ಎಂಟು ಮಕ್ಕಳಾದ್ಮೇಲೆ ಗೊತ್ತಾಯ್ತು ಪತಿಯ ಮಹಾ ಮೋಸ
ವಯಸ್ಸಿನ ಅಂತರ ಹೆಚ್ಚಿದ್ರೂ ಆಕೆ ಆತನನ್ನು ಮೆಚ್ಚಿ ಮದುವೆ ಆಗಿದ್ದಳು. ಒಂದಲ್ಲ ಎರಡಲ್ಲ ಎಂಟು ಮಕ್ಕಳನ್ನು ಸಂಭಾಳಿಸ್ತಾ ಜೀವನ ನಡೆಸ್ತಿದ್ದಳು. ಆದ್ರೆ ಆಕೆ ಅತಿಯಾಗಿ ನಂಬಿದ್ದ ಪತಿಯೇ ಕೈಕೊಟ್ಟಿದ್ದಾನೆ. ಅವನ ಗುಟ್ಟು ಬಯಲಾಗಿದೆ.
ದಾಂಪತ್ಯದಲ್ಲಿ ನಂಬಿಕೆ ಬಹಳ ಮುಖ್ಯವಾಗುತ್ತದೆ. ಅನೇಕರು ಸಂಗಾತಿಯನ್ನು ಕಣ್ಣು ಮುಚ್ಚಿ ನಂಬುತ್ತಾರೆ. ಅವರ ಜೊತೆ ವರ್ಷಾನುವರ್ಷ ಕಳೆದ್ರೂ ಅವರ ಬಗ್ಗೆ ಸರಿಯಾದ ಮಾಹಿತಿ ಇರೋದಿಲ್ಲ. ಅವರು ನಮಗೆ ಮೋಸ ಮಾಡ್ತಿದ್ದಾರೆ ಅಥವಾ ಮಾಡಿದ್ದಾರೆ ಎನ್ನುವ ಕಲ್ಪನೆಯೂ ಇರೋದಿಲ್ಲ. ಸಂಗಾತಿಯನ್ನು ಪ್ರೀತಿ ಮಾಡುವ ಜನರು, ಅವರು ನಮ್ಮಿಂದ ದೂರವಾಗಬಹುದು, ನಮ್ಮ ವಿರುದ್ಧವೇ ನಿಲ್ಲಬಹುದು ಎಂಬುದನ್ನು ಕನಸಿನಲ್ಲೂ ಎಣಿಸಿರೋದಿಲ್ಲ. ದೀರ್ಘ ದಾಂಪತ್ಯದ ನಂತ್ರ ಸಂಗಾತಿ ಮೋಸ ಬಯಲಿಗೆ ಬಂದ್ರೆ ನೆಲ ಬಾಯ್ಬಿಟ್ಟಂತೆ ಭಾಸವಾಗುತ್ತದೆ. ಈ ಮಹಿಳೆಗೂ ಇದೇ ಆಗಿದೆ. ಒಂದಾದ್ಮೇಲೆ ಒಂದರಂತೆ ಎರಡು ಏಟು ತಿಂದ ಮಹಿಳೆ ಈಗ ಪತಿ ಹಾಗೂ ಆತನ ಕುಟುಂಬದ ವಿರುದ್ಧ ದೂರು ನೀಡಿ, ಕೋರ್ಟ್ ಮೊರೆ ಹೋಗಿದ್ದಾಳೆ. ತನ್ನ ಹಾಗೂ ಮಕ್ಕಳ ಜೀವನಕ್ಕೆ ಜೀವಾಂಶ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಹತ್ತು ವರ್ಷಗಳ ಕಾಲ ಜೀವನ ನಡೆಸಿ, ಎಂಟು ಮಕ್ಕಳನ್ನು ಪಾಲನೆ ಮಾಡ್ತಿರುವ ಮಹಿಳೆಗೆ, ಆಕೆ ಗಂಡನ ಕಡೆಯವರಿಂದ ಖಡಕ್ ಉತ್ತರ ಬಂದಿದ್ದು, ಅದನ್ನು ಸ್ವೀಕರಿಸಲು ಮಹಿಳೆ ಸಿದ್ಧವಿಲ್ಲ.
ಘಟನೆ ನಡೆದಿರೋದು ಚೀನಾ (China) ದ ಸಿಚುವಾನ್ ಪ್ರಾಂತ್ಯದಲ್ಲಿ. ಮಹಿಳೆಗೆ ಐವರು ಪುತ್ರರು ಮತ್ತು ಮೂವರು ಪುತ್ರಿಯರಿದ್ದಾರೆ. ಆಕೆಯ ಪತಿಗೆ 61 ವರ್ಷವಾಗಿದೆ. ತನ್ನ 23 ನೇ ವಯಸ್ಸಿನಲ್ಲಿ ಪತಿಯಾಗುವವನನ್ನು ಆನ್ಲೈನ್ (Online) ಮೂಲಕ ಭೇಟಿಯಾಗಿದ್ದಳು ಮಹಿಳೆ. ಆತ ಸಿಂಗಲ್ ಎಂದ ಕಾರಣ ಇಬ್ಬರ ಸಂಬಂಧ ಮತ್ತಷ್ಟು ಹತ್ತಿರಕ್ಕೆ ಬಂದಿತ್ತು. ಇಬ್ಬರು ಮದುವೆಯಾಗುವ ನಿರ್ಧಾರ ತೆಗೆದುಕೊಂಡರು. 2015ರಲ್ಲಿ ಇಬ್ಬರ ಮದುವೆ ಆಗಿತ್ತು.
