Relationship Tips : ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ರೂ ಮಾಜಿ ಮರೆಯೋಕಾಗ್ತಿಲ್ಲ
ಬ್ರೇಕ್ ಅಪ್ (BreakUp) ನಂತ್ರ ಅದರಿಂದ ಚೇತರಿಸಿಕೊಳ್ಳೋದು ಕಷ್ಟ. ಅನೇಕರು ಈ ನೋವಿನಿಂದ ಹೊರಬರಲು ಇನ್ನೊಬ್ಬರ ಪ್ರೀತಿಗೆ ಬೀಳ್ತಾರೆ. ಆದ್ರೆ ಮಾಜಿ ಮರೆಯಲು ಸಾಧ್ಯವಾಗುವುದಿಲ್ಲ. ಈ ಹುಡುಗಿ ಕೂಡ ಅದೇ ಸಮಸ್ಯೆಯಲ್ಲಿದ್ದಾಳೆ.
ಎಂದೂ ಮರೆಯಲು ಸಾಧ್ಯವಾಗದ್ದು ಪ್ರೀತಿ (Love). ಅದ್ರಲ್ಲೂ ಮೊದಲ ಪ್ರೀತಿ,ಮೊದಲ ಪ್ರೇಮಿ, ಅವರ ಜೊತೆ ಕಳೆದ ಮಧುರ ಕ್ಷಣಗಳು ಜೀವನ (Life) ಪರ್ಯಂತ ನೆನಪಾಗಿ ಕಾಡುತ್ತದೆ. ಬಾಳಲ್ಲಿ ಬರುವ ಹೊಸ ವ್ಯಕ್ತಿ ಎಷ್ಟೇ ಪ್ರೀತಿ ನೀಡಿದ್ರೂ, ಎಷ್ಟೋ ಸುಂದರ ಕ್ಷಣಗಳನ್ನು ಅವರ ಜೊತೆ ಕಳೆದಿದ್ದರೂ ಹಳೆ ನೆನಪು (Memory) ಗಳು ಮಾತ್ರ ನಮ್ಮನ್ನು ಆಗಾಗ ಬಂದು ಹಿಂಸಿಸುತ್ತಿರುತ್ತವೆ. ಯುವತಿಯೊಬ್ಬಳು ಇದೇ ಸಂಕಷ್ಟದಲ್ಲಿದ್ದಾಳೆ. ಹಳೆ ಪ್ರೀತಿ ಮರೆತು ಹೊಸ ಬಾಳು ಶುರು ಮಾಡಬೇಕೆಂದುಕೊಂಡಿರುವ ಆಕೆಗೆ ಮಾಜಿ ನೆನಪಾಗಿ ಹಿಂಬಾಲಿಸ್ತಿದ್ದಾನಂತೆ. ಇದ್ರಿಂದ ಗೊಂದಲದಲ್ಲಿರುವ ಆಕೆ ತಜ್ಞರ ಸಲಹೆ ಕೇಳಿದ್ದಾಳೆ.
