Fathers Day: ಹೇಳದೆ ಎಲ್ಲಾ ತಿಳಿದುಕೊಳ್ಳುವ ತಂದೆಗೆ ಧನ್ಯವಾದ ಹೇಳಲೊಂದು ದಿನ ಸಾಕೆ?

ಮಕ್ಕಳಿಗೆ ಅಮ್ಮನ ಜೊತೆ ಅಪ್ಪನ ಪ್ರೀತಿ, ಆಸರೆ, ನೆರಳು ಬೇಕು. ಸದಾ ನಮ್ಮ  ನಿಲ್ಲುವ ತಂದೆ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡ್ತಾನೆ. ಸ್ವಲ್ಪ ಮಾತು, ಕಡಿಮೆ ಸಮಯ ಮಕ್ಕಳ ಜೊತೆ ಕಳೆದ್ರೂ ಸಾಕಷ್ಟು ಕಲಿಸಿರ್ತಾನೆ ಅಪ್ಪ. 
 

Why Fathers Day Is Celebrate. History Of Fathers Day roo

ಅಮ್ಮನ ಸರಿತೂಕ ತೂಗೋನು ತಂದೆ. ಅಮ್ಮನಂತೆ ಸದಾ ಹಿಂದೆ ಮುಂದೆ ಓಡಾಡ್ತಾ, ಮುದ್ದು ಮಾಡ್ತಾ ತಂದೆ ಪ್ರೀತಿ ತೋರ್ಪಡಿಸದೆ ಇರಬಹುದು. ಹಾಗಂತ ಆತನಿಗೆ ಮಕ್ಕಳ ಮೇಲೆ ಪ್ರೀತಿ ಇಲ್ಲವೆಂದಲ್ಲ.  ಮಕ್ಕಳನ್ನು ಸರಿದಾರಿಯಲ್ಲಿ ನಡೆಸುವ, ಅವರ ಅಗತ್ಯತೆಗಳನ್ನು ಪೂರೈಸುವ ತಂದೆ, ತನ್ನೆಲ್ಲ ಕಷ್ಟ ಮರೆತು, ಮಕ್ಕಳು, ಕುಟುಂಬಕ್ಕಾಗಿ ದುಡಿಯುತ್ತಾನೆ. ಅದೆಷ್ಟೋ ನೋವನ್ನು ತನ್ನ ಮನಸ್ಸಿನಲ್ಲಿ ಬಚ್ಚಿಟ್ಟು, ಎಲ್ಲರ ಮುಂದೆ ಧೈರ್ಯವಂತ, ಶಕ್ತಿವಂತ, ಆರೋಗ್ಯವಂತ ಎಂದು ನಟನೆ ಮಾಡ್ತಾ ಜೀವನ ಸವೆಸುವವನು ತಂದೆ. ತಾಯಿಯ ಮಹತ್ವ ಹೇಳಲು, ಆಕೆಗೆ ಧನ್ಯವಾದ ಹೇಳಲು ತಾಯಂದಿರ ದಿನವನ್ನು ಆಚರಣೆ ಮಾಡಲಾಗುತ್ತದೆ. ಅದೇ ರೀತಿ ವಿಶ್ವ ತಂದೆಯಂದಿರ ದಿನವನ್ನು ಕೂಡ ಆಚರಣೆ ಮಾಡ್ತಾ ಬರಲಾಗಿದೆ. ವಿಶ್ವ ತಂದೆಯಂದಿರ ದಿನದ ಆರಂಭ ಹೇಗಾಯ್ತು, ಅದ್ರ ಮಹತ್ವವೇನು ಹಾಗೇ ಈ ದಿನ ನೀವೇನು ಮಾಡ್ಬಹುದು ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ವಿಶ್ವ ಅಪ್ಪಂದಿರ ದಿನವನ್ನು ಎಂದು ಆಚರಿಸಲಾಗುತ್ತದೆ? : ಅಪ್ಪಂದಿರ ದಿನವನ್ನು ಜೂನ್ ಮೂರನೇ ವಾರದಲ್ಲಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಜೂನ್ 18ರಂದು ಅಪ್ಪಂದಿರ ದಿನ (Fathers Day)ವನ್ನು ಆಚರಣೆ ಮಾಡಲಾಗ್ತಿದೆ.

