ಹೈದರಾಬಾದ್‌ನಲ್ಲಿ ಒಂದು ಕಡೆ, ಹಸು- ಕರುಗಳನ್ನು ಸಾಕುತ್ತಿದ್ದ ಶೆಡ್ನಲ್ಲಿ ದನದ ಕರುವನ್ನು ಆ ವ್ಯಕ್ತಿ ತನ್ನ ಕಾಮದಾಹ ತಣಿಸಿಕೊಳ್ಳಲು ಬಳಸುತ್ತಿದ್ದ. ಸ್ಥಳೀಯರು ಇದನ್ನು ಗಮನಿಸಿ ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಕೊಟ್ಟರು. ಈಗ ಕರುವನ್ನು ಹಾಗೂ ಅವನನ್ನು ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಪ್ಪಿಸಲಾಗಿದೆ. ಇದನ್ನು ಅತ್ಯಾಚಾರ ಅಂತ ಕರೆಯಬಹುದೇ, ಇದು ಅತ್ಯಾಚಾರವಾಗುತ್ತದೆಯೇ, ಇದನ್ನು ಏನೆಂದು ಹೇಳಲಾಗುತ್ತದೆ, ಈತನ ಮನಸ್ಥಿತಿ ಎಂಥದು, ಇಂಥವರು ತುಂಬಾ ಜನ ಇರುತ್ತಾರಾ- ಇತ್ಯಾದಿ ಸಂಗತಿಗಳು ಕುತೂಹಲಕರವಾಗಿವೆ.

ಈ ಘಟನೆಯಲ್ಲಿ ಸಿಕ್ಕಿಬಿದ್ದವನು ಮೂವತ್ತರ ಯುವಕ. ಬಹುಶಃ ಈತನಿಗೆ ಮದುವೆ ಆಗಿರಲಿಕ್ಕಿಲ್ಲ. ಬಹುಶಃ ಅವನು ಹೆಣ್ಣುಮಕ್ಕಳಿಂದ ಅಂತರ ಕಾಪಾಡಿಕೊಳ್ಳುವವನೂ ಇರಬಹುದು. ಆದರೆ ಮಕ್ಕಳು ಒಂಟಿಯಾಗಿದ್ದಾಗ ಅವರ ಬಳಿ ಹೋಗಿ ಅವನ ಗೆಳೆತನ ಬೆಳೆಸಲು ಪ್ರಯತ್ನಿಸುವವನು ಇರಬಹುದು. ಒಬ್ಬನೇ ಇದ್ದಾಗ ಸುತ್ತಮುತ್ತ ಇರುವ ಪ್ರಾಣಿಗಳ ಜನನನೇಂದ್ರಿಯಗಳ್ನು ಹೆಚ್ಚು ಕುತೂಹಲದಲ್ಲಿ ಗಮನಿಸುವವನು ಇರಬಹುದು. ಪ್ರಾಣಿಗಳು ಸಂಭೋಗ ನಡೆಸುವ ವೇಳೆ ತುಂಬಾ ಕುತೂಹಲದಲ್ಲಿ ಗಮನಿಸುವವನೂ ಇರಬಹುದು. ಇವೆಲ್ಲವೂ ಒಬ್ಬ ಪಶುಕಾಮಿಯಲ್ಲಿ ಕಾಣಬಹುದಾದ ಲಕ್ಷಣಗಳು.

