ಒಬ್ಬೊಬ್ಬ ಗಂಡ ಹೆಂಡತಿಯದು ಒಂದೊಂದು ಕತೆ. ಕೆಲವರು ಟಾಮ್ ಆಂಡ್ ಜೆರ್ರಿ ತರ ಕಿತ್ತಾಡುತ್ತಿದ್ದರೆ, ಮತ್ತೆ ಕೆಲವರದು ಶೀತಲ ಸಮರ. ಇನ್ನೂ ಕೆಲವರು ತಮ್ಮ ಪಾಡಿಗೆ ತಾವು ತಮ್ಮ ತಮ್ಮ ಕೆಲಸ ಮಾಡುತ್ತಾ ಪರಸ್ಪರ ಸಂಬಂಧವೇ ಇರದ ಹಾಗಿರುತ್ತಾರೆ.

ಆದರೆ ಬಹಳ ಅನ್ಯೋನ್ಯವಾಗಿರುವ ದಂಪತಿ ಅಂತ ದುರ್ಬೀನು ಹಾಕಿ ಹುಡುಕಿದ್ರೂ ಸಿಗೋದು ಕಷ್ಟ. ಆದರೆ ನಾನೀಗ ಹೇಳ್ತಿರೋ ಕತೆಯಲ್ಲಿ ಬರುವ ಗಂಡ ಹೆಂಡತಿ ಹೊರ ಜಗತ್ತಿಗೆ ಅನ್ಯೋನ್ಯವಾಗಿಯೇ ಇದ್ದರು.

ಈ ರಾಶಿಯ ಹುಡುಗೀರು ಹುಡುಗರಿಗೂ ಮುನ್ನವೇ ಪ್ರಪೋಸ್ ಮಾಡ್ತಾರೆ! ...

ಅವರಿಬ್ಬರ ನಡುವೆ ಟಾಮ್ ಆಂಡ್ ಜೆರಿ ರಿಲೇಶನ್ ಶಿಪ್ ಇರಲಿಲ್ಲ. ಇಬ್ಬರೂ ಫ್ರೆಂಡ್ಸ್ ಥರ ಲೈಫ್ ಲೀಡ್ ಮಾಡುತ್ತಿದ್ದರು. ಮದುವೆ ಆಗಿ ಹೋಗೋ ಮನೆ ಅತ್ತೆ, ಮಾವ ಎಲ್ಲರೂ ಇರುವ ಜಾಯಿಂಟ್ ಫಾಮಿಲಿ ಅಂದ್ರೆ ಹೆಚ್ಚಿನ ಹೆಣ್ಮಕ್ಕಳು ನೋ ಅಂದುಬಿಡುತ್ತಾರೆ.

ಆದರೆ ಈ ಹೆಣ್ಮಗಳು ಹಾಗೇನೂ ಹೇಳಲಿಲ್ಲ. ಆಕೆ ಆ ಮನೆಗೆ ಬಂದು ಒಂಭತ್ತು ವರ್ಷಗಳಾಗಿದ್ದವು. ಅಲ್ಲಿಯವರೆಗೂ ಎಲ್ಲಾ ಚೆನ್ನಾಗಿತ್ತು. ಆಮೇಲೆ ಏನಾಯ್ತು ಅಂತ ಆಕೆಯ ಬಾಯಲ್ಲೇ ಕೇಳಿ. ಆಕೆ ಇಲ್ಲಿ ತನ್ನನ್ನು ಬೆಚ್ಚಿ ಬೀಳಿಸಿದ ಆ ರಾತ್ರಿಯ ಕತೆ ಹೇಳಿದ್ದಾಳೆ.

ಈ ವಿಚಿತ್ರ ಸೆಕ್ಸ್ ವರ್ತನೆಗಳು ನಿಮಗೆ ಗೊತ್ತೇ? ... 

