Relationship Tips : ಪರರ ಪತ್ನಿಯರೇಕೆ ಪುರುಷರಿಗೆ ಆಕರ್ಷವಾಗಿ ಕಾಣಿಸ್ತಾರೆ?
ದಾಂಪತ್ಯ ದ್ರೋಹ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಇದಕ್ಕೆ ಅನೇಕ ಕಾರಣವಿದೆ. ಬರೀ ಲೈಂಗಿಕ ಆಸೆ ತೀರಿಸಿಕೊಳ್ಳಲು ಮಾತ್ರವಲ್ಲ ಮಾನಸಿಕ ಕೊರತೆ ನೀಗಿಸಲು ಜನರು ಬೇರೆ ಪತ್ನಿ, ಪತಿಯ ಮೇಲೆ ಕಣ್ಣು ಹಾಕ್ತಾರೆ.
ವಿವಾಹಿತ ಪುರುಷರಿಗೆ ಪರರ ಪತ್ನಿ ಏಕೆ ಇಷ್ಟವಾಗ್ತಾಳೆ ಅನ್ನೋದು ಒಂದು ದೊಡ್ಡ ಪ್ರಶ್ನೆ. ಇದನ್ನು ನಾವು ಕೇಳ್ತಿಲ್ಲ. ಗೂಗಲ್ ನಲ್ಲಿ ಅನೇಕ ಬಾರಿ, ಅನೇಕರು ಈ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಾವಿಂದು ಉತ್ತರ ನೀಡುವ ಪ್ರಯತ್ನ ನಡೆಸ್ತೇವೆ. ವಾಸ್ತವವಾಗಿ ವಿವಾಹಿತ (Married) ಪುರುಷರು ಯಾಕೆ ಪರರ ಪತ್ನಿಗೆ ಆಕರ್ಷಿತರಾಗ್ತಾರೆ ಎನ್ನುವ ಪ್ರಶ್ನೆಯೇ ತಪ್ಪು. ವಿವಾಹಿತರು ಇತರ ಪಾಲುದಾರ (Partner) ರನ್ನು ಯಾಕೆ ಇಷ್ಟಪಡ್ತಾರೆ ಎಂದು ಕೇಳುವ ಪ್ರಶ್ನೆ ಸರಿ. ಯಾಕೆಂದ್ರೆ ಬರೀ ಪುರುಷರು ಮಾತ್ರವಲ್ಲ ಮಹಿಳೆಯರು ಕೂಡ ಇತರರಿಗೆ ಆಕರ್ಷಿತರಾಗ್ತಾರೆ. ವೈವಾಹಿಕ ದ್ರೋಹ ಅಥವಾ ವಂಚನೆಗೆ ಲಿಂಗ ನಿರ್ದಿಷ್ಟವಾಗಿಲ್ಲ. ಮಹಿಳೆಯರು ದೈಹಿಕವಾಗಿ ಅಥವಾ ಮಾನಸಿಕ (Mental) ವಾಗಿ ಪರರ ಪಾಲುದಾರರನ್ನು ಇಷ್ಟಪಡಬಹುದು. ಇದಕ್ಕೆ ನಾನಾ ಕಾರಣವಿದೆ.
