Asianet Suvarna News Asianet Suvarna News

Feelfree: ಗಂಡನ ಜೊತೆ ಸೆಕ್ಸ್ ಓಕೆ, ಕಣ್‌ಮುಂದೆ ಬೆತ್ತಲಾಗೋಲ್ಲ ಅಂತಾಳಲ್ಲ ಯಾಕೆ?

ಕೆಲವು ಹೆಣ್ಣುಮಕ್ಕಳಿಗೆ ಎಷ್ಟೇ ಆಪ್ತ ಗಂಡಸಾಗಿರಲಿ, ಅವರ ಮುಂದೆ ಬೆತ್ತಲಾಗಲು ಸಾಧ್ಯವಾಗದ ಒಂದು ಫೋಬಿಯಾ ಇರುತ್ತದೆ. ಹಾಗಂತ ಇವರಿಂದ ಸೆಕ್ಸ್‌ಗೇನೂ ಅಡ್ಡಿಯಿರೋಲ್ಲ. ಈ ವಿಚಿತ್ರ ಸಮಸ್ಯೆ ಬಗ್ಗೆ ಇಲ್ಲಿದೆ ವಿವರ. 
 

Why Some women hesitate to become nude with the light on during sex
Author
Bengaluru, First Published Feb 9, 2022, 6:06 PM IST

ಪ್ರಶ್ನೆ: ನಾನು ಮೂವತ್ತು ವರ್ಷ ವಯಸ್ಸಿನ ವಿವಾಹಿತ. ಮದುವೆಯಾಗಿ (Marriage) ಒಂದು ವರ್ಷವಾಗಿದೆ. ಅವಳಿಗೆ ಇಪ್ಪತ್ತೆಂಟು ವರ್ಷ. ನಮ್ಮದೊಂದು ವಿಚಿತ್ರ ಸಮಸ್ಯೆ ಇದೆ. ಏನೆಂದರೆ ಆಕೆ ನನ್ನ ಮುಂದೆ ನಗ್ನವಾಗಿ (Nude) ಕಾಣಿಸಿಕೊಳ್ಳಲು ಒಪ್ಪುವುದೇ ಇಲ್ಲ. ಮದುವೆಯಾಗಿ ಒಂದು ವರ್ಷವಾದರೂ ಆಕೆಯನ್ನು ಸರಿಯಾಗಿ ಬೆಳಕಿನಲ್ಲಿ ನಗ್ನವಾಗಿ ನಾನು ನೋಡಿದ್ದೇ ಇಲ್ಲ. ಹಾಗೆಂದು ನಮ್ಮ ನಡುವೆ ಸೆಕ್ಸ್ (Sex) ಇಲ್ಲವೆಂದಲ್ಲ. ವಾರಕ್ಕೆ ಮೂರು ಬಾರಿಯಾದರೂ ಮಿಲನಕ್ರಿಯೆಯಲ್ಲಿ ನಾವು ಸುಖ ಕಾಣುತ್ತೇವೆ. ಆಕೆಗೆ ನನ್ನ ನಗ್ನತೆಯ ಬಗ್ಗೆ ಏನೂ ಭಯವಿಲ್ಲ. ಆದರೆ ತನ್ನ ದೇಹವನ್ನು ಪೂರ್ತಿಯಾಗಿ ತೋರಿಸುವುದು ಎಂದರೆ ಏನೋ ಭಯ. ಹಾಗೆಂದು ಆಕೆಗೆ ಯಾವ ಚರ್ಮ ರೋಗವೂ ಇಲ್ಲ. ಸ್ವಲ್ಪ ದಪ್ಪವಿದ್ದಾಳೆ, ಆದರೆ ಚೆನ್ನಾಗಿಯೇ ಇದ್ದಾಳೆ. ನಗ್ನತೆಯಿಂದ ಸೆಕ್ಸ್‌ಗೆ ಇನ್ನಷ್ಟು ಸುಖ ಸೇರ್ಪಡೆಯಾಗುತ್ತದೆ ಎಂದು ನಾನು ಹೇಳಿದರೂ ಆಕೆ ಆ ಮಾತನ್ನು ತಳ್ಳಿ ಹಾಕುತ್ತಾಳೆ. ಏನು ಮಾಡಲಿ?

