ಉದಿತ್ ನಾರಾಯಣ್ - ಅಲ್ಕಾ ಸಂಬಂಧಕ್ಕೆ ಯಸ್ ಎಂದ ಪತ್ನಿ! ಗಂಡನನ್ನು ಹೆಂಡ್ತಿ ನಂಬೋದು ಯಾವಾಗ?
ದಾಂಪತ್ಯದಲ್ಲಿ ಪ್ರೀತಿ ಜೊತೆ ವಿಶ್ವಾಸ, ನಂಬಿಕೆ ಬಹಳ ಮುಖ್ಯ. ಪತಿ ತನ್ನ ಸ್ನೇಹಿತೆ ಜೊತೆಗಿದ್ರೂ ಪತ್ನಿ ಅನುಮಾನ ಪಡ್ತಿಲ್ಲ ಅಂದ್ರೆ ಅದರ ಹಿಂದೆ ಬಲವಾದ ನಂಬಿಕೆ ಅಡಗಿರುತ್ತದೆ. ಪತ್ನಿಯ ನಂಬಿಕೆ ಗಳಿಸೋದನ್ನು ಪತಿ ಕಲಿತಿರಬೇಕು.
ಸೆಲೆಬ್ರಿಟಿ ಜೋಡಿಗಳು ಆಗಾಗ ಸುದ್ದಿ ಮಾಡ್ತಿರುತ್ತವೆ. ಸ್ಯಾಂಡಲ್ವುಡ್ ಇರಲಿ, ಬಾಲಿವುಡ್ ಇರಲಿ ಅದ್ರಲ್ಲಿರುವ ಕೆಲ ಜೋಡಿ ರೀಲ್ ಹಾಗೂ ರಿಯಲ್ ಲೈಫ್ ನಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇದ್ರೆ ಇಂಥ ಪತಿ –ಪತ್ನಿ ಇರಬೇಕು ಅಂತ ಅಭಿಮಾನಿಗಳು ಪ್ರಶಂಸಿಸುವ ಜೊತೆಗೆ ಅವರನ್ನು ಫಾಲೋ ಮಾಡಲು ಬಯಸ್ತಾರೆ. ಬರೀ ತೆರೆ ಮೇಲೆ ಕಾಣಿಸಿಕೊಳ್ಳುವ ನಟರು ಮಾತ್ರವಲ್ಲ ತಮ್ಮ ಧ್ವನಿ ಮೂಲಕವೇ ಕೋಟ್ಯಾಂತರ ಅಭಿಮಾನಿಗಳನ್ನು ಸೆಳೆದಿರುವ ಜೋಡಿ ಕೂಡ ತಮ್ಮ ಬಾಂಧವ್ಯ, ಮಧುರ ಸಂಬಂಧದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅದ್ರಲ್ಲಿ ಉದಿತ್ ನಾರಾಯಣ್ ಹಾಗೂ ಅಲ್ಕಾ ಯಾಗ್ನಿಕ್ ಸೇರಿದ್ದಾರೆ. ಅವರಿಬ್ಬರ ಧ್ವನಿ ಅಭಿಮಾನಿಗಳನು ಮೂಡಿ ಮಾಡುತ್ತದೆ. ಇಬ್ಬರೂ ಸೇರಿ ಸೂಪರ್ ಹಿಟ್ ಹಾಡುಗಳನ್ನು ಇಂಡಸ್ಟ್ರಿಗೆ ನೀಡಿದ್ದಾರೆ. ಒಂದ್ಕಾಲದಲ್ಲಿ ಉದಿತ್ ನಾರಾಯಣ್ ಧ್ವನಿ ಇರುವ ಡುಯಟ್ ಸಾಂಗ್ ಗೆ ಅಲ್ಕಾ ಇಲ್ಲ ಅಂದ್ರೆ ಅದು ಸೆಪ್ಪೆ ಎನ್ನಿಸುತ್ತಿತ್ತು. ಇಬ್ಬರಿದ್ದರೇ ಡುಯಟ್ ಸಾಂಗ್ ಎನ್ನಿಸಿಕೊಳ್ತಿತ್ತು. ಅಲ್ಕಾ ಯಾಗ್ನಿಕ್ ಮತ್ತು ಉದಿತ್ ನಾರಾಯಣ್ ನೂರಾರು ಹಾಡುಗಳನ್ನು ಒಟ್ಟಿಗೆ ಹಾಡಿದ್ದಾರೆ. ವೃತ್ತಿಯಲ್ಲಿ ಆಪ್ತರಾಗಿದ್ದ ಅವರ ಬಗ್ಗೆ ಸಾಕಷ್ಟು ಗಾಸಿಫ್ ಹರಡಿದ್ದೂ ಇದೆ. ಈ ಬಗ್ಗೆ ಉದಿತ್ ನಾರಾಯಣ್ ಪತ್ನಿ ತಲೆ ಕೆಡಿಸಿಕೊಂಡಿಲ್ಲ. ಅದನ್ನು ಕೂಲ್ ಆಗಿ ಸ್ವೀಕರಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಉದಿತ್ ನಾರಾಯಣ್ (Udit Narayan) ಪತ್ನಿ ದೀಪಾ, ಪತಿ ಉದಿತ್ ಹಾಗೂ ಅಲ್ಕಾ (Alka) ಸಂಬಂಧದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಉದಿತ್ ಹಾಗೂ ದೀಪಾ ಮೊದಲ ಭೇಟಿಯಿಂದ ಹಿಡಿದು ಪ್ರೀತಿ (Love) ಮದುವೆ ಬಗ್ಗೆ ಹೇಳಿದ ದೀಪಾ, ಉದಿತ್ – ಅಲ್ಕಾ ಮಧ್ಯೆ ಇರುವ ಗೆಳೆತನದ ಬಗ್ಗೆ ಕೇಳಿದಾಗ ಮನಸ್ಪೂರ್ವಕವಾಗಿ ನಕ್ಕ ದೀಪಾ, ಅವರ ಸಂಬಂಧವನ್ನು ನಾನು ಒಪ್ಪುತ್ತೇನೆ ಎಂದಿದ್ದಾರೆ. ಪತಿ ಮತ್ತು ಅವರ ಮಹಿಳಾ ಸಹೋದ್ಯೋಗಿಯ ನಡುವಿನ ಸ್ನೇಹವನ್ನು ತುಂಬಾ ಆತ್ಮವಿಶ್ವಾಸ ಮತ್ತು ಸಂತೋಷದಿಂದ ದೀಪಾ ಒಪ್ಪಿಕೊಂಡಿದ್ದಾರೆ.
ಸೀತಾರಾಮದ ವೈಷ್ಣವಿ ಮತ್ತು ಗಗನ್ ರಿಯಲ್ ಲೈಫಲ್ಲೂ ಎಂಗೇಜ್‌ಮೆಂಟ್ ಮಾಡ್ಕೊಂಡ್ರಾ?
ದೀಪಾರಂತೆ ಎಲ್ಲ ಮಹಿಳೆ ಇರಲು ಸಾಧ್ಯವಿಲ್ಲ. ಪತಿಗೆ ಬೇರೆ ಹುಡುಗಿ ಹತ್ತಿರವಾಗ್ತಿದ್ದಂತೆ ಇವರಲ್ಲಿ ಅಭದ್ರತೆ ಮೂಡುತ್ತದೆ. ಆದ್ರೆ ದೀಪಾ ಪತಿ ಮೇಲೆ ನಂಬಿಕೆ ಹೊಂದಿದ್ದಾರೆ. ಉದಿತ್ ಹಾಗೂ ಅಲ್ಕಾ ದಶಕಗಳ ಸ್ನೇಹ ಮತ್ತು ಕೆಲಸದ ಅನುಭವವು ನಂಬಿಕೆಯ ಆಧಾರದ ಮೇಲೆ ಸೃಷ್ಟಿಯಾಗಿದೆ. ಅವರಿಬ್ಬರ ಮಧ್ಯೆ ಗೌರವಾನ್ವಿತ ಮಿತಿಯಿದೆ. ಪರಸ್ಪರ ತಮ್ಮ ಸ್ನೇಹವನ್ನು ಅವರು ಗೌರವಿಸುವುದಲ್ಲದೆ ಇತರರೂ ಗೌರವಿಸಲ್ಪಡುವಂತೆ ನಡೆದುಕೊಂಡಿದ್ದಾರೆ. ಇವರಿಬ್ಬರ ವರ್ತನೆಯೇ ಇವರ ಮಧ್ಯೆ ಸ್ನೇಹಕ್ಕಿಂತ ಹೆಚ್ಚೇನೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದಲ್ಲದೆ ಉದಿತ್ ಮತ್ತು ಅಲ್ಕಾ ಕುಟುಂಬ ಕೂಡ ಆಪ್ತವಾಗಿದೆ. ಇಬ್ಬರ ಮಧ್ಯೆ ಕುಟುಂಬದ ಸ್ಪರ್ಶವಿದೆ.
