5 ರೂ ಕುರ್ಕುರೆ ಪ್ಯಾಕೆಟ್ ತರದ ಗಂಡನಿಗೆ ಡಿವೋರ್ಸ್ ಕೊಟ್ಟ ಪತ್ನಿ, ಕೌನ್ಸಿಲಿಂಗ್ ಅಧಿಕಾರಿಗಳು ಸುಸ್ತು!
ಕೇವಲ 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತಂದಿಲ್ಲ ಅನ್ನೋ ಕಾರಣಕ್ಕೆ ಪತಿಯಿಂದ ಡಿವೋರ್ಸ್ ಕೇಳಿದ ಘಟನೆ ನಡೆದಿದೆ. ಇದು ತಮಾಷೆಯಲ್ಲ, ಡಿವೋರ್ಸ್ ಅರ್ಜಿ ಕೋರ್ಟ್ ಮೆಟ್ಟಿಲೇರಿದೆ.
ಆಗ್ರ(ಮೇ.13) ಚಿತ್ರ ವಿಚಿತ್ರ ಕಾರಣಗಳಿಗೆ ಡಿವೋರ್ಸ್ ನೀಡಿದ ಊದಾಹರಣೆಗಳಿವೆ. ಕ್ಷುಲ್ಲಕ ಕಾರಣ ನೀಡಿ ವಿಚ್ಛೇದನ ಪಡೆದ ಹಲವು ಘಟನೆಗಳು ಸಾಲಿಗೆ ಇದೀಗ ಹೊಸ ಸೇರ್ಪಡೆಯಾಗಿದೆ. ಗಂಡ ತನಗೆ 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತಂದಿಲ್ಲ ಅನ್ನೋ ಕಾರಣಕ್ಕೆ ಡಿವೋರ್ಸ್ ಕೇಳಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಒಂದೆಡೆರು ಬಾರಿ ಗಂಡನಿಗೆ ಸೂಚಿಸಿದ್ದಾಳೆ, ಮತ್ತೆ ತಾಕೀತು ಮಾಡಿದ್ದಾಳೆ. ಆದರೆ 5 ರೂಪಾಯಿ ಕುರ್ಕುರೆ ತರಲು ಮರೆತೇ ಹೋಗಿದ್ದಾನೆ. ಇಷ್ಟೇ ನೋಡಿ, ನೇರವಾಗಿ ಡಿವೋರ್ಸ್ ಕೇಳಿ ಇದೀಗ ಸುದ್ದಿಯಾಗಿದ್ದಾಳೆ.
ಆಗ್ರಾದ ದಂಪತಿ ಒಂದು ವರ್ಷದ ಹಿಂದೆ ಮದುವೆಯಾಗಿದ್ದಾರೆ. ನೂತನ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳೇನು ಇರಲಿಲ್ಲ. ಪತ್ನಿಗೆ ಹುರಿದ ತಿನಿಸುಗಳ ಮೇಲೆ ಎಲ್ಲಿದ ಮೋಹ. ಅದರಲ್ಲೂ ಕುರ್ಕುರೆ ಪತ್ನಿಯ ನೆಚ್ಚಿನ ತಿನಿಸು. ಆರಂಭದಲ್ಲೇ ಗಂಡ ನೆನಪಿನಲ್ಲಿಟ್ಟು ಕುರ್ಕುರೆ ತಂದುಕೊಡುತ್ತಿದ್ದ. 6 ತಿಂಗಳ ಬಳಿಕ ಪತಿಗೆ ಕೆಲಸದಲ್ಲಿ ಜವಾಬ್ದಾರಿ ಹೆಚ್ಚಿತು. ತಿರುಗಾಟ, ಸುತ್ತಾಟಕ್ಕೆ ಬ್ರೇಕ್ ಬಿದ್ದಿತು. ಪತ್ನಿಗೆ ಕುರ್ಕುರೆ ತರುತ್ತಿದ್ದ.