ಉತ್ತರ: ಆಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತಿಗೆಳೆಯಿರಿ. ಇದನ್ನು ಸೆಕ್ಸ್ ಚಿಕಿತ್ಸೆಯ ಪರಿಭಾಷೆಯಲ್ಲಿ ಜಿಮ್ನೋಫೋಬಿಯಾ (Gymnophobia) ಅನ್ನುತ್ತಾರೆ. ಈ ಸಮಸ್ಯೆಯನ್ನು ಹೊಂದಿದವರು ತಮ್ಮ ದೇಹವನ್ನು ತಾವೇ ನಗ್ನವಾಗಿ ನೋಡಿಕೊಳ್ಳಲು ಹಿಂಜರಿಯುತ್ತಾರೆ. ಮಾತ್ರವಲ್ಲ ಇನ್ನೊಬ್ಬರಿಗೆ ತಮ್ಮ ನಗ್ನ ದೇಹವನ್ನು ತೋರಿಸಲೂ ಅಂಜಿಕೊಳ್ಳುತ್ತಾರೆ. ಇಂಥವರು ಸ್ನಾನದ ಸಮಯದಲ್ಲೂ ಪೂರ್ತಿ ನಗ್ನರಾಗುವುದಿಲ್ಲ. ಇನ್ನೊಬ್ಬರು ಇದ್ದರೆ ಅವರ ಸಮ್ಮುಖದಲ್ಲಿ ಸ್ನಾನ ಮಾಡಲು ಇವರಿಂದ ಸಾಧ್ಯವಿಲ್ಲ. ಹಾಗೇ ಸೆಕ್ಸ್‌ನ ಸಂದರ್ಭದಲ್ಲಿ ತಮ್ಮ ನಗ್ನ ದೇಹವನ್ನು ಸಂಗಾತಿಗೆ ತೋರಿಸಲು ಇಚ್ಛೆಪಡುವುದಿಲ್ಲ. ಇವರಲ್ಲಿ ಕೆಲವರು ಇನ್ನೊಬ್ಬರ ನಗ್ನ ದೇಹ ನೋಡಲೂ ಅಂಜುತ್ತಾರೆ. 

ಹೆಣ್ಣು ಮೇಲಿರುವ ಭಂಗಿಯಿಂದ ಯಾರಿಗೆ ಹೆಚ್ಚು ಸುಖ? ವಾತ್ಸಾಯನ ಏನ್ ಹೇಳ್ತಾನೆ?

