ಪತಿ -ಪತ್ನಿ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು? ಅಧ್ಯಯನ ಏನು ಹೇಳುತ್ತೆ?
ಸಂಗಾತಿ ಅಥವಾ ಪತಿ-ಪತ್ನಿ ನಡುವೆ ಎಷ್ಟು ವರ್ಷದ ಅಂತರ ಇರಬೇಕು ಅನ್ನೋದು ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ಆದರೆ ತಜ್ಞರು ಕೆಲವೊಂದು ಅಂತರದ ಬಗ್ಗೆ ಸಲಹೆ ನೀಡುತ್ತಾರೆ.
ಅತಿ ಹೆಚ್ಚು ವಯಸ್ಸಿನ ಅಂತರ ಹಾಗೂ ಕಡಿಮೆ ಅಂತರ ಹೊಂದಿರುವ ದಂಪತಿ ನಮ್ಮ ಮುಂದೆ ಚೆನ್ನಾಗಿಯೇ ಬದುಕುತ್ತಿರುತ್ತಾರೆ. ಇಬ್ಬರ ನಡುವೆ ಶುದ್ಧವಾದ ಪ್ರೀತಿಯೊಂದಿದ್ದರೆ ವಯಸ್ಸು ಯಾವುದಕ್ಕೂ ಅಡ್ಡಿಯಾಗಲ್ಲ ಎಂಬುವುದು ಹಿರಿಯರ ಮಾತು. ಗಂಡು-ಹೆಣ್ಣಿನ ನಡುವೆ ವಯಸ್ಸಿನ ಅಂತರ ಇರಬೇಕು ಎಂಬುವುದು ಹಲವರ ಅಭಿಪ್ರಾಯವಾಗಿರುತ್ತದೆ. ಹಾಗಾದ್ರೆ ಸರಿಯಾದ ವಯಸ್ಸಿನ ಅಂತರ ಎಷ್ಟಿರಬೇಕು ಎಂಬುದರ ಮಾಹಿತಿ ಇಲ್ಲಿದೆ.
ಕೆಲ ಅಧ್ಯಯನಗಳ ಪ್ರಕಾರ, ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಈ ವಯಸ್ಸಿನ ಅಂತರ ಮುಖ್ಯವಾಗುತ್ತದೆ. ವಯಸ್ಸಿನ ಅಂತರ ಜೋಡಿಯ ಬದುಕಿನ ಮೇಲೆ ನೇರ ಪರಿಣಾಮ ಬೀಳುತ್ತದೆ ಎಂದು ಈ ಅಧ್ಯಯನ ಹೇಳುತ್ತದೆ. ಕಡಿಮೆ ವಯಸ್ಸಿನ ಅಂತರದ ಜೋಡಿಗಳಲ್ಲಿ ಹೊಂದಾಣಿಕೆ ಹೆಚ್ಚಾಗಿ ಕಂಡು ಬರುತ್ತದೆ ಎಂಬವುದು ಕೆಲವರ ವಾದವಾಗಿರುತ್ತದೆ.
ಈ ಹಿಂದೆ ಹುಡುಗನಿಗಿಂತ ಹುಡುಗಿ ಚಿಕ್ಕವಳಾಗಿರಬೇಕು ಎಂಬ ನಿಯಮವಿತ್ತು. ಇಂದು ಕಾಲ ಬದಲಾಗಿದ್ದು, ಹುಡುಗರು ತಮಗಿಂದ ಎರಡರಿಂದ ಮೂರು ವರ್ಷದ ದೊಡ್ಡವರನ್ನು ಮದುವೆಯಾಗುತ್ತಿದ್ದಾರೆ. ಇಬ್ಬರಲ್ಲಿ ಯಾರ ವಯಸ್ಸು ಹೆಚ್ಚಾಗಿರಬೇಕು ಎಂಬುದರ ಬಗ್ಗೆ ಹೇಳಲು ಅಸಾಧ್ಯ. ಹಿರಿಯರ ಪ್ರಕಾರ, ಹುಡುಗನ ವಯಸ್ಸೇ ಹೆಚ್ಚಿರಬೇಕೆಂದು ವಾದಿಸುತ್ತಾರೆ.
