Extra Marital Affair: ಸ್ನೇಹಿತನ ಜೊತೆ ಒಮ್ಮೆ ಸೆಕ್ಸ್, ಗರ್ಭ ಧರಿಸಿದ ನಾರಿಗೆ ಗೊಂದಲ
ಕುಡಿದ ಮತ್ತಿನಲ್ಲಿ, ಸುರಕ್ಷತೆ ಇಲ್ಲದೆ ಸಂಭೋಗ ಬೆಳೆಸುವುದು ಅಪಾಯಕಾರಿ. ಇದು ಗರ್ಭಧಾರಣೆಗೆ ಕಾರಣವಾಗಬಹುದು. ಜೊತೆಗೆ ಅನೇಕ ರೋಗಕ್ಕೂ ದಾರಿ ಮಾಡಿಕೊಡಬಹುದು. ಕಾಂಡೋಮ್ ಇಲ್ಲದೆ ಇಂಟರ್ಕೋರ್ಸ್ ನಡೆಸಿದ ಮಹಿಳೆಯೊಬ್ಬಳು ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ.
ಕವಲುದಾರಿಯಲ್ಲಿ ನಿಂತಾಗ ಅನೇಕ ಗೊಂದಲಗಳು ಶುರುವಾಗುತ್ತವೆ. ಮುಂದೆ ಯಾವ ದಾರಿ (Way) ಯಲ್ಲಿ ಸಾಗ್ಬೇಕೆಂಬ ಅನುಮಾನ ಆರಂಭವಾಗುತ್ತದೆ. ಮನುಷ್ಯನ ಜೀವನ (Life) ದಲ್ಲೂ ಈ ಸಮಸ್ಯೆಯನ್ನು ನಾವು ಕಾಣ್ಬಹುದು. ಮುಂದೆ ಎರಡು ಆಯ್ಕೆಗಳಿದ್ದಾಗ, ಯಾವ ಆಯ್ಕೆಯನ್ನು ಆಯ್ದುಕೊಳ್ಳಬೇಕೆಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಇದ್ರ ಬಗ್ಗೆ ತಮ್ಮ ಸುತ್ತಮುತ್ತಲಿನವರ ಜೊತೆ ಮಾತನಾಡಲು ಶುರು ಮಾಡ್ತಾರೆ. ಅವರ ಅಭಿಪ್ರಾಯ ಕೇಳಲು ಶುರು ಮಾಡ್ತಾರೆ. ಸಂಬಂಧದ ವಿಷ್ಯ ಬಂದಾಗ, ಮಗು (Child) ವಿನ ವಿಷ್ಯ ಬಂದಾಗ ನಿರ್ಧಾರ ತೆಗೆದುಕೊಳ್ಳುವುದು ಮತ್ತೂ ಕಷ್ಟವಾಗುತ್ತದೆ. ಪ್ರತಿಯೊಬ್ಬ ಮಹಿಳೆಯೂ ತನ್ನೆಲ್ಲ ಮಕ್ಕಳನ್ನು ಸಮನಾಗಿ ಪ್ರೀತಿ (Love) ಮಾಡ್ತಾಳೆ. ಯಾವ ಮಕ್ಕಳನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಮಗು ಭೂಮಿಗೆ ಬಂದಿರಲಿ ಇಲ್ಲ ಗರ್ಭದಲ್ಲಿರಲಿ. ಅವಳ ಯಾವುದೋ ತಪ್ಪಿಗೆ ಗರ್ಭಧಾರಣೆಯಾದ್ರೂ ಅದರ ಮೇಲೆ ಒಂದು ರೀತಿಯ ಪ್ರೀತಿ ಮಹಿಳೆಗಿರುತ್ತದೆ. ಗರ್ಭಪಾತ ಮಾಡಿಸಲು ಮನಸ್ಸು ಮುಂದಾಗುವುದಿಲ್ಲ. ಬ್ರಿಟನ್ ಮಹಿಳೆಯೊಬ್ಬಳು ಮಗುವಿನ ವಿಚಾರದಲ್ಲೇ ಸಮಸ್ಯೆ ಎದುರಿಸುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾಳೆ. ಮುಂದೆ ಯಾವ ದಾರಿಯಲ್ಲಿ ಸಾಗ್ಬೇಕೆನ್ನುವ ಬಗ್ಗೆ ಪ್ರಶ್ನೆ ಕೇಳಿದ್ದಾಳೆ. ಸ್ನೇಹಿತನ ಜೊತೆ ಒಂದು ರಾತ್ರಿ ಕಳೆದಿದ್ದೇ ಈಗ ದುಬಾರಿಯಾಗಿದೆ. ಗರ್ಭ ಧರಿಸಿದ ಮಹಿಳೆಗೆ ಮುಂದೇನು ಮಾಡ್ಬೇಕೆಂಬ ಪ್ರಶ್ನೆ ಶುರುವಾಗಿದೆ. ಅಷ್ಟಕ್ಕೂ ಆ ಮಹಿಳೆ ಕಥೆ ಏನು ಎಂಬುದನ್ನು ಹೇಳ್ತೇವೆ ಓದಿ.
