14 ಹುಡುಗರ ಜೊತೆ ಚಾಟಿಂಗ್‌, ಯಾರನ್ನು ಮದ್ವೆಯಾಗ್ಲಿ, ಹೆಲ್ಪ್ ಮಾಡಿ ಪ್ಲೀಸ್ ಅಂತಿದ್ದಾಳೆ ಯುವತಿ!

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅಂತಾರೆ. ಯಾರೋ ಮದ್ವೆಯಾಗೋ ಕಷ್ಟ ಗೊತ್ತಿದ್ದವ್ರೇ ಇದನ್ನು ಹೇಳಿದ್ದಾರೆ ಅನ್ಸುತ್ತೆ. ಸಂಗಾತಿಯ ಹುಡುಕಾಟ, ಎಂಥವರನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನೋ ಗೊಂದಲ ಎಲ್ಲರನ್ನೂ ಕಾಡುತ್ತೆ. ಅಂಥಾ ಗೊಂದಲಕ್ಕೊಳಗಾದ ಯುವತಿಯೊಬ್ಬಳು ಇಂಟರ್‌ನೆಟ್‌ನಲ್ಲಿ ಯಾವ ಹುಡುಗನನ್ನು ಚ್ಯೂಸ್ ಮಾಡ್ಲಿ ಅಂತ ಜನರ ಅಭಿಪ್ರಾಯ ಕೇಳಿದ್ದಾಳೆ. 

Woman Speaking to 14 Men Through Matrimony Asks Internet to Choose the Right One For Her Vin

ಇವತ್ತಿನ ಕಾಲದ ಹುಡುಗ-ಹುಡುಗಿಯರಿಗೆ ಎಲ್ಲಾ ವಿಷಯಗಳಲ್ಲೂ ಕನ್‌ಫ್ಯೂಷನ್ ಅಂತೂ ಬಿಟ್ಟೂ ಬಿಡದೆ ಕಾಡ್ತಿರುತ್ತೆ. ಹೈಯರ್ ಸ್ಟಡೀಸ್ ಯಾವ ವಿಚಾರದಲ್ಲಿ ಮಾಡೋದು, ಯಾವ ಜಾಬ್ ಚ್ಯೂಸ್ ಮಾಡೋದು, ಪಾರ್ಟನರ್‌ ಹೇಗಿದ್ರೆ ಒಳ್ಳೇದು ಎಲ್ಲಾ ವಿಷಯದಲ್ಲಿ ಗೊಂದಲ ಇದ್ದೀದ್ದೇ. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅಂತಾರೆ. ಯಾರೋ ಮದ್ವೆಯಾಗೋ ಕಷ್ಟ ಗೊತ್ತಿದ್ದವ್ರೇ ಇದನ್ನು ಹೇಳಿದ್ದಾರೆ ಅನ್ಸುತ್ತೆ. ಮದ್ವೆ ಅನ್ನೋದು ಹಲವರ ಪಾಲಿಗೆ ಕಬ್ಬಿಣದ ಕಡಲೆ. ಲವ್ ಮ್ಯಾರೇಜ್ ಅಂದ್ರೆ ಕಣ್ಮುಚ್ಚಿ ಒಪ್ಪೋದೆ. ಆರೇಂಜ್ಡ್ ಮ್ಯಾರೇಜ್ ಅಂದ್ರೆ ಅಳೆದೂ ತೂಗಿ ಮಾಡೋದ್ರಲ್ಲಿ ಕನ್‌ಫ್ಯೂಶನ್ ಆಗಿಬಿಡುತ್ತೆ.

ಅದರಲ್ಲೂ ಇವತ್ತಿನ ದಿನಗಳಲ್ಲಿ ಸಂಗಾತಿಯ (Partner) ಹುಡುಕಾಟಕ್ಕಾಗಿ ಮ್ಯಾಟ್ರಿಮೋನಿಗಳ ಮೊರೆ ಹೋಗುವವರೇ ಹೆಚ್ಚು. ಇದರಲ್ಲಿ ಫೋಟೋ ಸಹಿತ ಎಲ್ಲಾ ರೀತಿಯ ಮಾಹಿತಿಯನ್ನು ಮೊದಲೇ ನೀಡಿರುವ ಕಾರಣ ತಿಳಿದುಕೊಳ್ಳಲು ಸುಲಭವಾಗುತ್ತದೆ. ಅದರಲ್ಲೂ ಇತ್ತೀಚಿಗೆ ಅಪ್‌ಡೇಟ್‌ ಆಗಿರೋ ಮ್ಯಾಟ್ರಿಮೋನಿ ಸೈಟ್ಸ್ ಹುಡುಗನ ಸ್ಯಾಲರಿ, ಜಾಬ್ ಬಗ್ಗೆಯೂ ಸವಿವರವಾದ ಮಾಹಿತಿ (Information)ಯನ್ನು ನೀಡುತ್ತದೆ. ಹೀಗಾಗಿಯೇ ಬಹುತೇಕರು ಇಲ್ಲೇ ತಮ್ಮ ಸಂಗಾತಿಯನ್ನು ಹುಡುಕಿಕೊಳ್ಳುತ್ತಾರೆ. ಆಪ್ಶನ್ಸ್ ಹೆಚ್ಚಿದ್ದಾಗ ಯಾವಾಗ್ಲೂ ಯಾವುದನ್ನು ಆಯ್ಕೆ (Selection) ಮಾಡಿಕೊಳ್ಳಲಿ ಎಂಬ ಗೊಂದಲ ಕಾಡುವುದು ಸಹಜ. ಈ ಯುವತಿಯ ವಿಚಾರದಲ್ಲಿಯೂ ಹಾಗೆಯೇ ಆಗಿದೆ. ಮ್ಯಾಟ್ರಿಮೋನಿಯಲ್ಲಿ ಪಾರ್ಟ್‌ನರ್ ಸರ್ಚ್ ಮಾಡುತ್ತಿದ್ದ ಯುವತಿ ಯಾವ ಹುಡುಗನನ್ನು ಚ್ಯೂಸ್ ಮಾಡ್ಲಿ ಎಂದು ಟ್ವಿಟರ್ ಮೂಲಕ ಜನರ ಅಭಿಪ್ರಾಯ ಕೇಳಿದ್ದಾಳೆ. 

ತೆಳ್ಳಗೆ ಬೆಳ್ಳಗೆ ಇದ್ದಾಳೆ ಅಂತ ಮಾರು ಹೋಗದಿರಿ: 13 ಜನರ ಪ್ರೇಮಿಸಿ, 4 ಮದುವೆಯಾಗಿ ಎಸ್ಕೇಪ್ ಆದ ಚಮಕ್ ರಾಣಿ

ಮ್ಯಾಟ್ರಿಮೋನಿಯಲ್ಲಿ 14 ಹುಡುಗರನ್ನು ಶಾರ್ಟ್​ಲಿಸ್ಟ್ ಮಾಡಿದ ಯುವತಿ
14 ಹುಡುಗರನ್ನು ಶಾರ್ಟ್​ಲಿಸ್ಟ್ ಮಾಡಿದ ಯುವತಿ (Girl) ಯಾವ ಹುಡುಗನನ್ನು ಮದುವೆಯಾದರೆ ಒಳ್ಳೆಯದು ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾಳೆ. ಈಕೆ ಲಿಸ್ಟ್ ಮಾಡಿದ ಹುಡುಗರು ಬೈಜೂಸ್​, ಡೆಲಾಯ್ಡ್​, ಟಿಸಿಎಸ್​ ಮುಂತಾದ ಕಂಪೆನಿಗಳಲ್ಲಿ ಕೆಲಸ (Job) ಮಾಡುತ್ತಿದ್ದಾರೆ. ಅವರೆಲ್ಲರ ವಾರ್ಷಿಕ ಆದಾಯ ರೂ. 14 ಲಕ್ಷದಿಂದ ರೂ 45 ಲಕ್ಷ. 'ನನಗೆ 29 ವರ್ಷ. ಬಿಕಾಂ ಓದಿದ್ದೇನೆ ಆದರೆ ಸದ್ಯ ಉದ್ಯೋಗದಲ್ಲಿಲ್ಲ. ಈ 14 ಹುಡುಗರೊಂದಿಗೆ ಚಾಟ್‌ ಮಾಡುತ್ತಿದ್ದೇನೆ. ಆದರೆ ಮದುವೆಯಾಗಲು (Marriage) ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದ್ದೇನೆ, ದಯವಿಟ್ಟು ಸಹಾಯ ಮಾಡಿ' ಎಂಬ ಶೀರ್ಷಿಕೆಯಡಿ ಈಕೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಸದ್ಯ ಟ್ವಿಟರ್‌ನಲ್ಲಿ ಈ ಪೋಸ್ಟ್ ವೈರಲ್ ಆಗ್ತಿದೆ.