ಕಮ್ಯೂನಿಕೇಷನ್ ಗ್ಯಾಪ್ (Communication Gap) : ಸಂಬಂಧದಲ್ಲಿ ಬಿರುಕು ಮೂಡಿ ಬೇರೆಯವರಿಗೆ ಆಕರ್ಷಿತವಾಗಲು ಕಮ್ಯೂನಿಕೇಷನ್ ಗ್ಯಾಪ್ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು. ಒಂದೇ ಸಂಗಾತಿಯೊಂದಿಗೆ ತೃಪ್ತರಾಗದ ಕಾರಣ ಕೆಲವರು ದಾಂಪತ್ಯ ದ್ರೋಹಕ್ಕೆ ಮುಂದಾಗಬಹುದು. ಆದ್ರೆ ಬಹುತೇಕರಲ್ಲಿ ಇದಕ್ಕೆ ಮುಖ್ಯ ಕಾರಣ ನಿಷ್ಕ್ರಿಯ ವೈವಾಹಿಕ ಸಂಬಂಧ ಎನ್ನುತ್ತಾರೆ ತಜ್ಞರು. ಆರಂಭದಲ್ಲಿದ್ದ ಸಂವಹನ, ಮದುವೆಯಾದ ದೀರ್ಘ ಸಮಯದ ನಂತ್ರ ಇರೋದಿಲ್ಲ. ಜನರು ತಮ್ಮ ಸಂಗಾತಿಯನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಅವರು ಇನ್ನೊಬ್ಬ ವ್ಯಕ್ತಿಯತ್ತ ಆಕರ್ಷಿತರಾಗುತ್ತಾರೆ. ತಮ್ಮ ಭಾವನೆಗಳಿಗೆ ಬೆಲೆ ನೀಡುವ, ತಮ್ಮ ಮಾತನ್ನು ಕೇಳುವ ವ್ಯಕ್ತಿಯತ್ತ ಆಕರ್ಷಿತರಾಗುತ್ತಾರೆ. ಇದನ್ನು ಲಿಂಗದೊಂದಿಗೆ ಜೋಡಿಸಲಾಗುವುದಿಲ್ಲ. ಆಧುನಿಕ ದಿನದ ಈ ದಾಂಪತ್ಯ ದ್ರೋಹ ಮಾಮೂಲಿಯಾಗಿದೆ. ಸಂಬಂಧಗಳನ್ನು ಸೂಕ್ಷ್ಮವಾದ ರೀತಿಯಲ್ಲಿ ನೋಡಬೇಕು.
ಸ್ನೇಹಿತೆಯ ಪತಿಗೇ ಹೃದಯ ಕೊಟ್ಟ ನಟಿ, ಸಚಿವೆ ಸ್ಮೃತಿ ಇರಾನಿ
ಬೇಸರವೂ ಕಾರಣ : ಸಂಬಂಧದಲ್ಲಿ ಏಕತಾನತೆಯನ್ನು ಮುರಿಯುವುದು ಬಹಳ ಮುಖ್ಯ. ಒಂದೇ ರೀತಿ ಜೀವನ ನಡೆಸುವುದ್ರಿಂದ ಪ್ರತಿಯೊಬ್ಬರೂ ಬೋರ್ ಆಗ್ತಾರೆ. ಒಂದೇ ಕೆಲಸವನ್ನು ವರ್ಷಗಟ್ಟಲೆ ಮಾಡಿದ ಜನರು ಸಂಬಳ ಹೆಚ್ಚಳ, ಬಡ್ತಿಗಾಗಿ ಕೆಲಸ ಬದಲಿಸ್ತಾರೆ. ಆದ್ರೆ ಸಂಗಾತಿ ಬದಲಿಸೋದು ಸುಲಭವಲ್ಲ. ಹಾಗಂತ ಅಸಾಧ್ಯವೇನಲ್ಲ. ಒಂದೇ ವ್ಯಕ್ತಿ, ಒಂದೇ ಲೈಫ್ ಸ್ಟೈಲ್ ಬೋರ್ ಆಗಿ ಕೆಲವರು ಬೇರೆಯವರ ಲೈಫ್ ಸ್ಟೈಲ್ ಗೆ ಆಕರ್ಷಿತವಾಗೋದಿದೆ.
ವಿಚಿತ್ರ ವ್ಯಕ್ತಿತ್ವ (Personality Disorder) : ದಾಂಪತ್ಯ ದ್ರೋಹ ಕೆಲವರ ವ್ಯಕ್ತಿತ್ವವಾಗಿರುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು. ಅನೇಕ ಜನರು ಒಂದೇ ಸಂಗಾತಿಯೊಂದಿಗೆ ಜೀವನ ನಡೆಸಲು ಇಷ್ಟಪಡುವುದಿಲ್ಲ. ಜನರು ಜೀವನದಲ್ಲಿ ಸಾಹಸವನ್ನು ಬಯಸುತ್ತಾರೆ. ಅವರು ವಿಭಿನ್ನ ಜನರನ್ನು ಭೇಟಿಯಾಗಬೇಕು ಮತ್ತು ವಿಭಿನ್ನ ವಿಷಯಗಳನ್ನು ಪ್ರಯತ್ನಿಸಬೇಕೆಂದು ಬಯಸ್ತಾರೆ. ಹಾಗಾಗಿ ಅವರು ಅಫೇರ್ ಇಷ್ಟಪಡ್ತಾರೆ.
