Relationship Tips : ಯಪ್ಪಾ..! ಎಂಥೆಂತಾ ಸುಳ್ಳು ಹೇಳ್ತಾರೆ ಈ ಹುಡುಗ್ರು
ಸುಳ್ಳು ಒಂದಲ್ಲ ಒಂದು ರೀತಿಯಲ್ಲಿ ಸಂಬಂಧವನ್ನು ಹಾಳು ಮಾಡುತ್ತದೆ. ಇದು ನಂಬಿಕೆಯ ಅಡಿಪಾಯವನ್ನು ಅಲುಗಾಡಿಸುತ್ತದೆ. ದಾಂಪತ್ಯದಲ್ಲಿ ಸುಳ್ಳು ನುಸುಳಿದಾಗ ಸಂಸಾರ ದಾರಿ ತಪ್ಪುತ್ತದೆ. ಇದು ಗೊತ್ತಿದ್ರೂ ಬಹುತೇಕ ಹುಡುಗ್ರು ಸುಳ್ಳಿನ ಮನೆ ಕಟ್ಟುತ್ತಾರೆ.
ನಂಬಿಕೆ ಮೇಲೆ ಪ್ರತಿಯೊಂದು ಸಂಬಂಧ ನಿಂತಿರುತ್ತದೆ. ವಿಶೇಷವಾಗಿ ಪ್ರೀತಿಗೆ ನಂಬಿಕೆ ಮುಖ್ಯ. ಬಾಯ್ ಫ್ರೆಂಡ್ ಮೇಲೆ ಹುಡುಗಿಯರು ನಂಬಿಕೆ ಇಟ್ಟಿರುತ್ತಾರೆ. ಅವರು ಹೇಳೋದೆಲ್ಲ ಸತ್ಯವೆಂದು ನಂಬ್ತಾರೆ. ಆದ್ರೆ ಇದೇ ನಂಬಿಕೆ ಅವರಿಗೆ ಬಲವಾದ ಪೆಟ್ಟು ನೀಡುತ್ತದೆ. ಯಾಕೆಂದ್ರೆ ಹೆಚ್ಚು ಸುಳ್ಳು ಹೇಳೋರಲ್ಲಿ ಬಾಯ್ಸ್ ಮುಂದಿದ್ದಾರೆ. ಅದ್ರಲ್ಲೂ ಪ್ರೀತಿಸುವ ಹುಡುಗಿ ಮುಂದೆ ಅನೇಕ ಹುಡುಗ್ರು ಕಂತೆ ಕಂತೆ ಸುಳ್ಳು ಹೇಳ್ತಾರೆ.
ಹುಡುಗ್ರು ಸುಳ್ಳು (Lie) ಹೇಳೋಕೆ ಅನೇಕ ಕಾರಣಗಳಿರುತ್ತವೆ. ಸಂಗಾತಿ ಮಧ್ಯೆ ಯಾವ ರೀತಿ ಸಂಬಂಧ (Relationship) ವಿದೆ ಎಂಬುದನ್ನು ಕೂಡ ಸುಳ್ಳು ಅವಲಂಬಿಸಿರುತ್ತದೆ. ಸಂಗಾತಿ ಜೊತೆ ಜಗಳ (Fight) ವಾಡುವುದನ್ನು ತಪ್ಪಿಸಲು ಕೆಲವರು ಸುಳ್ಳು ಹೇಳ್ತಾರೆ. ಮತ್ತೆ ಕೆಲ ಹುಡುಗ್ರಿಗೆ ತಮ್ಮ ಇಮೇಜ್ ಹಾಳ್ಮಾಡಿಕೊಳ್ಳಲು ಇಷ್ಟವಿರೋದಿಲ್ಲ ಹಾಗಾಗಿ ಸುಳ್ಳು ಹೇಳ್ತಾರೆ. ಮತ್ತೆ ಕೆಲ ಹುಡುಗ್ರು ಸಖಾಸುಮ್ಮನೆ ಯಾಕೆ ವಿಷ್ಯ ಎಳೆಯೋದು ಎನ್ನುವ ಕಾರಣಕ್ಕೆ ಮನಸ್ಸಿಗೆ ಬಂದದ್ದನ್ನು ಹೇಳಿ ಸುಮ್ಮನಾಗ್ತಾರೆ. ಇನ್ನೂ ಕೆಲ ಹುಡುಗ್ರಿಗೆ ತಮ್ಮ ಮೇಲೆ ಆತ್ಮವಿಶ್ವಾಸ (Confidence) ವಿರೋದಿಲ್ಲ, ತಾವು ಮಾಡುವ ಕೆಲಸ ನಾಚಿಕೆ ಕೆಲಸ ಎಂದುಕೊಳ್ತಾರೆ. ತಮ್ಮ ಬಗ್ಗೆ ಪಶ್ಚಾತಾಪ ಪಡ್ತಾರೆ. ಹಾಗಾಗಿ ಅದನ್ನು ಹುಡುಗಿ ಮುಂದೆ ಹೇಳಿಕೊಳ್ಳದೆ ಸುಳ್ಳು ಹೇಳ್ತಾರೆ. ಬಾಲ್ಯದಿಂದಲೂ ಸುಳ್ಳು ಹೇಳಿ ಅಭ್ಯಾಸವಾದವರಿಗೆ ಅದ್ರಿಂದ ಹೊರಬರಲು ಸಾಧ್ಯವಾಗೋದಿಲ್ಲ. ಸಂಗಾತಿ ಮುಂದೆ ಕೂಡ ಸುಳ್ಳು ಹೇಳೋದನ್ನು ಅವರು ಬಿಡೋದಿಲ್ಲ. ಕೆಲ ಹುಡುಗಿಯರು ತಮ್ಮ ಬಾಯ್ ಫ್ರೆಂಡ್ ಯಾವ ರೀತಿ ಸುಳ್ಳು ಹೇಳಿದ್ರು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಮಹಿಳೆಯರಿಗೆ ಪ್ರೀತಿಗಿಂತಲೂ, ಶ್ರೀಮಂತಿಕೆಯೇ ಮುಖ್ಯವಂತೆ!
ಇಂತಿಂತ ಸುಳ್ಳು ಹೇಳ್ತಾರೆ ಹುಡುಗ್ರು : ಮನೆ ಬಗ್ಗೆ ಸುಳ್ಳಿ ಹೇಳಿದ ಬಾಯ್ ಫ್ರೆಂಡ್ : ಈ ಹುಡುಗಿ ಪ್ರೇಮಿ ಮನೆ ಬಗ್ಗೆ ಸದಾ ಸುಳ್ಳು ಹೇಳ್ತಿದ್ದನಂತೆ. ಯಾವಾಗ ಮನೆ ವಿಷ್ಯ ಕೇಳಿದ್ರೂ ಅದ್ರ ಬಗ್ಗೆ ಸರಿಯಾಗಿ ಮಾತನಾಡ್ತಿರಲಿಲ್ಲವಂತೆ. ಒಂದೇ ಒಂದು ಬಾರಿ ಆತನ ಮನೆಗೆ ಹೋಗಿ ಬಂದಿದ್ದಳಂತೆ ಹುಡುಗಿ. ಆದ್ರೆ ಅದು ಆತನ ಮನೆಯಾಗಿರಲಿಲ್ಲ, ಸ್ನೇಹಿತ ಮನೆಯಾಗಿತ್ತು ಎಂಬುದು ಕೊನೆಯಲ್ಲಿ ಗೊತ್ತಾಗಿದೆ. ಹುಡುಗಿ ಪ್ರೀತಿಸುತ್ತಿದ್ದ ಹುಡುಗನಿಗೆ ಮೊದಲೇ ಮದುವೆಯಾಗಿದೆ ಎಂಬ ಸಂಗತಿ ಹುಡುಗಿಗೆ ಆಘಾತ ತಂದಿತ್ತಂತೆ.
