ಕೆಲವು ಜನ್ಮರಾಶಿಗಳಲ್ಲಿ ಜನಿಸಿದ ಹೆಣ್ಣುಮಕ್ಕಳು ನೇರ, ದಿಟ್ಟ ಹಾಗೂ ನಿರಂತರ ಎಂಬ ಹಾಗೆ ಇರುತ್ತಾರೆ. ಸ್ವಂತ ಆರೋಗ್ಯ, ಪ್ರೀತಿ, ದೇಹದ ಆರೈಕೆ, ಸಂಗಾತಿಗಳ ಆಯ್ಕೆ, ಎಲ್ಲದರಲ್ಲೂ ಇವರು ದಿಟ್ಟರು ಹಾಗೂ ಧಾಡಸಿಗಳು. ಸಾಮಾನ್ಯವಾಗಿ ಪ್ರಪೋಸಿಂಗ್‌ ಅನ್ನೋದು ಮೇಲ್ ಟೆರಿಟೆರಿ  ಅಂತ್ಲೇ ಊಹೆ. ಆದ್ರೆ ಇವರು ತಾವಾಗಿಯೇ ಮೇಲೆ ಬಿದ್ದು ತಮ್ಮ ಪ್ರೇಮವನ್ನು ತೋರಿಸಿಕೊಳ್ಳುವವರು. ಯಾರು ಅವರು? ನೀವೂ ಅಂಥವರಲ್ಲಿ ಇದೀರಾ?

ಮೇಷ ರಾಶಿ
ಮೇಷ ರಾಶಿಯ ಹುಡುಗಿಯರು ನೇರ. ಇವರು ತಮಗೆ ಇಷ್ಟ ಅನಿಸಿದ ಹುಡುಗನನ್ನು ತಾವೇ ಚೂಸ್ ಮಾಡಿಕೊಳ್ಳುತ್ತಾರೆ. ಇವರಿಗೆ ಆ ವಿಚಾರದಲ್ಲಿ ಯಾವುದೇ ನಾಚಿಕೆ ಮುಜುಗರ ಇರೋಲ್ಲ. ಅದರಲ್ಲಿ ಅಪ್ಪ ಅಮ್ಮ ಹೇಳಿದ ಮಾತುಗಳನ್ನೂ ಇವರು ಕೇಳೋಲ್ಲ. ಹುಡುಗ ತುಂಬಾ ಒರಟ ಹಾಗೂ ನೇರವಂತನಾಗಿದ್ದರೆ ಪ್ರಪೋಸ್ ಮಾಡುವ ಕೆಲಸವನ್ನು ಅವನಿಗೇ ಬಿಟ್ಟುಬಿಡುತ್ತಾರೆ. ಆದರೆ ತಮ್ಮ ಪ್ರೇಮವನ್ನು ಮುಜುಗರ ಇಲ್ಲದೆ ಅವನೆದುರು ತೋರಿಸಿಕೊಳ್ಳುತ್ತಾರೆ. ಅವನಾಗಿಯೇ ಪ್ರಪೋಸ್ ಮಾಡುವಂತೆ ಮಾಡುವುದರಲ್ಲಿ ಇವರು ಎತ್ತಿದ ಕೈ.

ಮಿಥುನ ರಾಶಿ
ಮಿಥುನ ರಾಶಿಯ ಹೆಣ್ಣು ಮಕ್ಕಳು ಪ್ರಣಯದ ವಿಷಯದಲ್ಲಿ ಚಾನ್ಸ್ ತೆಗೆದುಕೊಳ್ಳುವುದಿಲ್ಲ. ಯಾವುದನ್ನೂ ಹುಡುಗರ ಆಯ್ಕೆಗೆ ಸುಲಭವಾಗಿ ಬಿಟ್ಟುಬಿಡುವುದಿಲ್ಲ. ಹುಡುಗ ತನ್ನನ್ನು ಆಯ್ಕೆ ಮಾಡಿಕೊಂಡ ಅನ್ನೋದಕ್ಕಿಂತ ತಾನು ಹುಡುಗನನ್ನು ಆಯ್ಕೆ ಮಾಡ್ಕೊಂಡೆ ಅನ್ನಿಸೋದರಲ್ಲಿ ಇವರಿಗೆ ಖುಷಿ. ಅಪ್ಪ ಅಮ್ಮನನ್ನೂ ತನ್ನ ಆಯ್ಕೆಯ ಬಗ್ಗೆ ಒಲಿಸಿ ಒಪ್ಪಿಸೋದರಲ್ಲಿ ಪಂಟರು. ಮಾತು ಕೇಳದ ಹುಡುಗರನ್ನು ಸರಿ ದಾರಿಗೆ ತರುವ ಸೇನಾಧಿಪತಿಗಳೂ ಇವರೇ. ಪ್ರೀತಿಯ ವಿಷಯದಲ್ಲಿ ಮುನ್ನುಗ್ಗಿ ಕ್ರಮಗಳನ್ನು ತೆಗೆದುಕೊಳ್ಳುವ ಮಹಾರಾಣಿಯರೂ ಇವರೇ.

