ವಯಸ್ಸಾದ ಮಹಿಳೆಯರಿಗ್ಯಾಕೆ ತಮಗಿಂತ ಸಣ್ಣ ವಯಸ್ಸಿನ ಪುರುಷ ಇಷ್ಟ ಆಗ್ತಾನೆ?

25 ವರ್ಷ ವಯಸ್ಸಿನ ಹೆಚ್ಚಿನ ಪುರುಷರು 2.9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರೊಂದಿಗೆ ಡೇಟಿಂಗ್ ಮಾಡುತ್ತಾರೆ. ಆದರೆ ಹಿರಿಯ ಮಹಿಳೆ ತಮಗಿಂತ ತುಂಬಾ ಕಿರಿಯ ಪುರುಷನೊಂದಿಗೆ ಡೇಟಿಂಗ್ ಮಾಡೋದಕ್ಕೆ ಇಷ್ಟ ಪಡೋದು ಯಾಕೆ ನೋಡೋಣ. 
 

Why Older Women Prefers to Date Younger Man pav

ಮಹಿಳೆಯರು ಸಾಮಾನ್ಯವಾಗಿ ವಯಸ್ಸಾದ ಪುರುಷರೊಂದಿಗೆ ಡೇಟಿಂಗ್ (Dating) ಮಾಡಲು ಬಯಸುತ್ತಾರೆ ಎಂದು ಇತ್ತೀಚಿನ ಸಂಶೋಧನೆಯಲ್ಲಿ ತಿಳಿದು ಬಂದಿದೆ. 20 ರ ಮಧ್ಯದಲ್ಲಿರುವ ಮಹಿಳೆಯರು ಸಾಮಾನ್ಯವಾಗಿ ತಮಗಿಂತ 2 ಅಥವಾ ಮೂರು ವರ್ಷ ಹೆಚ್ಚು ವಯಸ್ಸಿನ ಸಂಗಾತಿಯನ್ನು ಬಯಸುತ್ತಾರೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ಆದರೆ ಮಹಿಳೆಯರು ವಯಸ್ಸಾದಂತೆ, ಈ ಅಂತರವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಮಹಿಳೆಯರಿಗೆ ವಯಸ್ಸಾಗುತ್ತಾ (older women) ಸಾಗಿದಾಗ, ಅವರು ಡೇಟಿಂಗ್ ಜಗತ್ತಿಗೆ ಮತ್ತೆ ಪ್ರವೇಶಿಸಿದರೆ, ಅವರು ಸಾಮಾನ್ಯವಾಗಿ ತಮ್ಮ ವಯಸ್ಸು ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಪುರುಷ ಸಂಗಾತಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಏಕೆಂದರೆ ವಯಸ್ಸಾದ ಮಹಿಳೆಯರಿಗಿಂತ ಪುರುಷರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ವಯಸ್ಸಾದ ಮಹಿಳೆಯರು ತಮಗಿಂತ ಸಣ್ಣ ವಯಸ್ಸಿನ ಪುರುಷರನ್ನು (younger man) ಆಯ್ಕೆ ಮಾಡುತ್ತಾರೆ. 

ವಯಸ್ಸಾದ ಮಹಿಳೆಯನ್ನು ಮದುವೆಯಾಗುವುದರ ಪ್ರಯೋಜನಗಳೇನು?

ಪುರುಷರು ಯಾರೊಂದಿಗೆ ಡೇಟಿಂಗ್ ಮಾಡುತ್ತಾರೆ?
ಪುರುಷರ ವಿಷಯಕ್ಕೆ ಬಂದರೆ, ಅವರು ಇದಕ್ಕೆ ವಿರುದ್ಧವಾಗಿರುತ್ತಾರೆ. ಉದಾಹರಣೆಗೆ, 50 ವರ್ಷ ವಯಸ್ಸಿನ ನಟ ಲಿಯೊನಾರ್ಡೊ ಡಿಕಾಪ್ರಿಯೊ ಪ್ರಸ್ತುತ 26 ವರ್ಷದ ರೂಪದರ್ಶಿ (model) ವಿಟ್ಟೋರಿಯಾ ಸೆರೆಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಮನುಷ್ಯನ ವಯಸ್ಸು ಹೆಚ್ಚಾದಂತೆ, ಅವರು ಸಾಮಾನ್ಯವಾಗಿ ಕಿರಿಯ ಮಹಿಳೆಯರೊಂದಿಗೆ ಡೇಟಿಂಗ್ (dating with younger woman) ಮಾಡಲು ಬಯಸುತ್ತಾರೆ. ತಮ್ಮ 60 ರ ದಶಕದಲ್ಲಿ, ಪುರುಷರು ಹೆಚ್ಚಾಗಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಂಗಾತಿಗಳನ್ನು ಬಯಸುತ್ತಾರೆ. ವಿಶೇಷವಾಗಿ ಅವರು ಶ್ರೀಮಂತರಾಗಿದ್ದರೆ ಮತ್ತು ದೀರ್ಘ ಸಂಬಂಧವನ್ನು ಬಯಸದಿದ್ದರೆ ಇದೇ ಅವರ ಪ್ರಮುಖ ಆಯ್ಕೆಯಾಗಿರುತ್ತೆ.