ಹಠಾತ್ ಕಾಡುತ್ತೆ ಮಾಜಿ ನೆನಪು : ಕೆಲ ತಿಂಗಳ ಹಿಂದೆ ಆಕೆಯ ಮೊದಲ ಪ್ರೀತಿ ಮುರಿದು ಬಿದ್ದಿದೆ. ಹುಡುಗ ಹಾಗೂ ಹುಡುಗಿ ಇಬ್ಬರೂ ಪರಸ್ಪರ ಒಪ್ಪಿ ಈ ಸಂಬಂಧ ಮುರಿದುಕೊಂಡಿದ್ದಾರೆ. ಹುಡುಗ ವಿದೇಶಕ್ಕೆ ಹೋಗ್ತಿರುವ ಕಾರಣಕ್ಕೆ ಇಬ್ಬರ ಮಧ್ಯೆಯಿದ್ದ ಪ್ರೀತಿಗೆ ಬ್ರೇಕ್ ಹಾಕಿದ್ದಾರೆ. ಆ ದಿನದ ನಂತ್ರ ಒಂದು ಬಾರಿಯೂ ಇಬ್ಬರ ಭೇಟಿಯಾಗಿಲ್ಲ. ಫೋನ್ ನಲ್ಲಿಯೂ ಇಬ್ಬರು ಸಂಪರ್ಕಿಸಿಲ್ಲ. ಆತನನ್ನು ಮರೆತು ಹೊಸ ಬಾಳು ಶುರು ಮಾಡಲು ಆಕೆ ನಿರ್ಧರಿಸಿದ್ದಾಳೆ. ಇದೇ ಕಾರಣಕ್ಕೆ ಡೇಟಿಂಗ್ ಅಪ್ಲಿಕೇಶನ್ ಗೆ ಲಾಗ್ ಇನ್ ಆಗಿದ್ದಾಳೆ. ಅಲ್ಲಿ ಸುಂದರ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ಆತ ನನಗೆ ತುಂಬಾ ಹತ್ತಿರವಾಗಿದ್ದಾನೆ. ಆತ ನನ್ನನ್ನು ಪ್ರೀತಿಸುತ್ತಿದ್ದಾನೆ. ನನಗೂ ಆತನ ಮೇಲೆ ಪ್ರೀತಿ, ಗೌರವವಿದೆ. ಅವನ ಜೊತೆ ಪ್ರಾಮಾಣಿಕವಾಗಿರುವ ಪ್ರಯತ್ನ ನಡೆಸುತ್ತಿದ್ದೇನೆ. ಆತನ ಜೊತೆಗಿದ್ದಾಗ ಖುಷಿ ಸಿಗ್ತಿದೆ ನಿಜ. ಆದ್ರೆ ಹಠಾತ್ ಮಾಜಿಯ ನೆನಪಾಗುತ್ತದೆ. ಆತನ ಜೊತೆ ಕಳೆದ ಕ್ಷಣಗಳು ಕಾಡುತ್ತವೆ. ಇದು ನನಗೆ ಹಿಂಸೆ ಎನ್ನಿಸುತ್ತಿದೆ. ನಾನು ಈಗಿನ ಪ್ರೇಮಿಗೆ ಮೋಸ ಮಾಡ್ತಿದ್ದೇನಾ ಎಂಬ ಪ್ರಶ್ನೆ ಕಾಡ್ತಿದೆ ಎಂದಿದ್ದಾಳೆ ಯುವತಿ.
ತಜ್ಞರ ಸಲಹೆ : ಮಾಜಿ ನಿಮ್ಮ ಜೀವನದ ವಿಶೇಷ ವ್ಯಕ್ತಿಯಾಗಿದ್ದ. ಹಾಗಾಗಿ ಆತನ ನೆನಪು ಬರುವುದು ಸಾಮಾನ್ಯ ಎನ್ನುತ್ತಾರೆ ತಜ್ಞರು. ಜೀವನದಲ್ಲಿ ಪ್ರಭಾವ ಬೀರುವ ಎಲ್ಲ ವ್ಯಕ್ತಿಗಳು ಸದಾ ನಮ್ಮ ನೆನಪಿನಲ್ಲಿರುತ್ತಾರೆ. ಜೀವನದಲ್ಲಿ ಮುಂದೆ ಸಾಗುವುದು ಅಂದರೆ ಮಾಜಿಯ ನೆನಪನ್ನು ಸಂಪೂರ್ಣ ಅಳಿಸಿ ಹಾಕುವುದು ಎಂದಲ್ಲ. ಅಳಿಸಲು ಎಂದೂ ಸಾಧ್ಯವೂ ಇಲ್ಲ. ಯಾವುದೋ ಸಂದರ್ಭದಲ್ಲಿ ಮಾಜಿ ನೆನಪಾಗುವುದು ತಪ್ಪೇನಲ್ಲ ಎನ್ನುತ್ತಾರೆ ತಜ್ಞರು.