ಅದೊಂದು ಮಧ್ಯರಾತ್ರಿ. ಎಚ್ಚರಾಗಿ ನೋಡಿದರೆ ರಾತ್ರಿ ಜೊತೆಗೇ ಮಲಗಿದ್ದ ಗಂಡ ಪಕ್ಕದಲ್ಲಿಲ್ಲ. ವಾಶ್ ರೂಮ್ ಗೆ ಹೋಗಿರ್ತಾರೆ ಅಂತ ಸುಮ್ಮನಾಗಿ ತಿರುಗಿ ಮಲಗಿದೆ. ಸ್ವಲ್ಪ ಹೊತ್ತಾಯ್ತು, ಗಂಡನ ಪತ್ತೇ ಇಲ್ಲ. ವಾಶ್ ರೂಮ್ ಗೆ ಹೋಗಿ ಚೆಕ್ ಮಾಡಿದೆ. ಅಲ್ಲೂ ಇಲ್ಲ. ನನಗೆ ಗಾಬರಿಯಾಯ್ತು. ಹುಡುಕುತ್ತಾ ಹೋದೆ. ಪಾರ್ಕಿಂಗ್ ಜಾಗಕ್ಕೆ ಹೋದರೆ ಅಲ್ಲಿ ನಮ್ಮ ಕಾರಿನ ಪಕ್ಕ ಇನ್ನೊಂದು ಕಾರಿತ್ತು! ಇದ್ಯಾರಿರಬಹುದು, ರಾತ್ರಿ ನನಗೆ ನಿದ್ದೆ ಬಂದ ಮೇಲೆ ಗಂಡನ ಸ್ನೇಹಿತರು ಯಾರಾದರೂ ಬಂದಿರಬಹುದಾ ಅಂದುಕೊಂಡು ಮಹಡಿ ಮೇಲೆ ಹೋದೆ.

ಅಲ್ಲಿ ಗೆಸ್ಟ್ ರೂಮ್ ಇದೆ. ಯಾರಾದರೂ ಬಂದಿದ್ದರೆ ಅಲ್ಲಿರುತ್ತಾರೆ. ಬಹುಶಃ ನನ್ನ ಗಂಡನೂ ಅವರ ಜೊತೆಗೆ ಮಾತಾಡುತ್ತಿರಬಹುದು ಅಂದುಕೊಂಡೆ. ಅಲ್ಲಿ ಹೋಗಿ ನೋಡಿದರೆ ರೂಮ್ ಲಾಕ್ ಆಗಿತ್ತು. ಆಶ್ಚರ್ಯ ಆಗಿ ಕಿಟಕಿಯಿಂದ ಇಣುಕಿ ನೋಡಿದೆ. ಕಂಡ ದೃಶ್ಯ ನನ್ನ ಎದೆ ಒಡೆಯುವಂತಿತ್ತು. ಅಲ್ಲಿ ನನ್ನ ಗಂಡ ಒಬ್ಬ ಹೆಂಗಸಿನ ಜೊತೆ ಮಲಗಿದ್ದ! ನಾನು ಕಿರುಚಾಡತೊಡಗಿದೆ. ಎಚ್ಚರಾದ ಗಂಡ ಬಾಗಿಲು ತೆರೆದು ನನ್ನನ್ನು ನೂಕಿದ. ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸಿದ. ನಾನು ಸೀದ ಅತ್ತೆ ಮಾವನನ್ನು ಎಚ್ಚರಿಸಿ ನಡೆದ ಘಟನೆ ವಿವರಿಸಿದೆ. ಅವರು ಬಂದು ಮಗನ ಜೊತೆಗೆ ಗಲಾಟೆ ಮಾಡಿದರು. ಇಷ್ಟೆಲ್ಲ ಆದಮೇಲೆ ನನಗೆ ಅಲ್ಲಿರಲಾಗಲಿಲ್ಲ. ನೇರ ನನ್ನ ಮನೆ ಅಂದರೆ ನಾನು ಹುಟ್ಟಿ ಬೆಳೆದ ಮನೆಗೆ ಮರಳಿದೆ. 

#Feelfree: ಪಕ್ಕದ್ಮನೆಯವಳನ್ನು ನೋಡಿದ್ರೆ ಏನೇನೋ ಅನಿಸುತ್ತೆ! ...