Relationship Tips: ಮಗಳ ಪ್ರೀತಿಯಲ್ಲಿ ಅಮ್ಮ ಮಾಡ್ತಾಳೆ ಮುಗ್ದ ತಪ್ಪು

ವಿಶ್ವ ಅಪ್ಪಂದಿರ ದಿನದ ಇತಿಹಾಸ (History) : ಅಮೆರಿಕಾದಲ್ಲಿ ಮೊದಲು 1907ರಲ್ಲಿ ಅನಧಿಕೃತವಾಗಿ ವಿಶ್ವ ಅಪ್ಪಂದಿರ ದಿನವನ್ನು ಆಚರಣೆ ಮಾಡಲಾಯ್ತು. 1910ರಲ್ಲಿ ಅಧಿಕೃತ ರೂಪದಲ್ಲಿ ವಿಶ್ವ ಅಪ್ಪಂದಿರ ದಿನ ಆಚರಣೆ ಮಾಡಲಾಯ್ತು. ಇತಿಹಾಸಕಾರರ ಪ್ರಕಾರ, ಈ ದಿನವನ್ನು ಸೊನೊರಾ ಸ್ಮಾರ್ಟ್ ಡಾಡ್ (Sonora Smart Dodd)) ಪ್ರಾರಂಭಿಸಿದರು. ಸೋನೆರಾ ಅವರ ತಾಯಿ ಚಿಕ್ಕವಳಿದ್ದಾಗ ನಿಧನರಾಗಿದ್ದರು. ತಂದೆ ವಿಲಿಯಂ ಸ್ಮಾರ್ಟ್ ಅವರಿಗೆ ತಾಯಿ ಮತ್ತು ತಂದೆ ಇಬ್ಬರ ಪ್ರೀತಿಯನ್ನು ನೀಡಿದ್ದರು. ತಂದೆಯ ಪ್ರೀತಿ, ತ್ಯಾಗ, ಸಮರ್ಪಣಾ ಮನೋಭಾವ ಕಂಡು ತಾಯಂದಿರ ದಿನದ ಮಾದರಿಯಲ್ಲಿ  ತಂದೆಯರ ದಿನ  ಆಚರಿಸಲು ಸೋನೆರಾ ಚಿಂತಿಸಿದರು.

ಜೂನ್ 19, 1909 ರಂದು ಡಾಡ್ ಮೊದಲ ಬಾರಿಗೆ ತಂದೆಯ ದಿನವನ್ನು ಆಚರಿಸಿದರು.  1924 ರಲ್ಲಿ  ಆಗಿನ ಯುಎಸ್ ಅಧ್ಯಕ್ಷ ಕ್ಯಾಲ್ವಿನ್ ಕೋಲಿ ತಂದೆಯ ದಿನ ಆಚರಣೆಗೆ ಅಧಿಕೃತವಾಗಿ ಒಪ್ಪಿಗೆ ನೀಡಿದ್ರು. ಇದಾದ ನಾಲ್ಕು ದಶಕಗಳ ನಂತರ, 1966 ರಲ್ಲಿ ಅಧ್ಯಕ್ಷ ಲಿಂಡನ್ ಜಾನ್ಸನ್ ಪ್ರತಿ ವರ್ಷ ಜೂನ್ ಮೂರನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸುವ ಘೋಷಣೆ ಮಾಡಿದ್ರು. ಅಲ್ಲಿಂದ ಪ್ರತಿ ವರ್ಷ ಜೂನ್ ಮೂರನೇ ಭಾನುವಾರ ತಂದೆಯಂದಿರ ದಿನ ಆಚರಣೆ ಮಾಡಲಾಗುತ್ತದೆ. 

Extra Marital Affairs: ಪ್ರೀತಿಸಿ ಮದುವೆಯಾದ ಹುಡುಗ್ರು ಅಕ್ರಮ ಸಂಬಂಧ ಬೆಳೆಸೋದ್ಯಾಕೆ?