ಪತ್ನಿಯಲ್ಲಿ ನಂಬಿಕೆ ಹುಟ್ಟಿಸೋದು ಹೇಗೆ? : ಮೊದಲೇ ಹೇಳಿದಂತೆ ಎಲ್ಲ ಪತ್ನಿಯರು ಹೀಗಿರಲು ಸಾಧ್ಯವಿಲ್ಲ. ಹೆಂಡತಿ ನಂಬಿಕೆ ಗೆಲ್ಲೋದು ಒಂದು ಸವಾಲಾಗಿದ್ದರೂ ಕೆಲ ಉಪಾಯದ ಮೂಲಕ ಪತ್ನಿಯ ವಿಶ್ವಾಸಕ್ಕೆ ನೀವು ಪಾತ್ರರಾಗಬಹುದು. ನಿಮ್ಮ ಮಹಿಳಾ ಸ್ನೇಹಿತೆಯರನ್ನು ನೀವು ಎಂದೂ ಪತ್ನಿಯಿಂದ ಮುಚ್ಚಿಡಬಾರದು. ಪರಸ್ಪರ ಪರಿಚಯಿಸಬೇಕು. ನಿಮ್ಮಿಬ್ಬರ ಸಂಬಂಧ ಹೇಗಿದೆ ಎಂಬುದನ್ನು ಪತ್ನಿಗೆ ವಿವರಿಸಬೇಕು. ಅವರಿಬ್ಬರು ಸ್ನೇಹಿತರಾಗಲು, ಹ್ಯಾಂಗ್ ಔಟ್ ಮಾಡಲು ಬಿಡಬೇಕು. ಎರಡೂ ಕುಟುಂಬಗಳು ಆಪ್ತವಾದ್ರೆ ನಂಬಿಕೆ ಮತ್ತಷ್ಟು ಬಲಗೊಳ್ಳುತ್ತದೆ.
21 ವರ್ಷದ ಪುತ್ರಂಗೆ ಓಪನ್ನಾಗಿ ಸೆಕ್ಸ್ ಬಗ್ಗೆ ಕೇಳೋದಾ ಮಲೈಕಾ? ಅರ್ಹಾನ್ ತಿರುಗಿ ಹೇಳಿದ್ದೇನು?
ಈ ಕೆಲಸ ಮಾಡ್ಬೇಡಿ : ಪತ್ನಿಯ ಭಾವನೆಗೆ ಮಹತ್ವ ನೀಡುವುದು ಮುಖ್ಯ. ಆಕೆಯ ಭಾವನೆಯನ್ನು ಗೇಲಿ ಮಾಡದೆ ಗೌರವ ನೀಡಿ. ಅವಳ ಮನಸ್ಸಿನಲ್ಲಿರುವ ನಕಾರಾತ್ಮಕ ಭಾವನೆಯನ್ನು ಹೋಗಲಾಡಿಸಿ. ನಿಮ್ಮ ಮಹಿಳಾ ಸ್ನೇಹಿತೆಯ ಪ್ರತಿಯೊಂದು ಸಣ್ಣ ವಿಷ್ಯವನ್ನು ಪತ್ನಿಗೆ ಹೇಳ್ಬೇಕಾಗಿಲ್ಲ. ಅಪ್ಪಿತಪ್ಪಿಯೂ ಹೋಲಿಕೆ ಸಲ್ಲದು. ಹೊತ್ತಲ್ಲದ ಹೊತ್ತಲ್ಲಿ ಸ್ನೇಹಿತೆಗೆ ಕರೆ ಮಾಡಿ ಮಾತನಾಡಬೇಡಿ. ಸ್ನೇಹ ಹಾಗೂ ಸಂಬಂಧಕ್ಕಿರುವ ವ್ಯತ್ಯಾಸವನ್ನು ಮೊದಲು ನೀವು ತಿಳಿದುಕೊಂಡು ಗೆರೆ ಹಾಕಿಕೊಳ್ಳಿ.