ನಿಯಮಿತ ಸೆಕ್ಸ್ ಮೆನೋಪಾಸನ್ನು ಮುಂದುಡುತ್ತಾ? ತಜ್ಞರು ಹೇಳುವುದಿಷ್ಟು!
ಮದುವೆ ನಂತ್ರ ಹತ್ತು ಮಕ್ಕಳನ್ನು ಪಡೆಯುವ ಪ್ಲಾನ್ ಮಾಡಿದ್ದರು ಇವರು. ಈ ಮಕ್ಕಳಲ್ಲಿ ಒಬ್ಬರಾದರೂ ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ ಎಂದು ಮಹಿಳೆ ತನ್ನ ಪತಿಗೆ ಹೇಳಿದ್ದಳಂತೆ. ತನ್ನ ಕಥೆಯನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ವಿಡಿಯೋದಲ್ಲಿ ಸರ್ಟಿಫಿಕೆಟ್ ಕೂಡ ತೋರಿಸಿದ್ದಾಳೆ. ಮಹಿಳೆ ತನ್ನೆಲ್ಲ ಮಕ್ಕಳನ್ನು ಬಾಡಿಗೆ ತಾಯಿಯಿಂದ ಪಡೆದಿದ್ದಾಳೆ. ಇಬ್ಬರೂ ಶ್ರೀಮಂತ ಕುಟುಂಬದಿಂದ ಬಂದವರು. ಹಾಗಾಗಿ ಅಮೆರಿಕಾದಲ್ಲಿ ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯಲು 10 ಮಿಲಿಯನ್ ಯುವಾನ್ ಅಂದ್ರೆ ಸುಮಾರು 11 ಕೋಟಿ ರೂಪಾಯಿ ಖರ್ಚು ಮಾಡಿದ್ದರು.
ಎಲ್ಲವೂ ಸುಗಮವಾಗಿ ಸಾಗಿತ್ತು. ಆದ್ರೆ ಕಳೆದ ವರ್ಷ ಆಕೆ ಪತಿ ಶಾಕ್ ನೀಡಿದ್ದಾನೆ. ಪತ್ನಿ ವಿರುದ್ಧ ಕೇಸ್ ದಾಖಲಿಸಿದ್ದಾನೆ. ಆತ ಮಹಿಳೆಗೆ ನೀಡಿದ ಹಣ ಹಾಗೂ ಖರ್ಚು ಮಾಡಿದ ಹಣವನ್ನು ವಾಪಸ್ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಕಾರಣ ಹುಡುಕ್ತಾ ಹೋದಾಗ ಮಹಿಳೆಗೆ ಮತ್ತೊಂದು ಆಘಾತವಾಗಿದೆ. ಮಹಿಳೆ ಮದುವೆಯಾಗಿದ್ದ ಪುರುಷನಿಗೆ ಈಗಾಗಲೇ ಇನ್ನೊಂದು ಮದುವೆ ಆಗಿತ್ತು. ಆಕೆ ವಿದೇಶದಲ್ಲಿ ವಾಸವಾಗಿದ್ದಳು.
ಸ್ಮೋಕಿಂಗ್ ಮಾಡ್ತೀರಾ?... ಸೆಕ್ಸ್ ಲೈಫ್ ಹಾಳಾಗೋಗುತ್ತೆ !
ಪತಿಯ ಈ ಮೋಸದಿಂದ ಕಂಗಾಲಾದ ಮಹಿಳೆ, ಈಗ ಪತಿ ಹಾಗೂ ಆತನ ಕುಟುಂಬದವರು ಜೀವನಾಂಶ ನೀಡಬೇಕೆಂದು ಕೋರ್ಟ್ ಮೊರೆ ಹೋಗಿದ್ದಾಳೆ. ತಿಂಗಳಿಗೆ 28,000 ಅಮೆರಿಕನ್ ಡಾಲರ್ ಅಂದ್ರೆ ಸುಮಾರು 23 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಳು. ಮಕ್ಕಳನ್ನು ನೋಡಿಕೊಳ್ಳಲು ಆರ್ಥಿಕ ನೆರವಿನ ಅಗತ್ಯವಿದೆ ಎಂದು ಮಹಿಳೆ ಹೇಳಿದ್ದಳು. ಮಹಿಳೆ ಮಕ್ಕಳನ್ನು ನೋಡಿಕೊಳ್ಳುವ ಅಗತ್ಯವಿಲ್ಲ. ನಾವೇ ಎಲ್ಲ ಮಕ್ಕಳ ಪಾಲನೆ ಮಾಡ್ತೇವೆ ಎಂದು ಪತಿ ಕುಟುಂಬಸ್ಥರು ಪ್ರತಿವಾದ ಮಾಡಿದ್ದಾರೆ. ಈ ಘಟನೆ ನಂತ್ರ ಮಹಿಳೆ 200 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಸದ್ಯ ಪ್ರಕರಣ ಕೋರ್ಟ್ ನಲ್ಲಿದೆ. ಈ ದಂಪತಿ ಗಲಾಟೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.