ಸೆಲಬ್ರಿಟಿಗಳು ತಮ್ಮ ಮಕ್ಕಳ ಮುಖ ತೋರಿಸದೆ ಹಾರ್ಟ್ ಎಮೋಜಿ ಹಾಕೋದು ಯಾಕೆ ?
ಸೆಲೆಬ್ರಿಟಿಗಳು ತಮ್ಮ ಮಗುವಿನ ಮುಖವನ್ನು ಸಾರ್ವಜನಿಕರಿಂದ ಮರೆ ಮಾಚುವುದನ್ನು ನೀವು ನೋಡಿರಬಹುದು. ವಿರಾಟ್ ಕೊಹ್ಲಿ-ಅನುಷ್ಕಾ, ರಣಬೀರ್-ಆಲಿಯಾ, ಸೋನಮ್ ಮತ್ತು ಆನಂದ್ ಹೀಗೆ ಎಲ್ಲಾ ತಾರಾ ಜೋಡಿಗಳು ತಮ್ಮ ಮಗುವಿನ ಮುಖವನ್ನು ಹಾರ್ಟ್ ಎಮೋಜಿಯಿಂದ ಮರೆಮಾಚಿ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಇದರ ಹಿಂದಿರೋ ಕಾರಣವೇನು ?
ಸೆಲಬ್ರಿಟಿಗಳು ಅಂದ್ರೆ ಅವರ ಜೀವನದ ಬಗ್ಗೆ ಜನಸಾಮಾನ್ಯರಿಗೆ ಸಹಜವಾಗಿಯೇ ಸಾಕಷ್ಟು ಕುತೂಹಲವಿದೆ. ಅವರ ಐಷಾರಾಮಿ
ಲೈಫ್‌ಸ್ಟೈಲ್, ಡ್ರೆಸ್ಸಿಂಗ್, ಜ್ಯುವೆಲ್ಸ್, ಫೂಟ್‌ವೇರ್ ಕಲೆಕ್ಷನ್ ಬೆರಗುಗೊಳಿಸುತ್ತದೆ. ಹಾಗೆಯೇ ಅವರ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲವೂ ಇರುತ್ತದೆ. ಆದರೆ ಬಹುತೇಕ ಸೆಲೆಬ್ರಿಟಿಗಳು ತಮ್ಮ ಮಕ್ಕಳ ಫೋಟೋವನ್ನು ಮಾಧ್ಯಮದಿಂದ ಮರೆಮಾಚುತ್ತಾರೆ.
ಹಾಗಾದರೆ ಸೆಲೆಬ್ರಿಟಿ ಮಗುವಿನ ಮುಖವನ್ನು ನೋಡುವುದರ ಹಿಂದಿನ ಆಕರ್ಷಣೆ ಏನು ಮತ್ತು ಸೆಲೆಬ್ ಪೋಷಕರು ತಮ್ಮ ಮಗುವಿನ ಮುಖವನ್ನು ಸಾರ್ವಜನಿಕರಿಂದ ಮರೆಮಾಡಲು ಏಕೆ ಪ್ರಯತ್ನಿಸುತ್ತಾರೆ? ಮಗುವಿನ ಮುಖವನ್ನು ಹೃದಯ ಅಥವಾ ಮಗುವಿನ ಎಮೋಟಿಕಾನ್‌ನ ಹಿಂದೆ ಮರೆಮಾಡಲು ಕಾರಣವೇನು ?