ಆ ಒಂದು ರಾತ್ರಿ : ಸಾಮಾಜಿಕ ಜಾಲತಾಣದಲ್ಲಿ (Social Media) ಕಥೆ ಹೇಳಿರುವ ಮಹಿಳೆ ಬ್ರಿಟನ್ (Britain)ಮೂಲದವಳು. ವಿವಾಹಿತ ಮಹಿಳೆ. ಇಬ್ಬರು ಮಕ್ಕಳ ತಾಯಿ. ಆಕೆ ಒಂದು ರಾತ್ರಿ ಮಾಡಿದ ತಪ್ಪಿಗೆ ಈಗ ಪಶ್ಚಾತ್ತಾಪ ಪಡುತ್ತಿದ್ದಾಳೆ. ಕಾಮನ್ ಫ್ರೆಂಡ್ (Common Friend) ಜೊತೆ ಮಹಿಳೆ ಒಂದು ರಾತ್ರಿ ಕಳೆದಿದ್ದಾಳಷ್ಟೆ. ಆದ್ರೆ ಅದೇ ಆಕೆಗೆ ಮುಳುವಾಗಿದೆ. ಆಕೆ ಗರ್ಭಧರಿಸಲು ಕಾರಣವಾಗಿದೆ.
ಕಂಕಣ ಭಾಗ್ಯ ಬಂದಿಲ್ಲವೆಂದರೆ ಮಹಿಳೆಯರ ಟೆನ್ಷನ್ ಹೆಚ್ಚಾಗುತ್ತಾ?
ಕುಡಿದ ಮತ್ತಿನಲ್ಲಿ ತಪ್ಪು : ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಇಬ್ಬರೂ ಮದ್ಯದ ನಶೆಯಲ್ಲಿದ್ದೆವು. ಇದೇ ಕಾರಣಕ್ಕೆ ಕಾಂಡೋಮ್ (Condom) ಧರಿಸಿರಲಿಲ್ಲ ಎನ್ನುತ್ತಾಳೆ ಮಹಿಳೆ. ಸುರಕ್ಷತೆ ಇಲ್ಲದೆ ಶಾರೀರಿಕ ಸಂಬಂಧ (Physical Relatinship) ಬೆಳೆಸಿದ್ದು ನನ್ನ ದೊಡ್ಡ ತಪ್ಪು ಎನ್ನುವ ಮಹಿಳೆ ಈಗ ದುಃಖಿಸುತ್ತಿದ್ದಾಳೆ.
ಯಾರು ಸ್ನೇಹಿತ ? : ಆಕೆ ಒಂದು ರಾತ್ರಿ ಕಳೆದ ವ್ಯಕ್ತಿ ಮಹಿಳೆಯ ಜೆಸ್ಟ್ ಫ್ರೆಂಡ್ ಲೀಸ್ಟ್ ನಲ್ಲಿ ಬರ್ತಾನಂತೆ. ಎಲ್ಲ ಮುಗಿದ್ಮೇಲೆ ಆತನ ವೈಯಕ್ತಿಕ ವಿಷ್ಯವನ್ನು ಮಹಿಳೆ ಸಂಗ್ರಹಿಸಿದ್ದಾಳೆ. ಆತನೂ ಸಂಬಂಧದಲ್ಲಿದ್ದಾನೆ. ಆತನಿಗೂ ಇಬ್ಬರು ಮಕ್ಕಳಿವೆ ಎಂಬ ಸಂಗತಿಯನ್ನು ಸಾಮಾಜಿಕ ಜಾಲತಾಣದ ಮೂಲಕವೇ ಮಹಿಳೆ ಹೇಳಿದ್ದಾಳೆ.
