ಮೊದಲ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ. ಸಂಭ್ರಮದ ನಡುವೆ ಅಚ್ಚರಿಯೊಂದು ಎದುರಾಗಿದೆ. ಪತಿಯ ಮಾಜಿ ಗರ್ಲ್‌ಫ್ರೆಂಡ್ ಈ ಸಂಭ್ರಮಾಚರಣೆಗೆ ಹಾಜರಾಗಿದ್ದಾಳೆ. ವಿಶೇಷ ಅಂದರೆ ಈಕೆಯನ್ನು ಆಹ್ವಾನಿಸಿದ್ದು ಪತ್ನಿ. ಮುಂದೇನಾಯ್ತು?
ದಂಪತಿಯ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದಲ್ಲಿ ನಡೆದ ಅಚ್ಚರಿ ಘಟನೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿಗಾಡುತ್ತಿದೆ. ಈ ವಿಡಿಯೋ ಪ್ರಕಾರ, ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ, ಪತಿಯ ಮಾಜಿ ಗರ್ಲ್‌ಫ್ರೆಂಡ್ ಅಹ್ವಾನಿಸಿದ್ದಾಳೆ. ಗೆಳೆಯ ದೂರವಾದ ಬಳಿಕವೂ ಆತನಿಗಾಗಿ ಕಾಯುತ್ತಿದ್ದ ಈ ಮಾಜಿ ಗೆಳತಿ ಆಗಮಿಸುತ್ತಿದ್ದಂತೆ ಸಂಭ್ರಮಾಚರಣೆ ವಾತಾವರಣ ಬದಲಾಗಿದೆ. ಈ ಕುರಿತು ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಇಷ್ಟೇ ಅಲ್ಲ ಎಲ್ಲರಿಗೂ ಇಂತಹ ಪತ್ನಿ ಸಿಗಲಿ ಎಂದು ಹಾರೈಸುತ್ತಿದ್ದಾರೆ. ಅಷ್ಟಕ್ಕೂ ಸಮಾರಂಭದಲ್ಲಿ ಏನಾಯ್ತು?
ಈ ಘಟನೆ ಎಲ್ಲಿ ನಡೆದಿದೆ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಭಾರಿ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಈ ಘಟನೆ ಕುರಿತು ಮಾಹಿತಿ ನೀಡಲಾಗಿದೆ. ಪತಿ ಹಾಗೂ ಪತ್ನಿಯ ಮೊದಲ ವಿವಾಹ ವಾರ್ಷಿಕೋತ್ಸವ. ಅದ್ಧೂರಿಯಾಗಿ ಆಚರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಕೇಕ್ ಕತ್ತರಿಸಿ, ಆಪ್ತರು, ಕುಟುಂಬಸ್ಥರನ್ನು ಭೋಜನಕ್ಕೆ ಆಹ್ವಾನಿಸಲಾಗಿತ್ತು. ಸಮಾರಂಭ ಆರಂಭಗೊಂಡಿದೆ. ಇತ್ತ ಪತಿ ಹಾಗೂ ಪತ್ನಿ ಹೂವಿನ ಮಾಲೆ ಧರಿಸಿ ವೇದಿಕೆಯಲ್ಲಿ ನಿಂತಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲು ಮುಂದಾಗಿದ್ದಾರೆ.
25ನೇ ವಿವಾಹ ವಾರ್ಷಿಕೋತ್ಸವಕ್ಕೆ ಮುದ್ದಿನ ಪತ್ನಿಗೆ 7 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕೊಟ್ಟ ಪತಿರಾಯ!