ಅನುಷ್ಕಾ ಮತ್ತು ವಿರಾಟ್
ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ತಮ್ಮ ಮಗುವಿನ ಫೋಟೋವನ್ನು ವರ್ಷಗಳ ಕಾಲ ಗೌಪ್ಯವಾಗಿಟ್ಟಿದ್ದರು. ಇತ್ತೀಚಿಗೆ ಫೋಟೋವನ್ನು ಪ್ರಕಟಿಸಿದ್ದು, ಇದಕ್ಕಿಂತ ಮೊದಲು ಮಗಳು ವಮಿಕಾ ಚಿತ್ರಗಳು/ವೀಡಿಯೊಗಳನ್ನು ಪ್ರಕಟಿಸದಿದ್ದಕ್ಕಾಗಿ ಪಾಪರಾಜಿ ಮತ್ತು ಹೆಚ್ಚಿನ ಮಾಧ್ಯಮ ಬಂಧುಗಳಿಗೆ ಧನ್ಯವಾದ ಹೇಳಿದ್ದರು. 'ನಾವು ನಮ್ಮ ಮಗುವಿಗೆ ಗೌಪ್ಯತೆಯನ್ನು ಬಯಸುತ್ತೇವೆ ಮತ್ತು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಮುಕ್ತವಾಗಿ ತನ್ನ ಜೀವನವನ್ನು ನಡೆಸಲು ಅವಳಿಗೆ ಅವಕಾಶವನ್ನು ನೀಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಅವಳು ವಯಸ್ಸಾದಂತೆ ನಾವು ಅವಳ ಚಲನೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಮತ್ತು ಆದ್ದರಿಂದ ನಿಮ್ಮ ಬೆಂಬಲದ ಅಗತ್ಯವಿದೆ ಆದ್ದರಿಂದ ದಯೆಯಿಂದ ಸಂಯಮವನ್ನು ಅಭ್ಯಾಸ ಮಾಡಿ' ಎಂದು ಅನುಷ್ಕಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದರು.
ಮಾಲ್ಡೀವ್ಸ್‌ನಲ್ಲಿ ಅನುಷ್ಕಾ-ವಿರಾಟ್ ದಂಪತಿ; ಫೋಟೋ ಶೇರ್ ಮಾಡಿ ಮಗಳಿಗೆ ಪ್ರಾಮಿಸ್ ಮಾಡಿದ ನಟಿ
ಆಲಿಯಾ ಮತ್ತು ರಣಬೀರ್
ಸೆಲಬ್ರಿಟಿ ಜೋಡಿ ರಣಬೀರ್ ಮತ್ತು ಆಲಿಯಾ ಸಹ ತಮ್ಮ ಮಗುವಿನ ಮುಖವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ರಣಬೀರ್ ಕಪೂರ್ ತಾಯಿ ನಟಿ ನೀತು ಕಪೂರ್, ಪಾಪರಾಜಿಗಳೊಂದಿಗೆ ಅನೌಪಚಾರಿಕ ಸಭೆಯನ್ನು ನಡೆಸಿದರು ಮತ್ತು ಮಗು ರಾಹಾ ಫೋಟೋವನ್ನು ಎಲ್ಲಿಯೂ ಪಬ್ಲಿಷ್ ಮಾಡದಂತೆ ಕೋರಿದರು. 'ರಾಹಾಗೆ ಎರಡು ವರ್ಷವಾಗುವ ವರೆಗೆ ದಯವಿಟ್ಟು ಪೋಟೋ ಕ್ಲಿಕ್ ಮಾಡಬೇಡಿ' ಎಂದು ವಿನಂತಿಸಿದರು. ಅಕಸ್ಮಾತ್ ರಾಹಾ ಫೋಟೋದಲ್ಲಿ ಕಾಣಿಸಿಕೊಂಡರೆ ದಯವಿಟ್ಟು ಹೃದಯ ಎಮೋಜಿ ಬಳಿಸಿ. ಮುಖವನ್ನು ಬಹಿರಂಗಪಡಿಸಬೇಡಿ ಎಂದು ಆಲಿಯಾ ಹೇಳಿದ್ದರು.
ರಣಬೀರ್ ಕಪೂರ್ ಮಾತನಾಡಿ, 'ಕಾರುಗಳಲ್ಲಿಯೂ ಸಹ, ನೀವು ಜೂಮ್ ಮಾಡಿದಾಗ ಮತ್ತು ನೀವು ಅವಳನ್ನು ಕ್ಲಿಕ್ ಮಾಡಿದರೆ, ದಯವಿಟ್ಟು ಆ ಫೋಟೋಗಳನ್ನು ಪ್ರಸಾರ ಮಾಡಬೇಡಿ.ನೀವು ನಮ್ಮ ಜೋಡಿ ಚಿತ್ರಗಳನ್ನು ಕ್ಲಿಕ್ ಮಾಡಲು ಬಯಸಿದರೆ ನಾನು ಆಕ್ಷೇಪಿಸುವುದಿಲ್ಲ' ಎಂದು ತಿಳಿಸಿದರು.