ಕನ್ಯಾ ರಾಶಿ
ಕನ್ಯಾ ರಾಶಿಯ ಕನ್ಯೆಯರು ಹುಡುಗರ ಬಾಯಿಯಿಂದಲೇ ಪ್ರೀತಿಯ ಮೊದಲ ಅಣಿಮುತ್ತು ಉದುರಲಿ ಅಂತಾ ಕಾಯ್ತಾ ಇರುತ್ತಾರೆ. ಹೇಳಲಿ ಅಂತಾ ಪ್ರವೋಕ್ ಮಾಡ್ತಾ ಇರುವುದರಲ್ಲಿ ಇವರು ಎತ್ತಿದ ಕೈ. ಯಾಕ್ ಒದ್ದಾಡಿ ಸಾಯ್ತೀಯ ಮಗಾ, ಒಮ್ಮೆ ಹೇಳಿ ಬಿಡು ಅತ್ಲಾಗಿ ಅಂತ್ಲೇ ಅವರ ನಾಲಿಗೆ ತುದಿಯಲ್ಲಿ ಅಂದ್ಕೋತಾ ಇರ್ತಾರೆ. ಒಂದು ಹಂತದಲ್ಲಿ, ಊಹೂಂ, ಈ ಪ್ರಾಣಿ ಹೇಳೋ ಲಕ್ಷಣ ಇಲ್ಲ ಅನಿಸಿದರೆ ಸಿಡಿದೆದ್ದು ತಾವೇ ಪ್ರಪೋಸ್ ಮಾಡಿ ಬಿಡ್ತಾರೆ ಅತ್ಲಾಗೆ. ಹುಡುಗರನ್ನು ಬೆಚ್ಚಿ ಬೀಳಿಸುತ್ತಾರೆ. 

ಮನೆಮಂದಿ ನೆಗೆಟಿವ್ ಎನರ್ಜಿ ಪರಿಣಾಮದಿಂದ ತಪ್ಪಿಸಲು ಈ ವಾಸ್ತು ಟಿಪ್ಸ್ ಪಾಲಿಸಿ ...

ತುಲಾ ರಾಶಿ
ತುಲಾ ರಾಶಿಯ ಹೆಣ್ಣು ಮಕ್ಕಳು ತಮಗಿಷ್ಟವಾಗುವ ಹುಡುಗ ಸಿಗುವವರೆಗೂ ಮುದುಕಿಯರಾಗುವವರೆಗೂ ಕಾಯುತ್ತಾರೆ ಹೊರತು ಯಾರೋ ಕಾಂಜಿಪೀಂಜಿಗಳಿಗೆ ಪ್ರಪೋಸ್ ಮಾಡಿ ತಮ್ಮತನವನ್ನು ಕಳೆದುಕೊಳ್ಳುವುದಿಲ್ಲ. ಅಂದರೆ ತಮ್ಮ ಆಯ್ಕೆಯ ಹುಡುಗ ಎಲ್ಲ ಮಾನದಂಡಗಳಿಂದಲೂ ತಮಗೆ ಸೂಕ್ತವಾದ ಹುಡುಗ ಆಗಿರಲಿ ಎಂದೇ ಬಯಸಿ, ಅದರಂತೆಯೇ ಪರೀಕ್ಷೆ ಮಾಡಿ ಆರಿಸಿಕೊಳ್ಳುತ್ತಾರೆ. ಮನಸ್ಸಿಗೆ ಒಪ್ಪಿದರೆ ತಮ್ಮ ಪ್ರೇಮವನ್ನು ಸೂಚಿಸಲು ಒಂದಿಷ್ಟೂ ಹಿಂದೆ ಸರಿಯುವುದಿಲ್ಲ ಕೂಡ.  