ಜೋಡಿ/ದಂಪತಿ ನಡುವಿನ ವಯಸ್ಸಿನ ಅಂತರ ಭಾವನಾತ್ಮಕ ಮತ್ತು ಮಾನಸಿಕತೆ ಮೇಲೆ ಪರಿಣಾಮ ಬೀರುತ್ತದೆ. ಆದರೆ ವಯಸ್ಸಿನ ಅಂತರವೊಂದೇ ಇಬ್ಬರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದರ್ಥವಲ್ಲ. ವಯಸ್ಸು ಹೊರತುಪಡಿಸಿಯೂ ಜೀವನದ ಮೇಲೆ ಪರಿಣಾಮ ಬೀರುತ್ತವೆ. ವಯಸ್ಸಿನ ಅಂತರದ ಆಯ್ಕೆ ವ್ಯಕ್ತಿಯ ಜೀವನ ಅನುಭವ, ಪ್ರೀತಿ, ತಿಳುವಳಿಕೆ ಮತ್ತು ಪರಸ್ಪರರ ಬಗೆಗಿನ ಮನೋಭಾವವನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ಇಂದು ಗಂಡಾಗಲಿ ಅಥವಾ ಹೆಣ್ಣಾಗಲಿ ತಮಗೆ ಎಷ್ಟು ವರ್ಷದ ಅಂತರದ ಸಂಗಾತಿ ಬೇಕೆಂದ ನಿರ್ಧರಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.
ಇಬ್ಬರು ಪರಸ್ಪರರಿಂದ ಪ್ರೀತಿಯಿಂದ ತೃಪ್ತರಾಗಿದ್ದರೇ ವಯಸ್ಸಿನ ಅಂತರನ ನಿಮ್ಮ ಸಂಬಂಧ ಅಥವಾ ಸಂಸಾರದ ಮೇಲೆ ಎಂದಿಗೂ ನಕಾರಾತ್ಮಕ ಪರಿಣಾಮ ಬೀರಲ್ಲ. ಯಾವುದೇ ಸಂಬಂಧದ ಯಶಸ್ಸು ಅಥವಾ ವೈಫಲ್ಯಕ್ಕೆ ವಯಸ್ಸಿನ ಅಂತರಕ್ಕೆ ಎಂದಿಗೂ ಕಾರಣವಾಗಲ್ಲ. ಆದ್ರೆ ಕೆಲವರು ಇದೇ ಕಾರಣ ನೀಡಿ ದೂರವಾಗಿರುವ ಉದಾಹರಣೆಗಳಿವೆ.
ನಗರ ಪ್ರದೇಶಗಳಲ್ಲಿ ವಯಸ್ಸಿನ ಅಂತರ ಎಂಬ ಕಲ್ಪನೆ ಕಡಿಮೆಯಾಗುತ್ತಿದೆ. ವಯಸ್ಸಿನ ಅಂತರವನ್ನು ದೊಡ್ಡದಾಗಿ ಪರಿಗಣಿಸುವ ಮನಸ್ಥಿತಿಯ ಜನರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಬಹುದು. ಆದ್ರೆ ಗ್ರಾಮೀಣ ಪ್ರದೇಶದಲ್ಲಿ ಗಂಡಿನ ವಯಸ್ಸು ಹುಡುಗಿಗಿಂತ ಎರಡು-ನಾಲ್ಕು ವರ್ಷ ಜಾಸ್ತಿ ಇರಬೇಕೆಂದು ಭಾವಿಸುತ್ತಾರೆ. ಹೆಚ್ಚು ವಯಸ್ಸಿನ ಅಂತರದ ಜೋಡಿಯನ್ನು ಗ್ರಾಮೀಣ ಭಾಗದ ಜನರು ಒಪ್ಪಿಕೊಳ್ಳುತ್ತಾರೆ. ಹಾಗಾದರೆ ಸರಿಯಾದ ವಯಸ್ಸಿನ ಅಂತರ ಎಷ್ಟು ಎಂಬುದನ್ನು ನೋಡೋಣ ಬನ್ನಿ.
ಕೆಲ ಅಧ್ಯಯನಗಳ ಪ್ರಕಾರ, ಜೋಡಿ ಅಥವಾ ಗಂಡ-ಹೆಂಡತಿ ನಡುವಿನ ವಯಸ್ಸಿನ ಅಂತರ 2 ರಿಂದ 5 ವರ್ಷ ಆಗಿರಬೇಕು ಎಂದು ಹೇಳುತ್ತದೆ. ಆದರೆ ಇಬ್ಬರಲ್ಲಿ ಯಾರ ವಯಸ್ಸು ಹೆಚ್ಚಾಗಿರಬೇಕು ಎಂಬುದನ್ನು ಜೋಡಿಗಳು ನಿರ್ಧರಿಸಿಕೊಳ್ಳಬೇಕು. ವಯಸ್ಸಿನ ಅಂತರದ ಆಯ್ಕೆ ಎಂಬುವುದು ವೈಯಕ್ತಿಯ ವಿಷಯ ಎಂದು ಅಧ್ಯಯನ ಹೇಳುತ್ತದೆ.