Asianet Suvarna News Asianet Suvarna News

ಟಿವಿ ಆಂಕರ್‌ನ ತಬ್ಬಿಕೊಂಡ ಬುಮ್ರಾ, ವರ್ಲ್ಡ್ ಕಪ್‌ ಮುಗಿದ ಮೇಲೆ ಈ ವೀಡಿಯೋ ವೈರಲ್‌

ಟಿ 20 ವಿಶ್ವಕಪ್‌ನಲ್ಲಿ ಮತ್ತು ಕಪ್‌ ನಮ್ದೇ ವೀಡಿಯೋಗಳು ವೈರಲ್‌ ಆದ್ಮೇಲೆ ಈಗ ಬುಮ್ರಾ ಮತ್ತು ಆತ ತಬ್ಬಿಕೊಂಡ ಟಿವಿ ಆಂಕರ್‌ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.

 

Who was the TV Anchor whom jasprit bumrah embraced after world cup match
Author
First Published Jul 2, 2024, 11:31 AM IST

ಟಿ20 ವಿಶ್ವಕಪ್‌ನ ಫಿನಾಲೆ (T20 World Finals) ಮುಗಿದು ದಿನಗಳೇ ಕಳೆದಿವೆ. ಹುಚ್ಚರಂತೆ ವರ್ಲ್ಡ್‌ ಕಪ್‌ ಗೆಲುವನ್ನು ಸಂಭ್ರಮಿಸಿದ ಜನ ಇದೀಗ ಮತ್ತೆ ತಮ್ಮ ಹಳೇ ರುಟೀನ್‌ಗೆ ಮರಳಿದ್ದಾರೆ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ಆಟಗಾರ ಬುರ್ಮಾ ಅವರದೊಂದು ವೀಡಿಯೋ ಮಾತ್ರ ವೈರಲ್‌ ಆಗುತ್ತಲೇ ಇದೆ. ಕೋಟ್ಯಂತರ ಜನ ಇದನ್ನು ನೋಡಿದರೂ ಮತ್ತೆ ಮತ್ತೆ ನೋಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. 

ಅದಕ್ಕೂ ಮೊದಲು ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಟವನ್ನು ನೆನೆಸಿಕೊಳ್ಳಲೇ ಬೇಕು. ಫೈನಲ್ ಪಂದ್ಯದಲ್ಲಿ ಹಲವು ಆಟಗಾರರು ಮಿಂಚಿದರೂ ನಿಜವಾದ ಹೀರೋ ಆಗಿ ಮಿಂಚಿದ್ದು ಈ ಜಸ್ಪ್ರೀತ್ ಬುಮ್ರಾ. ಇವರು 4 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಪಡೆದರು. ಇವರ ಮೊನಚಾದ ಬೌಲಿಂಗ್ ದಾಳಿಯಿಂದ ಆಫ್ರಿಕಾ ರನ್ ಗಳಿಸಲು ಪರದಾಡಿತು. ಬುಮ್ರಾ ಅವರಿಂದ ಸ್ಫೂರ್ತಿ ಪಡೆದ ಅರ್ಷದೀಪ್ ಮತ್ತು ಹಾರ್ದಿಕ್ ಬೌಲಿಂಗ್‌ ದಾಳಿ ತೀವ್ರಗೊಳಿಸಿದರು. ಈ ಟೂರ್ನಿಯಲ್ಲಿ ಬುಮ್ರಾ ಅವರ ಅದ್ಭುತ ಬೌಲಿಂಗ್‌ ಪ್ರದರ್ಶನಕ್ಕಾಗಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಅವರ ಪಾಲಾಯಿತು. ಈ ಸಂದರ್ಭದಲ್ಲಿ ಅವರು ಭಾವುಕರಾದರು.  