ಪತಿ -ಪತ್ನಿ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು? ಅಧ್ಯಯನ ಏನು ಹೇಳುತ್ತೆ? 

ಸಂಶೋಧಕರು ಏನು ಹೇಳುತ್ತಾರೆ?
ಪುರುಷರು ಸಾಮಾನ್ಯವಾಗಿ ತಮಗಿಂತ ಒಂದೆರಡು ವರ್ಷ ಕಿರಿಯ ಮಹಿಳೆಯರೊಂದಿಗೆ ಸಂಬಂಧವನ್ನು ಪ್ರಾರಂಭಿಸುತ್ತಾರೆ, ಅವರು ವಯಸ್ಸಾದಂತೆ, ವಯಸ್ಸಿನ ಅಂತರವು ಹೆಚ್ಚಾಗುತ್ತದೆ" ಎಂದು ಸಂಶೋಧಕರು ತಿಳಿಸಿದ್ದಾರೆ. ಅದೇ ಮಹಿಳೆಯರು ಆರಂಭದಲ್ಲಿ ತಮ್ಮಗಿಂತ ದೊಡ್ಡವರನ್ನು ಬಯಸಿದ್ರೆ, ನಂತರ ದಿನಗಳಲ್ಲಿ ತಮಗಿಂತ ಕಿರಿಯ ಪುರುಷರನ್ನು ಆಯ್ಕೆ ಮಾಡುತ್ತಾರೆ. 

ಈ ರಾಶಿಯ ಮಹಿಳೆಯರಿಗೆ ಕಿರಿಯ ಯುವಕರು ಅಂದ್ರೆ ಪಂಚಪ್ರಾಣ..!

ಪರ್ಸನಲ್ ರಿಲೇಶನ್ಶಿಪ್ ಜರ್ನಲ್ನಲ್ಲಿ ಪ್ರಕಟವಾದ ಈ ಸಂಶೋಧನೆಯು (research) 50 ವರ್ಷಕ್ಕಿಂತ ಮೇಲ್ಪಟ್ಟ 40,000 ಪುರುಷರು ಮತ್ತು ಮಹಿಳೆಯರ ಡೇಟಿಂಗ್ ಇತಿಹಾಸ ಮತ್ತು ಅವರ ಸಂಬಂಧಗಳ ಆರಂಭದಲ್ಲಿ ವಯಸ್ಸಿನ ವ್ಯತ್ಯಾಸದ ಬಗ್ಗೆ ಡೇಟಾವನ್ನು ಸಂಗ್ರಹಿಸಿದೆ. 25 ವರ್ಷ ವಯಸ್ಸಿನ ಹೆಚ್ಚಿನ ಪುರುಷರು 2.9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರೊಂದಿಗೆ ಡೇಟಿಂಗ್ ಮಾಡುತ್ತಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಈ ಪುರುಷರು ವಯಸ್ಸಾದಂತೆ, ಈ ಅಂತರವು ಪ್ರತಿ ಐದು ವರ್ಷಗಳಿಗೊಮ್ಮೆ ಸುಮಾರು ಒಂದು ವರ್ಷ ಹೆಚ್ಚಾಗುತ್ತದೆ. ಶ್ರೀಮಂತ ಪುರುಷರು ತಮ್ಮ ಸ್ಥಾನಮಾನವನ್ನು ಹೆಚ್ಚಿಸಲು ಕಿರಿಯ ಮಹಿಳೆಯರ ಜೊತೆ ಡೇಟಿಂಗ್ ಮಾಡುತ್ತಾರೆ. ಕಿರಿಯ ಸಂಗಾತಿಯನ್ನು ಹೊಂದಿರುವುದು ವಯಸ್ಸಾದ ಪುರುಷರಿಗೆ ಸ್ಥಾನಮಾನದ ಸಂಕೇತವಾಗಿದೆ ಅನ್ನೋದನ್ನು ಸಂಶೋಧನೆ ಸೂಚಿಸಿದೆ.

Latest Videos
Follow Us:
Download App:
  • android
  • ios