ಹಾಗಿದ್ದರೆ ಇದಕ್ಕೆ ಪರಿಹಾರ ಏನು? ಒಳ್ಳೆಯ ಲೈಂಗಿಕ ತಜ್ಞರನ್ನು ಹುಡುಕಿ ಅವರಿಗೊಮ್ಮೆ ತೋರಿಸಿ. ಇಂಥ ಸಮಸ್ಯೆ ಯಾಕೆ ಉಂಟಾಗುತ್ತದೆ ಅನ್ನುವುದು ಸ್ಪಷ್ಟವಿಲ್ಲ. ಆದರೆ ಬಾಲ್ಯದ ಹಲವು ಅನುಭವಗಳಿಂದ ಬಂದಿರಬಹುದು. ಅವರ ದೇಹದ ಬಗ್ಗೆ ಅವರಿಗೆ ಕೀಳರಿಮೆ ಇರಬಹುದು. ಈ ಕೀಳರಿಮೆಯನ್ನು ನೀಗುವುದೇ ಪರಿಹಾರ. ಅದನ್ನು ಹೇಗೆ ಮಾಡುತ್ತೀರೋ ನೋಡಿ. ಚಿಕಿತ್ಸೆ, ಕೌನ್ಸೆಲಿಂಗ್‌ ಕೊಡಿಸಬಹುದು. ಮಾತಿನ ಮೂಲಕ ವಿಶ್ವಾಸಕ್ಕೆ ತೆಗೆದುಕೊಂಡು ಪ್ರೀತಿಯ ಮೂಲಕ ಗೆಲ್ಲಬಹುದು. ಆದರೆ ಯಾವತ್ತೂ ಆಕೆಯ ದೇಹದ ಬಗ್ಗೆ ಹಗುರ ಮಾತನಾಡಲು ಹೋಗಬೇಡಿ. ನೀವು ತಮಾಷೆಗಾಗಿ ಆಡುವ ಒಂದು ಮಾತು ಕೂಡ ಅನಾಹುತಕ್ಕೆ ಕಾರಣ ಆಗಬಹುದು. ಅವರ ದೇಹದ ಮೇಲೂ, ನಿಮ್ಮ ದೇಹದ ಮೇಲೂ ಪ್ರೀತಿ ಇರಲಿ. ಕಡೆಗೂ ನಿಮ್ಮ ಸುಖಕ್ಕೆ ಮೂಲ ಆಗುವುದು ಈ ದೇಹಗಳೇ ಅಲ್ಲವೇ. 

Feelfree: ಹಳೇ ಬಾಯ್‌ಫ್ರೆಂಡ್‌ ಜೊತೆ ಪತ್ನಿ ಸೆಕ್ಸ್ ಮಾಡ್ತಾ ಇರಬಹುದೇ? ತಿಳಿಯೋದು ಹೇಗೆ?

ಪ್ರಶ್ನೆ: ನನ್ನ ಕಚೇರಿಯ ಸಹೋದ್ಯೋಗಿಯೊಬ್ಬಳು, ವರ್ಷಕ್ಕೊಬ್ಬಳಂತೆ ಸಂಗಾತಿಗಳನ್ನು ಬದಲಾಯಿಸುತ್ತಿರುತ್ತಾಳೆ. ನಾನೂ ಅವಳೂ ಆತ್ಮೀಯ ಗೆಳತಿಯರು. ಆಕೆ ನನ್ನಲ್ಲಿ ಹಲವು ವಿಷಯ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಾಳೆ. ಅವಳು ಹೇಳುವ ಪ್ರಕಾರ, ಗಂಡಸರು ಕೇವಲ ದೈಹಿಕ ಸುಖಕ್ಕಾಗಿ ಮಾತ್ರ ಹೆಂಗಸರ ಸಮೀಪ ಬರುತ್ತಾರೆ. ಆದ್ದರಿಂದ ನಾವೂ ಕೂಡ ಅವರನ್ನು ಎಷ್ಟು ಬೇಕೋ ಅಷ್ಟೇ ಬಳಸಿಕೊಂಡು ಬಿಟ್ಟುಬಿಡಬೇಕು. ಇತ್ತೀಚೆಗೆ ನಾನು ಕೂಡ ಈಕೆಯ ಸಿದ್ಧಾಂತವನ್ನು ನಂಬುತ್ತಿದ್ದೇನಾ ಅನಿಸಲು ಶುರುವಾಗಿದೆ. ನಾನೂ ಹಿಂದೆ ಒಬ್ಬ ಗೆಳೆಯನ ಜೊತೆಗಿದ್ದೆ. ಒಂದು ವರ್ಷದಲ್ಲಿ ಅವನ ಕೊರತೆಗಳು ಕಾಣಿಸಲು ಶುರುವಾದವು. ಆತನನ್ನು ಬಿಟ್ಟಿದ್ದೇನೆ. ಈಗ ಮತ್ತೊಬ್ಬನ ಜೊತೆಗಿದ್ದೇನೆ. ಇದು ಸರಿಯಾ ತಪ್ಪಾ ಅಂತಲೂ ಯೋಚನೆ ಆಗುತ್ತದೆ. ದಾರಿ ತೋರಿಸಿ.