 

ಆ ಬಳಿಕ ಬುರ್ಮಾ ಅವರನ್ನು ಟಿವಿ ಆಂಕರ್ ಮಾತಿಗೆಳೆದರು. ಅವರು ಕೇಳಿದ ಪ್ರಶ್ನೆಗಳಿಗೆ ಬುರ್ಮಾ ನಗುಮುಖದಿಂದಲೇ ಉತ್ತರಿಸಿದರು. 'ಇಂತಹ ದೊಡ್ಡ ಯಶಸ್ಸನ್ನು ಸಾಧಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಪಂದ್ಯದ ಕೆಲವು ಕ್ಷಣಗಳಲ್ಲಿ ನಾನು ತುಂಬಾ ನರ್ವಸ್ ಆಗಿದ್ದೇನೆ. ಆದರೆ ಕಪ್ ಅನ್ನು ಗೆದ್ದಿದ್ದು ಸಂತೋಷವಾಯಿತು. ಇದು ನಮಗೆ ಉತ್ತಮ ಪಂದ್ಯಾವಳಿಯಾಗಿದೆ. ಅನೇಕ ಸಿಹಿ ನೆನಪುಗಳನ್ನು ನೀಡಿದೆ. ಮಗ ಅಂಗದ್ ಕೂಡ ಇಲ್ಲಿದ್ದಾನೆ. ಆತನ ಮುಂದೆ ಕಪ್ ಗೆಲ್ಲುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ' ಎಂದರು.

ಒಂದಿಷ್ಟು ಹೊತ್ತು ಆಟದ ಬಗ್ಗೆ ಮಾತುಕತೆ ನಡೆಯಿತು. ಕೊನೆಯಲ್ಲಿ ಆಂಕರ್ ಗುಡ್‌ ಲಕ್‌ ಹೇಳಿ ಅಲ್ಲಿಂದ ಮೂವ್‌ ಆನ್ ಆಗಬೇಕು ಅನ್ನುವಷ್ಟರಲ್ಲಿ ಅಷ್ಟು ಹೊತ್ತು ತಡೆದುಕೊಂಡಿದ್ದ ಎಮೋಶನ್‌ ಅನ್ನು ನಿಯಂತ್ರಿಸಲಾಗದೇ ಬುರ್ಮಾ ಆಂಕರ್ ಅನ್ನು ತಬ್ಬಿಕೊಂಡರು. 

ಇಷ್ಟೆಲ್ಲ ಹೇಳಿದ ಮೇಲೆ ಆ ಆಂಕರ್ ಯಾರು ಎಂಬ ಪ್ರಶ್ನೆ ಬಂದೇ ಬರುತ್ತೆ. ಕ್ರೀಡಾಪ್ರಿಯರಿಗೆಲ್ಲ ಗೊತ್ತಿರುವ ಈಕೆ ಸಂಜನಾ ಗಣೇಸನ್‌ ಮಾಡೆಲ್‌, ಸ್ಪೋರ್ಟ್ಸ್‌ ಜರ್ನಲಿಸ್ಟ್.

ಕಾಲ್ ಯು ಬ್ಯಾಕ್ ಎನ್ನದೆ ಮೈದಾನದಿಂದಲೇ ಅನುಷ್ಕಾಗೆ ಕೊಹ್ಲಿ ವಿಡಿಯೋ ಕಾಲ್, ಪ್ರೀತಿ ಅಂದ್ರಿದು!

