Asianet Suvarna News Asianet Suvarna News

ಒಲ್ಲದ ಸಂಬಂಧದಿಂದ ಹೊರ ಬರೋಕು ಇಷ್ಟೊಂದು ಒದ್ದಾಡ್ಬೇಕಾ?

ಸಂಬಂಧ (Relationship)ಗಳು ತುಂಬಾ ಸೂಕ್ಷ್ಯವಾದುದು. ಪ್ರೀತಿ (Love), ನಂಬಿಕೆ (Trust), ವಿಶ್ವಾಸ ಎಲ್ಲವೂ ಸರಿಯಾಗಿದ್ದರಷ್ಟೇ ಅದನ್ನು ಸುಲಭವಾಗಿ ನಿಭಾಯಿಸಲು ಸಾಧ್ಯ. ಇಲ್ಲವಾದಲ್ಲಿ ಇಬ್ಬರ ಪಾಲಿಗೂ ಬಂಧವೆನ್ನುವುದು ಬಂಧನವಾಗಿಬಿಡುತ್ತೆ. ಆದ್ರೆ ಇಂಥಾ ಒಲ್ಲದ ಸಂಬಂಧದಿಂದ ಹೊರಬರೋಕು ಕೆಲವೊಬ್ಬರು ಒದ್ದಾಡ್ತಾರೆ. ಅದಕ್ಕೇನು ಕಾರಣ ತಿಳ್ಕೊಳ್ಳೋಣ

Why Do People Struggle To Leave Unhealthy Relationships Vin
Author
Bengaluru, First Published Jun 16, 2022, 3:35 PM IST

ಸಂಬಂಧ (Relationship)ವನ್ನು ತೊರೆಯುವುದು ಅಥವಾ ಸಂಬಂಧವನ್ನು ಕೊನೆಗೊಳಿಸುವುದು ಎಂದರೆ ಸುಲಭದ ಮಾತೇನಲ್ಲ. ತುಂಬಾ ಸಮಯಗಳ ಕಾಲ ಜತೆಗಿರುವ ಕಾರಣ ರೂಪುಗೊಂಡಿರುವ ಬಂಧ ನಿಧಾನವಾಗಿ ಕುಸಿಯುವುದು ಎಂಥವರಿಗಾದರೂ ಬೇಸರ ಮೂಡಿಸುವ ಸಂಗತಿ. ಆದರೆ ಕೆಲವೊಮ್ಮೆ ಜೀವನದಲ್ಲಾದ ಘಟನೆಗಳು, ಅನಿವಾರ್ಯ ಸಂದರ್ಭಗಳು, ಪರಿಸ್ಥಿತಿಗಳು ಇಬ್ಬರು ಬೇರೆ ಆಗಲೇಬೇಕಾದ ಸನ್ನಿವೇಶವನ್ನು ಸೃಷ್ಟಿ ಮಾಡುತ್ತದೆ. ಇದು ಗಂಡ-ಹೆಂಡಿರ (Husband-wife) ಮಧ್ಯೆ ಆಗಿರಬಹುದು ಅಥವಾ ಬಾಯ್‌ಫ್ರೆಂಡ್-ಗರ್ಲ್ ಫ್ರೆಂಡ್ ಮಧ್ಯೆಯೂ ಆಗಿರಬಹುದು. ಕೆಲವೊಮ್ಮೆ ದೈಹಿಕ, ಮಾನಸಿಕ ಹಿಂಸೆ, ಅಸಭ್ಯ ವರ್ತನೆ, ಪರಪುರುಷ ಅಥವಾ ಮಹಿಳೆಯ ಜೊತೆ ಅಕ್ರಮ ಸಂಬಂಧ (Extra marital Affair) ಮೊದಲಾದ ವಿಚಾರಕ್ಕೆ ಸಂಬಂಧಗಳು ಕೊಮೆಯಾಗುತ್ತದೆ. ಆದರೆ ಸಂಬಂಧದಲ್ಲಿ ಇಷ್ಟೆಲ್ಲಾ ಸಮಸ್ಯೆಯಾದರೂ ಕೆಲವೊಬ್ಬರು ಇದರಿಂದ ಹೊರಬರಲು ಒದ್ದಾಡುತ್ತಾರೆ. ಅದಕ್ಕೆ ಕಾರಣವಾಗೋದೇನು ?

