ನಾ ಮದುವೆಯಾಗಿದ್ದು ಮಿಲಿಯನೇರ್‌ನನ್ನು, ನೀವು ಬಿಲಿಯನೇರ್‌ನನ್ನೇ ಮದ್ವೆಯಾಗಿ ಅಂತಂದ್ಲು ಈ ತಾಯಿ

ಹೆಣ್ಣುಮಕ್ಕಳು ಸುಖವಾಗಿರಬೇಕು ಎಂದು ಎಲ್ಲ ತಾಯಿ ತಂದೆಯರೂ ಬಯಸುತ್ತಾರೆ. ಆರ್ಥಿಕವಾಗಿ ಸಾಕಷ್ಟು ಸದೃಢವಾಗಿರುವ ವರನನ್ನೇ ಹುಡುಕುವುದು ಸಾಮಾನ್ಯ. ಇದನ್ನೇ ಬ್ರಿಟಿಷ್ ಇನ್  ಫ್ಲುಯೆನ್ಸ್ ಒಬ್ಬರು ತಮ್ಮ ಹೆಣ್ಣುಮಕ್ಕಳಿಗೂ ಕಿವಿಮಾತು ಹೇಳಿದ್ದಾರೆ. ಅವರಿಗಿಂತ ಹೆಚ್ಚು ಶ್ರೀಮಂತರನ್ನು ಮದುವೆಯಾಗುವಂತೆ ಸಲಹೆ ನೀಡಿದ್ದಾರೆ. 

Woman suggested her daughters to marry billionaire sum

ಪ್ರತಿ ತಂದೆತಾಯಿಯರೂ ತಮ್ಮ ಹೆಣ್ಣುಮಕ್ಕಳು ಉತ್ತಮ ಸಂಗಾತಿಯನ್ನು ಹೊಂದಿ ಸುಖವಾಗಿರಲಿ ಎಂದು ಬಯಸುತ್ತಾರೆ. ಇಲ್ಲಿ ಸುಖಕ್ಕೆ ಹಲವಾರು ಅರ್ಥ. ಕೆಲವರು ವಿದ್ಯೆ, ಸದ್ಗುಣಕ್ಕೆ ಬೆಲೆ ನೀಡಿದರೆ, ಕೆಲವರು ಅವರ ಮನೆತನ, ಹಣಕಾಸು ಮುಂತಾದವುಗಳನ್ನು ಹೆಚ್ಚಾಗಿ ಗಮನಿಸುತ್ತಾರೆ. ಈಗಂತೂ ಬಹುತೇಕ ಎಲ್ಲ ಸಮುದಾಯಗಳಲ್ಲೂ ಹೆಣ್ಣುಮಕ್ಕಳಿಗೆ ಬೇಡಿಕೆ ಹೆಚ್ಚಿರುವುದರಿಂದ ಪಾಲಕರ ಬೇಡಿಕೆಗಳೂ ಅದಕ್ಕೆ ತಕ್ಕಂತೆ ಹೆಚ್ಚುತ್ತಿವೆ. ಮದುವೆಯಾಗುವ ಹುಡುಗ ಮನೆಯಲ್ಲಿ ಒಬ್ಬನೇ ಮಗನಾಗಿರಬೇಕು, ಒಂದೊಮ್ಮೆ ಅಣ್ಣ-ತಮ್ಮಂದಿರು ಇದ್ದರೂ ಅವರು ದೂರವಿರಬೇಕು, ಆಸ್ತಿಯಲ್ಲಿ ಎಷ್ಟು, ಹೇಗೆ ಪಾಲು ದೊರೆಯುತ್ತದೆ, ಹುಡುಗನ ವಿದ್ಯಾರ್ಹತೆ, ಉದ್ಯೋಗ, ಸಿಟಿಯಲ್ಲಿ ಮನೆ, ಕಾರು ಹೊಂದಿರಬೇಕು ಇತ್ಯಾದಿ ಬೇಡಿಕೆಗಳು ಸಾಮಾನ್ಯವಾಗಿವೆ. ಮಗಳು ಹಣಕಾಸಿನ ತೊಂದರೆಯಿಲ್ಲದೆ ಸುಖವಾಗಿರಲಿ ಎನ್ನುವುದೊಂದೇ ಇಲ್ಲಿನ ಆಶಯವಾಗಿದ್ದರೂ ಹಣದ ಕುರಿತ ಅತಿಯಾದ ವ್ಯಾಮೋಹವೂ ಇಲ್ಲಿ ಕಂಡುಬರುತ್ತದೆ ಎನ್ನುವುದು ಸುಳ್ಳಲ್ಲ. ಅವರವರ ದೃಷ್ಟಿಕೋನ ಅದು. ಹಾಗೆಯೇ, ಬ್ರಿಟಿಷ್ ಇನ್ ಫ್ಲುಯೆನ್ಸರ್ ಆಗಿರುವ ಮಹಿಳೆಯೊಬ್ಬರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡಿರುವುದು ಈಗ ವೈರಲ್ ಆಗಿದೆ. 

