ಹೆಣ್ಣು ಮಕ್ಕಳಿಗೆ ಹೇಗೆ ಪೋಷಕರು ಲೈಂಗಿಕ ಶಿಕ್ಷಣ ಕೊಡಬೇಕು?
ಹೆಣ್ಣು ಮಕ್ಕಳು ತುಂಬಾ ಸೂಕ್ಷ್ಮ ಸ್ವಭಾವದವರು. ಹಾಗಾಗಿ ಪೋಷಕರು ಅವರ ಬಗ್ಗೆ ವಿಶೇಷ ಕಾಳಜಿ ವಹಿಸೋದು ಅತಿ ಮುಖ್ಯ. ನೀವು ಹೆಣ್ಣು ಮಕ್ಕಳ ಪೋಷಕರಾಗಿದ್ದರೆ ಇಲ್ಲಿದೆ ನೋಡಿ ತಿಳಿಯಲೇ ಬೇಕಾದ ಕೆಲವು ಟಿಪ್ಸ್.
ಹೆಚ್ಚಿನ ಹುಡುಗಿಯ ಪೋಷಕರು(Parents) ಅನಾವಶ್ಯಕ ಜವಾಬ್ದಾರಿ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ. ಅಂತಹ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಏನು ಹೇಳಬಾರದು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಕೆಲವು ವಿಷಯಗಳು. ಇವುಗಳನ್ನು ನೀವು ಅನುಸರಿಸಿದ್ರೆ ನಿಮ್ಮ ಮಗಳಿಗೆ ಅತ್ಯುತ್ತಮ ಅನುಭವವಾಗುವಂತೆ ಮಾಡಬಹುದು.
ಬಾಲ್ಯವನ್ನು ಎಂಜಾಯ್(Enjoy) ಮಾಡಲು ಬಿಡಿ
ಹೆಣ್ಣು ಮಗುವಿಗೆ ಹುಟ್ಟಿನಿಂದ ಹೆಚ್ಚಿನ ಜವಾಬ್ದಾರಿ ನೀಡುತ್ತಾರೆ. ಇದು ಸರಿಯಲ್ಲ. ಮಕ್ಕಳು ತಮ್ಮ ಬಾಲ್ಯವನ್ನು ಎಂಜಾಯ್ ಮಾಡಲು ಬಿಡಬೇಕು. ಮಕ್ಕಳಿಗೆ ಉದಾಹರಣೆಗಳನ್ನು ನೀಡೋದು ಪೋಷಕರ ಜವಾಬ್ದಾರಿಯಾಗಿದೆಯೇ ಹೊರತು ಹೆಣ್ಣು ಮಕ್ಕಳದಲ್ಲ ಎಂಬುದನ್ನು ನೆನೆಪಿಡಬೇಕು.
ತಂದೆ/ಸಹೋದರನಿಗಾಗಿ ಟೇಬಲ್ ಸೆಟ್(Table set) ಮಾಡಲು ಹೇಳೋದು
ಮನೆ ಕೆಲಸಗಳಲ್ಲಿ ಮಕ್ಕ ಳನ್ನು ತೊಡಗಿಸಿಕೊಳ್ಳುವುದು ಅತ್ಯಗತ್ಯ, ಆದರೆ ಕೆಲಸವನ್ನು ಲಿಂಗದ ಆಧಾರದಲ್ಲಿ ಪರಿವರ್ತಿಸಬೇಡಿ. ಬದಲಾಗಿ, ಎಲ್ಲಾ ಕಾರ್ಯವನ್ನು ಮನೆಯ ಎಲ್ಲಾ ಮಕ್ಕಳಿಗೂ ಸರಿಸಮಾನವಾಗಿ ನೀಡಿ.
ನೀವು ದಪ್ಪಗಾಗುತ್ತಿದ್ದೀರಿ(Fat) ಎಂದು ಹೇಳೋದು
ಕೆಲವೊಮ್ಮೆ ಈಟಿಂಗ್ ಡಿಸಾರ್ಡರ್ ದೇಹದ ಸಂಘರ್ಷ, ಆತಂಕ ಮತ್ತು ಖಿನ್ನತೆ ಮತ್ತು ಬಾಡಿ ಶೇಮಿಂಗ್‌ನ ಕೆಲವು ನಕಾರಾತ್ಮಕ ಭಾವನಾತ್ಮಕ ಪರಿಣಾಮದಿಂದ ಹೆಣ್ಣುಮಕ್ಕಳು ದಪ್ಪಗಾಗುತ್ತಾರೆ. ಆಗ ಆರೋಗ್ಯಕರ ಜೀವನಶೈಲಿ ಆಯ್ಕೆಗಳನ್ನು ಮಾಡಲು ಅವರಿಗೆ ಸಹಾಯ ಮಾಡಿ.