ಬಾಲ್ಯದಲ್ಲಾದ ಅನುಭವ (Childhood Memories) : ಯಾವುದೇ ಬಾಲ್ಯದ ಅನುಭವ ಅಥವಾ ಅಸ್ವಸ್ಥತೆ ಕೆಲವು ಸಂದರ್ಭಗಳಲ್ಲಿ ಮೋಸಕ್ಕೆ ಪ್ರೇರಣೆ ಎನ್ನುತ್ತಾರೆ ತಜ್ಞರು. ಒಬ್ಬ ವ್ಯಕ್ತಿ ಬಾಲ್ಯದಿಂದಲೂ ಈ ರೀತಿಯ ನಡವಳಿಕೆಯನ್ನು ನೋಡಿದ್ದರೆ, ಆತನ ಮನಸ್ಸು ದುರ್ಬಲವಾಗಿದ್ದರೆ ಆತ ದೊಡ್ಡವನಾದ್ಮೇಲೆ ಅದನ್ನೇ ಅಳವಡಿಸಿಕೊಳ್ಳುವ ಸಾಧ್ಯತೆಯಿರುತ್ತದೆ.
ಹೆಣ್ಣು ಮಕ್ಕಳಿಗೆ ಹೇಗೆ ಪೋಷಕರು ಲೈಂಗಿಕ ಶಿಕ್ಷಣ ಕೊಡಬೇಕು?
ಪ್ರಯೋಗ : ನಿಮಗೆ ಅಚ್ಚರಿಯಾಗಬಹುದು, ಕೆಲವರು ಮೋಸ ಮಾಡಲು ಪ್ರಯೋಗ ಕಾರಣ. ಟಿವಿ ಅಥವಾ ಸಾಮಾಜಿಕ ಜಾಲತಾಣಗಳಿಂದ ಪ್ರೇರಿತರಾಗುವ ಜನರು ಇಲ್ಲವೆ ಬೇರೆಯವರ ಮಾತುಗಳಿಂದ ಪ್ರೇರಿತರಾಗುವ ಜನರು ತಾವೂ ಇಂಥ ಪ್ರಯೋಗ ಮಾಡಲು ಮನಸ್ಸು ಮಾಡ್ತಾರೆ. ವಿವಾಹೇತರ ಸಂಬಂಧದಿಂದ ಏನಾಗುತ್ತೆ ಎಂಬುದನ್ನು ನೋಡುವ ಬಯಕೆ ಅವರಿಗಿರುತ್ತದೆ.
ಸಂಬಂಧದ ಕೊರತೆ ನೀಗಿಸಲು : ಕೆಲವರಿಗೆ ದೀರ್ಘಾವಧಿ ಸಂಬಂಧವನ್ನು ಮುರಿದುಕೊಳ್ಳಲು ಇಷ್ಟವಾಗೋದಿಲ್ಲ. ಸಂಗಾತಿ ಮೇಲೂ ವಿಶೇಷ ಒಲವಿರೋದಿಲ್ಲ. ಸ್ವಲ್ಪ ಬದಲಾವಣೆಯಾದ್ರೆ ಈ ಸಂಬಂಧಕ್ಕೆ ಅಡ್ಡಿಯೇನಿಲ್ಲ ಎಂದು ಭಾವಿಸುತ್ತಾರೆ. ಈ ಸಂಬಂಧದಲ್ಲಿರುವ ಕೊರತೆ ನೀಗಿಸಲು ಅವರು ಸಣ್ಣ ಅಫೇರ್ ಇಟ್ಟುಕೊಳ್ತಾರೆ.