ಶವದೊಂದಿಗೆ ಸಂಭೋಗ ನಡೆಸಿದ ವಿಕೃತ ಕಾಮಿಗಳು
 

ಈ ಪ್ರವೃತ್ತಿಯನ್ನು ಇಂಗ್ಲಿಷ್‌ನಲ್ಲಿ ಬೆಸ್ಟಿಯಾಲಿಟಿ ಅಥವಾ ಝೂಫೀಲಿಯಾ ಅನ್ನುತ್ತಾರೆ. ಮಕ್ಕಳನ್ನು ಲೈಂಗಿಕವಾಗಿ ಪೀಡಿಸುವವರು ಪೀಡೋಫೀಲ್‌ಗಳು ಎನಿಸಿಕೊಳ್ಳುತ್ತಾರೆ. ಹಾಗೆಯೇ ಪ್ರಾಣಿಗಳನ್ನು ಕಾಮಕ್ಕಾಗಿ ಪೀಡಿಸುವವರು ಝೂಪೀಲ್‌ಗಳು. ಝೂ ಎಂಭ ಪದ ಪ್ರಾಣಿಗಳಿಂದ ಬಂದದ್ದು. ಹಾಗೇ ಬೆಸ್ಟಿಯಾಲಿಟಿಯಲ್ಲಿ ಇರುವ ಬೀಸ್ಟ್‌ ಎಂದರೆ ಇಂಗ್ಲಿಷ್‌ನಲ್ಲಿ ಮೃಗ. ಕನ್ನಡದಲ್ಲಿ ಇದನ್ನು ಪಶುಕಾಮ ಅಥವಾ ಮೃಗಕಾಮ ಎನ್ನಬಹುದು. ಸಾಮಾನ್ಯವಾಗಿ ಹತ್ತು ಸಾವಿರ ಮಂದಿಯಲ್ಲಿ ಒಬ್ಬರಲ್ಲಿ ಈ ಪ್ರವೃತ್ತಿ ಕಂಡುಬರುತ್ತದೆ ಎನ್ನುತ್ತಾರೆ. ಅಷ್ಟು ವಿರಳ. ಇದರಲ್ಲಿ ವ್ಯತ್ಯಾಸಗಳಿವೆ, ಕೆಲವರಿಗೆ ಯಾವ ಪ್ರಾಣಿ ಕಂಡರೂ ಕಾಮ ಕೆರಳಬಹುದು. ಇನ್ನು ಕೆಲವರಿಗೆ ನಿರ್ದಿಷ್ಟ ಪ್ರಾಣಿಗಳನ್ನು ನೋಡಿದಾಗ ಮಾತ್ರ ಹಾಗಾಗುತ್ತದೆ. ಉದಾಹರಣೆಗೆ, ಕುರಿ, ಆಡುಗಳನ್ನು ನೋಡಿದರೆ ಮಾತ್ರವೇ ಕೆಲವರಿಗೆ ಲೈಂಗಿಕ ಪ್ರವೃತ್ತಿ ಕೆರಳುತ್ತದೆ. ಇಂಥವರನ್ನು ಸಾಮಾನ್ಯವಾಗಿ ಮಧ್ಯ ಪ್ರಾಚ್ಯ ಅಥವಾ ಅರಬ್‌ ದೇಶಗಳಲ್ಲಿ ಕಾಣಬಹುದು. ನಿಮಗೆ ನೆನಪಿರಬಹುದು. ಹಿಂದೊಮ್ಮೆ ಅಮೆರಿಕದ ಮಿಲಿಟರಿ ಅಫಘಾನಿಸ್ತಾನದ ಗುಡ್ಡಗಾಡುಗಳಲ್ಲಿ ಅಡಗಿದ್ದ ಇಸ್ಲಾಮಿಕ್‌ ಉಗ್ರರ ಮೇಲೆ ಹದ್ದಿನ ಕಣ್ಣು ಇಟ್ಟಿತ್ತು. ಡ್ರೋನ್‌ಗಳ ಮೂಲಕ, ಸ್ಯಾಟಲೈಟ್‌ಗಳ ಮೂಲಕ ಅವರ ಮೇಲೆ ಕ್ಯಾಮೆರಾ ಕಣ್ಣು ಇಟ್ಟಿತ್ತು. ಸ್ಯಾಟಲೈಟ್‌ನಿಂದ ಪಡೆದ ಕೆಲವು ವಿಡಿಯೋ ದೃಶ್ಯಗಳು ಬಳಿಕ ಇಂಟರ್‌ನೆಟ್‌ ಮೂಲಕ ಜಗತ್ತಿನ ಎಲ್ಲೆಡೆ ಲೀಕ್‌ ಆದವು. ಅದರಲ್ಲಿ ಕೆಲವು ಉಗ್ರರು, ಆಡುಗಳನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು, ಹಿಂದಿನಿಂಧ ಸಂಭೋಗಿಸುತ್ತಿದ್ದ ದೃಶ್ಯ ಇತ್ತು. ಇವರು ಐಸಿಸ್‌ ಉಗ್ರರಾಗಿದ್ದರು. ಇದನ್ನು ನೋಡಿದ ಜಗತ್ತು, ಐಸಿಸ್‌ ಉಗ್ರರನ್ನು ಗೇಲಿ ಮಾಡಿಕೊಂಡು ನಕ್ಕಿತು. ಮಾರಕ ಅನಿಸಿಕೊಂಡಿದ್ದ ಉಗ್ರರು ಕೆಲವೇ ದಿನಗಳಲ್ಲಿ ಹಾಸ್ಯಾಸ್ಪದ ಎನಿಸಿಕೊಂಡಿದ್ದರು.

