ್ನ ಕಥೆಯಲ್ಲಿ ಸಣ್ಣ ಟ್ವಿಸ್ಟ್ ಏನು ಅಂದ್ರೆ ನನಗೆ ನನ್ನ ಪತಿಗಿಂತ ಮೈದುನನ ಮೇಲೆ ಪ್ರೀತಿ ಚಿಗುರಿಗೆ ಎನ್ನುತ್ತಾಳೆ ಮಹಿಳೆ. ಆಕೆ, ಮದುವೆಯಾಗುವ ಹುಡುಗ ಹೇಗಿರಬೇಕು ಅಂದುಕೊಂಡಿದ್ದಳೋ ಹಾಗೆಯೇ ಇದ್ದಾನಂತೆ ಮೈದುನ. ಸದಾ ನಗ್ತಾ, ಮಾತನಾಡ್ತಾ ಇರುವ ಮೈದುನ, ಸ್ನೇಹಿತರ ಜೊತೆ ಸುತ್ತಾಡಲು ಹೋಗ್ತಾನಂತೆ. ಅನೇಕ ಒಳ್ಳೋಳ್ಳೆ ಹವ್ಯಾಸವಿರುವ ಆತ ನೋಡಲು ತುಂಬಾ ಸ್ಮಾರ್ಟ್ ಎನ್ನುತ್ತಾಳೆ ಆಕೆ. ನನ್ನ ಜೊತೆ ಸಹಜವಾಗಿ ಮಾತನಾಡುವ ಮೈದುನ, ನನ್ನನ್ನು ಹೊರಗೆ ಕರೆದುಕೊಂಡು ಹೋಗುವಂತೆ ಅನೇಕ ಬಾರಿ ಅಣ್ಣನಿಗೆ ಹೇಳಿದ್ದಾನಂತೆ. ಆದ್ರೆ ಏನೂ ಪ್ರಯೋಜನವಾಗಿಲ್ಲ ಎನ್ನುತ್ತಾಳೆ ಮಹಿಳೆ.

ಮೈದುನನ ಹೆಸರಿನಲ್ಲಿ ಕರ್ವಾ ಚೌತ್ : ಮೈದುನನ ಮೇಲೆ ಕಣ್ಣು ಹಾಕುವುದು ತಪ್ಪು. ಈ ವಿಷ್ಯ ನನಗೆ ತಿಳಿದಿದೆ. ಪತಿ ಪ್ರೀತಿ ತೋರಿಸ್ತಿಲ್ಲ ಎಂದ ಮೇಲೆ ನನ್ನ ಮನಸ್ಸು ಬೇರೆಡೆ ಹರಿಯೋದು ಸಹಜ. ನನಗೆ ಮೈದುನನ ಮೇಲೆ ಪ್ರೀತಿ ಹುಟ್ಟಿದೆ. ಇದನ್ನು ನಾನು ಯಾವ ನಾಚಿಕೆಯಿಲ್ಲದೆ ಒಪ್ಪಿಕೊಳ್ತೇನೆ ಎನ್ನುತ್ತಾಳೆ ಮಹಿಳೆ. ಆತನಿಗಾಗಿಯೇ ನಾನು ಕರ್ವಾ ಚೌತ್ ವೃತ ಮಾಡಿದ್ದೆ. ಯಾರಿಗೂ ತಿಳಿಯದೆ ಆತನ ಮುಖ ನೋಡಿ ನಂತ್ರ ಆಹಾರ ಸೇವನೆ ಮಾಡಿದೆ.

ದೈಹಿಕ ಸಂಪರ್ಕ ಮಾಡುವಾಗಲ್ಲೆಲ್ಲಾ ಅಲರ್ಜಿ, ಅರೆ ಇದೆಂಥಾ ವಿಚಿತ್ರ ಕಾಯಿಲೆ

ಮೈದುನನಿಗಾಗಿ ನಾನು ಏನು ಮಾಡಲೂ ಸಿದ್ಧ. ಈ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುತ್ತೇನೆ. ಪತಿಗೆ ವಿಚ್ಛೇದನ ನೀಡಲು ನಾನು ಸಿದ್ಧನಾಗಿದ್ದೇನೆ. ನನ್ನ ಆಸೆಗಳನ್ನು ಪೂರೈಸಲು ನಾನು ಒಂದು ಮಾರ್ಗವನ್ನು ಕಂಡುಹಿಡಿಯಬೇಕಿದೆ ಎನ್ನುತ್ತಾಳೆ ಮಹಿಳೆ. 

Latest Videos
Follow Us:
Download App:
  • android
  • ios