ಅಮ್ಮನ ಬಗ್ಗೆ ಸುಳ್ಳು ಹೇಳಿ ತಪ್ಪಿಸಿಕೊಂಡ ಹುಡುಗ : ಇಬ್ಬರದ್ದು ಬರೋಬ್ಬರಿ 11 ವರ್ಷಗಳ ಪ್ರೀತಿ. ಶಾಲೆ ದಿನಗಳಲ್ಲಿಯೇ ಆಕೆಯನ್ನು ಪ್ರೀತಿ ಮಾಡ್ತಿದ್ದ ಹುಡುಗ ಯಾವುದಕ್ಕೂ ಅಡ್ಡಿ ಮಾಡಿರಲಿಲ್ಲವಂತೆ. ಆದ್ರೆ ಮದುವೆ ವಿಷ್ಯ ಬಂದಾಗ ಮಾತು ಬದಲಿಸಿದ್ದನಂತೆ. ಮನೆಯಲ್ಲಿ ಅರೇಂಜ್ಡ್ ಮ್ಯಾರೇಜ್ ಮಾಡಲು ಮುಂದಾದಾಗ, ನಮ್ಮ ಮನೆಯಲ್ಲಿ ಕೆಲಸ ಮಾಡುವ ಹುಡುಗಿ ಇಷ್ಟವಿಲ್ಲ. ಅಮ್ಮನಿಗೆ ಮನೆಯಲ್ಲಿರುವ ಸೊಸೆ ಬೇಕಂತೆ ಎಂದು ಸುಳ್ಳಿ ಹೇಳಿದ್ದನಂತೆ ಹುಡುಗ.
ಒಂದಲ್ಲ ಎರಡಲ್ಲ ಇವನದ್ದು ಸುಳ್ಳಿನ ಮನೆ : ಮನುಷ್ಯನಾದವನು ಅಲ್ಲೋ ಇಲ್ಲೋ ಸುಳ್ಳುಗಳನ್ನು ಹೇಳ್ಬೇಕಾಗುತ್ತದೆ. ಆದ್ರೆ ಸಣ್ಣಪುಟ್ಟ ವಿಷ್ಯಕ್ಕೂ ಸುಳ್ಳು ಹೇಳಿದ್ರೆ ಜೀವನ ಕಷ್ಟವಾಗುತ್ತೆ. ಈ ಹುಡುಗಿ ಬಾಯ್ ಫ್ರೆಂಡ್ ದೊಡ್ಡ ಸಂಗತಿ ಇರಲಿ, ಬೆಳಿಗ್ಗೆ ಉಪಹಾರ ಸೇವನೆ ಮಾಡಿದ್ರಿಂದ ಹಿಡಿದು ರಾತ್ರಿ ಮಲಗೋವರೆಗೆ ಯಾವ ಬಗ್ಗೆಯೂ ಸತ್ಯ ಹೇಳ್ತಿರಲಿಲ್ಲವಂತೆ. ಬಾಲ್ಯದಿಂದಲೇ ಅವನಿಗೆ ಸುಳ್ಳು ಅಭ್ಯಾಸವಾಗಿತ್ತು ಎನ್ನುತ್ತಾಳೆ ಹುಡುಗಿ.
ಮಗುವಾದ್ರೆ ಸಂಬಂಧ ಸುಧಾರಿಸೋದು ಹೌದಾ? ಹ್ಯಾಪಿ ಮ್ಯಾರೀಡ್ ಲೈಫಿಗೆ ಟಿಪ್ಸ್
ನೌಕರಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದ : ಹುಡುಗಿಯರ ವಯಸ್ಸು ಕೇಳಬಾರದು, ಹುಡುಗ್ರ ಸಂಬಳ ಕೇಳಬಾರದು ಎನ್ನುವ ಮಾತಿದೆ. ಮದುವೆಯಾಗುವ ಹುಡುಗಿ ಸಂಬಳ ಕೇಳದೆ ಇರೋಕೆ ಸಾಧ್ಯವಿಲ್ಲ. ಈ ಹುಡುಗ ಪ್ಯಾಕೇಜ್ ವಿಪರೀತ ಹೆಚ್ಚಿಗೆ ಹೇಳಿದ್ದನಂತೆ. ಆರು ತಿಂಗಳಲ್ಲೇ ಅವನ ಬಣ್ಣ ಗೊತ್ತಾಯ್ತು ಪ್ರೀತಿ ಮುರಿದುಬಿತ್ತು ಎನ್ನುತ್ತಾಳೆ ಹುಡುಗಿ. ಸುಳ್ಳು ಒಂದಲ್ಲ ಒಂದು ಸಮಯದಲ್ಲಿ ಬಹಿರಂಗವಾಗುತ್ತದೆ. ಸತ್ಯ ಕಹಿಯಾಗಿದ್ರೂ ಭವಿಷ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಮನೋತಜ್ಞರು.