ಅಪ್ಪಂದಿರ ದಿನವನ್ನು ಹೀಗೆ ಸೆಲೆಬ್ರೆಟ್ ಮಾಡಿ : ಹಗಲಿರುಳು ದುಡಿದು ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿದವರು ತಂದೆ. ನಿಮಗಾಗಿ ತಮ್ಮ ಆಸೆಗಳನ್ನು ಮೂಟೆಕಟ್ಟಿ ಮೇಲಿಟ್ಟವರು ತಂದೆ. ಅನೇಕರ ಮನೆಯಲ್ಲಿ ಈಗ್ಲೂ ತಂದೆ ಎನ್ನುವ ಭಯ ಇದೆ. ತಂದೆಯ ಮಾತನ್ನು ಚಾಚು ತಪ್ಪದೆ ಕೇಳುವವರಿದ್ದಾರೆ. ತಂದೆ, ಮಕ್ಕಳ ಮುಂದೆ ಕಠಿಣವಾಗಿ ವರ್ತಿಸುವುದು ನಿವಾರ್ಯವಿರುತ್ತದೆ. ಇದೇ ಕಾರಣಕ್ಕೆ ತಂದೆ ಹಾಗೂ ಮಕ್ಕಳ ಮಧ್ಯೆ ಎಷ್ಟೇ ಪ್ರೀತಿಯಿದ್ದರೂ ಒಬ್ಬರನ್ನೊಬ್ಬರು ವ್ಯಕ್ತಪಡಿಸೋದು ಅಪರೂಪ. ಈಗಿನ ಮಕ್ಕಳು ಸ್ವಲ್ಪ ಭಯ ಬಿಟ್ಟಿದ್ದು, ಮನಸ್ಸಿನ ಭಾವನೆಯನ್ನು ಹೇಳ್ತಾರೆಯಾದ್ರೂ ಮಧ್ಯ ವಯಸ್ಕಿನ ಮಕ್ಕಳು ಅಪ್ಪನ ಮುಂದೆ ಬಾಯಿಬಿಡೋದಿಲ್ಲ. ಅಮ್ಮನಿಗೆ ಐ ಲವ್ ಯು ಹೇಳಿದಂತೆ ತಂದೆಗೆ ಹೇಳೋದು ಕಷ್ಟ, ಬಾಯಿಕಟ್ಟುತ್ತೆ, ಅವರಿಗೆ ಧನ್ಯವಾದ ಸಲ್ಲಿಸಲು ಸಾಧ್ಯವಾಗ್ತಿಲ್ಲ ಎನ್ನುವವರು ಮಾತಿನ ಬದಲು ಅವರಿಗಿಷ್ಟವಾದ ಕೆಲಸ ಮಾಡುವ ಮೂಲಕ ಅವರಿಗೆ ಧನ್ಯವಾದ ಹೇಳ್ಬಹುದು.

ತಂದೆಗೆ ಇಷ್ಟವಾಗುವ ಉಡುಗೊರೆಯನ್ನು ಈ ದಿನ ನೀಡಬಹುದು. ಇಲ್ಲವೆ ಅವರನ್ನು ಡಿನ್ನರ್ ಗೆ ಕರೆದುಕೊಂಡು ಹೋಗ್ಬಹುದು. ಅವರು ಬಹುದಿನಗಳಿಂದ ನೋಡ್ಬೇಕು ಎನ್ನುತ್ತಿದ್ದ ಸ್ಥಳಕ್ಕೆ ಕರೆದೊಯ್ದು ಖುಷಿಪಡಿಸಬಹುದು. ನಿಮ್ಮ ಮುಂದೆ ಸಾಕಷ್ಟು ಆಯ್ಕೆಗಳಿದ್ದು, ನಿಮ್ಮ ಜಂಜಾಟದಲ್ಲಿ ತಂದೆಗೆ ಧನ್ಯವಾದ ಹೇಳೋದನ್ನು ಮಾತ್ರ ಬರೆಯಬೇಡಿ.  

Latest Videos
Follow Us:
Download App:
  • android
  • ios