ಈ ವೇಳೆ ಇದೇ ಸಮಾರಂಭಕ್ಕೆ ಪತಿಯ ಮಾಜಿ ಗೆಳತಿ ಹಾಜರಾಗಿದ್ದಾಳೆ. ವಿಶೇಷ ಅಂದರೆ ಪತಿಯ ಮಾಜಿ ಗೆಳತಿಗೆ ಪತ್ನಿಯೇ ಆಹ್ವಾನ ನೀಡಿದ್ದಾಳೆ. ಪತಿಯ ಮಾಜಿ ಗೆಳತಿ ಕಳೆದೊಂದು ವರ್ಷದಿಂದ ಲವ್ ಬ್ರೇಕ್ಅಪ್ ನೋವಿನಲ್ಲೇ ದಿನ ದೂಡುತ್ತಿದ್ದಾಳೆ. ಹಲವು ಕಾರಣಗಳಿಂದ ಇವರ ಮದುವೆ ನಡೆಯಲಿಲ್ಲ. ಆದರೆ ಮಾಜಿ ಗೆಳತಿ ನೋವು ಇನ್ನು ಮಾಸಿಲ್ಲ. ಬೇರೆ ಮದುವೆಯೂ ಆಗಿಲ್ಲ. ಈಕೆಯ ಕಣ್ಣೀರ ಕತೆ ಕೇಳಿ ಪತ್ನಿ ಮನ ಕರಗಿದೆ. ಹೀಗಾಗಿ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಆಹ್ವಾನಿಸಿದ್ದಾಳೆ ಎಂದು ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ.
ಮಾಜಿ ಗೆಳತಿಯ ಕಂಡು ಪತಿ ಭಾವುಕನಾಗಿದ್ದಾನೆ. ವೇದಿಕೆ ಹತ್ತಿ ಬಂದ ಮಾಜಿ ಗೆಳತಿಯನ್ನು ಬಿಗಿದಪ್ಪಿಕೊಂಡಿದ್ದಾನೆ. ಅತ್ತ ಮಾಜಿ ಗೆಳತಿ ಕೂಡ ಭಾವುಕಳಾಗಿದ್ದಾಳೆ. ಕಣ್ಣೀರು ಜಿನುಗಲು ಆರಂಭಿಸಿದೆ. ಸಂತೈಸಿದರೂ ಮಾಜಿ ಗೆಳತಿಗೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇವರಿಬ್ಬರ ಸಮಾಗಮವನ್ನು ಪತ್ನಿ ಆನಂದಿಸಿದ್ದಾಳೆ. ಚಪ್ಪಾಳೆ ಹೊಡೆದು ಹುರಿದುಂಬಿಸಿದ್ದಾಳೆ. ಇಷ್ಟೇ ಅಲ್ಲ ಪತಿ ಕೈಗೆ ಗುಲಾಬಿ ಹೂವು ಸ್ವೀಟ್ ನೀಡಿ ಎರಡನ್ನೂ ಗೆಳತಿ ನೀಡುವಂತೆ ಸೂಚಿಸಿದ್ದಾಳೆ.
ಪತ್ನಿ ಮಾತಿನಂತೆ ಪತಿ ಮಂಡಿಯೂರಿ ತನ್ನ ಮಾಜಿ ಗೆಳತಿಗೆ ಗುಲಾಬಿ ಹೂವು ನೀಡಿದ್ದಾನೆ. ಬಳಿಕ ಮತ್ತೊಮ್ಮೆ ಬಿಗಿದಪ್ಪಿ ಸಂತೈಸಿದ್ದಾನೆ. ಈ ವಿಡಿಯೋಗೆ ಭಾರಿ ಕಮೆಂಟ್ ವ್ಯಕ್ತವಾಗಿದೆ. ಈ ರೀತಿ ಪತ್ನಿ ಎಲ್ಲಾದರೂ ಇದ್ದಾರ? ಒಂದೆರೆಡುು ನಿಮಿಷ ಫೋನ್ ಎಂಗೇಜ್ ಆದರೆ ಸಾಕು ಪತ್ನಿಯ ಅನುಮಾನ, ಜಗಳ ತಾರಕ್ಕೇರುತ್ತದೆ. ಆದರೆ ಇಲ್ಲಿ ಮಾಜಿ ಗೆಳೆತಿಯನ್ನು ಕೆರದು ಜೊತೆಯಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಇಂತಹ ಪತ್ನಿ ಎಲ್ಲರಿಗೂ ಸಿಗಲಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಸತ್ಯಾಸತ್ಯತೆ ಸ್ಪಷ್ಟವಾಗಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿದೆ.
ನವಿರಾದ ಪ್ರೇಮಕ್ಕೆ ವರ್ಷದ ಸಂಭ್ರಮ: ತುಳಸಿ- ಮಾಧವ್ಗೆ ಮತ್ತೆ ಮದುವೆ! ಏನಿದು ಸೀರಿಯಲ್ ಟ್ವಿಸ್ಟ್?