ತಂದೆ ಮನೆಗೆ ಬರೋವರೆಗೂ ವೇಟ್ ಮಾಡಲು ಹೇಳೋದು
ನಿಮ್ಮ ಮಗುವನ್ನು ಶಿಸ್ತುಬದ್ದವಾಗಿ (Disciple) ಬೆಳೆಸಲು ನೀವು ಬಯಸೋದಾದ್ರೆ, ಅದನ್ನು ನೀವೇ ಮಾಡಲು ಪ್ರಯತ್ನಿಸಿ, ಹೆಣ್ಣು ಮಗು ಎಂದು ನೀವೇ ಭೇದಭಾವ ಮಾಡಬೇಡಿ. ಅದು ಮಗುವಿನ ಬೆಳವಣಿಗೆಗೆ ಒಳ್ಳೆಯದಲ್ಲ. ಪೋಷಕರು ಬರೋವರೆಗೂ ಇತರ ಮಕ್ಕಳ ಜವಾಬ್ದಾರಿಯನ್ನು ಹೆಣ್ಣುಮಗಳ ಮೇಲೆ ಹಾಕೋದು ಹೆಣ್ಣು ಮಗುವಿಗೆ ಮಾತ್ರ ಜವಾಬ್ದಾರಿ ಹೊರುವಂತೆ ಮಾಡೋದು ಸರಿಯಲ್ಲ .ಇತರ ಮಕ್ಕಳಿಗೂ ಜವಾಬ್ದಾರಿಗಳನ್ನೂ ತೆಗೆದು ಕೊಳ್ಳಲು ಕಲಿಸಬೇಕು.
ನಿನ್ನನ್ನು ಎಂದಿಗೂ ಕ್ಷಮಿಸೋದಿಲ್ಲ(Forgiveness) ಎಂದು ಹೇಳೋದು
ಮಕ್ಕಳು ಹೆಣ್ಣಾಗಲಿ ಗಂಡಾಗಲಿ ಎಲ್ಲರೂ ಒಂದೇ. ಹಾಗಾಗಿ ಮಕ್ಕಳ ತಪ್ಪನ್ನು ಪೋಷಕರು ಒಂದೇ ರೀತಿ ನೋಡಿ ಅವರನ್ನು ಕ್ಷಮಿಸಿ ಒಳ್ಳೆ ರೀತಿಯಲ್ಲಿ ಬೆಳೆಯಲು ದಾರಿ ತೋರಿಸಬೇಕು. ಅದರ ಬದಲಾಗಿ ನಿನ್ನನ್ನು ಎಂದಿಗೂ ಕ್ಷಮಿಸೋದಿಲ್ಲ ಎಂದೆಲ್ಲಾ ಹೇಳೋದು ಸರಿಯಲ್ಲ.
ಎಲ್ಲಾ ತಪ್ಪಿಗೆ ಹೆಣ್ಣು ಮಕ್ಕಳನ್ನು(Girl child) ಹೊಣೆ ಮಾಡಬೇಡಿ
ಮಕ್ಕಳ ನಡುವೆ ಏನಾದರೂ ಜಗಳ ಆದಾಗ ಸಣ್ಣ ಹೆಣ್ಣು ಮಗುವಿಗೆ ಕಠಿಣ ಶಿಕ್ಷೆ ನೀಡೋದು ಸರಿಯಲ್ಲ. ಎಲ್ಲಾ ವಿಷಯದಲ್ಲೂ ಹೆಣ್ಣು ಮಗುವಿನದ್ದೇ ತಪ್ಪಿರಬೇಕೆಂದಿಲ್ಲ, ತಪ್ಪಿದ್ದರೂ ಸಹ ಅವರ ತಪ್ಪನ್ನು ತಿದ್ದಿ ಅವರನ್ನು ಕ್ಷಮಿಸಲು ಪ್ರಯತ್ನಿಸಿ. ಇದರಿಂದ ಅವರು ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಾರೆ.
ಅತ್ತಾಗ(Cry) ಸಮಾಧಾನ ಮಾಡಿ
ಹೆಣ್ಣು ಮಕ್ಕಳಿಗೆ ಬೇಗ ಅಳು ಬರೋದು ನಿಜ. ಅವರು ಸೂಕ್ಷ್ಮ ಜೀವಿಗಳು. ಹಾಗಾಗಿ ಅವರಿಗೆ ತಮಾಷೆ, ಅವಮಾನ ಮಾಡೋಬದಲು ಅವರಲ್ಲಿ ಧೈರ್ಯ ತುಂಬಿ ಜೀವನದ ಪಾಠ ಹೇಳಿಕೊಡಬೇಕು. ಧೈರ್ಯ ತುಂಬಿದಾಗ ಮಾತ್ರ ಅವರು ಸುಲಭವಾಗಿ ಜೀವನದಲ್ಲಿ ಮುಂದೆ ಬರಲು ಸಾಧ್ಯ.