ಅದ್ದೂರಿ, ಐಷಾರಾಮಿ (Luxury) ಜೀವನಶೈಲಿಗೆ (Lifestyle) ಹೆಸರಾಗಿರುವ ಬ್ರಿಟಿಷ್ ಇನ್ ಫ್ಲುಯೆನ್ಸರ್ (British Influencer) ಸೌದಿ ಅಲ್ ನಡಕ್ ಹೆಸರುವಾಸಿ. ಸೋಷಿಯಲ್ ಮೀಡಿಯಾದಲ್ಲಿ (Social Media) ಸದಾಕಾಲ ತನ್ನ ಐಶ್ವರ್ಯ, ಸಂಪತ್ತನ್ನು (Wealth) ಪ್ರದರ್ಶಿಸುತ್ತಲೇ ಇರುತ್ತಾಳೆ. ದುಬೈನಲ್ಲಿ ನೆಲೆಸಿರುವ ಈಕೆಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇವರಿಬ್ಬರ ಭವಿಷ್ಯ ಚೆನ್ನಾಗಿರಬೇಕು ಎಂದಾದರೆ, ತನ್ನಂತೆ ಸುಭದ್ರವಾಗಿರಬೇಕು (Secure) ಎಂದಾದರೆ ಏನು ಮಾಡಬೇಕು ಎಂದು ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. 

ನಿಮಗಿಂತ ಶ್ರೀಮಂತರನ್ನ ಮದುವೆಯಾಗಿ
ಇಬ್ಬರು ಹೆಣ್ಣುಮಕ್ಕಳಿಗೆ ತಕ್ಕ ವರ (Groom) ಯಾರು ಎನ್ನುವುದರ ಕುರಿತು ಆಕೆ ತನ್ನ ವಿಚಾರ ಹೇಳಿದ್ದಾಳೆ. ತನ್ನ ಮಕ್ಕಳು ತಾವೇ ತಮಗೆ ಸೂಕ್ತನಾದ ವರ ಹುಡುಕಿಕೊಳ್ಳಬೇಕು, ಅಲ್ಲದೆ ತಮಗಿಂತ ಹೆಚ್ಚು ಶ್ರೀಮಂತನಾಗಿರುವ ವರನನ್ನು ಹುಡುಕಿಕೊಳ್ಳುವುದು ಭವಿಷ್ಯದ (Future) ಸುರಕ್ಷತೆ ದೃಷ್ಟಿಯಿಂದ ಮುಖ್ಯ ಎಂದು ಹೇಳಿದ್ದಾಳೆ. ಬಿಲಿಯನೇರ್ ಅನ್ನು ಮದುವೆಯಾಗುವುದರಿಂದ ಭವಿಷ್ಯದಲ್ಲಿ ಹಣಕಾಸಿಗೆ ಸಂಬಂಧಿಸಿ ಅನಿಶ್ಚಿತತೆ ಎದುರಿಸಬೇಕಾಗುವುದಿಲ್ಲ ಎನ್ನುವುದು ಆಕೆಯ ಅಭಿಪ್ರಾಯ. 

ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಅತ್ತೆ ಹೆಸರಾಂತ ಭಾರತೀಯ ವಿಜ್ಞಾನಿ!