ಮುಂದೇನು ಮಾಡಲಿ ? : ಆತನಿಗೆ ಮಕ್ಕಳಿವೆ ಎಂಬ ವಿಷ್ಯ ಮಹಿಳೆಯನ್ನು ಇನ್ನಷ್ಟು ಗೊಂದಲಕ್ಕೀಡು ಮಾಡಿದೆ. ತಾನು ಗರ್ಭ ಧರಿಸಿದ್ದೇನೆ, ನಿನ್ನ ಮಗುವಿಗೆ ತಾಯಿಯಾಗ್ತಿದ್ದೇನೆ ಎಂಬ ಸಂಗತಿಯನ್ನು ಆತನಿಗೆ ಹೇಳ್ಬೇಕೋ ಬೇಡವೋ ಎಂಬ ಚಿಂತೆ ಕಾಡ್ತಿದೆ. ಆತನಿಗೆ ಹೇಳದೆ ಗರ್ಭಪಾತ ಮಾಡಿಸಿಕೊಂಡರೆ ಹೇಗೆ ಎಂಬುದು ಆಕೆ ಪ್ರಶ್ನೆ.
ಮಗು ನೀವು ಹೇಳಿದ ಮಾತು ಕೇಳ್ತಿಲ್ವಾ ? ಹಾಗಿದ್ರೆ ಹೀಗೆ ಮಾಡಿ ನೋಡಿ
ಗರ್ಭದಲ್ಲಿರುವ ಮಗುವಿನ ಮೇಲೆ ಮೋಹ : ಭವಿಷ್ಯದ ಬಗ್ಗೆ ಆಲೋಚನೆ ಮಾಡಿದ್ರೆ ಗರ್ಭಪಾತ (Abortion) ಒಳ್ಳೆಯದು. ಆದ್ರೆ ಗರ್ಭದಲ್ಲಿರುವ ಮಗುವನ್ನು ತೆಗೆಯುವುದು ಸುಲಭವಲ್ಲ. ಮಗುವಿನ ಮೇಲೆ ನನಗೆ ಭಾವನಾತ್ಮಕ ಸಂಬಂಧ (Emotional Relationship) ಬೆಳೆಯುತ್ತಿದೆ ಎನ್ನುತ್ತಾಳೆ. ಕನಸಿನಲ್ಲೂ ಹೀಗಾಗುತ್ತೆ ಎಂಬುದನ್ನು ನಾನು ಊಹಿಸಿರಲಿಲ್ಲ. ಇದೊಂದು ಕೆಟ್ಟ ಸ್ವಪ್ನದಂತಿದೆ ಎನ್ನುತ್ತಾಳೆ ಮಹಿಳೆ. ಆ ರಾತ್ರಿ ತಪ್ಪೆಸಗಿದ ಮೇಲೆ ಬೆಳಿಗ್ಗೆ ಮಹಿಳೆ ಗರ್ಭನಿರೋಧಕ ಮಾತ್ರೆಯನ್ನು ಸೇವಿಸಿದ್ದಳಂತೆ. ಆದ್ರೆ ಅದು ಪ್ರಯೋಜನಕ್ಕೆ ಬರಲಿಲ್ಲ ಎನ್ನುತ್ತಿದ್ದಾಳೆ.
ಬಳಕೆದಾರರ ಸಲಹೆ : ಮೊದಲು ಮಗು ಬೇಕೇ ಎಂಬ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕು. ನಂತ್ರ ಸ್ನೇಹಿತನಿಗೆ ವಿಷ್ಯ ತಿಳಿಸಬೇಕೆಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಮುಂದೇ ಏನೇ ಆಗ್ಲಿ, ಮೊದಲು ನಿಮ್ಮ ಸ್ನೇಹಿತನಿಗೆ ಈ ಸಂಗತಿ ತಿಳಿಸಿ ಎಂದಿದ್ದಾರೆ.