ಟ್ವೀಟ್ ಕೆಳಗಡೆ ಶಾರ್ಟ್‌ಲಿಸ್ಟ್ ಮಾಡಿರುವ ಎಲ್ಲಾ ಹುಡುಗರ (Boys) ಮಾಹಿತಿ ನೀಡಲಾಗಿದೆ. ಹುಡುಗನ ವಯಸ್ಸು, ಕಂಪನಿ, ಅವರು ಪ್ರಸ್ತುತ ವಾಸಿಸುತ್ತಿರುವ ನಗರ ಮತ್ತು ಸಂಬಳದ ಜೊತೆಗೆ ಲಿಸ್ಟ್ ಮಾಡಿದೆ. ಪಟ್ಟಿಯು ಒಟ್ಟು 14 ವ್ಯಕ್ತಿಗಳನ್ನು ಹೊಂದಿದೆ ಮತ್ತು ವಾರ್ಷಿಕ ಪ್ಯಾಕೇಜ್‌ಗಳು ವರ್ಷಕ್ಕೆ 14L ನಿಂದ ವರ್ಷಕ್ಕೆ 45L ವರೆಗೆ ಇರುತ್ತದೆ. ಇದರೊಂದಿಗೆ ಅವರು ಕೆಲವು ಗುಣಲಕ್ಷಣಗಳನ್ನು ಸಹ ಉಲ್ಲೇಖಿಸಿದ್ದಾರೆ. ಉದಾಹರಣೆಗೆ, ಒಬ್ಬನು ಬೋಳು ತಲೆ ಹೊಂದಿದ್ದಾನೆ. ಮತ್ತೊಬ್ಬನ ಎತ್ತರ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದ್ದಾಳೆ. 

Matrimonial Ad: ವರ ಬೇಕಾಗಿದ್ದಾನೆ, ಸಾಫ್ಟ್‌ವೇರ್‌ ಇಂಜಿನಿಯರ್ಸ್‌ ದಯವಿಟ್ಟು ಕಾಲ್ ಮಾಡ್ಬೇಡಿ !

ಟಾಸ್ ಹಾಕಿ, ಇಲ್ಲದಿದ್ದರೆ ಅಕ್ಕರ ಬಕ್ಕಡೆ ಬಂಬೆ ಬೋ ಮಾಡಿ ಎಂದು ಕಾಲೆಳೆದ ನೆಟ್ಟಿಗರು
ಯುವತಿ ಮಾಡಿರೋ ಟ್ವೀಟ್‌ ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗ್ತಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬ ಬಳಕೆದಾರರು 45 ಲಕ್ಷ ವಾರ್ಷಿಕ ಆದಾಯವಿರುವ ವ್ಯಕ್ತಿಗಳು, ನಿರುದ್ಯೋಗಿಯಾಗಿರುವ ಈ ಹುಡುಗಿಯ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಯಾಕೆ, ಅವರಿಗೆ ತುಂಬಾ ಮುಖ್ಯವಾದಂಥ ಯಾವುದೇ ನ್ಯೂನತೆಗಳು ಇಲ್ಲ ತಾನೇ? ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಅಷ್ಟಕ್ಕೂ ಈಕೆ ಯಾಕೆ ಉದ್ಯೋಗದಲ್ಲಿಲ್ಲ? ಈಕೆ ತಾನು ಮದುವೆಯಾಗಬಯಸುವ ಹುಡುಗರಿಂದ ಏನನ್ನು ನಿರೀಕ್ಷಿಸುತ್ತಿದ್ದಾಳೆ' ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ಇದು ಫೇಕ್ ಟ್ವೀಟ್ ಆಗಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಯಾರೂ ಸರ್ಕಾರಿ ಕೆಲ್ಸದಲ್ಲಿಲ್ಲ. ಎಲ್ಲರನ್ನೂ ರಿಜೆಕ್ಟ್ ಮಾಡಿ' ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಎಲ್ಲಕ್ಕಿಂತ ಹೆಚ್ಚು ಸ್ಯಾಲರಿ ಇರುವವರನ್ನು ಫೈನಲ್ ಮಾಡಿ' ಎಂದಿದ್ದಾರೆ. 'ಮಾರ್ಡನ್‌ ಸ್ವಯಂವರ ಹೀಗಿರುತ್ತದೆ' ಎಂದು ಇನ್ನೊಬ್ಬರು ತಮಾಷೆಯಾಗಿ ತಿಳಿಸಿದ್ದಾರೆ. 'ಅಷ್ಟೂ ಕನ್‌ಫ್ಯೂಸ್ ಆಗಿದ್ದರೆ ಟಾಸ್ ಹಾಕಿ, ಇಲ್ಲದಿದ್ದರೆ ಅಕ್ಕರ ಬಕ್ಕಡೆ ಬಂಬೆ ಬೋ ಮಾಡಿ' ಎಂದು ಇನ್ನೊಬ್ಬರು ಫನ್ನಿಯಾಗಿ ಹೇಳಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಹತ್ತನೇ ನಂಬರ್‌ನಲ್ಲಿರುವ ಡಾಕ್ಟರ್‌ನ್ನು ಆಯ್ಕೆ ಮಾಡಿ. ಅವರು ನಿಮ್ಮನ್ನು ಮದುವೆಯಾಗುವುದರ ಜೊತೆಗೆ ನಿಮ್ಮ ಮಾನಸಿಕ ಸಮಸ್ಯೆಯನ್ನೂ ಸರಿ ಮಾಡುತ್ತಾರೆ' ಎಂದಿದ್ದಾರೆ. 

Latest Videos
Follow Us:
Download App:
  • android
  • ios