ಗಂಡನ ಈ ಅಕ್ರಮ ಸಂಬಂಧ ಬಹಳ ದಿನ ನನ್ನನ್ನು ಕಂಗೆಡಿಸಿತು. ಶಾಕ್ ಗೆ ಒಳಗಾದ ಹಾಗಾಗಿತ್ತು. ನನ್ನ ಭವಿಷ್ಯದ ಬಗ್ಗೆ ಬಹಳ ಚಿಂತೆ ಕಾಡುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಾನು ಅಷ್ಟು ನಂಬಿಕೆಕೊಂಡಿದ್ದ, ಅಷ್ಟು ಪ್ರೀತಿಸುತ್ತಿದ್ದ, ನನ್ನ ಜೀವಕ್ಕಿಂತ ಹೆಚ್ಚಾಗಿ ಆದರಿಸುತ್ತಿದ್ದ ವ್ಯಕ್ತಿಯಿಂದ ಹೀಗಾಯಿತಲ್ಲಾ ಅನ್ನುವ ನೋವು ಮಾಯುವುದೇ ಇಲ್ಲ ಅನಿಸಿಬಿಟ್ಟಿತ್ತು. ರಾತ್ರಿ ಹಗಲು ಡಿಪ್ರೆಶನ್‌ನಿಂದ ಒದ್ದಾಡುತ್ತಿದ್ದೆ.

ಅಪ್ಪ ಅಮ್ಮ ಬಹಳ ಸಮಾಧಾನ ಮಾಡುತ್ತಿದ್ದರು. ನಾನು ಯಾವುದಾದರೊಂದು ಚಟುವಟಿಕೆಯಲ್ಲಿ ಮಗ್ನವಾಗಿರುವಂತೆ ಮಾಡುತ್ತಿದ್ದರು. ಆದರೂ ಏನೇ ಮಾಡಿದರೂ ಮನಸ್ಸು ಮತ್ತೆ ಮತ್ತೆ ಅಲ್ಲಿಗೇ ಹೋಗುತ್ತಿತ್ತು. ಈ ಜಗತ್ತಿನಲ್ಲಿ ಯಾರನ್ನು ನಂಬಲಿ, ಯಾರನ್ನು ಬಿಡಲಿ ಅನ್ನೋದೇ ಗೊತ್ತಾಗುತ್ತಿರಲಿಲ್ಲ...
ಹೀಗಂತಾರೆ ಆ ಮಹಿಳೆ. 

..ಆದರೂ ಈ ಟೈಮ್ ಅನ್ನೋದು ಗ್ರೇಟ್. ಒಂದು ಹಂತದ ನಂತರ ಎಲ್ಲ ಗಾಯಗಳನ್ನೂ ಮರೆಸುವ ಶಕ್ತಿ ಅದಕ್ಕಿದೆ. ಈ ಹೆಣ್ಣುಮಗಳು ಕೊನೆಗೂ ಗಂಡನ ದ್ರೋಹದಿಂದ ಹೊರಬಂದಳು. ಈ ನಡುವೆ ಈಕೆಗೆ ಮರು ವಿವಾಹಕ್ಕೂ ಸಾಕಷ್ಟು ಜನ ಕೇಳಿಕೊಂಡರು. ಆದರೆ ನಂಬಿದವರು ಮಾಡಿದ ದ್ರೋಹ ಆಕೆಗೆ ಯಾರನ್ನೂ ನಂಬದ ಸ್ಥಿತಿಗೆ ನೂಕಿತ್ತು. ಕೊನೆಗೂ ಆಕೆಯ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಈಕೆಯನ್ನು ಬಹಳ ಪ್ರೀತಿಸುವ ವ್ಯಕ್ತಿಯೊಬ್ಬರು ಆಕೆಯ ಶಾಕ್ ನಿವಾರಿಸಿದ್ದಾರೆ. ಈಕೆ ಅವರನ್ನೀಗ ಮದುವೆಯಾಗಿದ್ದಾಳೆ. ಇದೀಗ ಧೈರ್ಯದಿಂದ ತನ್ನ ಹಳೆಯ ಸಂಬಂಧದ ಕಹಿಯನ್ನು ಸಾರ್ವಜನಿಕರ ಜೊತೆಗೆ ರೆಡ್ಡಿಟ್ ನಲ್ಲಿ ತೆರೆದಿಟ್ಟಾರೆ.