Relationship Tips : ಮಹಿಳೆಯರ ಈ ಗುಟ್ಟು ಹುಡುಗ್ರಿಗೆ ತಿಳಿದಿರಲಿ
ನೆನಪು ಸದಾ ನಮ್ಮ ಜೊತೆಯಲ್ಲಿರುತ್ತದೆ : ಮಾಜಿ ಜೊತೆ ನೀವು ಸಂಪರ್ಕದಲ್ಲಿಲ್ಲ. ಆದ್ರೂ ಅವರ ನೆನಪು ಬರ್ತಿದೆ ಅಂದ್ರೆ ಅದರಲ್ಲಿ ನಿಮ್ಮ ತಪ್ಪಿಲ್ಲ. ಹಾಗೆ ನೀವು ನಿಮ್ಮ ಈಗಿನ ಸಂಗಾತಿಗೆ ಮಹತ್ವ ನೀಡ್ತಿಲ್ಲ ಎಂದೂ ಅಲ್ಲ. ನಿಮ್ಮ ಹಿಂದಿನ ದಿನಗಳು ಈಗ ಕೇವಲ ನೆನಪು ಮಾತ್ರ. ಅವರನ್ನು ಮಿಸ್ ಮಾಡುವುದು ಅಥವಾ ಅವರ ನೆನಪು ಆಗಾಗ ಬರುವುದು ಸಾಮಾನ್ಯ. ನೀವು ಎಂದಿಗೂ ಅವರ ಜೊತೆ ಭವಿಷ್ಯದ ಬಗ್ಗೆ ಕಲ್ಪನೆ ಮಾಡಲು ಶುರು ಮಾಡ್ಬೇಡಿ. ನಿಮ್ಮ ಸಂಗಾತಿ ಜೊತೆ ನೀವು ಪ್ರಾಮಾಣಿಕವಾಗಿರುವವರೆಗೂ ನೀವು ಚಿಂತಿಸುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು.
PARENTING TIPS : ಮಕ್ಕಳಿಂದ ಮುಜುಗರ ತಪ್ಪಿಸಲು ಇಲ್ಲಿವೆ ಪರಿಹಾರ
ನಿಮ್ಮ ಭಾವನೆ ಸತ್ಯವಾಗಿರ್ಬೇಕು : ನಿಮ್ಮ ಸಂಗಾತಿಗೆ ನೀವೇನೂ ಮೋಸ ಮಾಡ್ತಿಲ್ಲ. ಅವರ ಬಗ್ಗೆ ನಿಮಗಿರುವ ಭಾವನೆ ಸತ್ಯ. ಮಾಜಿ ನೆನಪಾದಾಗ ಅದನ್ನು ಮರೆಯುವ ಪ್ರಯತ್ನ ಮಾಡಿ. ನೆನಪು ನಿಮ್ಮ ನಿಯಂತ್ರಣದಲ್ಲಿಲ್ಲ. ನಿಮ್ಮ ಮುಂದೆ ಈಗ ಏನಾಗ್ತಿದೆ ಹಾಗೂ ಏನು ಮಾಡ್ಬೇಕು,ಏನು ಮಾಡ್ಬಾರದು ಎಂಬುದು ಮಾತ್ರ ನಿಮ್ಮ ನಿಯಂತ್ರಣದಲ್ಲಿದೆ. ಹಾಗಾಗಿ ಸದಾ ಸಂಗಾತಿ ಜೊತೆ ಪ್ರಾಮಾಣಿಕವಾಗಿರಿ. ಅವರಿಗೆ ಎಂದೂ ದ್ರೋಹ ಬಗೆಯಬೇಡಿ ಎನ್ನುತ್ತಾರೆ ತಜ್ಞರು.