ಜಪಾನ್‌ನಲ್ಲಿ ದಂಪತಿ ಬೇರೆ ಬೇರೆ ಬೆಡ್ ರೂಮಿನಲ್ಲಿ ಮಲಗೋದೇಕೆ?

ಜಪಾನ್‌ನಲ್ಲಿ ತುಂಬಾ ದಂಪತಿಗಳು ಬೇರೆ ಬೇರೆ ಮಲಗುತ್ತಾರೆ. ಇವರ ಲೈಂಗಿಕ ಜೀವನ ಚೆನ್ನಾಗಿಯೇ ಬೇರೆ ಬೇರೆ ಬೆಡ್‌ರೂಮುಗಳಲ್ಲಿ ಮಲಗುವುದು ಇಲ್ಲಿ ಸಾಮಾನ್ಯ. ಇದ್ಯಾಕೆ ಹೀಗೆ?

 

Why Japanese couple sleep in different bed rooms bni

ಜಪಾನ್‌ನ ಮಧ್ಯಮ ವರ್ಗದ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳು ಸಣ್ಣವು. ಆದರೆ ಅನೇಕ ಜಪಾನೀ ದಂಪತಿಗಳು ಬೇರೆ ಬೇರೆ ಹಾಸಿಗೆ ಅಥವಾ ಕೋಣೆಗಳಲ್ಲಿ ಮಲಗುತ್ತಾರೆ. ನವದಂಪತಿಗಳು ಕೂಡ ಹೀಗೆ ಬೇರೆ ಮಲಗುತ್ತಾರೆ ಎಂದರೆ ನೀವು ನಂಬಬೇಕು. ಇದೇನೂ ಸಮಸ್ಯೆಯಲ್ಲ. ಇದು ಸಂಬಂಧಗಳ ಸಮಸ್ಯೆಯಲ್ಲ. ಅನೇಕ ಕಾರಣಗಳಿಂದ ಇದು ಒಳ್ಳೆಯದು ಎಂದು ಅವರು ನಂಬುತ್ತಾರೆ. ಜಪಾನ್‌ನಲ್ಲಿ ದಂಪತಿಗಳು ಪ್ರತ್ಯೇಕವಾಗಿ ಮಲಗಲು ಏಕೆ ಮುಂದಾಗುತ್ತಾರೆ ಎಂಬುದರ ಹಿನ್ನೆಲೆ ಇಲ್ಲಿದೆ. ಓದಿ.

1) ಜಪಾನಿನ ದಂಪತಿಗಳು ಪ್ರತ್ಯೇಕವಾಗಿ ಮಲಗಲು ನಿರ್ಧರಿಸುವ ಮೊದಲ ಕಾರಣ ಎಂದರೆ ವಿಭಿನ್ನ ಕೆಲಸದ ಟೈಮಿಂಗ್. ನೀವು ಕೆಲಸದಿಂದ ತಡವಾಗಿ ಮನೆಗೆ ಬಂದಿರಬಹುದು ಅತವಾ ಮುಂಜಾನೆ ಬೇಗನೆ ಹೊರಡಬಹುದು. ಆದರೆ ಇದಕ್ಕಾಗಿ ನಿಮ್ಮ ಸಂಗಾತಿಯನ್ನು ಎಬ್ಬಿಸಲು ಅವರಿರ ನಿದ್ರೆಯ ಆನಂದಕ್ಕೆ ಭಂಗ ಉಂಟುಮಾಡುತ್ತದೆ. ಅವರಿಗೆ ಉತ್ತಮ ಗುಣಮಟ್ಟದ ವಿಶ್ರಾಂತಿ ಸಿಗುವುದಿಲ್ಲ. ಇದಕ್ಕಾಗಿಯೇ ರಾತ್ರಿಯನ್ನು ಬೇರೆ ಕೋಣೆಯಲ್ಲಿ ಕಳೆಯುವುದು ಅರ್ಥಪೂರ್ಣವಾಗಿದೆ. ಇದು ಸಂಗಾತಿಗೆ ತೊಂದರೆಯಿಲ್ಲದ ಮತ್ತು ಆರೋಗ್ಯಕರ ನಿದ್ರೆಯನ್ನು ನೀಡುತ್ತದೆ.

2) ಜಪಾನಿನ ತಾಯಂದಿರು ತಮ್ಮ ಮಕ್ಕಳೊಂದಿಗೆ ಮಲಗುತ್ತಾರೆ. ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅವರು ಬೇರೆ ಕೋಣೆಗೆ ಹೋಗಲಿ ಎಂದು ಗಂಡ ಅಥವಾ ತಂದೆ ನಿರ್ಧರಿಸುತ್ತಾನೆ. ತಾಯಿಯ ಜೊತೆಗಿನ ಸಹನಿದ್ರೆಯು ಪೋಷಕರು ಮತ್ತು ಮಕ್ಕಳು ಹೆಚ್ಚು ಶಾಂತ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ ಎಂದು ವಿಜ್ಞಾನ ಸಾಬೀತುಪಡಿಸಿದೆ. ಇದು ಮಗುವಿಗೆ ಸ್ಥಿರವಾದ ತಾಪಮಾನ ಮತ್ತು ಹೃದಯ ಬಡಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದೇ ವೇಳೆಗೆ, ಇದು ಹಠಾತ್ ಶಿಶು ಸಾವಿನ ಸಿಂಡ್ರೋಮ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದು ಮಗುವಿಗೆ ಸ್ವಾಭಿಮಾನವನ್ನು ಹೊಂದಲು, ಬೇಗ ಸ್ವತಂತ್ರವಾಗಲು ಮತ್ತು ಶಾಲೆಯಲ್ಲಿ ಉತ್ತಮವಾಗಿ ಓದಲು ನೆರವಾಗುತ್ತದೆ.

3) ನಿತ್ಯವೂ ಅಂಟಿಕೊಂಡಿರುವುದು ಕೆಲವು ಸಂಗಾತಿಗಳಿಗೆ ಸಹ್ಯವಾಗುವುದಿಲ್ಲ. ಲೈಂಗಿಕತೆಯ ಸಂದರ್ಭದಲ್ಲಿ ಸಂಗಾತಿಯ ದೇಹ ಇನ್ನಷ್ಟು ಪ್ರಿಯವಾಗಲು ಇದು ಸಹಾಯವಾಗುತ್ತದೆ. ಅಂದರೆ ದಿನದ ಬಹುಕಾಲ ದೂರ ಇರುವ ದೇಹಗಳು ರಾತ್ರಿಯ ಲೈಂಗಿಕತೆಯ ಸಮಯದಲ್ಲಿ ಹತ್ತಿರವಾದಾಗ ಹೆಚ್ಚು ಆಪ್ತವಾಗುತ್ತವೆ. ಆದರೆ ಸೆಕ್ಸ್‌ನ ಬಳಿಕವೂ ಅಕ್ಕಪಕ್ಕದಲ್ಲಿರುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಸ್ತ್ರೀಯರು ಸಂಗಾತಿಯ ಬಳಿ ಇರಲು ಇಷ್ಟಪಡುತ್ತಾರೆ. ಪುರುಷನಿಂದ ಆಲಿಂಗನ ಇಷ್ಟಪಡುತ್ತಾರೆ. ಆದರೆ ಜಪಾನೀಯರು ಬಹು ಸ್ವತಂತ್ರ ಜೀವಿಗಳು. ಇಲ್ಲಿನ ಹೆಣ್ಣು ಮಕ್ಕಳಿಗೆ ಈ ರೂಲು ಅನ್ವಯ ಆಗುವುದಿಲ್ಲ. 