ಸಂಬಂಧವನ್ನು ತೊರೆಯುವುದು ಒಂದು ಪ್ರಕ್ರಿಯೆಯಾಗಿದೆ. ಇದು ಸಮಯ ತೆಗೆದುಕೊಳ್ಳುತ್ತದೆ. ತೆಗೆದುಕೊಳ್ಳುವ ನಿರ್ಧಾರ ಮುಂದಿನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿ ಬಿಡಬಹುದು. ಜನರು ತಮಗೆ ಒಲ್ಲದ, ಕಷ್ಟವಾಗುವ ಸಂಬಂಧದಿಂದ ಹೊರಬರಲು ಯಾಕೆ ಒದ್ದಾಡ್ತಾರೆ. ಸೈಕೋಥೆರಪಿಸ್ಟ್ ಎಮಿಲಿ ಹೆಚ್ ಸ್ಯಾಂಡರ್ಸ್ ಅನಾರೋಗ್ಯಕರ ಸಂಬಂಧದಿಂದ ಹೊರಬರಲು ಜನರಿಗೆ ಕಷ್ಟವಾಗೋದ್ಯಾಕೆ ಅನ್ನೋದನ್ನು ವಿವರಿಸಿದ್ದಾರೆ. 

ಬೆಡ್‌ ಪಕ್ಕ ಮೊಬೈಲ್ ಇಟ್ರೆ ಸೆಕ್ಸ್ ಲೈಫ್‌ ಸರಿಯಾಗಿರಲ್ಲ..! ನೀವೂ ಹೀಗೆ ಮಾಡ್ತಿದ್ದೀರಾ ?

ಸಂಬಂಧಕ್ಕೆ ಮತ್ತೆ ಅಂಟಿಕೊಳ್ಳುವ ಅಭ್ಯಾಸ: ನಾವು ಜೀವನದಲ್ಲಿ ಎಲ್ಲಾ ಹಂತದಲ್ಲೂ ಇಂಥಾ ಟೆಕ್ನಿಕ್‌ನ್ನು ಅನುಸರಿಸುತ್ತೇವೆ. ಜೀವನದಲ್ಲಿ ಏನಾದರೂ ಕಷ್ಟ ಬಂದಾಗ ನಾವು ಖುಷಿ (Happy)ಯಾಗಿರುವಾಗ ಇನ್ನೊಂದು ವಿಷಯದ ಬಗ್ಗೆ ಆಲೋಚಿಸುತ್ತೇವೆ. ಹಾಗೆಯೇ ಸಂಬಂಧದಲ್ಲಿ ಸಂತೋಷವಾಗಿರುವ ಒಂದು ತಂತ್ರ ವಿಫಲವಾದಾಗ, ನಾವು ಆಗಾಗ್ಗೆ ಇನ್ನೊಂದನ್ನು ಪ್ರಯತ್ನಿಸುತ್ತೇವೆ. ಈ ತಂತ್ರಗಳು ನಮ್ಮನ್ನು ಸಂಬಂಧಕ್ಕೆ ಬಂಧಿಸುತ್ತವೆ. ಉದಾಹರಣೆಗೆ, ಗಂಡ ಹೆಚ್ಚು ಬೈಯುತ್ತಿದ್ದರೆ, ಗಂಡ ಬಯ್ಯೋದು ಮಾತ್ರವಲ್ಲ ಅಟ್‌ಲೀಸ್ಟ್ ಉಳಿದ ಪುರುಷರಂತೆ ಅನೈತಿಕ ಸಂಬಂಧ ಹೊಂದಿಲ್ಲ ಅಂದುಕೊಳ್ಳುತ್ತಾರೆ. 