ಸೋನಮ್ ಮತ್ತು ಆನಂದ್
ಕಳೆದ ವರ್ಷ ಆಗಸ್ಟ್‌ನಲ್ಲಿ ಸೋನಂ ಕಪೂರ್ ಮಗುವಿಗೆ ಜನ್ಮ ನೀಡಿದರು. ಆದರೆ ಅವರೆಲ್ಲಿಯೂ ತಮ್ಮ ಮಗುವಿನ ಮುಖವನ್ನು ಬಹಿರಂಗಪಡಿಸಿಲ್ಲ. ಎಲ್ಲಾ ಹೆಚ್ಚಿನ ಸೆಲೆಬ್ರಿಟಿಗಳಂತೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿಲ್ಲ. ಈ ಬಗ್ಗೆ ಮಾತನಾಡಿದ ಸೋನಮ್ ಕಪೂರ್, ಅವನು ದೊಡ್ಡವನಾಗುವವರೆಗೆ ಅವನ ಫೋಟೋ ಎಲ್ಲಿಯೂ ಹಂಚಿಕೊಳ್ಳುವುದಿಲ್ಲ. ದೊಡ್ಡವನಾದ ಬಳಿಕ ಅವನೇ ನಿರ್ಧರಿಸಲಿ ಎಂದಿದ್ದಾರೆ.
ಮಗುವಿನ ಗೌಪ್ಯತೆ ಕಾಪಾಡಲು ನೋ ಫೋಟೋ ಪಾಲಿಸಿ ಆರಿಸಿಕೊಂಡ ಆಲಿಯಾ ಭಟ್
ಪ್ರಿಯಾಂಕಾ ಮತ್ತು ನಿಕ್ ಜೋನಸ್
ತಾರಾ ದಂಪತಿಗಳು ಆಗಾಗ ತಮ್ಮ ಮಗುವಿನ ಮುಖವನ್ನು ಸಂಪೂರ್ಣವಾಗಿ ಬಹಿರಂಗಪಡಿಸದೆಯೇ ತಮ್ಮ ಸಂತೋಷದ ಕ್ಷಣದ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ, ಮಾಲ್ತಿಯ ಮುಖವನ್ನು ಎಮೋಜಿಯ ಹಿಂದೆ ಮರೆಮಾಡಿರುವುದನ್ನು ನೋಡಿದ ಅಭಿಮಾನಿಗಳು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. 'ಯಾರೂ ನೋಡಬಾರದು ಎಂದು ನೀವು ಬಯಸಿದ್ದರೆ ನಿಮ್ಮ ಮಗುವನ್ನು ಫೋಟೋದಲ್ಲಿ ಏಕೆ ತರುತ್ತೀರಿ ಎಂದು ನನಗೆ ಅರ್ಥವಾಗುತ್ತಿಲ್ಲ' ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದರು.
ನೇಹಾ ಮತ್ತು ಅಂಗದ್
ಸೆಲೆಬ್ ಪೋಷಕರಾದ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ತಮ್ಮ ಮಕ್ಕಳಾದ ಮೆಹರ್ (3) ಮತ್ತು ಗುರಿಕ್ (1) ಮುಖವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸದಂತೆ ಖಚಿತಪಡಿಸಿಕೊಂಡಿದ್ದಾರೆ. ಜುಲೈ 2022 ರಲ್ಲಿ ಮಿಸ್ ಇಂಡಿಯಾ ಕಿರೀಟವನ್ನು ಅಲಂಕರಿಸಿದ 20 ವರ್ಷಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಾತ್ರ ಅವರು ತಮ್ಮ ನಿಯಮವನ್ನು ಒಮ್ಮೆ ಮುರಿಯಲು ನಿರ್ಧರಿಸಿದರು. ವೇದಿಕೆಯಲ್ಲಿ ನೇಹಾ ಅವರ ಮಕ್ಕಳು ಮತ್ತು ಪತಿ ಜೊತೆಗಿದ್ದರು.