ನಿನ್ನಿಂದ ಆಗೋದಿಲ್ಲ ಅನ್ನೋದು
ಅಗತ್ಯವಿದ್ದಾಗ ಸಹಾಯವನ್ನು ಕೇಳಲು ಹುಡುಗಿಯನ್ನು ಹೇಳೋದು ಒಳ್ಳೇದೇ ಆದರೆ ಎಲ್ಲಾ ವಿಷಯದಲ್ಲೂ ನೀನು ಹೆಣ್ಣು ನಿನಗಾಗೋದಿಲ್ಲ , ನಿಮ್ಮ ಸಹೋದರನ(Brother) ಸಹಾಯ ತೊಗೊ ಎಂದು ಹೇಳೋದು ಸರಿಯಲ್ಲ, ಹೆಣ್ಣು ಮಗು ತಮ್ಮದೇ ಆದ ಕೆಲಸಗಳನ್ನು ಮಾಡುವಂತೆ ಮಾಡೋದು ಭವಿಷ್ಯದಲ್ಲಿ ಅವರನ್ನು ಬಲವಾದ ವ್ಯಕ್ತಿಯನ್ನಾಗಿ ಮಾಡುತ್ತೆ.
ಸೆಕ್ಸ್(Sex) ಬಗ್ಗೆ ಯೋಚನೆ ಮಾಡೋದು ಕೆಟ್ಟದು ಎನ್ನಬೇಡಿ
ಸೆಕ್ಸ್ ಬಗ್ಗೆ ಹುಡುಗಿಯ ಆಸಕ್ತಿ ಸ್ವಾಭಾವಿಕ, ಪೋಷಕರಾಗಿ ನೀವು ಅದನ್ನು ಟೀಕಿಸುವುದಕ್ಕಿಂತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕು. ಹಾಗೆಯೇ ಅವರ ವಯಸ್ಸಿಗೆ ತಕ್ಕಂತೆ ಲೈಂಗಿಕ ಶಿಕ್ಷಣ ನೀಡೋದು ಪ್ರತಿ ಪೋಷಕರ ಕರ್ತವ್ಯ. ಪ್ರತಿ ಹೆಣ್ಣು ಮಕ್ಕಳಿಗೂ ಲೈಂಗಿಕ ಶಿಕ್ಷಣ ನೀಡುವುದು ಅತ್ಯಗತ್ಯ.
ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸ್ವಾಬಲಂಭಿಯನ್ನಾಗಿ(Independent) ಮಾಡೋದು
ಹುಡುಗಿಯರಿಗೆ ತಮ್ಮ ಆರ್ಥಿಕತೆಯನ್ನು ಸಹ ನಿರ್ವಹಿಸಲು ಕಲಿಸಬೇಕು. ಪೋಷಕರು ಹುಡುಗಿಗೆ ಹಣಕಾಸಿನ ಬಗ್ಗೆ ಕಲಿಸಬೇಕು, ಹಣವನ್ನು ಹೇಗೆ ಸಂಪಾದಿಸುಬೇಕು ಮತ್ತು ನಿರ್ವಹಿಸಬೇಕು ಎಂದು ಕಲಿಸೋ ಮೂಲಕ ಹೆಣ್ಣು ಮಗುವನ್ನು ಸ್ವಾವಲಂಬಿಯಾಗಿಸಬೇಕು.
ನಿಮ್ಮ ನಿರ್ಧಾರಗಳನ್ನು ಮಕ್ಕಳ ಮೇಲೆ ಹೇರೋ ಮೊದಲು, ನೀವು ನಿಮ್ಮ ಹೆಣ್ಣು ಮಕ್ಕಳೊಂದಿಗೆ ಕೂತು ಮಾತಾಡಬೇಕು. ಹಾಗು ಅವರ ಅಭಿಪ್ರಾಯಕ್ಕೂ ಬೆಲೆ ಕೊಟ್ಟು, ನಂತರವೇ ಯಾವುದೇ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಪೋಷಕರಾಗಿ ಮಕ್ಕಳನ್ನು ಓದಿಸೋದು ಮುಖ್ಯ ಕರ್ತವ್ಯ. ಅದರಲ್ಲೂ ಹೆಣ್ಣು ಮಗುವಿಗೆ ಶಿಕ್ಷಣ ನೀಡೋದು ಅತಿ ಮುಖ್ಯ. ಇದರಿಂದ ಮುಂದೆ ಆ ಹೆಣ್ಣು ಮಗು ಧೈರ್ಯದಿಂದ(Courage),ಸ್ವಾವಲಂಬಿಯಾಗಿ, ಖುಷಿಯಾದ ಜೀವನ ನಡೆಸಲು ಸಾಧ್ಯ ಎಂಬುದನ್ನು ನೆನೆಪಿಡಿ.