ಮಕ್ಕಳನ್ನು ಬಿಡಲು ಸಿದ್ಧರಿರುವುದಿಲ್ಲ: ನಾವು ಸಂಗಾತಿಯೊಂದಿಗೆ ಮಕ್ಕಳನ್ನು (Children) ಹೊಂದಿರುವಾಗ, ಅವರನ್ನು ಬಿಡುವ ಆಲೋಚನೆಯು ಮಕ್ಕಳಿಗೆ ತಂದೆ-ತಾಯಿ ಇಬ್ಬರೂ ಇರುವುದಿಲ್ಲ ಎಂದು ನಮಗೆ ಅನಿಸುತ್ತದೆ. ಹೀಗಾಗಿಯೇ ಮಕ್ಕಳನ್ನು ನೆನಪಿಸಿಕೊಂಡು ಹಲವರು ಸಂಬಂಧವನ್ನು ಕೊನೆಗೊಳಿಸಲು ಹಿಂಜರಿಯುತ್ತಾರೆ.

ಸಮಾಜದ ಭಯ: ಬಹುತೇಕ ಸಂಬಂಧಗಳಲ್ಲಿ ಜನರು ಸಂಬಂಧದಲ್ಲಿ ಅದೆಷ್ಟು ತೊಂದರೆಯಾದರೂ ಕಷ್ಟಪಟ್ಟು ಇರಲು ಕಾರಣ ಸಮಾಜ (Society)ದ ಭಯ. ಸಮಾಜ ಏನನ್ನುತ್ತದೆಯೋ, ಏನೆಂದು ಟೀಕಿಸುತ್ತದೆಯೋ ಎಂಬ ಹಿಂಜರಿಕೆ. ಇದು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲೂ ಹಿಂಜರಿಯುವಂತೆ ಮಾಡುತ್ತದೆ. ಮಾತ್ರವಲ್ಲ, ಕುಟುಂಬ ಮತ್ತು ಸ್ನೇಹಿತರು ಕೆಲವೊಮ್ಮೆ ಸಂಬಂಧದಲ್ಲಿ ಉಳಿಯಲು ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸಂಬಂಧದಲ್ಲಿ ಉಂಟಾಗಿರುವ ಸಮಸ್ಯೆಯ ತೀವ್ರತೆಯ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ.

Relationship Tips: ಸಂಗಾತಿಗೆ ಮೋಸ ಮಾಡಿದ್ರಾ? ಹೀಗೆ ಕ್ಷಮೆ ಕೇಳ್ಬೋದು

ಎಲ್ಲವೂ ಸರಿಯಾಗುತ್ತದೆ ಎಂಬ ನಿರೀಕ್ಷೆ: ನಾವು ಹುಡುಕುತ್ತಿರುವುದನ್ನು ಪಡೆಯಲು ವಿಫಲವಾದಾಗ, ನಾವು ನಮ್ಮ ನಿರೀಕ್ಷೆ (Expectation)ಗಳನ್ನು ಕಡಿಮೆ ಮಾಡಲು ಮತ್ತು ಸಂಬಂಧದಲ್ಲಿ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಹೀಗೆ ಇದ್ದರೂ ಪರವಾಗಿಲ್ಲ ಹೊಂದಿಕೊಂಡು ಹೋಗುತ್ತಾ ಖುಷಿಯಾಗಿರೋಣ ಎಂಬ ಮನೋಭಾವವನ್ನು ಬೆಳೆಸಿಕೊಳ್ಳುತ್ತೇವೆ

ಸಂಬಂಧವನ್ನು ಅರ್ಥಹೀನ ಮಾಡಲು ಇಷ್ಟವಿರುವುದಿಲ್ಲ: ಒಂದು ಸಂಬಂಧ ರೂಪುಗೊಳ್ಳುವುದೆಂದರೆ ಸುಲಭದ ಮಾತಲ್ಲ. ಭಾವನಾತ್ಮಕವಾಗಿ ಮನಸ್ಸು  ಅದರಲ್ಲಿ ತೊಡಗಿರುತ್ತದೆ. ಮತ್ತೊಬ್ಬ ವ್ಯಕ್ತಿಯನ್ನು ನಂಬಿಕೆ, ವಿಶ್ವಾಶ, ಪ್ರೀತಿಯಿಂದ ಒಪ್ಪಿಕೊಂಡಿರುತ್ತದೆ. ಮನಸ್ಸಿನೊಳಗೆ ಬೇರೂರಿರುವ ಭಾವನೆಯನ್ನು ತೊಡೆದು ಹಾಕುವುದು ಅಷ್ಟು ಸುಲಭವಲ್ಲ. ನಾವು ಸಂಬಂಧವನ್ನು ರೂಪೀಕರಿಸಲು ಸಾಕಷ್ಟು ಸಮಯ, ಶಕ್ತಿ ಮತ್ತು ಭಾವನೆಗಳನ್ನು ಹೂಡಿಕೆ ಮಾಡಿರುತ್ತೇವೆ, ಅದನ್ನು ತೊರೆಯುವುದರಿಂದ ಅದೆಲ್ಲಾ ವ್ಯರ್ಥವಾಗುತ್ತದೆ ಎಂದೇ ನಾವು ಭಾವಿಸುತ್ತೇವೆ,.