ಸಂಪತ್ತನ್ನು ಹೆಚ್ಚಿಸುವ ಕಲೆ
ಈಕೆ ಗಂಡು ಮಕ್ಕಳನ್ನೂ ಹೊಂದಿದ್ದು, ಅವರಿಗೂ ಸಲಹೆ (Suggestion) ನೀಡಿದ್ದಾಳೆ. ತನ್ನ ತಂದೆಯಂತೆ ಅವರು ಸಂಪತ್ತನ್ನು ಹೆಚ್ಚಿಸುವ ಕಲೆಯನ್ನು ಕಲಿತುಕೊಳ್ಳಬೇಕು ಹಾಗೂ ಅವರು ಐಷಾರಾಮಿ ಜೀವನಶೈಲಿಯನ್ನು ಎಂದಿಗೂ ಮುಂದುವರಿಸಬೇಕು ಎಂದು ಹೇಳಿದ್ದಾರೆ. ಅಲ್ ನಡಕ್ ಗೆ ಈಗ ಕೇವಲ 26 ವರ್ಷವಾಗಿದ್ದು, ಪುಟ್ಟ ಮಕ್ಕಳಿದ್ದಾರೆ. ಈಕೆ ಜಮಾಲ್ ಅಲ್ ನಡಕ್ ಎಂಬ ಮಿಲಿಯನೇರ್ ಅನ್ನು ಮದುವೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ತನ್ನ ಐಷಾರಾಮಿ (Extravagant) ಜೀವನದ ಕುರಿತು ಸದಾಕಾಲ ಸುದ್ದಿಯಲ್ಲಿರುತ್ತಾಳೆ. 

ಮಕ್ಕಳ ಬಗ್ಗೆ ಕಾಳಜಿ ಇಲ್ಲಾಂದ್ರೆ ಮಾಡ್ಕೋಬೇಡಿ
ದಾಂಪತ್ಯದ ಜವಾಬ್ದಾರಿಯ ಕುರಿತೂ ಸಹ ಈಕೆ ತನ್ನ ದೃಷ್ಟಿಕೋನ ಬಹಿರಂಗಪಡಿಸಿದ್ದಾಳೆ. ದಂಪತಿ ಮಕ್ಕಳ ಜವಾಬ್ದಾರಿ ಹೊರಲು ಸಿದ್ಧವಿಲ್ಲದ ಜೋಡಿ ಮಕ್ಕಳನ್ನೇ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾಳೆ. ಮಕ್ಕಳ ಬಗ್ಗೆ ಕಾಳಜಿ (Care) ಹೊಂದಿಲ್ಲದವರು ಮಕ್ಕಳನ್ನು ಮಾಡಿಕೊಂಡು ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾಳೆ. 

ಶೀನಾ ರಾಣಿ : ಅಗ್ನಿ-5 ಯಶಸ್ಸಿನ ಹಿಂದೆ ಇರುವ ನಾರಿಶಕ್ತಿ ಇವರು

ಲಕ್ಸುರಿ ಮೋಜು
ಲಕ್ಸುರಿ ಮಾಲ್ ಗಳಲ್ಲಿ ಶಾಪಿಂಗ್ ಮಾಡುವುದು ಈಕೆಯ ಕ್ರೇಜ್. ಕೆಲವು ದಿನಗಳ ಹಿಂದೆ ಟಿಕ್ ಟಾಕ್ ನಲ್ಲಿ ಈಕೆ ಪೋಸ್ಟ್ ಮಾಡಿದ್ದ ವೀಡಿಯೋದಲ್ಲಿ, ಒಂದು ವಾರದಲ್ಲಿ ತನ್ನ ಪತಿ (Husband) ತನಗಾಗಿ 12 ಕೋಟಿ ರೂಪಾಯಿ ವೆಚ್ಚ ಮಾಡಿರುವುದನ್ನು ತಿಳಿಸಿದ್ದಳು. ಹಿಂದೊಮ್ಮೆ ಈಕೆ ಸುಮ್ಮನೆ 8.3 ಕೋಟಿ ರೂ.ಮೊತ್ತದ ಆಸ್ತಿಯನ್ನು ಖರೀದಿಸಿದ್ದಾಗಿ ಹೇಳಿದ್ದಳು. ಜತೆಗೆ, ತಮ್ಮ ಮನೆಯ ಬೆಕ್ಕು ಸಹ ಹೇಗೆ ರಾಯಲ್ ಟ್ರೀಟ್ಮೆಂಟ್ ಪಡೆಯುತ್ತದೆ ಎನ್ನುವುದನ್ನು ಬಹಿರಂಗಪಡಿಸಿದ್ದಳು. 
 

Latest Videos
Follow Us:
Download App:
  • android
  • ios