Asianet Suvarna News Asianet Suvarna News

ಪ್ರವಾಸಕ್ಕೆಂದು ಹೋದ ಮಹಿಳೆ ಲೈಫ್ ಗಾರ್ಡ್‌ ಜತೆ ಪ್ರೀತಿಯಲ್ಲಿ ಬಿದ್ದ ಕಥೆ

ಮಹಿಳೆಯೊಬ್ಬರು ತಮ್ಮ ಪ್ರೇಮಕಥೆಯನ್ನು ಹಂಚಿಕೊಂಡಿದ್ದಾರೆ. ರಜೆಗೆಂದು ಹೋದಾಗ  ತಾವು ಲೈಫ್‌ಗಾರ್ಡ್‌ರೊಬ್ಬರನ್ನು ಹೇಗೆ ಪ್ರೀತಿಸಿದೆ ಎಂದು ಮಹಿಳೆ ಹೇಳಿದ್ದಾಳೆ. ಈ ವ್ಯಕ್ತಿ ವೃತ್ತಿಯಲ್ಲಿ ಲೈಫ್‌ ಗಾರ್ಡ್‌ ಆಗಿದ್ದಾರೆ. ಮಹಿಳೆ ಟಿಕ್‌ಟಾಕ್‌ನಲ್ಲಿ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ತನ್ನ ಪ್ರೇಮಕಥೆಯನ್ನು ಹೇಳಿಕೊಂಡಿದ್ದಾರೆ.

Women Falls in Love with Life guard while on trip shares story on Tiktok mnj
Author
Bengaluru, First Published Aug 8, 2022, 7:52 PM IST

ಪ್ರೀತಿಯೆಂಬುದು ಒಂದು ಅತ್ಯದ್ಭುತ ಅನುಭವ. ಪ್ರೀತಿಯಲ್ಲಿರುವಾಗ ಸುತ್ತಲಿನ ಪ್ರಪಂಚ ತುಂಬಾ ಸುಂದರವಾಗಿ ಕಾಣುತ್ತದೆ. ಒಬ್ಬ ವ್ಯಕ್ತಿಯು ಏನು ಮಾಡಬೇಕೋ, ಅವನು ಏನು ಬಯಸುತ್ತಾನೋ ಅದನ್ನು ಅವನು ಬಯಸಿ ಅದನ್ನು ಪಡೆಯಬೇಕು. ಮಹಿಳೆಯೊಬ್ಬಳು ರಜೆಗೆಂದು ತೆರಳಿದ್ದರು. ಆಕೆ ಕ್ಯಾನರಿ ದ್ವೀಪಗಳಲ್ಲಿ ತನ್ನ ಕುಟುಂಬದೊಂದಿಗೆ ಆಫ್ರಿಕಾಕ್ಕೆ ಹೋಗಿದ್ದಳು. ಇಲ್ಲಿಯೇ ಒಬ್ಬ ಜೀವರಕ್ಷಕನಿಗೆ (Life Guard) ಮಹಿಳೆಯನ್ನು ನೋಡಿ ಪ್ರೀತಿ ಹುಟ್ಟಿಕೊಂಡಿತ್ತು. ಈ ಪ್ರೇಮಕಥೆಯನ್ನು ಮಹಿಳೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ಟಿಕ್‌ಟಾಕ್‌ನಲ್ಲಿ ತಮ್ಮ ಕಥೆಯನ್ನು ಮಹಿಳೆ ಹಂಚಿಕೊಂಡಿದ್ದಾಳೆ. 

ಈ ಮಹಿಳೆಯ ಹೆಸರು ಕ್ಲೋಯ್ ಕಿಂಗ್. ಅವಳು ಸ್ಪೇನಿನ ಲ್ಯಾಂಗರೋಟ್‌ನಲ್ಲಿ (ಕ್ಯಾನರಿ ದ್ವೀಪಗಳು) ತನ್ನ ಕುಟುಂಬದೊಂದಿಗೆ ವಿಹಾರ ಮಾಡುತ್ತಿದ್ದಳು. ಆಗ ಅವಳ ಜೀವನದಲ್ಲಿ ಒಬ್ಬ ಮುದ್ದಾದ ಗೆಳೆಯ ಸಿಕ್ಕಿದ್ದ. ಒಂದು ವೇಳೆ ನೀವೂ ಕುಟುಂಬದೊಂದಿಗೆ ರಜೆಯ ಮೇಲೆ ಬಂದಿದ್ದರೆ ನೀವು ಲೈಫ್‌ಗಾರ್ಡ್‌ನೊಂದಿಗೆ ಪ್ರೀತಿಯಲ್ಲಿ ಬೀಳುತ್ತಿರಿ ಎಂದು ಮಹಿಳೆ ಹೇಳಿದ್ದಾರೆ. ಕೊಳದ ಪಕ್ಕದಲ್ಲಿ 'ಸನ್‌ಬಾತ್' ತೆಗೆದುಕೊಳ್ಳುತ್ತಿದ್ದಾಗ  ಲೈಫ್‌ಗಾರ್ಡ್ ಅವಳನ್ನು ನೋಡಿದ್ದು ಪ್ರಿತಿಯಲ್ಲಿ ಬಿದ್ದಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ. 

ಈ ವಿಡಿಯೋದಲ್ಲಿ ಮಹಿಳೆ ಲೈಫ್‌ಗಾರ್ಡ್ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ತಮ್ಮ ಸಂಗಾತಿಯೊಂದಿಗೆ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ದಂಪತಿಗಳು ಪರಸ್ಪರ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇವರಿಬ್ಬರ ಪ್ರೇಮಕಥೆಯ ಈ ವಿಡಿಯೋ ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ. 

ಪ್ರೀತಿ ಇರ್ಬೇಕು, ಕಾಳಜಿ ಇರ್ಬೇಕು ನಿಜ. ಆದ್ರೆ ಅತಿಯಾದ್ರೆ ಏನ್ ಚಂದ ನೀವೇ ಹೇಳಿ?

ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಕಮೆಂಟ್ಸ್‌ ಬಂದಿವೆ. ಕೆಲವರಿಗೆ ಕ್ಲೋಯ್ ಕಿಂಗ್ ಪ್ರೇಮಕಥೆಯನ್ನು ಅರಗಿಸಿಕೊಳ್ಳಲಾಗಲಿಲ್ಲ. ಅದೇ ಸಮಯದಲ್ಲಿ, ಕೆಲವರು ಈ ಲವ್ ಸ್ಟೋರಿಯನ್ನು ತುಂಬಾ ಇಷ್ಟಪಟ್ಟಿದ್ದಾರೆ ಮತ್ತ ಪ್ರೇಮಕಥೆಯನ್ನು ಕೊಂಡಾಡಿದ್ದಾರೆ. ಈ ಪ್ರೇಮಕಥೆಯ ಬಗ್ಗೆ ನೀಮ್ಮ ಅಭಿಪ್ರಾಯವೇನು? 

Follow Us:
Download App:
  • android
  • ios