Relationship Tips : ಕಲವೊಂದು ಲಕ್ಷಣಗಳು ಪ್ರೀತಿ ಅಭದ್ರತೆಯನ್ನು ತೋರಿಸತ್ತೆ, ಯಾವುದವು?

ಗೊಂದಲ ನಿರ್ಧಾರ ತೆಗೆದುಕೊಳ್ಳದಂತೆ ತಡೆಯುತ್ತದೆ: ಕೆಲವೊಮ್ಮೆ ವಿಷಯಗಳು ಉತ್ತಮವಾಗಿ ಕಾಣಿಸಬಹುದು. ಆದ್ರೆ ವಾಸ್ತವದಲ್ಲಿ ಅದು ಉತ್ತಮವಾಗಿರುವುದಿಲ್ಲ. ಈ ಗೊಂದಲ ನಮ್ಮನ್ನು ಸಂಗಾತಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ಸಂಬಂಧದಲ್ಲಿ ತೊಂದರೆಯಿದ್ದರೂ ಯಾವ ನಿರ್ಧಾರಿಂದ ಏನಾಗುತ್ತದೆಯೋ ಎಂಬ ಭಯವೇ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡಿಬಿಡುತ್ತದೆ. 

ಜೀವನದಲ್ಲಿ ಮುಂದೇನೆಂಬ ಚಿಂತೆ: ಜೀವನವನ್ನು ಹಂಚಿಕೊಳ್ಳಲು ಇನ್ನೊಬ್ಬ ವ್ಯಕ್ತಿಯನ್ನು ಹುಡುಕಲಾಗುತ್ತಿಲ್ಲ ಎಂಬ ಚಿಂತೆಯು ಅನಾರೋಗ್ಯಕರ ಸಂಬಂಧದಲ್ಲಿ ಮತ್ತೆ ಉಳಿಯಲು ಬಯಸುತ್ತದೆ.

ಅತಿಯಾದ ಕಾಳಜಿ: ಕೆಲವೊಮ್ಮೆ ನಾವು ಅವರನ್ನು ತೊರೆದರೆ ಪಾಲುದಾರರು ಏನಾಗಬಹುದು ಎಂಬ ಕಾಳಜಿ ನಮ್ಮನ್ನು ಹಿಂದೆ ಉಳಿಯುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಅವರು ಮಾಡಿರುವ ಮೋಸ, ಅನ್ಯಾಯ ಎಲ್ಲವೂ ನಗಣ್ಯವಾಗಿ ಅವರ ಕಾಳಜಿಯೇ ಮುಖ್ಯವಾಗುತ್ತದೆ. ಯಾಕೆಂದರೆ ಈ ಸಂಬಂಧ ಮನಸ್ಸಿನಿಂದ ಬೆಸೆದಿರುತ್ತದೆ.

ಆರ್ಥಿಕ ಸಂಪನ್ಮೂಲಗಳು: ನಾವು ಆರ್ಥಿಕವಾಗಿ ಸ್ವತಂತ್ರರಾಗಿಲ್ಲದಿರುವಾಗ ಮತ್ತು ಅದಕ್ಕಾಗಿ ಪಾಲುದಾರರ ಮೇಲೆ ಅವಲಂಬಿತರಾದಾಗ, ಸಂಬಂಧವನ್ನು ತೊರೆಯುವುದು ಹೆಚ್ಚು ಕಷ್ಟಕರವಾಗಬಹುದು.

Follow Us:
Download App:
  • android
  • ios