4) ಜಗತ್ತಿನ ಇತರ ಕಡೆಗಳಲ್ಲಿ ದಂಪತಿ ಬೇರೆಯಾಗಿ ಮಲಗಲು ಪ್ರಾರಂಭಿಸಿದರೆ ವಿಚ್ಛೇದನ ಹತ್ತಿರದಲ್ಲಿದೆ ಎಂದರ್ಥ. ಜಪಾನೀಯರು ಅದನ್ನು ವಿಭಿನ್ನವಾಗಿ ನೋಡುತ್ತಾರೆ. ಅವರು ತಮ್ಮ ನಿದ್ರೆಯನ್ನು ಬಹಳವಾಗಿ ಗೌರವಿಸುತ್ತಾರೆ ಮತ್ತು ನಿದ್ದೆ ಮಾಡುವಾಗ ಅವರು ತೊಂದರೆಗೊಳಗಾಗಲು ಬಯಸುವುದಿಲ್ಲ. ಅವರಿಗೆ ಗೊರಕೆ, ಪ್ರಕ್ಷುಬ್ಧ ನಿದ್ದೆ, ಒದೆಯುವುದು ಇತ್ಯಾದಿಗಳನ್ನು ಸಹಿಸಿಕೊಳ್ಳಲು ಇಷ್ಟವಿಲ್ಲ. ಬೇರೆ ಕೋಣೆ ಅಲ್ಲದಿದ್ದರೂ ಬೇರೆ ಮಂಚದಲ್ಲಿ ಮಲಗಲು ಇಷ್ಟಪಡುತ್ತಾರೆ.

ನನ್ನದು  ಅತ್ಯಂತ ಚಿಕ್ಕ ಪ್ರೈವೇಟ್ ಪಾರ್ಟ್: ಗಿನ್ನಿಸ್ ದಾಖಲೆಗೆ ಸೇರಿಸಿಕೊಳ್ಳಿ ಎಂದ ವ್ಯಕ್ತಿ

5) ಕೆಲವರು ಹತ್ತಿಯ ಹಾಸಿಗೆಯಲ್ಲಿ, ಇನ್ನು ಕೆಲವರು ಫೋಮ್ ಹಾಸಿಗೆಯಲ್ಲಿ, ಇನ್ನು ಕೆಲವರು ಕಾಯರ್ ಹಾಸಿಗೆಯಲ್ಲಿ ಮಲಗಲು ಇಷ್ಟಪಡುತ್ತಾರೆ. ಗಂಡ- ಹೆಂಡತಿ ಒಂದೇ ಮೆಟಿರಿಯಲ್‌ನ ಹಾಸಿಗೆ ಇಷ್ಟಪಡಬೇಕು ಎಂದೇನಿಲ್ಲ. ಕೆಲವರಿಗೆ ಕೆಲವು ಮೆಟೀರಿಯಲ್ ಆರಾಮದಾಯಕವಾಗುವುದಿಲ್ಲ. ಹೀಗಾಗಿ ಬೇರೆ ಹಾಸಿಗೆ ಅವಲಂಬಿಸುವುದುಂಟು. 

ನೀವೇನು ಮಾಡುತ್ತೀರಿ? ಗೊರಕೆ ಹೊಡೆಯುವ ಸಂಗಾತಿಯ ಜೊತೆಗೆ ಅದೇ ಹಾಸಿಗೆಯಲ್ಲಿ ಮಲಗುತ್ತೀರೋ ಅಥವಾ ಎದ್ದು ಅಚೆ ಕೋಣೆಗೆ ಹೋಗಿ ಮಲಗುತ್ತೀರೋ! 

ಮದ್ವೆನೂ ಬೇಡ... ಮಗುವಂತೂ ಬೇಡ್ವೇ ಬೇಡ... ಶೇ 45ರಷ್ಟು ಮಹಿಳೆಯರ ಆತಂಕದ ವರದಿ ಬಹಿರಂಗ
 

Latest Videos
Follow Us:
Download App:
  • android
  • ios