ಕಟಕ ರಾಶಿ
ಇವರ ಸಕತ್ ಬೋಲ್ಡ್ ಅಂಡ್ ಬ್ಯೂಟಿಫುಲ್. ಹಿಂದೆ ಮುಂದೆ ಯೋಚಿಸದೆ ಮುನ್ನುಗ್ಗುತ್ತಾರೆ. ಅದರಿಂದ ಕೆಟ್ಟದು ಆದರೂ ಸಮರ್ಥಿಸಿಕೊಳ್ಳುತ್ತಾರೆ. ಏನೇ ಆದರೂ ಪೇಚಾಡುವುದಿಲ್ಲ. ಬದಲಾಗಿ ಅದರಿಂದ ಪಾರಾಗುವ ದಾರಿಗಳನ್ನು ಅನ್ವೇಷಿಸುತ್ತಾ ಇರುತ್ತಾರೆ. ಹುಡುಗ ಕೆಟ್ಟಿದ್ದರೂ ಸರಿದಾರಿಗೆ ತರುತ್ತಾರೆ. ತಾವೇ ಮೇಲೆ ಬಿದ್ದು ಪ್ರಪೋಸ್ ಮಾಡುತ್ತಾರೆ. ಪ್ರಪೋಸ್ ಮಾಡುವುದರಲ್ಲಿ ಕಲಾತ್ಮಕತೆ ಇರಲಿ ಎಂದು ಬಯಸುತ್ತಾರೆ. ತಾನು ಇಷ್ಟಪಟ್ಟ ಹುಡುಗ ತನಗೆ ದಕ್ಕುವ ವರೆಗೂ ಬಿಡುವುದೇ ಇಲ್ಲ. ಇವರ ದಿಟ್ಟತನವೇ ಮೆದು ಸ್ವಭಾವದ ಹುಡುಗರಿಗೆ ಇಷ್ಟವಾಗುತ್ತದೆ.

ಶನಿಮಹಾತ್ಮನಿಗೆ ಈ ಕೆಲವು ರಾಶಿಗಳು ತುಂಬಾ ಇಷ್ಟ ...

ಮೀನ ರಾಶಿ
ಇವರು ಅಷ್ಟೊಂದು ದಿಟ್ಟರೇನಲ್ಲ. ಹಿಂಜರಿಕೆ ಸ್ವಭಾವದವರೇ. ಆದರೆ ಪ್ರೀತಿಯ ವಿಷಯಕ್ಕೆ ಬಂದಾಗ ಮಾತ್ರ ತಮ್ಮ ಹಿಂಜರಿಕೆಯನ್ನು ಹಿಂದಕ್ಕೇ ಬಿಟ್ಟು ಮುನ್ನುಗ್ಗುತ್ತಾರೆ. ಫ್ಯಾಮಿಲಿ ವಿಚಾರದಲ್ಲಿ ಹೆಚ್ಚು ಪೊಸೆಸ್ಸಿವ್ ಹಾಗೂ ಗಂಡು ಹುಡುಗರ ವಿಚಾರದಲ್ಲೂ ಹಾಗೆಯೇ. ತನ್ನ ಪ್ರೀತಿಯಲ್ಲಿ ಇನ್ಯಾರಾದರೂ ಪಾಲು ಪಡೆದುಕೊಳ್ಳಲು ಬಂದರೆ ಸಿಂಹಿಣಿಯಂತೆ ಕಾದಾಡಿ ಅದನ್ನು ಉಳಿಸಿಕೊಳ್ಳುತ್ತಾರೆ.  ಮೀನ ರಾಶಿಯವರಾದರೂ ಪ್ರೀತಿಯಲ್ಲಿ ಮೀನಿನಂತೆ ಜಾರಿಕೊಳ್ಳುವವರಲ್ಲ. ಹಿಡಿದ ಹುಡುಗನಿಗೆ ಅಂಟಿಕೊಳ್ಳುವವರು. 

ಈ ರಾಶಿಯವರಿಗೆ ಸೆಕ್ಸ್ ಊಟದಷ್ಟೇ ಇಂಪಾರ್ಟೆಂಟು! ...