ಆಕೆ ಮತ್ಯಾರೂ ಅಲ್ಲ, ಬುರ್ಮಾ ಪತ್ನಿ. ಇವರಿಬ್ಬರ ಲವ್‌ ಸ್ಟೋರಿ ಸಖತ್ ಇಂಟರೆಸ್ಟಿಂಗ್‌.  2013-14ನೇ ಸಾಲಿನ ಐಪಿಎಲ್‌ ಮ್ಯಾಚ್‌ ವೇಳೆ ಬುರ್ಮಾ ಅನ್ನೋ ಎನರ್ಜಿಟಿಕ್‌ ಫಾಸ್ಟ್ ಬೌಲರ್‌ (Enertgetic Fast Bowler) ತಮ್ಮ ಆಕರ್ಷಕ ಬೌಲಿಂಗ್‌ನಿಂದ ಜಗತ್ತಿನ ಗಮನ ಸೆಳೆಯುತ್ತಾರೆ. ಅದೇ ವೇಲೆ ಮಿಸ್‌ ಇಂಡಿಯಾ (Miss India) ಫೈನಲಿಸ್ಟ್ ಆಗಿದ್ದ ಯುವ ಸ್ಪೋರ್ಟ್ಸ್ ಜರ್ನಲಿಸ್ಟ್ ತಮ್ಮ ಡೇರಿಂಗ್‌ ಮಾತುಗಳ ಮೂಲಕ ಗಮನ ಸೆಳೆಯುತ್ತಾರೆ. ಈ ಇಬ್ಬರ ಮೊದಲ ಭೇಟಿ ನಡೆದದ್ದು ಇಲ್ಲೇ. ಇದಾಗಿ ಕೆಲ ವರ್ಷ ಇಬ್ಬರ ನಡುವೆ ಜಸ್ಟ್ ಪರಿಚಯವಷ್ಟೇ ಇರುತ್ತದೆ. ಆದರೆ ಪರಿಚಯ ಸ್ನೇಹಕ್ಕೆ ತಿರುಗಿದ್ದು 2019ರಲ್ಲಿ. ಮುಂದೆ ಈ ಸ್ನೇಹ ಪ್ರೇಮವಾಗಿ ಅರಳಲು ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ.

ಈ ಪ್ರೇಮಿಗಳು 2021ರಲ್ಲಿ ಪಂಜಾಬಿ ಸಂಪ್ರದಾಯದಂತೆ ಸಪ್ತಪದಿ ತುಳಿಯುತ್ತಾರೆ. ಈಗ ಇವರಿಬ್ಬರ ಪ್ರೇಮ ಬದುಕಿನಲ್ಲಿ ಮಗ ಅಂಗದ್ ಪ್ರವೇಶವಾಗಿದೆ. ಫೀಲ್ಡಿಗಿಳಿದವರೆ ಇಬ್ಬರೂ ಸತಿ ಪತಿ ಅನ್ನೋದನ್ನು ಮರೆತು ತಮ್ಮ ಕ್ಷೇತ್ರದಲ್ಲಿ ಪಾರಮ್ಯ ಮೆರೆಯುತ್ತಾರೆ. ಆದರೂ ಈ ಬಾರಿಯ ವರ್ಲ್ಡ್‌ ಕಪ್‌ನಲ್ಲಿ ಬುರ್ಮಾ ಸಂಜನ ಪ್ರಶ್ನೆಗೆ ಸಲೀಸಾಗಿಯೇ ಉತ್ತರಿಸುತ್ತಾರೆ. ಆದರೆ ಕೊನೆಯಲ್ಲಿ ಅವರು ಕೊಡುವ ಬೆಚ್ಚನೆಯ ಹಗ್ ಆ ಕ್ಷಣವನ್ನು ಸ್ಪೆಷಲ್ ಆಗಿಸುತ್ತೆ. ಜನರ ಮನಸ್ಸಲ್ಲಿ ವರ್ಲ್ಡ್ ಕಪ್ ಜೊತೆಗೆ ಈ ಜೋಡಿಯ ಈ ಕ್ಷಣವೂ ನೆನಪಿನಲ್ಲಿರುತ್ತೆ. 

ಮುಂದಿನ ವಾರದಿಂದ ನಿರುದ್ಯೋಗಿ, ಏನಾದ್ರು ಕೆಲ್ಸ ಇದೆಯಾ?; ಗೆಲುವಿನ ಬಳಿಕ ದ್ರಾವಿಡ್ ಪ್ರಶ್ನೆ!
 

Latest Videos
Follow Us:
Download App:
  • android
  • ios