ಈ ದೇಶದಲ್ಲಿ ಡಿವೋರ್ಸ್ ಜಾಸ್ತಿಯಂತೆ; ಅತಿ ಹೆಚ್ಚು ವಿಚ್ಛೇದನ ಆಗೋ ದೇಶಗಳಿವು
ಆದರೆ ವರ್ಷವಾಗುತ್ತಿದ್ದಂತೆ ಪತ್ನಿ ಪ್ರತಿ ದಿನ ಕುರ್ಕುರೆ ಬೇಕು ಎಂದಿದ್ದಾಳೆ. ಆದರೆ ಗಂಡನಿಗೆ ಪ್ರತಿ ದಿನ ಕುರ್ಕುರೆ ತರಲು ಮರೆತೇ ಹೋಗುತ್ತಿದೆ. ಒಂದೆರೆಡು ಬಾರಿ ಸೂಚಿಸಿದ ಪತ್ನಿ ಸಿಡಿಮಿಡಿಗೊಂಡಿದ್ದಾಳೆ. 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತರದ ಗಂಡನ ವಿರುದ್ದ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾಳೆ. ಮುನಿಸಿಕೊಂಡ ಪತ್ನಿ ನೇರವಾಗಿ ತವರು ಮನೆಗೆ ತೆರಳಿದ್ದಾಳೆ.
ಪತಿ ನನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದು ಹೇಳಿ ತವರು ಮನೆಯಲ್ಲೇ ಉಳಿದುಕೊಂಡಿದ್ದಾಳೆ. ಇತ್ತ ಪತಿ ಫೋನ್ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಪ್ರಯೋಜನವಾಗಿಲ್ಲ. 2 ತಿಂಗಳ ತವರಿನಲ್ಲೇ ಉಳಿದ ಪತ್ನಿ, ಬಳಿಕ ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾಳೆ. ಆದರೆ ಈಕೆಯ ಡಿವೋರ್ಸ್‌ನಲ್ಲಿ ನೀಡಿದ ಕಾರಣ ನೋಡಿದ ವಕೀಲು ಕೌನ್ಸಲಿಂಗ್ ಅಧಿಕಾರಿಗಳ ಬಳಿ ಕಳುಹಿಸಿದ್ದಾರೆ.
ವಿಚ್ಛೇದನಕ್ಕೆ ಎಲ್ಲ ಆರೋಪ ಸಾಬೀತಾಗಬೇಕಿಲ್ಲ: ಹೈಕೋರ್ಟ್‌ನಿಂದ ಮಹತ್ವ ತೀರ್ಪು
ಪತಿ ಹಾಗೂ ಪತ್ನಿ ಇಬ್ಬರನ್ನು ಕರೆಸಿದ ಆಗ್ರಾದ ಕೌನ್ಸಿಲಿಂಗ್ ಅದಿಕಾರಿ ಡಾ. ಸತೀಶ್ ಖಿರ್ವಾರ್, ಆಪ್ತ ಸಮಾಲೋಚನೆ ನಡೆಸಿದ್ದಾರೆ. ಪತ್ನಿಯ 5 ರೂಪಾಯಿ ಕುರ್ಕುರೆ ಮಾತು ಕೇಳಿ ಅಧಿಕಾರಿಗಲು ಸುಸ್ತಾಗಿದ್ದಾರೆ. 6 ತಿಂಗಳಿನಿಂದ ಪತ್ನಿಯ ವರ್ತನೆ ಬದಲಾಗಿದೆ. ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಪ್ರತಿ ದಿನ 5 ರೂಪಾಯಿ ಕುುರ್ಕುರೆ ತರಲು ಹೇಳಿದ್ದಾರೆ. ಒಂದು ದಿನವೂ ತರುತ್ತಿಲ್ಲ. ಅಸಡ್ಡೆ, ನಿರ್ಲಕ್ಷ್ಯದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ ಎಂದ ಪತ್ನಿ ದೂರಿದ್ದಾಳೆ.