 

ಗಾಳಿ ವಯಾಗ್ರ ತಿಂದವನ ಪಾಡು ಹೀಗಾಗಿತ್ತು
 

ಇದೇಕೆ ಹಾಗಾಗಿತ್ತು. ಯಾಕೆಂದರೆ ಈ ಉಗ್ರರಿಗೆ ಹೆಣ್ಣು ಸಂಪರ್ಕವೇ ಇರಲಿಲ್ಲ. ಅವರಲ್ಲಿ ಕೆಲವು ಉಗ್ರರು ಪಕ್ಕದ ಗ್ರಾಮಗಳಿಗೆ ನುಗ್ಗಿ ಹೆಣ್ಣುಮಕ್ಕಳನ್ನು ಎತ್ತಾಕಿಕೊಂಡು ಬರುತ್ತಿದ್ದರಾದರೂ. ಅದು ಅವರಿಗೇ ಸೀಮಿತವಾಗಿತ್ತು. ಉಗ್ರರಲ್ಲೇ ದುರ್ಬಲರಾದ ಹಲವರಿಗೆ ಆ ಸುಖವೂ ಇರಲಿಲ್ಲ. ಅಂಥವರು ಹೀಗೆ ಕುರಿ- ಆಡುಗಳನ್ನು ಭೋಗಿಸುವ ಮಟ್ಟಕ್ಕೆ ಹೋಗಿದ್ದರು. ಹೀಗೆ ಪಶುಕಾಮವೂ ಉಗ್ರಗಾಮಿಗಳ ಕ್ರೌರ್ಯವೂ ಒಂದಕ್ಕೊಂದು ಸಂಬಂಧ ಹೊಂದಿದೆ.

 

ಕೊರೋನಾ ವೈರಸ್ ಹೊಡೆತಕ್ಕೆ ಸೆಕ್ಸ್ ಇಂಡಸ್ಟ್ರಿಯೇ ಮಟಾಷ್!...

ಪಶುಕಾಮಿಗಳೆಲ್ಲ ಹೀಗೆ ಕ್ರೂರಿಗಳಾಗಿರುತ್ತಾರೆ ಅಂತೇನಿಲ್ಲ. ಇವರಲ್ಲಿ ಹೆಚ್ಚಿನವರು ಕುತೂಹಲಕ್ಕಾಗಿ ಇದನ್ನು ಆರಂಭಿಸಿರುತ್ತಾರೆ. ಬಳಿಕ ಇದೇ ಚಟವಾಗಿ ಪರಿಣಮಿಸುತ್ತದೆ ಎನ್ನುತ್ತಾರೆ ತಜ್ಞರು. ಇವರಿಗೆ ಪ್ರಾಣಿಗಳ ಜನನೇಂದ್ರಿಯಗಳನ್ನು ನೋಡಿದಾಗ ಕಾಮ ಕೆರಳುತ್ತದೆ. ಯಾರೂ ಇಲ್ಲದಾಗ ಅವರು ತಮ್ಮ ಆಸೆ ಪೂರೈಸಿಕೊಳ್ಳುತ್ತಾರೆ. ಕುರಿ, ಆಡು, ಅಥವಾ ಕರುವಿನಂಥ ದುರ್ಬಲ ಪಶುಗಳು ಪ್ರತಿಭಟಿಸುವುದಿಲ್ಲ. ಮನುಷ್ಯರ ಮೇಲೆ ಅತ್ಯಾಚಾರ ಮಾಡಲು ಹೋದರೆ ಪ್ರತಿಭಟನೆಯ, ತಿರಸ್ಕಾರದ, ಕಾನೂನಿನ, ಏಟು ತಿನ್ನುವ ಭಯ ಇರುತ್ತದೆ. ಆದ್ದರಿಂದ ಇಂಥವರು ಅತ್ಯಾಚಾರಕ್ಕೆ ಮುಂದಾಗಲಾರರು. ಆದರೆ ಹೆಣ್ಣುಮಕ್ಕಳು, ಸಣ್ಣ ಮಕ್ಕಳು ಒಂಟಿಯಾಗಿ ಸಿಕ್ಕರೆ, ಯಾರ ಭಯವೂ ಇಲ್ಲ ಎನಿಸಿದರೆ, ಮಕ್ಕಳು ದುರ್ಬಲರಾಗಿಯೂ ಇದ್ದರೆ ಅಂಥವರನ್ನು ಬಲವಂತವಾಗಿ ಭೋಗಿಸಲು ಇವರು ಮುಂದಾಗಬಹುದು.

 

ಎಣ್ಣೆ ಏಟು... ಸ್ನೇಹಿತನನ್ನೇ ಕೊಂದು ಶವದೊಂದಿಗೆ ಸಂಭೋಗ ನಡೆಸಿದ್ದ ವಿಕೃತಕಾಮಿಗಳು!...

ಇದೊಂದು ಮಾನಸಿಕ ಸಮಸ್ಯೆ. ಪಶುಕಾಮ ಪ್ರವೃತ್ತಿ ಹೊಂದಿದವರೆಲ್ಲಾ ವಿಕೃತರಲ್ಲ, ಅತ್ಯಾಚಾರಿಗಳೂ ಅಲ್ಲ. ಸಾಧು ಸ್ವಭಾವದವರೂ ಪಶುಕಾಮಿಗಳಾಗಬಹುದು. ಇದೊಂದು ಮನೋರೋಗ. ಮಾನಸಿಕ ಸಮಸ್ಯೆ. ಇದಕ್ಕೆ ಚಿಕಿತ್ಸೆ ಅಗತ್ಯ.