Feel free: ಮೊದಲ ಸೆಕ್ಸ್ ತುಂಬಾ ನೋವುಂಟು ಮಾಡುತ್ತದೆಯೇ? ಮೊದಲ ರಾತ್ರಿಯ ಬಗ್ಗೆ ತಪ್ಪು ಕಲ್ಪನೆಗಳು

ಉತ್ತರ: ನಿಮ್ಮದು ಸೆಕ್ಸ್‌ನ ಸಮಸ್ಯೆಯೋ ಅಥವಾ ಸಂಬಂಧದ ಸಮಸ್ಯೆಯೋ ಎಂಬುದು ನನಗೆ ಪೂರ್ತಿಯಾಗಿ ಅರ್ಥವಾಗಿಲ್ಲ. ಇದು ಸಂಬಂಧದ ಸಮಸ್ಯೆಯೇ ಆಗಿದ್ದರೆ, ನಿಮ್ಮ ಗೆಳತಿಗೆಗೆ ಖಂಡಿತವಾಗಿಯೂ ಕೌನ್ಸೆಲಿಂಗ್‌ನ ಅಗತ್ಯವಿದೆ. ನೀವೂ ಕೂಡ ನಿಮ್ಮ ಗೆಳತಿಯ ಮಾತುಗಳಿಗೆ ನಿಮ್ಮ ಮನಸ್ಸನ್ನು ಗುಲಾಮ ಆಗಿಸಿಕೊಳ್ಳುವುದನ್ನು ಬಿಡಬೇಕು. ನಿಮ್ಮದೇ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಲಿಯಬೇಕು. ಇನ್ನು ನಿಮ್ಮ ಸಮಸ್ಯೆ ಸೆಕ್ಸ್‌ಗೆ ಸಂಬಂಧಪಟ್ಟದ್ದು ಎಂದಾದರೆ, ಆಗಲೂ ಒಂದು ರೀತಿಯ ಚಿಕಿತ್ಸೆಯ ಅಗತ್ಯವಿದೆ. ಮನುಷ್ಯನೂ ಒಂದು ಪ್ರಾಣಿಯೇ, ಪ್ರಾಣಿಗಳು ತಮ್ಮ ಜೀವಿತ ಕಾಲದಲ್ಲಿ ಅನೇಕ ಸಂಗಾತಿಗಳ ಜತೆಗೆ ಸೆಕ್ಸ್ ಹೊಂದುತ್ತವೆ. ಒಬ್ಬ ಸಂಗಾತಿಯ ಹಾಗೆ ಇನ್ನೊಬ್ಬ ಸಂಗಾತಿ ಇರುವುದಿಲ್ಲ. ಮನುಷ್ಯರೆಲ್ಲರೂ ಅಪೂರ್ಣರೇ. ಹೀಗಾಗಿ ಎಲ್ಲ ಸಂಬಂಧಗಳಲ್ಲೂ ಒಂದಲ್ಲ ಒಂದು ಕೊರತೆ ಇರುವುದು ನಿಜ. ಹಾಗಾಗಿ ನೀವು ಪರಿಪೂರ್ಣ ಸಂಗಾತಿಯ ಹುಡುಕಾಟದಲ್ಲಿ ಇದ್ದರೆ ಸಫಲರಾಗಲಾರಿರಿ. ಕೊರತೆಗಳ ಜೊತೆಗೆ ಹೊಂದಿಕೊಂಡು ಹೋಗುವುದು ಸುಮಧುರ ಜೀವನದ ತಿರುಳಾಗಿದೆ.

 

Follow Us:
Download App:
  • android
  • ios